21.8 C
Sirsi, Karnataka
Tuesday, March 26, 2019

ಸುದ್ದಿ

Latest News around karnataka

ಕುಮಟಾ ರೈಲು ನಿಲ್ದಾಣದಲ್ಲಿ ದೂರವಾಣಿಗೂ ಗತಿ ಇಲ್ವೆ?

ಕುಮಟಾ, ಸೆ.೨೯: ಕೆಲವು ದಿನಗಳಿಂದ ಕುಮಟಾ ರೈಲು ನಿಲ್ದಾಣದಲ್ಲಿ ದೂರವಾಣಿ ಸೌಲಭ್ಯ ಇಲ್ಲದೆ ಮಾಹಿತಿ ಪಡೆಯಲು, ರೈಲು ಸಮಯ ವಿಚಾರಿಸಲು ಆಗದೆ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಈ ಕುರಿತಂತೆ ಎಷ್ಟೇ ವಿಚಾರಿಸಿದರೂ ಫಲಿತಾಂಶ ಮಾತ್ರ ಶೂನ್ಯ. ಸಂಬಂಧಪಟ್ಟವರು ಆದಷ್ಟು ಬೇಗ ಈ ಅನಾನುಕೂಲತೆಯನ್ನು ಸರಿಪಡಿಸಬೇಕೆಂಬುದು ನಮ್ಮದೂ ಆಗ್ರಹವಾಗಿದೆ.

9 ನೇ ದಿನದ ವಿಶೇಷ ಪುಷ್ಪಾಲಂಕಾರ ಶೋಭಿತೆ ಶ್ರೀ ಮಾರಿಕಾಂಬಾ ದೇವಿ

ಶಿರಸಿ : ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು 9 ನೇ ದಿನವೂ ಕೂಡಾ ವಿಶೇಷ ಪುಷ್ಪಾಲಂಕಾರ ಮಾಡಲಾಗಿದ್ದು, ದೇವಸ್ಥಾನದ ಸಭಾ ಮಂಟಪದ ಹಾಲ್‍ನಲ್ಲಿ ಕೂಡಾ ವಿಶೇಷವಾದ ಅಲಂಕಾರವನ್ನು ಮಾಡಿದ್ದು ಭಕ್ತರನ್ನು ಆಕರ್ಷಿಸುತ್ತಿದೆ. ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುತ್ತಿದ್ದು ...

ಹೊಸ ಪ್ರತಿಭೆಗಳ ರಂಗಪ್ರವೇಶ

ಶಿರಸಿ, ಸೆ.೨೯: ಶಿರಸಿಯ ತೋಟಗಾರರ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ ೧ರ ಸಂಜೆ ೫.೩೦ ಕ್ಕೆ ಕು. ನಿಧಿ ಸ್ವಾದಿ ಮತ್ತು ಕು. ನಿರೀಕ್ಷಾ ಸ್ವಾದಿಯವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವಿದೆ. ಇವರು ವಿದೂಷಿ ಸೀಮಾ ಭಾಗ್ವತರ ಶಿಷ್ಯೆಯರಾಗಿದ್ದಾರೆ.

ಬ್ರೇಕಿಂಗ್ ನ್ಯೂಸ್: ರಸ್ಥೆ ಅಪಘಾತ; ಬೈಕ್ ಸವಾರನ ಸ್ಥಿತಿ ಗಂಭೀರ

ಹೊನ್ನಾವರ, ಸೆ. ೨೯: ಹೊನ್ನಾವರದ ರಾಮತೀರ್ಥ ರಸ್ತೆ ಹೆದ್ದಾರಿ ಬಳಿ ಬೈಕ್ ಮತ್ತು ಕಾರು ಅಪಘಾತವಾಗಿದೆ. ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಈಗಷ್ಟೇ ಅಪಘಾತವಾಗಿದ್ದು ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ

ರಸ್ತೆ ಅವ್ಯವಸ್ಥೆ ಸರಿಪಡಿಸಲು ಜಯ ಕರ್ನಾಟಕ ಸಂಘಟನೆಯಿಂದ ಆಗ್ರಹ

ಅಂಕೋಲಾ, ಸೆ.೨೯ : ಪಟ್ಟಣದ ಜಿ.ಸಿ. ಕಾಲೇಜಿನ ಕಾಮತ ಪ್ಲಸ್ ಎದುರಿನ ತೀವ್ರ ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ನಿರ್ಮಿಸಿಕೊಡುವಂತೆ ಜಯ ಕರ್ನಾಟಕ ತಾಲೂಕಾ ಘಟಕದ ಪಧಾಧಿಕಾರಿಗಳು ಆಗ್ರಹಿಸಿ, ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ರಾಜು. ಡಿ. ನಾಯ್ಕ, ಉಪಾಧ್ಯಕ್ಷ ಅಮರ ಜೆ. ಬಂಟ, ಮೋಹನ ಎಸ್. ಜೋಷಿ, ಕಾರ್ಯದರ್ಶಿ...

