ಶಾಸಕರಿಂದ ಕಾಂಕ್ರಿಟ್ ರಸ್ತೆ

ಕುಮಟಾ, ಅ.೧೪: ಸ್ಥಳೀಯ ಶಾಸಕರಾದ ಶಾರದಾ ಶೆಟ್ಟಿಯವರು ತಾಲೂಕಿನ ಮಾಸ್ತಿಹಳ್ಳ ದಿಂದ ಮತ್ತಳ್ಳಿ ಗ್ರಾಮಕ್ಕೆ ಸುಮಾರು 350 ಮೀಟರ್ ಕಾಂಕ್ರೀಟ್ ರಸ್ತೆಯನ್ನು ಮಾಡಿಸಿ ಕೊಟ್ಟಿದ್ದಾರೆ. ಇನ್ನೂ ಎರಡು ಕಿಲೋಮೀಟರ ದೂರ ಇದ್ದು ಆದಷ್ಟು ಬೇಗ ಮಾಡಿಸಿಕೊಡಲಿ ಎಂದು ಸ್ಥಳಿಕರ ಆಶಯವಾಗಿದೆ.

ಕೈ ತೊರೆದು ಕಮಲ ಹಿಡಿದ ಯೋಗೇಶ್ವರ

ಬೆಂಗಳೂರು, ಅ.೧೪: ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕ, ಚಿತ್ರತಾರೆ ಸಿ.ಪಿ. ಯೋಗೇಶ್ವರ ಅವರು ಕಾಂಗ್ರೇಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಕಮಲ ಪಾಳಯದಲ್ಲಿ ತಮ್ಮ ಮುಂದಿನ ರಾಜಕೀಯ ಅಖಾಡ ನಿರ್ಮಿಸಿಕೊಳ್ಳಲಿದ್ದಾರೆ.

ಶಿರಸಿಯಲ್ಲಿ ರೋಷನ್ ಬೇಗ ವಿರುದ್ದ ದೂರು

ಶಿರಸಿ, ಅ೧೪: ಕಾಂಗ್ರೇಸ್ ಸರ್ಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ ಅವಾಚ್ಯ ಶಬ್ದಗಳಿಂದ , ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಖಂಡಿಸಿ ಶಿರಸಿ ಪೋಸ್ಟ ಸರ್ಕಲನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು.

1.21 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವಶ

ಕಾರವಾರ: ಇಲ್ಲಿನ ಅಬಕಾರಿ ಇಲಾಖೆ ಪೊಲೀಸರು ಕಾರ್ಯಾಚರಣೆ ಮೂಲಕ 21 ಚೀಲಗಳಲ್ಲಿ ತುಂಬಿಸಿಟ್ಟಿದ್ದ 1.21 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ, 30 ಸಾವಿರ ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ಸುವರ್ಣ ನಾಯ್ಕ ನೇತೃತ್ವದಲ್ಲಿ ತಾಲೂಕಿನ ಹೋಟೆಗಾಳಿ ಗ್ರಾಮದ ಬಳಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯ ವಶಕ್ಕೆ...

ಸಚಿವ ರೋಷನ್ ಬೇಗ್ ವಿರುದ್ಧ ಪ್ರತಿಭಟನೆ

ಕಾರವಾರ: ಪ್ರಧಾನಿ‌ ನರೇಂದ್ರ ಮೋದಿ ವಿರುದ್ದ ಅವಾಚ್ಛ ಶಬ್ದಗಳಿಂದ ನಿಂದಿಸಿದ ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಅದನ್ನು ದಹಿಸುವ ಮೂಲಕ ನಗರದ ಸುಭಾಸ್ ಸರ್ಕಲ್ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. ದೇಶದ ಪ್ರಧಾನಿ ಮೋದಿ ಅವರಿಗೆ ಅವಹೇಳನಕಾರಿ ಪದಗಳನ್ನು ಬಳಸಿ ಭಾಷಣ ಮಾಡಿದ್ದ ಸಚಿವ ರೋಷನ್...

ಅಪಘಾತದಲ್ಲಿ ಹೆಬ್ಬಾವು ಸಾವು

ಸಿದ್ಧಾಪುರ, ಅ.೧೩: ನಿನ್ನೆ ಸಾಯಂಕಾಲ ೫ -೩೦ ರ ಸಮಯದಲ್ಲಿ ಸಿದ್ದಾಪುರದ ನಿಡಗೊಡು ಬಳಿ ರಸ್ತೆ ಯಲ್ಲಿ ವಾಹನದ ಚಕ್ರಕ್ಕೆ ಸಿಲುಕಿ ಹೆಬ್ಬಾವು ಸತ್ತ ಬಗ್ಗೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಾಹನಕ್ಕೆ ಸಿಕ್ಕಿ ಹೆಬ್ಬಾವು ಸತ್ತ ಪ್ರಕರಣ ಇದೇ ಮೊದಲು.

