21.8 C
Sirsi, Karnataka
Tuesday, March 26, 2019

ಸುದ್ದಿ

Latest News around karnataka

ಗೂಗಲ್ ಭಾರತೀಯರಿಗಾಗಯೇಿ ತೇಜ ಪರಿಚಯಿಸಿದೆ

ಅಂತರ್ಜಾಲ ದಿಗ್ಗಜ ಕಂಪನಿ, ಅತ್ಯಧಿಕ ಬಳಕೆಯಲ್ಲಿರುವ ಸರ್ಚ ಎಂಜಿನ್, ಸಂಪೂರ್ಣ ಉಚಿತವಾಗಿ ಇಮೇಲ ಹಾಗೂ ವಿಡಿಯೋ ಸೈಟ್ ಒದಗಿಸಿರುವ ಗೂಗಲ್‌, ಭಾರತೀಯರಿಗಾಗಿ ನೂತನ ತಂತ್ರಜ್ಞಾನವನ್ನು ಪರಿಚಯಿಸಿದೆ. ತೇಜ ಮೊಬೈಲ್ ಮುಖಾಂತರ ಹಣವರ್ಗಾವಣೆಗೆ ಅನುಕೂಲ ಒದಗಿಸಿವ ಆ್ಯಪ್ ಇದಾಗಿದ್ದು, ಸಾಕಷ್ಟು ಉಪಯುಕ್ತತೆಯನ್ನು ಒದಗಿಸಿದೆ. ಯು.ಪಿ.ಐ ಸೌಲಭ್ಯ ಹೊಂದಿರುವ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಈ ಆ್ಯಪ್ ನೊಂದಿಗೆ ಜೋಡಿಸಿದರಾಯಿತು, ಮುಂದಿನ...

ಕಾಗೇರಿ ಕೈ ತಪ್ಪಿತಾ ಬಿಜೆಪಿ ಟಿಕೇಟ್?!

ಶಿರಸಿ ಸೆ.೧೬: ಶಿರಸಿಯ ಜನವಲಯದಲ್ಲಿ ಒಂದು ಅಚ್ಚರಿಯ ಮಾತು ಎಲ್ಲೆಡೆಯೂ ಕೇಳಿಬರುತ್ತಿದೆ. ಜಾಲತಾಣಗಳಲ್ಲಿಯೂ ಈ ಬಗ್ಗೆ ತುರುಸಿನ ಚರ್ಚೆಗಳು ನಡೆಯುತ್ತಿವೆ. ಆ ಅಚ್ಚರಿ ಏನಂದ್ರೆ ಶಿರಸಿ ಸಿದ್ದಾಪುರ ಕ್ಷೇತ್ರದ ಹಾಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬದಲಿಗೆ ಬೇರೆಯವರಿಗೆ ಟಿಕೆಟ್ ಸಿಗಬಹುದು ಎನ್ನುವ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಮಾತಿಗೆ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ...

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಶಿರಸಿ ವಿದ್ಯಾರ್ಥಿಗಳು

ಶಿರಸಿಯಲ್ಲಿ ನಡೆದ ಶಿರಸಿ ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾ ಕೂಟ ಮತ್ತು ಪ್ರತಿಭಾ ಕಾರಂಜಿಯಲ್ಲಿ ಚಂದನ ಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕ್ರೀಡಾ ಕೂಟ ಪ್ರಾಥಮಿಕ ವಿಭಾಗ: ಬೃಹತಿ ಉಂಚಳ್ಳಿ ತರಗತಿ 7 (ಚದುರಂಗ ಸ್ಫರ್ದೆ ಪ್ರಥಮ) ಅಖಿಲ್ ವಿ ಹೆಗಡೆ ತರಗತಿ 6 (ಬ್ಯಾಡ್‍ಮಿಂಟನ್ ಪ್ರಥಮ) ಅಭಿರಾಮ್ ವಿ ಹೆಗಡೆ ತರಗತಿ...

ರವೀಂದ್ರ ನಾಯ್ಕ ಫೇಸ್ ಬುಕ್ ಪೋಸ್ಟ್ ಗೆ ಜಾಲತಾಣಿಗರ ತರಾಟೆ

ಸೆ.೧೫- ಈ ಬಾರಿಯ ಯಲ್ಲಾಪುರ ಮುಂಡಗೋಡ ವಿಧಾನಸಭೆಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿತವಾಗಿರುವ ವಕೀಲ ರವೀಂದ್ರ ನಾಯ್ಕ ಅವರು ನೆನ್ನೆ (ಸೆ.೧೪) ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ಮೋದಿ ಯೋಜನೆಗಳ ಕುರಿತಾದ ಪೋಸ್ಟ್ ಹಾಕಿದ್ದರು. ಇದಕ್ಕೆ ಜಾಲತಾಣಿಗಳು ಸರಿಯಾಗಿ ವಿರೋಧಿಸಿ ಕಾಮೆಂಟ್ ಹಾಕಿದ್ದಾರೆ. ಇಂತಹ ಪೋಸ್ಟುಗಳು ತಮ್ಮಂತವರಿಗೆ ಶೋಭೆ ತರುವಂಥದ್ದಲ್ಲ ಎಂದು ಬಹುತೇಕರು...

ಅನಂತಕುಮಾರ ಹೆಗಡೆರವರಿಗೆ ಶುಭಕೋರಿದ ಸುಮಿತ್ರಾ ಮಹಾಜನ

ಕೇಂದ್ರ ಸರಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರು ಸನ್ಮಾನ್ಯ ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದರು. ನೂತನವಾಗಿ ಅಧಿಕಾರವಹಿಸಿಕೊಂಡಿರುವ ಶ್ರೀ ಅನಂತಕುಮಾರ ಹೆಗಡೆರವರನ್ನು ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆ, ರಾಜ್ಯ, ಹಾಗೂ ದೇಶ ಅಭಿವೃದ್ದಿ ಸಾಧಿಸುವಂತೆ...