ದಿಗ್ವಾಸ್ ಗೆ ಮತ್ತೊಂದು ಗರಿ

ಶಿರಸಿ, ಸೆ.೨೯: ನಗರದ ಹೆಮ್ಮೆಯ ಛಾಯಾಗ್ರಾಹಕ ದಿಗ್ವಾಸ್ ಬೆಳ್ಳೆಮನೆಯವರು ಫೆರಡೆಷನ್ ಆಫ್ ಇಂಡಿಯನ್ ಫೋಟೋಗ್ರಫಿ ಇಂದ AFIP distinction Certificate, medal and Photographer's card ಗೆ ಭಾಜನರಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅದ್ಭುತ ಛಾಯಾಚಿತ್ರಕ್ಕಾಗಿ ಅನೇಕ ಪ್ರಶಸ್ತಿ, ಗೌರವ ಪಡೆದಿರುವ ಶ್ರೀಯುತರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ.

ನವರಾತ್ರಿಯ ಅಂಗವಾಗಿ ಬನವಾಸಿಯಲ್ಲಿ ವೈವಿಧ್ಯಮಯ ಸಾಂಸ್ಕ್ರತಿಕ ಸೌರಭ

ಇತಿಹಾಸ ಪ್ರಸಿದ್ಧ ಬನವಾಸಿಯಲ್ಲಿ ಶರನ್ನವರಾತ್ರಿಯ ಅಂಗವಾಗಿ 8 ನೇ ದಿನ ಆಹ್ವಾನಿತ ಕಲಾವಿದರಿಂದ ಭಕ್ತಿ ಸಂಗೀತ ಮತ್ತು ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಸೌರಭ ಸಂಭ್ರಮದಿಂದ ಸಾಗಿತು. ಮಧುಕೇಶ್ವರ ದೇವಾಲಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಪ್ರೊ| ಡಾ|| ಜಿ.ಎ ಹೆಗಡೆ, ಸೋಂದಾ ಎಲ್ಲರನ್ನೂ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಮತ್ತು ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮಕ್ಕೆ ಮುನ್ನುಡಿ...

ಮಾಹಿತಿ ತಂತ್ರಜ್ಞಾನ ಘಟಕ ಉದ್ಘಾಟನೆ

ಶಿರಸಿ, ಸೆ.೨೯: ಅಕ್ಟೋಬರ್- 01-2017 ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಆರಾಧನಾ ಸಭಾಂಗಣ, ಹೊಟೆಲ್ ಮಧುವನದಲ್ಲಿ ಮಾಹಿತಿ ತಂತ್ರಜ್ಞಾನ ಘಟಕದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷರಾದ ಬಿ.ಆರ್. ನಾಯ್ಕ, ಯುವ ಮುಖಂಡರಾದ ಡಾ|| ಶಶಿಭೂಶಣ ಹೆಗಡೆ, ಕುಮಟಾ ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯ್ಕ, ನ್ಯಾಯವಾದಿ ರವೀಂದ್ರ ನಾಯ್ಕ,...

ಶಿರಸಿ ಮಾರಿಗುಡಿಯಲ್ಲಿ ಜನಸಾಗರ

ಶಿರಸಿ, ಸೆ.೨೯: ದಸರಾ ನವರಾತ್ರಿಯ ಒಂಭತ್ತನೇ ದಿನವಾದ ಇಂದು ಜಾಗೃತಿ ಶಕ್ತಿಪೀಠ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಜನರು ಸಾಗರೋಪಾದಿಯಲ್ಲಿ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಯ ಪವಿತ್ರ ದಿನವಾದ ಶುಕ್ರವಾರ ಶುಭ ದಿನವೆಂಬ ನಂಬಿಕೆ ಆಸ್ತಿಕರಲ್ಲಿದೆ. ಇಂದು ದೇವತಾ ತತ್ವ ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಕುಮಟಾ ಪೊಲೀಸ್ ಠಾಣೆಯಲ್ಲಿ ವೈಭವದ ಆಯುಧಪೂಜೆ

ಕುಮಟಾ, ಸೆ.೨೯: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನವರಾತ್ರಿಯ ಪ್ರಯುಕ್ತ ಈ ದಿನದಂದು ಆಯುಧ ಪುಜೆ ನೆರವೇರಿಸಲಾಯಿತು.