ಬಡ್ಡಿರಹಿತ ಸಾಲ ವಿತರಣೆ

ಕುಮಟಾ, ಅ.೧೧: ಕುಮಟಾ ಕ್ಷೇತ್ರದ ಶಾಸಕರಾದ ಶಾರದಾ ಶೆಟ್ಟಿಯವರು ಇಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿಯಮಿತ ಇವರ ವತಿಯಿಂದ ಕುಮಟಾ ತಾಲೂಕಿನ 18 ಮತ್ಸ್ಯ ಮಹಿಳಾ ಸ್ವಸಹಾಯ ಸಂಘಗಳಿಗೆ 1 ಲಕ್ಷ ರೂಪಾಯಿಗಳ ಬಡ್ಡಿರಹಿತ ಸಾಲದ ಚೆಕ್ಕುಗಳನ್ನು ವಿತರಿಸಿದರು. ಫೆಡರೇಶನ್ನಿನ ನಿರ್ದೇಶಕರು ಮತ್ತಿತರರು ಉಪಸ್ಥಿತಿಯಲ್ಲಿದ್ದರು.

ಬ್ರೇಕಿಂಗ್ ಅಪಘಾತ – ಸಾವು

ದಾವಣಗೆರೆ ಬ್ರೇಕಿಂಗ್ ಬೈಕ್ ಗೆ ಅಟೋ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌ ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಘಟನೆ. ಪ್ರತೀಕ್ (೨೨) ಸಾವನ್ನಪ್ಪಿದ ದುರ್ದೈವಿ. ಡಿಪ್ಲೊಮಾ ಓದುತ್ತಿದ್ದ ಮೃತ ಪ್ರತೀಕ್ ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಮೃತ ಯುವಕ ಹರಿಹರ ನಗರ ಠಾಣಾ ಪೋಲೀಸರು ಭೇಟಿ, ಪರಿಶೀಲನೆ

ಶವ ಪತ್ತೆ

ದಿನಾಂಕ 08-10-2017 ರಂದು ಯಲ್ಲಾಪುರ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನೂರು ಫಾಲ್ಸ್ ಗೆ ಹೋಗಿದ್ದ 1) ಕಿಗನ್ ವಿನೋದ ಪರ್ನಾಂಡಿಸ್ 21 ವರ್ಷ ಕಾಳಮ್ಮನಗರ ಯಲ್ಲಾಪುರ ಹಾಗೂ 2) ಸಿಲ್ವನ್ ಲಾರೆನ್ಸ್ ಪರ್ನಾಂಡಿಸ್ 17 ವರ್ಷ ಗಣಪತಿಗಲ್ಲಿ ಯಲ್ಲಾಪುರ ಇವರು ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿದ್ದು ಇಂದು ಇಬ್ಬರ ಶವ ಪತ್ತೆಯಾಗಿದ್ದು...

ರೂಪಾಲಿ ನಾಯ್ಕ ಅವರಿಗೆ ಪಕ್ಷದಲ್ಲಿ ಪದೋನ್ನತಿ

ಕಾರವಾರ, ಅ.೮: ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯೆ ಆಗಿರುವ ಕಾರವಾರ ಅಂಕೋಲಾ ಕ್ಷೇತ್ರದ ನಿಷ್ಠಾವಂತೆ ಧುರೀಣೆ, ರೂಪಾಲಿ ನಾಯ್ಕ ಅವರಿಗೆ ರಾಜ್ಯ ಬಿಜೆಪಿ ನಾಯಕರು, ಉತ್ತರಕನ್ನಡ ಜಿಲ್ಲೆಯ ಮಹಿಳಾ ಮೋರ್ಚಾದ ಸಂಘಟನೆಯ ಹೊಣೆಗಾರಿಕೆ ನೀಡುವ ಮೂಲಕ ಪದೋನ್ನತಿ ನೀಡಿದ್ದಾರೆ. ಕಾರವಾರ, ಅಂಕೋಲಾ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಿಜೆಪಿ ದಿನವೂ ತನ್ನ...