ಕೇಂದ್ರ ಸರಕಾರದ ಸಂಪುಟದ ಯಾದಿ

ಉಪಯೋಗಿ ಮಾಹಿತಿ ಪ್ರಸ್ತುತ ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವರು ಹಾಗೂ ಅವರ ಖಾತೆಗಳ ಯಾದಿ. 1) ರಾಜನಾಥ್ ಸಿಂಗ್: ಗೃಹ ಖಾತೆ 2) ನಿರ್ಮಲಾ ಸೀತಾರಾಮನ್: ರಕ್ಷಣಾ ಖಾತೆ 3) ಸುಷ್ಮಾ ಸ್ವರಾಜ್: ವಿದೇಶ ವ್ಯವಹಾರಗಳ ಖಾತೆ 4) ಅರುಣ್ ಜೈಟ್ಲಿ: ವಿತ್ತ ಖಾತೆ; ಕಾರ್ಪೊರೇಟ್ ವ್ಯವಹಾರಗಳ ಖಾತೆ 5) ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ...

ಆಧಾರ ಸೇರಿಸದಿದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಸ್ಥಗಿತಗೊಳ್ಳಲಿದೆ

ಕ್ರಿಮಿನಲ್ ಗಳು, ಭಯೋತ್ಪಾದಕರು ಹಾಗೂ ದುಷ್ಕರ್ಮಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರದ ನಿರ್ದೇಶದ ಅನ್ವಯ, ನಿಮ್ಮ ಬಳಿ ಇರುವ ಮೊಬೈಲ್ ಸಂಖ್ಯೆಗೆ ಆಧಾರ ನಂಬರನ್ನು ಜೋಡಿಸುವುದು ಅನಿವಾರ್ಯವಾಗಿದೆ. ಈ ಸಂಬಂಧ ನೋಟೀಸ್ ನೀಡಿರುವ ಕೇಂದ್ರ ಸರ್ಕಾರ ಫೆಬ್ರುವರಿ ೨೦೧೮ ರ ಒಳಗೆ ಯಾವೆಲ್ಲ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ ಜೋಡಿಸದ ಸಂಖ್ಯೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗುವುದು ಎಂದು ತಿಳಿಸಿದೆ.

2023 ರಲ್ಲಿ ದೇಶದ ಮೊದಲ ಬುಲೆಟ್ ಟ್ರೈನ್ ಆರಂಭಗೊಳ್ಳಲಿದೆ

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನೂತನ ರೈಲ್ವೇ ಸಚಿವರಾದ ಪಿಯುಶ ಘೋಯಲ್ ಅವರು ದೇಶದ ಅತಿ ವೇಗದ ಟ್ರೈನ್ 2023 ರಂದು ಜನಸಾಮಾನ್ಯರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು. ಅಹಮದಾಬಾದ್ ಹಾಗೂ ಮುಂಬಯಿ ನಡುವೆ 508 ಕಿ.ಮೀ. ಅಂತರದ ಮೊದಲ ಯೋಜನೆ ಆರಂಭಗೊಂಡಿದೆ ಎಂದು ವಿವರಿಸಿದರು. ರೈಲ್ವೇ ಅಧಿಕಾರಿಗಳ ಅನ್ವಯ ಈ ಬುಲೆಟ್ ಟ್ರೈನ್ ವೇಗ 320 ಕಿ.ಮೀ. ಪ್ರತಿ...

ಅಪಹರಣಕ್ಕೊಳಗಾದ ಕೇರಳ ಪಾದ್ರಿ ಸುರಕ್ಷಿತ

ಯೆಮೆನ ನಲ್ಲಿ ಅಪಹರಣಕ್ಕೊಳಗಾದ ಕೇರಳ ಮೂಲದ ಫಾದ್ರಿಯವರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ‌ಸ್ವರಾಜ ತಮ್ಮ ಟ್ವೀಟ ಮೂಲಕ ತಿಳಿಸಿದ್ದಾರೆ. ಅವರ ಟ್ವೀಟ ಓದಲು ಕೊಂಡಿ ಬಳಸಿ I am happy to inform that Father Tom Uzhunnalil has been rescued. https://t.co/FwAYoTkbj2

ಕೈ-ಕೈ ಮಿಲಾಯಿಸುವ ಹಂತದಲ್ಲಿ ಕೈಕಾರ್ಯಕರ್ತರು

ಕಾರವಾರ ಸೆ.೧೨: ನಗರದ ಉಜ್ವಲ ಲಕ್ಷ್ಮಿ ಸಭಾಭವನದಲ್ಲಿ ನಡೆದ ಕಾರವಾರ ಹಾಗು ಅಂಕೋಲಾ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಸೈಲ್ ಹಾಗೂ ಕೆ.ಪಿ.ಸಿ.ಸಿ ಕಾರ್ಯದರ್ಶಿ ಗೋಪಾಲ ನಾಯಕ ಅವರ ಅಭಿಮಾನಿಗಳ ಮಧ್ಯೆ ಭುಗಿಲೆದ್ದಿತು ಬಣ ರಾಜಕೀಯ. ಈ ವಿದ್ಯಮಾನ ಕಾಂಗ್ರೇಸ್ ನಾಯಕರಿಗೆ ಮುಜುಗರ ಉಂಟುಮಾಡಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುವ...