ಕಾರವಾರ ಕಡಲಲ್ಲಿ ದಾಖಲೆಯ ಮೀನು ಬೇಟೆ

ಕಾರವಾರ, ಸೆ.೨೯: ಕಳೆದ ಒಂದು ತಿಂಗಳಿಂದ ಮೀನುಗಾರಿಕೆ ಇಲ್ಲದೆ ಕಂಗಾಲಾಗಿದ್ದ ಕಾರವಾರದ ಮೀನುಗಾರರಿಗೆ ಇಂದು ವಿಜಯ ದಶಮಿ ಕೊಡುಗೆ ಎಂಬಂತೆ ಬಂಪರ್ ಮೀನಿನ ಭೇಟೆಯಾಗಿದೆ. ನಗರದ ರವೀಂದ್ರನಾಥ ಟಾಗೋರ್ ಕಡಲತಡಿಯ ಸುಮಾರು ೩೦ಮೀ ಉದ್ದಕ್ಕೂ ಎಲ್ಲಿನೋಡಿದ್ರು ಮೀನೆ ಮೀನು, ಮೀನುಗಾರರು ಉತ್ಸಾಹದಿಂದ ಬಲೆಯಲ್ಲಿ ಮೀನನ್ನ ತುಂಬಿ ತುಂಬಿ ಸುಸ್ತಾದ್ರೆ ಇನ್ನೊಂದೆಡೆ ಸ್ಥಳಿಯರು ಕೂಡಾ ಪುಕ್ಸಟ್ಟೆ...

ಅಮದಳ್ಳಿ ದುರ್ಗಾ ಮಾತೆ

ಕಾರವಾರ: ಸೆ. ೨೯: ಕಾರವಾರದ ಅಮದಳ್ಳಿಯ ಹತ್ತನೇ ವರ್ಷದ ದುರ್ಗಾ ದೇವಿ, ಹರುಷದಿಂದ ಪಾಲ್ಗೊಂಡ ಜನತೆ.

ಜೈನ ಮಠಕ್ಕೆ ಅನಂತಕುಮಾರ ಹೆಗಡೆಯವರ ಭೇಟಿ

ಶಿರಸಿ: ಸೆ. ೨೯: ದಿನಾಂಕ 30-09-2017 ರಂದು ಬೆಳಿಗ್ಗೆ ಜೈನ ಮಠದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಂತ್ರಿಗಳಾದ ಶ್ರೀ ಅನಂತ ಕುಮಾರ ಹೆಗಡೆ ಯವರು ಭಾಗವಹಿಸುವ ಕಾರ್ಯಕ್ರಮ ಹಾಗೂ ದಸರಾ ಆನೆ ಅಂಬಾರಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದ್ದು ಸಾರ್ವಜನಿಕರಿಗೆ ಆಮಂತ್ರಿಸಿದ್ದಾರೆ.

ಸಿದ್ದಾಪುರದಲ್ಲಿ ಸಚಿವರು

ಸಿದ್ದಾಪುರ, ಸೆ.೨೯: ನೂತನ ಸಚಿವರು, ನಮ್ಮ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆಯವರಿಗೆ ಅಭಿನಂದನಾ ಸಮಾರಂಭವನ್ನು ಸಿದ್ದಾಪುರದಲ್ಲಿ ಇಂದು ಬೆಳೆಗ್ಗೆ ಹಮ್ಮಿಕೊಳ್ಳಲಾಗಿತ್ತು.

ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ

ಕುಮಟಾ, ಸೆ. ೨೯: ಅಕ್ಟೊಬರ್‌ ೨ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಉತ್ತರಕನ್ನಡ ಜಿಲ್ಲಾ ಗೋಪರಿವಾರದ ಮಾರ್ಗದರ್ಶನದಲ್ಲಿ ಕುಮಟಾ ತಾಲೂಕಾ ಗೋಪರಿವಾರ ಮತ್ತು ಎಲ್ಲಾ ಗ್ರಾಮಗೋಪರಿವಾರಗಳ ನೇತ್ರತ್ವದಲ್ಲಿ ಬೃಹತ್ ಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಪ್ರಯುಕ್ತ ಅಂದು ಬೆಳಿಗ್ಗೆ 9:30ಕ್ಕೆ ಭೂದೇವಿ ಅಮ್ಮನವರ...

ಅಕ್ಟೋಬರ್ ೨ ರಿಂದ ಸ್ವಚ್ಛತಾ ಕಾರ್ಯಕ್ರಮ

ಭಟ್ಕಳ, ಸೆ.೨೯: ಭಟ್ಕಳ ಪುರಸಭಾ ಸಭೆಯಲ್ಲಿ ಅಕ್ಟೋಬರ್ ೨ ರಿಂದ ೮ರವರೆಗೆ ತಾಲೂಕಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಕ್ಟೋಬರ್ 2ರಂದು ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುವುದು

ಯುನಿವರ್ಸಿಟಿ ಬ್ಲೂ ಆಗಿ ಚೇತನ ಭಂಡಾರಿ

ಶಿರಸಿ, ಸೆ.29: ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ಗಣಪತಿ ಹೆಗಡೆ, ಗಣೇಶ ಹೆಗಡೆ, ಶಶಿಕಾಂತ ಮೊಗೇರ, ಸಂತೋಷ ಮರಾಠ, ಚೇತನ ಭಂಡಾರಿ ಭಾಗವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಚೇತನ ಭಂಡಾರಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾರೆ. ವಿದ್ಯಾರ್ಥಿಗಳ...

ಶಿರಸಿ ಕಾಲೇಜಿಗೆ ಪ್ರಥಮ ಸ್ಥಾನ

ಶಿರಸಿ,ಸೆ.29: ಕಾರವಾರ ಬಾಡದ ಶಿವಾಜಿ ಕಲಾ ವಾಣಿಜ್ಯ ಮತ್ತು ಬಿ.ಸಿ.ಎ. ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕಾರವಾರದಲ್ಲಿ ನಡೆದ ಅಂತರ ವಲಯ ಕಾಲೇಜು ಮಟ್ಟದ ಬಾಲ್ ಬ್ಯಾಂಡ್ಮಿಟನ್ ಸ್ಪರ್ಧೆಯಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ಶುಭಾ ಹೆಗಡೆ, ಸುಹಾನಾ ದೊಡ್ಮನಿ, ಅರ್ಪಿತಾ ಹೆಗಡೆ, ರಶ್ಮಿ ಮರಾಠಿ, ಸುಷ್ಮಾ...

ಕವಿ ಕಾವ್ಯ ಬಳಗದಿಂದ ಕವಿಗೋಷ್ಠಿ

ಶಿರಸಿ, ಸೆ.೨೯: ಇದೇ ಬರುವ ಅಕ್ಟೋಬರ್ ೨ನೇ ತಾರೀಖು, ಸೋಮವಾರ, ಮದ್ಯಾಹ್ನ. 4 ಘಂಟೆಗೆ, ಶಿರಸಿಯ ನೆಮ್ಮದಿ ಕುಠೀರದಲ್ಲಿ, ಕವಿ ಕಾವ್ಯ ಬಳಗದಿಂದ ಕವಿಗೋಷ್ಠಿ ನಡೆಯಲಿದೆ. ಖ್ಯಾತ ವಿಮರ್ಷಕರಾದ ಆರ್ ಡಿ ಹೆಗಡೆ ಆಲ್ಮನೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಜಯರಾಮ ಹೆಗಡೆ ಉಪಸ್ಥಿತರಿರುವರು.

ಸಿಗಂಧೂರು ಅಮ್ಮನಿಗೆ ಗೋಡಂಬಿ ಅಲಂಕಾರ

ಸಾಗರ, ಸೆ.೩೮: ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಶಕ್ತಿ ದೇವತೆ ಸಿಗಂಧೂರು ಚೌಡೇಶ್ವರಿಯು ಇಂದು ಗೋಡಂಬಿ ಬೀಜಗಳ ಅಲಂಕಾರದಲ್ಲಿ ಕಂಗೊಳಿಸುತ್ತಿರುವುದು.

ಉತ್ತರ ಕನ್ನಡ ಪ್ರವಾಸದಲ್ಲಿ ಅನಂತಕುಮಾರ ಹೆಗಡೆಯವರ ಕಾರ್ಯಕ್ರಮ ವಿವರ

ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರ ಉತ್ತರ ಕನ್ನಡ ಪ್ರವಾಸ ಕಾರ್ಯಕ್ರಮ ಪಟ್ಟಿ. ದಿನಾಂಕ 29-09-2017 ರಂದು ಬೆಳಿಗ್ಗೆ 10.00ಕ್ಕೆ ಸಿದ್ದಾಪುರದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮದ್ಯಾಹ್ನ 03-00 ಕ್ಕೆ ಮುಂಡಗೋಡ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಭಾಗಿ ಸಾಯಂಕಾಲ 05.00 ಯಲ್ಲಾಪುರ ಟಿ.ಎಂ.ಎಸ್ ಹಾಲ್ (ಎ.ಪಿ.ಎಂ.ಸಿ...