ಕಾರವಾರ ಶಾಸಕ ಸೈಲ್ ಬಿಜೆಪಿಗೆ ಇಲ್ಲ

ಕಾರವಾರ ಸೆ. ೧೨ : ಕಳೆದ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆ ಆಗಿದ್ದ ಕಾರವಾರ, ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್‌ ಇಂದು ಕಾರವಾರದ ಉಜ್ವಲ‌‌ಲಕ್ಷ್ಮೀ ಸಭಾಭವನದಲ್ಲಿ‌ ನಡೆದ ಬೂತ್ ಮಟ್ಟದ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೇಸ್ ಸೇರಿದ್ದಾರೆ ಈ ಮೂಲಕ ಸೈಲ್ ಬಿಜೆಪಿ ಸೇರುತ್ತಾರೆ ಎನ್ನುವ ಎಲ್ಲಾ ಉಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ದಿನಾಂಕ ೨೧/೦೯/೨೦೧೭ ರಿಂದ ೩೦/೦೯/೨೦೧೭ ಗುರುವಾರದಿಂದ ಆರಂಭಗೊಳ್ಳಲಿರುವ ನವರಾತ್ರಿ ಉತ್ಸವಕ್ಕೆ ತಮಗೆಲ್ಲ ಆದರದ ಸ್ವಾಗತ. ಶ್ರೀ ಮಾರಿಕಾಂಬೆಯ ಆಶೀರ್ವಾದ ಪಡೆದುಕೊಳ್ಳಲು ಇದೊಂದು ಸುಸಂದರ್ಭವಾಗಿದೆ.

ಕದಂಬ ಮಾರ್ಕೆಟಿಂಗ್ ತೆಂಗಿನಕಾಯಿ ಖರೀದಿ ದರ

ಕದಂಬ ಮಾರ್ಕೆಟಿಂಗ್ ನ ಇಂದಿನ (12.09.17) ತೆಂಗಿನಕಾಯಿ ಖರೀದಿ ದರ : ತೆಂಗಿನಕಾಯಿ : ₹ 32/ಕೆ.ಜಿ ಬರಡುಕಾಯಿ : ₹ 25/ಕೆ.ಜಿ

TSS ಸರ್ವ ಸಾಧಾರಣ ಸಭೆ

ಟಿ.ಎಸ್.ಎಸ್.‌ಸರ್ವ ಸಾಧಾರಣ ಸಭೆ ನೋಟಿಸು

ನಾನು ಗೌರಿ.. ನಾವೆಲ್ಲಾ ಗೌರಿ

ಗೌರಿ ಲಂಕೇಶ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನೂರಾರು ಜನರಿಂದ ರ್ಯಾಲಿ ಹಾಗೂ ಪ್ರತಿಭಟನೆ ನಡೆಯುತ್ತಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ಜಾಥಾ ನಡೆಯುತ್ತಿದೆ. ನಂತರ ವೇದಿಕೆಯಲ್ಲಿ ಹತ್ಯೆ ಖಂಡಿಸಿ ೩೫ ಪ್ರಮುಖರಿಂದ ಭಾಷಣ, ಬೀದಿ ನಾಟಕ ಹಾಗೂ ಗೌರಿ ಲಂಕೇಶ ಹೆಸರಿನ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ.೧೩೫ ಸಂಘಟನೆ ಕಾರ್ಯಕರ್ತರು, ಪ್ರಗತಿಪರ ಚಿಂತಕರು,...

ಮುಖ್ಯಮಂತ್ರಿ ಸಾಧನಾ ಸಮಾವೇಶ; ಇದ್ಯಾವ ತರದ ಸಾಧನೆ?

"ರಾಜ್ಯ ಸರ್ಕಾರದಿಂದ ಬಳ್ಳಾರಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ ಇಂದು ನಡೆಯುತ್ತಿದೆ.. ರಾಯಚೂರು, ಗುಲ್ಬರ್ಗ, ಹುಬ್ಬಳ್ಳಿ, ಸಿಂಧನೂರು, ಹೊಸಪೇಟೆ ಇತ್ಯಾದಿ ಕಡೆಗಳಿಂದ ಜನರನ್ನು ಕರೆಸಿಕೊಳ್ಳಲಾಗುತ್ತಿದೆ.. ಹೊಸಪೇಟೆಯೊಂದಕ್ಕೇ ನೂರು ಕೆಸ್ಸಾರ್ಟಿಸಿ ಬಸ್ಸು ಬಿಟ್ಟಿದ್ದಾರಂತೆ.. ವಿಪರ್ಯಾಸವೆಂದರೆ ಯಾವ ಬಸ್ಸುಗಳೂ ಅರ್ಧದಷ್ಟೂ ಭರ್ತಿಯಾಗಿಲ್ಲ! ದುಡ್ಡು ಕೊಟ್ಟರೂ ಬರಲ್ಲ ಅನ್ನಂಗಾಗ್ಬಿಟ್ರು ನೋಡಿ ಜನ!" ಅಂತ ಮಾತಾಡಿಕೊಳ್ತಿದ್ದಾರೆ ಆ ಭಾಗದ ಮಂದಿ.

ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಯಲ್ಲಾಪುರ: ತಾಲೂಕಿನ ಬಾಸಲದಲ್ಲಿ ಕಳೆದ ಒಂದು ತಿಂಗಳಿಂದ ರಿಲಯನ್ಸ್ ಟವರ್ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ಸುಮಾರು ಎರಡು ಗಂಟೆಗಳ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಿಲಯನ್ಸ್ ಕಂಪನಿಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ತಹಶೀಲ್ದಾರರಿಗೆ ಮನವಿ ನೀಡಿ ಟವರ್ ಪುನರಾರಂಭಿಸುವ ಬಗ್ಗೆ ಒತ್ತಾಯಿಸಿದರು. ಸ್ಥಳೀಯ ಮುಖಂಡ...