ಅಂತರಾಷ್ಟ್ರೀಯ ಮಟ್ಟದ ಕೊಂಕಣಿ ಭಾಷಾ ಸಮ್ಮೇಳನ

ಮಂಗಳೂರು, ಸೆ.೨೮: ರಾಷ್ಟ್ರೀಯ ಮಾನ್ಯತೆಯ ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತವಾಗಿ ಕೊಂಕಣಿ ಅಕಾಡೆಮಿಯು ಒಂದು ಮಹತ್ವದ ಕಾರ್ಯಕ್ರಮವಾಗಿ ಅಂತರಾಷ್ಟ್ರೀಯ ಮಟ್ಟದ ಕೊಂಕಣಿ ಭಾಷಾ ಸಮ್ಮೇಳನವನ್ನು ಮುಂದಿನ ಜನವರಿ 2018ರಲ್ಲಿ ಆಯೋಜಿಸಲು ನಿರ್ಧರಿಸಿದೆ. ಈ ಬಗ್ಗೆ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಆರ್.ಪಿ.ನಾಯ್ಕರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ವರ್ಷಾಚರಣೆಯ ಪೂರ್ವ ಭಾವಿ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಿದರು. ಈ...

ಶರನ್ನವರಾತ್ರಿ ಪ್ರಯುಕ್ತ ಬಿಲ್ವಪತ್ರೆ ಸಸಿ ವಿತರಣೆ

ಬನವಾಸಿ, ಸೆ ೨೮: ಶರನ್ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಏಳನೇ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ದೇವುಳದ ಅಧ್ಯಕ್ಷ ರಾಜಶೇಖರ ಒಡೆಯರ ಅಧ್ಯಕ್ಷತೆಯಲ್ಲಿ ದಯಾನಂದ ಮಂಗಳೂರು ಉದ್ಘಾಟಿಸಿದರು. ಕಮಿಟಿಯ ಪ್ರಧಾನ ಕಾರ್ಯದರ್ಶಿ, ಧರ್ಮದರ್ಶಿ ಡಾ. ಜಿ.ಎ. ಹೆಗಡೆ, ಸೋಂದಾ, ಕಮಿಟಿಯ ರಾಜಶೇಖರ ಒಡೆಯರ್, ಶಿವಾನಂದ ದೀಕ್ಷಿತ್, ಡಾ. ಜಿ.ಎ ಹೆಗಡೆ ಸೊಂದಾ, ಮಂಗಲಾ ದಾವಣಗೇರಿ ಬಿಲ್ವಪತ್ರೆ...

ಜೆಡಿಎಸ್ ನಿಂದ ಪ್ರತಿಭಟನೆ

ಶಿರಸಿ, ಸೆ.೨೮: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜನತಾದಳ ಜಾತ್ಯಾತೀತ ಶಿರಸಿ ನಗರ ಮತ್ತು ಗ್ರಾಮೀಣ ಘಟಕದಿಂದ 03-10-2017 ಮಂಗಳವಾರದಂದು ನಗರದ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಬೆಳಿಗ್ಗೆ ಬೃಹತ್ ಪ್ರತಿಭಟನೆ ನಡೆಯಲಿದೆ. ಕಾರ್ಯಕ್ರಮದ ನೇತೃತ್ವವನ್ನು ಡಾ. ಶಶಿಭೂಷಣ ಹೆಗಡೆಯವರು ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಸಿದ್ದಾಪುರದಲ್ಲಿ ರಾಜ್ಯಮಟ್ಟದ ಸೆಮಿನಾರ್

ಸಿದ್ದಾಪುರ, ಸೆ.೨೮: ಪಟ್ಟಣದ ಎಂ.ಜಿ.ಸಿ. ಕಾಲೇಜಿನಲ್ಲಿ ಇಂದು ರಾಜ್ಯಮಟ್ಟದ ವಿಚಾರಸಂಕೀರಣ ಕಾರ್ಯಕ್ರಮವು ನಡೆಯಿತು. ಜಿ.ಎಸ್.ಟಿಯ ಅನುಕೂಲ ಮತ್ತು ಸವಾಲುಗಳ ಕುರಿತಾಗಿದ್ದ ಈ ಕಾರ್ಯಕ್ರಮದಲ್ಲಿ ಡಾ. ಶಶಿಭೂಷಣ ಹೆಗಡೆಯವರು ದೀಪಬೆಳಗಿಸಿ ಮಾತನಾಡಿದರು.

ಸ್ವರ್ಣವಲ್ಲಿಯಲ್ಲಿ ಸಡಗರದ ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರತಿನಿತ್ಯದಂತೆ ಸಂಜೆ ೬.೩೦ಘಂಟೆಯಿಂದ ಶ್ರೀ ಸೋಂದಾ ಸುಧರ್ಮಾ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಿದ್ದು, ಆಕಾಶವಾಣಿಯ ಬ್ರಿಗೇಡ್ ಕಲಾವಿದೆಯಾದ...

ರಾಘವೇಶ್ವರರ ಭೇಟಿ ಮಾಡಿದ ಶಾಸಕಿ ಶಾರದಾ ಶೆಟ್ಟಿ

ಹೊನ್ನಾವರ, ಸೆ.೨೮: ಹೊನ್ನಾವರ ತಾಲ್ಲೂಕಿನ ಕೆಕ್ಕಾರದ ರಘೋತ್ತಮ ಮಠಕ್ಕೆ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಇಂದು ಭೇಟಿನೀಡಿ, ಗೋ ರಕ್ಷಣಾ ದೀಪ ಬೆಳಗಿಸಿ ಶ್ರೀ ರಾಘವೇಶ್ವರ ಶ್ರೀಗಳ ಆಶೀರ್ವಚನ ಪಡೆದುಕೊಂಡರು.

ಮತ್ತೆ ಶುರುವಾದ ಕೊಂಕಣಿ ಮೊಬೈಲ್ ಬಝಾರ್

ದಾಂಡೇಲಿ, ಸೆ.೨೮: ಕರ್ನಾಟಕ ಕೊಂಕಣಿ ಅಕಾಡೆಮಿಯಿಂದ ಹಿಂದೆ ನಡೆಸಲ್ಪಡುತ್ತಿದ್ದು ನಂತರ ಸ್ಥಗಿತಗೊಂಡಿದ್ದ ಕೊಂಕಣಿ ಮೊಬೈಲ್ ಬಜಾರ್ ಇಂದಿನಿಂದ ಪುನರಾರಂಭಗೊಂಡಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಎಚ್.ಖಾದರ್‍ರವರು ಕೊಂಕಣಿ ಅಕಾಡೆಮಿಯ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಪುನರಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ. ನಾಯ್ಕ, ಕೊಂಕಣಿ ಮೊಬೈಲ್...

ದಾಂಡೇಲಿ ನಗರಸಭೆ ಸಾಮಾನ್ಯ ಸಭೆ

ದಾಂಡೇಲಿ, ಸೆ.೨೮: ದಾಂಡೇಲಿ ನಗರ ಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಇಂದು ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರಾದ ಅಡಿವೆಪ್ಪ ಭದ್ರಕಾಳಿ ನಗರದ ಗಾಂಧಿನಗರದಲ್ಲಿ ನಡೆದಿರುವ ಅತಿಕ್ರಮಣಗಳನ್ನು ಈವರೆಗೂ ಯಾಕೆ ತೆರವುಗೊಳಿಸಿಲ್ಲ? ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಇಲ್ಲದಿರುವುದರಿಂದ ನವರಾತ್ರಿ ನಂತರ ಅಲ್ಲಿಯ ಅತಿಕ್ರಮಣ ತೆರವುಗೊಳಿಸಲಾಗುವುದೆಂದು ಅಧ್ಯಕ್ಷರು ಉತ್ತರಿಸಿದರು. ನಂತರ...

ಹಿಂ.ಜಾ.ವೇ ಇಂದ ದುರ್ಗಾದೌಡ್

ಕುಮಟಾ, ಸೆ.೨೮: ತಾಲೂಕಿನಲ್ಲಿ ಇಂದು ಹಿಂದೂ ಜಾಗಣವೇದಿಕೆ ಘಟಕದಿಂದ ನವರಾತ್ರಿಯ ದುರ್ಗಾದೌಡ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಕುಮಟಾ ತಾಲೂಕಿನ ಪ್ರತಿಯೊಂದು ದೇವಾಲಯಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಲಾಯಿತು.

ದಸರಾ ಉತ್ಸವ; ಸನ್ಮಾನ, ಪ್ರತಿಭಾ ಪುರಸ್ಕಾರ

ಗೋಕರ್ಣ, ಸೆ.೨೮: ದಸರಾ ಉತ್ಸವದ ಪ್ರಯುಕ್ತ ಶ್ರೀ ಯುವಶಕ್ತಿ ಯುವಕಸಂಘ ಬಂಕಿಕೊಡ್ಲ ಮತ್ತು ಸಾರ್ವಜನಿಕ ದಸರಾ ಉತ್ಸವ ಸಮಿತಿ ಬಂಕಿಕೊಡ್ಲ ಇವರ ಆಶ್ರಯದಲ್ಲಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಂಕಿಕೊಡ್ಲದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಿನಕರ ಶೆಟ್ಟಿ ಹಾಗೂ...