ಕದಂಬ ಮಾರ್ಕೆಟಿಂಗ್ – ವಾರ್ಷಿಕ ಸರ್ವ ಸಾಧಾರಣ ಸಭೆ

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು 2016-17 ನೇ ಆರ್ಥಿಕ ವರ್ಷದಲ್ಲಿ ₹1783309/- ರಷ್ಟು ನಿವ್ವಳ ಲಾಭ ಗಳಿಸಿದ್ದು ಸುಮಾರು 15 ಕೋಟಿ ರೂಪಾಯಿಗಳ ವಹಿವಾಟು ನಡೆಸಲಾಗಿದೆ.ಸದಸ್ಯರ ಪಾಲುಧನದ ಮೇಲೆ ಶೇಕಡಾ 10 ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಲಾಭದ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇಕಡಾ 36 ರಷ್ಟು ಹೆಚ್ಚಾಗಿದ್ದು ಒಟ್ಟೂ ಶೇರು...

ಮಧು ಬಂಗಾರಪ್ಪ ಶಿರಸಿಗೆ

ದಿನಾಂಕ 12-09-2017 ರಂದು ಮಧ್ಯಾನ್ಹ 4 ಗಂಟೆಗೆ ಸಿರಸಿ ರಾಘವೇಂದ್ರ ಮಠದಲ್ಲಿ ಯುವ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ಯುವ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ . ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ೧೫೦ ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ, ...

ಸಿದ್ದಾಪುರದ ಬಳಿ ಕಾರು ಅಪಘಾತ

ಇಂದು ಬೆಳಿಗ್ಗಿನ ಜಾವ ೬.೩೦ ರ ಸುಮಾರಿಗೆ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಚಾಲಕನ ಕೈ ಮುರಿದ ಬಗ್ಗೆ ಪ್ರಾಥಮಿಕ ವರದಿ ದೊರೆತಿದೆ. ಹೆಚ್ಚಿನ ‌ಮಾಹಿತಿ ಇನ್ನಷ್ಟೇ ಒದಗಬೇಕಿದೆ. ಕೃಪೆ: ಸತೀಶ ನಾಯ್ಕ

ಶ್ರೀ ಮಾರಿಕಾಂಬಾ ದೇವಿಗೆ ಪುಷ್ಪಾಲಂಕಾರ

ಅಂಕೋಲಾ ತಾಲೂಕಿನ ಪೂಜಗೆರೆ ಗ್ರಾಮಸ್ಥರಿಂದ ಶ್ರೀ ಮಾರಿಕಾಂಬಾ ದೇವಿಗೆ ಇಂದು ಪುಷ್ಪಾಲಂಕಾರ ಮಾಡಲಾಯಿತು. ವರ್ಷಕ್ಕೋಮ್ಮೆ ಪೂಜಗೆರೆ ಗ್ರಾಮಸ್ಥರು ಪುಷ್ಪಾಲಂಕಾರ ಸೇವೆ ಸಲ್ಲಿಸುವುದು ವಾಡಿಕೆ. ಪುಷ್ಪಾಲಂಕಾರದಲ್ಲಿ ಆರಾಧ್ಯ ದೇವರನ್ನು ನೋಡಿ ಮನತಣಿಸಿಕೊಳ್ಳಿ. ಶ್ರೀ ಮಾರಿಕಾಂಬಾ ದೇವಿ ಸರ್ವರಿಗೂ ಸುಖ ಸಂತೋಶ ನೆಮ್ಮದಿ ನೀಡಲಿ.

ಶಿರಸಿ ಕಾಲೇಜು ರಸ್ಥೆಯಲ್ಲಿ ಅತಿರೇಕದ ವಾಹನ ಚಲಾವಣೆ – ಸಾರ್ವಜನಿಕರಿಂದ ಧರ್ಮದೇಟು

ಶಿರಸಿ: ಪಾದಚಾರಿ ದಂಪತಿಗಳು ಶಿರಸಿ ಕಾಲೇಜು ರಸ್ಥೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ, ವೇಗವಾಗಿ ಬಂದ ಬೈಕ್ ಸವಾರರು ದಂಪತಿಗಳಿಗೆ ಗುದ್ದಿದರು. ಈ ಅಪಘಾತದಲ್ಲಿ ಮಹಿಳೆಯೋರ್ವಳಿಗೆ ಪೆಟ್ಟಾಗಿದ್ದು ಸಾರ್ವಜನಿಕರು ತಕ್ಷಣ ಆಸ್ಪತ್ರೆ ದಾಖಲಿಸಿದರು. ಬೈಕ್ ಸವಾರರು ವೇಗವಾಗಿ ವಾಹನ ಚಲಾಯಿಸಿ, ಪಾದಚಾರಿ ಹಾಗೂ ಇತರ ಸವಾರರಿಗೆ ತೊಂದರೆಯಾಗುವಂತಹ ಘಟನೆಗಳು ಶಿರಸಿ ಕಾಲೇಜು ರಸ್ಥೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆನ್ನಲ್ಲೆ, ಈ...