ಮುಖ್ಯಮಂತ್ರಿ ಮೀಟರ್ ತಿಳಿದುಕೊಳ್ಳಲು ಆರ್.ಟಿ.ಐ. ಮೊರೆ

ಬೆಂಗಳೂರು, ಸೆ.೨೮: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ದೇಹದ ಯಾವ ಭಾಗದಲ್ಲಿ ಮೀಟರ್ ಅಳವಡಿಸಲಾಗಿದೆ ಎಂದು ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಮಾಹಿತಿ ಕೋರಿರುವ ವಿಶಿಷ್ಟ ಸಂಗತಿಯೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ ೨೫ರಂದು ಮಂಡ್ಯ ನಗರದ ನಿವಾಸಿ ಸಿ.ಟಿ. ಮಂಜುನಾಥ ಎಂಬುವವರು ಜಿಲ್ಲಾಧಿಕಾರಿಯ ಮುಖೇನ ವಿಧಾನಸೌದದ ಮುಖ್ಯಮಂತ್ರಿಗಳ ಕಛೇರಿಗೆ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದಾರೆ. ಮಾನವನ ದೇಹದಲ್ಲಿ...

ದೇವಿಮನೆ ಘಟ್ಟ ತಿರುವಿನಲ್ಲಿ ಅಪಘಾತ

ಕುಮಟಾ, ಸೆ.೨೮: ಇಂದು ಮಧ್ಯಾಹ್ನ 12 ಘಂಟೆಯ ಸುಮಾರಿಗೆ ಶಿರಸಿ-ಕುಮಟಾ ರಸ್ತೆಯಲ್ಲಿನ ದೇವಿಮನೆ ಘಟ್ಟದ ಕೊನೆಯ ತಿರುವಿನಲ್ಲಿ ಓಮಿನಿ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓಮಿನಿ ಚಾಲಕನಿಗೆ ಪೆಟ್ಟಾದ ಬಗ್ಗೆ ವರದಿಯಾಗಿದೆ.

ಮದ್ಯಪಾನದ ಕುರಿತಾಗಿ ಜನರಲ್ಲಿ ಜಾಗೃತಿ ಕಾರ್ಯಕ್ರಮ

ಶಿರಸಿ, ಸೆ.೨೮: ಅಕ್ಟೋಬರ್ ೧ರ ಮಧ್ಯರಾತ್ರಿಯಿಂದ ಅಕ್ಟೋಬರ್ ೨ರ ಮಧ್ಯಾಹ್ನ ೨ಗಂಟೆಯವರೆಗೆ ಗಾ‌ಂಧಿಜಯಂತಿ ಪ್ರಯುಕ್ತ ಉಪವಾಸ ಮೌನಧರಣಿ ತಹಶೀಲ್ದಾರ ಕಛೇರಿಯ ಎದುರು ಹಮ್ಮಿಕೊಳ್ಳಲಾಗಿದೆಯೆಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಪ್ರೆಸ್ ಮೀಟ್ ನಲ್ಲಿ ಮದ್ಯಪಾನ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. ಮಾದಕ ದ್ರವ್ಯ ಹಾಗೂ ಮದ್ಯಪಾನದ ಕುರಿತಾಗಿ ಜನರಲ್ಲಿ...

ಕಾರವಾರದ ಪಹರೆ ವೇದಿಕೆಗೆ ಮುರುಘಾ ಪ್ರಶಸ್ತಿ ಮತ್ತು ಸನ್ಮಾನ

ಕಾರವಾರ: ಸ್ವಚ್ಚತೆಯಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ ಕಾರವಾರ ನಗರದಲ್ಲಿ ಸತತವಾಗಿ ಸೇವೆ ಮಾಡುವ ಮೂಲಕ ಮನೆಮಾತಾಗಿರುವ ಪಹರೆ ವೇದಿಕೆಗೆ ಪ್ರತಿಷ್ಠಿತ ರಾಜ್ಯಮಟ್ಟದ ಮುರುಘಾ ದಸರಾ ಪ್ರಶಸ್ತಿ ಲಭಿಸಿದೆ. ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರತಿವರ್ಷ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಇಂತಹ ಸಂಸ್ಥೆ ಮತ್ತು ಜನರಿಗೆ ದಸರಾ ಸಂಧರ್ಭದಲ್ಲಿ ವಿಶೇಷ ಪ್ರಶಸ್ತಿ ಮತ್ತು ಸನ್ಮಾನವನ್ನ ಮಾಡುತ್ತಾ...