​ಕಾರವಾರದ ದೇವಾಲಯಗಳ ಆವರಣದಲ್ಲಿ ಪಹರೆಯ ಸ್ವಚ್ಚತೆ

ಕಾರವಾರ: ಕಳೆದ ಸುಮಾರು ಮೂರು ವರ್ಷಕ್ಕೆ ಸಮೀಪ ಸ್ವಚ್ಚತೆಯನ್ನ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಪಹರೆ ವೇದಿಕೆ ಈ ವರ್ಷದ ಮಳೆಗಾಲದಲ್ಲಿ ದೇವಾಲಯಗಳ ಆವರಣವನ್ನ ಸ್ವಚ್ಚಗೊಳಿಸಿ ಭಕ್ತಾದಿಗಳ ಪ್ರಶಂಸೆಗೆ ಕಾರಣವಾಗುತ್ತಿದೆ.. ಪ್ರತಿ ಶನಿವಾರ ಮುಂಜಾನೆಯಲ್ಲಿ ಕಾರವಾರದ ನೂರಾರು ಕಾರ್ಯಕರ್ತರ ಸಹಯೋಗದೊಂದಿಗೆ ಪಹರೆಯ ಈ ಅಭಿಯಾನ ನಿರಂತರವಾಗಿ ಮುನ್ನಡೆಯುತ್ತಿದೆ. ಕಳೆದ ವಾರ ನಗರದ ಬಾಡದಲ್ಲಿರುವ ಪ್ರಸಿದ್ದ ಮಹಾದೇವಸ್ಥಾನದಲ್ಲಿ ಸ್ವಚ್ಚತೆಯನ್ನ ಪಹರೆ...

​ಜೊಯೋ ಉಚಿತ ಮೊಬೈಲ್

ಅಜಯ ಭಟ್ಟ ವರದಿ: ಪ್ರತೀ  ಭಾರತೀಯನೂ ಮೊಬೈಲ್ ಹಾಗೂ ಸೇವೆಗಳನ್ನು ಪಡೆಯಲಿ ಎಂಬ ಕಾರಣಕ್ಕೆ ಮುಖೇಶ ಅಂಬಾನಿ ನೇತ್ರತ್ವದ ರಿಲಯನ್ಸ ಜಿಯೋ ಸಂಪೂರ್ಣ ಉಚಿತವಾಗಿ ಮೊಬೈಲ್ ಹ್ಯಾಂಡಸೆಟ್ ನ್ನು ನೀಡುವುದಾಗಿ ಘೋಶಿಸಿದ್ದಾರೆ. ಅನಿಯಮಿತ ಕರೆ ಹಾಗೂ ಅಂತರ್ಜಾಲ ಬಳಸುವ ಸೌಲಭ್ಯದೊಂದಿಗೆ ಈ ಮೊಬೈಲ್ ಗಳು ಲಭ್ಯವಾಗಲಿವೆ. 1500 ರೂಪಾಯಿ ಠೇವಣಿಯನ್ನು ತುಂಬಿ ಮೊಬೈಲ್ ನ್ನು ಹೊಂದಬಹುದಾಗಿದೆ. ಈ...

 ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿ ಶ್ರೀರಾಮ್ ಭಟ್ ನೇಮಕ 

ಶಿರಸಿಯ  ಯುವ ಧುರೀಣ ಹಾಗೂ ಉದ್ಯಮಿ ಶ್ರೀರಾಮ್ ಭಟ್  ಅವರನ್ನು ಯುವ ಜನತಾದಳ " ರಾಜ್ಯ ಕಾರ್ಯದರ್ಶಿ " ಯಾಗಿ  ನೇಮಕ ಮಾಡಲಾಗಿದೆ . ಯುವ ಜನತಾದಳದ ರಾಜ್ಯಾಧ್ಯಕ್ಷ ಎಸ್. ಮಧು ಬಂಗಾರಪ್ಪ ಅವರು ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ್ ಅವರ ಸಮ್ಮುಖದಲ್ಲಿ ನೇಮಕಾತಿ ಪತ್ರ ನೀಡಿ ಶುಭ ಹಾರೈಸಿದರು.  ಶಿರಸಿ ಸಮೀಪದ ಬೆಂಡೆಗದ್ದೆಯವರಾದ ಶ್ರೀರಾಮ್ ಭಟ್ ಯುವ...

​ಕಾರವಾರದಲ್ಲಿ ಹೋಂ ಸ್ಟೇ ಸಾಧ್ಯತೆ

ಕಾರವಾರ: ಪಹರೆ ವೇದಿಕೆಯ ಚಿಂತನ ಮಂಥನ ವಿಭಾಗದಿಂದ ಎರಡನೇ ಕಾರ್ಯಕ್ರಮ ಇಂದು ಕಾರವಾರದ ಕನ್ನಡ ಭವನದಲ್ಲಿ ಜರುಗಿತು. ಈ ತಿಂಗಳ ವಿಷಯ ಕಾರವಾರದಲ್ಲಿ ಹೋಂಸ್ಟೇ ಸಾಧ್ಯತೆ ಎಂದು ಇದ್ದು ಈ ವಿಷಯದ ಮೇಲೆ ಕುಮಟಾದ ಪ್ರಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿರಾಜ್ ಕಡ್ಲೇ, ಹೋಂ ಸ್ಟೇ ಉದ್ಯಮಿ ಶ್ರೀ ರಾಜೀವ್ ಗಾಂವಕರ್ ಮತ್ತು ಚಿಂತಾಮಣಿ...

ಅಪರಿಚಿತ ಶವ ಪತ್ತೆ

​ಚಿಕ್ಕಮಗಳೂರು : ಅಪರಿಚಿತ ಯುವತಿಯ ಶವ ಪತ್ತೆ ಶೃಂಗೇರಿಯ ತುಂಗಾ ನದಿಯಲ್ಲಿ ಪತ್ತೆ ಯಾದ ಶವ. ಮೃತಳ ಬಗ್ಗೆ ಯಾವುದೇ ರೀತಿಯ ಮಾಹಿತಿ ತಿಳಿದುಬಂದಿಲ್ಲ. (adsbygoogle = window.adsbygoogle || ).push({}); ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ. ನದಿಯಲ್ಲಿ ತೇಲುತ್ತಿದ್ದ ಶವವನ್ನ ದಡಕ್ಕೆ ತಂದ ಪೊಲೀಸರು ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ...

ಜಿ ಎಸ್ ಟಿ ಯಾವ್ಯಾವ ವಸ್ತುಗಳ ಬೆಲೆ ಎಷ್ಟು?

ಜಿ.ಎಸ್.ಟಿ ಯಿಂದಾಗಿ ಉತ್ಪನಗಳ ದರಗಳಲ್ಲಿ ಬದಲಾವಣೆಗಳ ಚಿಕ್ಕ ವಿಶ್ಲೇಷಣೆ ಇಲ್ಲಿದೆ

ಕಾರವಾರದ ಮುದಗಾ ಬಳಿ ಅಪಘಾತ

ಕಾರವಾರ:​ ಎರಡು ಬೈಕಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಕಾರವಾರದ ಮುದಗಾ ಬಳಿ ರಾಷ್ಟ್ರೀಯ ಹೆದ್ದಾರಿ ೬ ರಲ್ಲಿ ಈ ದುರ್ಘಟೆನೆ ಸಂಭವಿಸಿದ್ದು ಸಂದೀಪ ದುರ್ಗೇಕರ (೩೦) ಎಂಬುವವರು ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ಮೂವರ ಸ್ಥಿತಿ ಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ಡಾ.ಶ್ರೀಹರಿಗೆ ಜಪಾನ್‌ನ ‘ಪರಿಸರ ಪ್ರಶಸ್ತಿ’ ಪ್ರದಾನ

ಜಪಾನ್‌ ಟೊಕಿಯೊದ ಕಸುಮೆಗಸೆಕಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನಿನ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ‘ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು ಕಾರವಾರ: ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನ್ ಸರ್ಕಾರ 2017ನೇ ಸಾಲಿನ ‘ಪರಿಸರ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಪರಿಸರ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿರುವುದಕ್ಕೆ...

ಪಾಕಿಸ್ತಾನದ ಪರ ವಿಜಯೋತ್ಸವ, ಜಾಮೀನು ನಿರಾಕರಣೆ

ಮಡಿಕೇರಿ: ಪಾಕಿಸ್ತಾನದ ಪರವಾಗಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಏಳನೇ ಹೊಸಕೋಟೆಯ ಸಮ್ಮದ್ ಮುನೀರ್, ಜಹೀರ್ ಹಾಗೂ ರಿಯಾಝ್ ಎಂಬವರು ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ಭಾರತವನ್ನು ಮಣಿಸಿದ ಸಂದರ್ಭ ಪಾಕ್ ಧ್ವಜ ಪ್ರದರ್ಶಿಸಿದ್ದಲ್ಲದೆ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪ ಹೊತ್ತಿದ್ದರು. ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ...

ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಧಕರಿಗೆ ಪುರಸ್ಕಾರ

ಉದ್ಯಮಿ ಉಪೇಂದ್ರ ಪೈ ಅಧ್ಯಕ್ಷತೆಯ ‘ಉಪೇಂದ್ರ ಪೈ ಸೇವಾ ಟ್ರಸ್ಟ್’ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಶಿರಸಿ ಸಿದ್ದಾಪುರ ತಾಲೂಕಿನ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90ಕ್ಕಿಂತ ಗರಿಷ್ಠ ಅಂಕ ಪಡೆದ ಅವಶ್ಯಕ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಹಾಗೂ ಪ್ರಸಕ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು 24-06-2017 ಶನಿವಾರ...

ಲಿಂಗದಕೋಣ ಕಲ್ಯಾಣಮಂಟಪದಲ್ಲಿ  ಮಲೆನಾಡು ಮೇಳ

ಜ್ಯೂನ್ ೨೧ರಂದು  ಶಿರಸಿಯ ಲಿಂಗದಕೊಣ ಕಲ್ಯಾಣಮಂಟಪದಲ್ಲಿ ಒಂದು ದಿನದ ಮಲೆನಡು ಮೇಳ ಹೊಮ್ಮಿಕೊಳ್ಳಲಾಗಿದೆ. ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಗಳಿದ್ದು ಅಭಿರುಚಿಕರು ಭಾಗವಹಿಸಬಹುದಾಗಿದೆ.

​ಕಾರವಾರ ಕಡಲ ತೀರದಲ್ಲಿ ಅನ್ಯಗ್ರಹ ಜೀವಿಗಳು

ಕಳೆದ ಶನಿವಾರ ಕಾರವಾರ ಸಮುದ್ರ ತೀರದಲ್ಲಿ ಚಾಪೆಲ್ ವಾರ್ ಶಿಪ್ ಮ್ಯೂಸಿಯಂ ಬಳಿ ನಸುಕಿನಲ್ಲಿ ಅನ್ಯಗ್ರಹ ಜೀವಿಗಳು ಸುತ್ತಾಡುತ್ತಿದ್ದವು. ಬೆಳಿಗ್ಗೆ ೬.೩೦ ರ ಸುಮಾರಿಗೆ ಜೋರಾಗಿ ಮಳೆ ಬೀಳುತ್ತಿತ್ತು. ಅದರ ಜೊತೆಗೆ ಮೋಡ ಕವಿದು ಇನ್ನೂ ಕತ್ತಲೆಯ ವಾತಾವರಣವೇ ಇತ್ತು. ಅಂತಹ ಸಂಧರ್ಭದಲ್ಲಿ ವಾಯು ವಿಹಾರಕ್ಕೆ ಬಂದ ಕೆಲ ಜನ ಕುತೂಹಲದಿಂದ ಸಮೀಪ ಹೋಗಿ...

ಶಿರಸಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು

ಮೂಲ ನೆಲ ಜಲ ಸಂಸ್ಕ್ರತಿ ವೇದಿಕೆ, ಹುಳಗೋಳದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡ ಅವರೊಂದಿಗೆ ‘ಮನೆಯಂಗಳದಲ್ಲಿ ಮಾತುಕತೆ’ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶ್ರೀಮತಿ ರಾಜೇಶ್ವರಿ ಹೆಗಡೆಯವರ ಮನೆಯಲ್ಲಿ 19-06-2017ರ ಸೋಮವಾರದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿರಸಿ ತಾಲೂಕಿನ ಅರಸಾಪುರ ಅಂಚೆ, ಹುಳಗೋಳದ ಶ್ರೀ ದತ್ತಕೃಪಾ ನಿಲಯಕ್ಕೆ ಗೌಡರು ಬೆಳಿಗ್ಗೆ 11ಕ್ಕೆ ಆಗಮಿಸಲಿದ್ದು ಸಾಯಂಕಾಲದವರೆಗೂ...

ನಮ್ಮನ್ನಗಲಿದ ಮಾರಿಗುಡಿ ಮಾಜಿ ಅಧ್ಯಕ್ಷರು

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾಜಿ ಅಧ್ಯಕ್ಷರು ಹಾಗೂ ಈಗಿನ ಧಮ೯ದಶಿ೯ಗಳಾದ ಶ್ರೀ ವಿ ಯು ಪಟಗಾರ ಅವರು ವಿಧಿವಶರಾಗಿದ್ದಾರೆ

ಕುಮಟಾ ಬಳಿ ಕಾರು ಅಪಘಾತ

ಕುಮಟಾ ತಾಲೂಕಿನ ಮಿರ್ಜಾನ ಬಳಿ ಹೈವೇಯಲ್ಲಿ ಸಾಗುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡ ಪರಿಣಾಮವಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪ್ರಾಣಾಪಯವಾಗಿಲ್ಲ. ಸಣ್ಣಪುಟ್ಟಗಾಯಗಳಾಗಿದ್ದು ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಇತ್ತೀಚೆಗೆ ಕರಾವಳಿ ಭಾಗದಲ್ಲಿ ಅಧಿಕ ಮಳೆ ಹಾಗೂ ರಸ್ತೆ ವಿಸ್ತರಣೆಯಿಂದಾಗಿ ಹೆಚ್ಚಿದ ಅಪಘಾತ ಜನರಲ್ಲಿ ಭಯದ ವಾತಾವರಣ ಎರ್ಪಟ್ಟಿದೆ. ಇದನ್ನು ತಡೆಯಲು ಆಡಳಿತ ಸಜ್ಜಾಗಬೇಕು ಹಾಗೂ ಜನರೂ ಎಚ್ಚರಿಕೆಯಿಂದ ವಾಹನ...

ರಾಜ್ಯಾದ್ಯಂತ ಮಳೆಗಾಗಿ ಬಿಜೆಪಿ ಯುವ ಮೋರ್ಚಾದಿಂದ ಪೂಜೆ

ಇಂದು ನಗರ ಶಿರಸಿ ಬಿಜೆಪಿ ಯುವಮೋರ್ಚಾ ವತಿಯಿಂದ ರಾಜ್ಯಾದ್ಯಂತ ಉತ್ತಮ ಮಳೆಗಾಗಿ ಮತ್ತು ಎಲ್ಲಾ ರೈತರ ಜನರ ಸಂಕಷ್ಟ ‌ನಿವಾರಣೆಗೆ   ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.

ಯಲ್ಲಾಪುರದಲ್ಲಿ ಅಫಘಾತ – ಸಾವು

ಬೈಕ್ ಸ್ಕಿಡ್ ಆಗಿ  ಬಸ್ಸಿನಡಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ತಾಲ್ಲೂಕು ಪಂಚಾಯ್ತಿಗಳು ಎದುರು ಗುರುವಾರ ಮಧ್ಯಾಹ್ನ ನಡೆದಿದೆ.      ಪಟ್ಟಣದ ಅಡಿಕೆ ವ್ಯಾಪಾರಿ ವಿಶ್ವನಾಥ ಶ್ರೀಪಾದ ಶಾನಭಾಗ ( ದಯಾನಂದ ಶಾನಭಾಗ)(60) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಬಸ್ ಬೆಲ್ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಸಾರಿಗೆ...

ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ – ಸಾವು ನೋವು

ಕುಮಟಾ: ಕುಮಟಾ ದಿವಗಿ ಬಳಿ ಗುಡ್ಟ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವಮಪ್ಪಿದ್ದಾರೆ.  ರಾ.ಹೆ 66 ರ ಪಕ್ಕದಲ್ಲಿ ಕುಸಿದ ಗುಡ್ಡದಿಂದಾಗಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿದೆ. ಅದರ ಪಕ್ಕದಲ್ಲಿರುವ ಹಲವು ಮನೆಗಳು ಕುಸಿತದಲ್ಲಿ ಸಿಲುಕಿದ್ದು ಮನೆಯೊಳಗಿದ್ದ ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ. ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ದಿವಗಿಯ ಗುಡ್ಡಕುಸಿತದಿಂದ ಗುಡ್ಡವನ್ನು ಬೀಳುವಾಗ ಬೈಕ ಸವಾರರು ಸಿಲುಕಿಕೊಂಡಿದ್ದು ಅವರಿಗಾಗಿ ಹುಡುಕಾಟ...

ಯಲ್ಲಾಪುರ ಪಟ್ಟಣದ ಮಧ್ಯ ಭಾಗದಲ್ಲಿ ಅಫಘಾತ

ಕಾರವಾರ ಶಾಸಕ ಸತೀಶ ಸೈಲ್ ಪೊರ್ಚುನರ್ ಕಾರು ಹಾಗು ಉದ್ದನೆಯ ರೆಕ್ಕೆ ಸಾಗಿಸುವ ವಾಹನದ ಮಧ್ಯ ಯಲ್ಲಾಪುರ ಪಟ್ಟಣದ ಮಧ್ಯ ಭಾಗದಲ್ಲಿ ಅಫಘಾತ. ಶಾಸಕರ ಕಾರು ಜಕಂ ಯಾರಿಗೂ ಅಪಾಯವಿಲ್ಲ ಒಂದುವರೆ ಘಂಟೆ ಟ್ರಾಫಿಕ್ ಜಾಂ .

ಶ್ರೀ ಮಾರಿಕಾಂಬಾ ದೇವಸ್ಥಾನ, ಜಯಂತಿ ಉತ್ಸವದ ಕರೆಯೋಲೆ

ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ(ಉ.ಕ.). ಜಯಂತಿ ಉತ್ಸವದ ಕರೆಯೋಲೆ ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನಾ ಅಂಗವಾಗಿ ನಡೆಯುವ ಜಯಂತಿ ಉತ್ಸವವು ಶ್ರೀ ಶಾಲಿವಾಹನ ಗತಶಕೆ ೧೯೩೭ ನೇ ಮನ್ಮಥನಾಮ ಸಂವತ್ಸರದ ವೈಶಾಖ ಶುಧ್ದ ಅಷ್ಟಮಿ ರವಿವಾರ ದಿನಾಂಕ : ೨೬-೦೪-೨೦೧೫ ರಂದು ನಡೆಯಲಿದ್ದು, ಶ್ರೀ ದೇವಿಯ ಪ್ರೀತ್ಯರ್ಥವಾಗಿ ಶ್ರೀ ದೇವಸ್ಥಾನದಲ್ಲಿ ಕಲಾವೃಧ್ದಿ ಹವನ ಮತ್ತು ಶತಚಂಡೀ ಹವ ನಡೆಯುವುದು. —————————————————– ದಿನಾಂಕ: ೨೪-೦೪-೨೦೧೫...

ಮರದ ತುಂಬೆಲ್ಲ ಹಲಸಿನ ಹಣ್ಣಿನ ಗೊಂಚಲು, ನೋಡಲು ಮನವೇ ಮರುಳು

ಶಿರಸಿ ತಾಲೂಕಿನ ಬನವಾಸಿ ರಸ್ತೆಯಲ್ಲಿರುವ ಉಂಚಳ್ಳಿಯ ಕೃಷಿಕ ದನಂಜಯ ಕೆ. ಹೆಗಡೆಯವರು ಆರೈಕೆ ಮಾಡಿ ಬೆಳೆಸಿದ ಸುಮಾರು ೮ ರಿಂದ ೯ ವರ್ಷದ ಹಲಸಿನ ಗಿಡದಲ್ಲಿ (ಭಕ್ಕೆ) ಪ್ರತಿಯೊಂದು ಟೊಂಗೆಗಳಲ್ಲಿ ನೂರಕ್ಕೂ ಮೇಲ್ಪಟ್ಟು ಹಲಸಿನ ಕಾಯಿಗಳನ್ನು ಬಿಟ್ಟು ಜನರ ಆಕರ್ಷಣೆಗೆ ಅಣಿಯಾಗಿದೆ. ಕೃಷಿಯನ್ನೇ ತಮ್ಮ ಜೀವನಾಧಾರ ಮಾಡಿಕೊಂಡ ದನಂಜಯ ಹೆಗಡೆ ಬಹುಮುಖ ಬೆಳೆಯ ಕೃಷಿಕರಾಗಿರುವುದು ಇಲ್ಲಿ...

ತೇಲಂಗ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಣೆ

ದಿನಾಂಕ ೦೧-೦೭-೨೦೧೫ ಬುಧವಾರ ಶಿರಸಿಯ ತೇಲಂಗ ಪ್ರೌಢಶಾಲೆಯಲ್ಲಿ ವನವಾಸಿ ಕಲ್ಯಾಣ ಸಮಿತಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯವರ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಅವು ಹಾಳಾಗದಂತೆ ರಕ್ಷಣಾ ಕವಚವನ್ನೂ ಹಾಕಲಾಯಿತು. ಇದಕ್ಕೆ ಶಿರಸಿ ವಲಯ ಅರಣ್ಯ ಇಲಾಖೆಯವರೂ ಸಹಾ ಅಲ್ಲಿ ಬಂದು ಸಹಕಾರ ನೀಡಿದರು. ಮಕ್ಕಳು ತಾವೇ...
video

Iraqi army as they fly above Mosul

Iraqi army as they fly above Mosul, fighting the militants of the so-called Islamic State. This extraordinary BBC footage allows you to join the pilots in the sky.

ಹೆಚ್ಚು ಕಾಮೆಂಟಗಳು

ಇಟ್ಟಿಗೆ ಲಾರಿ ಪಲ್ಟಿ – ಕ್ಲೀನರ್ ಬಲಿ

ಅಂಕೋಲಾ, ಅ.೩ : ತಾಲೂಕಿನ ಸುಂಕಸಾಳ ಸಮೀಪ ಇಟ್ಟಿಗೆ ತುಂಬಿದ್ದ ಲಾರಿ ಪಲ್ಟಿಯಾದ ದುರ್ಘಟನೆ ಇಂದು ಮುಂಜಾನೆ ಸಂಭವಿಸಿದೆ. ಈ ಅಪಘಾತದಲ್ಲಿ ಲಾರಿ ಕ್ಲೀನರ್ ಶರೀಫ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ಕಲಘಟಗಿಯಿಂದ...

ಹಾಟ್ ನ್ಯೂಸ್