ಕುಮಟಾದಲ್ಲಿ ಹೆಚ್ಚಾದ ದಟ್ಟಣೆಯ ಕಿರಿಕಿರಿ

ಕುಮಟಾ, ಸೆ.೨೮: ದಿನ ಕಳೆದಂತೆ ಕುಮಟಾದಲ್ಲಿ ಟ್ರಾಪಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪೋಲೀಸ್ ಇಲಾಖೆ ಮತ್ತು ತಾಲೂಕ ಆಡಳಿತವು ಟ್ರಾಪೀಕ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲೇ ಬೇಕಾದ ಜರೂರತ್ತಿದೆ. ಪಟ್ಟಣದ ಸುಭಾಷ ರೋಡ್, ಕುಂಬೇಶ್ವರ ರೋಡ್, ಗುಡಿಗಾರಗಲ್ಲಿಗಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದು ಜನರಲ್ಲಿ ಬೇಸರ ಹುಟ್ಟಿಸಿದೆ. ಕುಮಟಾದ...

ಶಾರದಾ ಉತ್ಸವ

ಕುಮಟಾ, ಸೆ.೨೮: ಶ್ರೀ ಬೀರದೇವ ಯುವಕ ಸಂಘ ಮದ್ಗುಣಿ, ಹಳಕಾರ ರೋಡ್ ಕುಮಟಾ ಅವರ ಆಶ್ರಯದಲ್ಲಿ ನಡೆಯುತ್ತಿರುವ 5 ನೇ ವರ್ಷದ ಶ್ರೀ ಶಾರದಾ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.

ಸೋನಾರವಾಡ ದಾಂಡಿಯಾ ವೀಕ್ಷಿಸಿದ ರೂಪಾಲಿ ನಾಯ್ಕ್

ದಾಂಡೇಲಿ, ಸೆ.೨೮: ನಗರದ ಸೋನಾರವಾಡದಲ್ಲಿ ನವರಾತ್ರಿಯ ವಿಶೇಷವಾಗಿ ಆಯೋಜಿಸಿದ ದಾಂಡಿಯಾ ಕಾರ್ಯಕ್ರಮದ ಏಳನೇ ದಿನವಾದ ನಿನ್ನೆ ಬಿ.ಜೆ.ಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯೆ ಶ್ರೀಮತಿ ರೂಪಾಲಿ ನಾಯ್ಕ ಮುಖ್ಯ ಅತಿಥಿಯಾಗಿ ಆಗಮಿಸಿದರು. ಬಳಿಕ ಜಗನ್ಮಾತೆ ದುರ್ಗಾಪರಮೇಶ್ವರಿಯ ದರ್ಶನ ಪಡೆದು ಕೆಲಕಾಲ ದಾಂಡಿಯಾ ನೃತ್ಯ ವೀಕ್ಷಣೆ ಮಾಡಿದರು.

ರಾಜ್ಯ ಮಟ್ಟಕ್ಕೆ ಸಂಗಮೇಶ

ಶಿರಸಿ, ಸೆ.28: 2017-18 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದಲ್ಲಿ ಜೆ.ಎಂ.ಜೆ ಶಿಕ್ಷಣ ಸಂಸ್ಥೆಯ 7ನೇ ತರಗತಿಯ ವಿದ್ಯಾರ್ಥಿಯಾದ ಅನಿಮೇಶ ಹನುಮಂತ ನಾಯ್ಕ ಜಿಲ್ಲಾ ಮಟ್ಟದ ಉದ್ದಜಿಗಿತ (ಲಾಂಗ್‍ಜಂಪ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಚಿಪಗಿ ನಾರಾಯಣ ಗುರುನಗರದ ನಿವಾಸಿಯಾದ ಹನುಮಂತ ನಾಯ್ಕ ಹಾಗೂ ಶ್ರೀಮತಿ ನಾಗರತ್ನ ನಾಯ್ಕ...

ರೈತರಿಗೆ ಅರ್ಜಿ ನೋಂದಾಯಿಸಲು ಕೋರಿಕೆ

ಶಿರಸಿ, ಸೆ. 28: 2017-18 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕಾ ಇಲಾಖೆಯ ಅನುಮೋದಿತ ಕಂಪನಿ/ಡೀಲರ್ ಗಳಿಂದ ಹನಿ ನೀರಾವರಿ ಅಳವಡಿಸುವ ರೈತರಿಗೆ ಶೇ. 90 ರ ಸಹಾಯಧನವನ್ನು 5 ಎಕರೆ ಕ್ಷೇತ್ರದವರೆಗೆ ಹಾಗೂ ಶೇ. 50 ರ ಸಹಾಯಧನವನ್ನು 5 ಎಕರೆ ಮೇಲ್ಪಟ್ಟು ಗರಿಷ್ಠ 12.5...

ಸತತ ಮೂರನೇ ವರ್ಷ ರಾಜ್ಯಮಟ್ಟಕ್ಕೆ ತಲುಪಿದ ಸಾಧನೆ

ಶಿರಸಿ, ಸೆ. 28: ನಗರದ ಎಂ.ಇ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿಯಾದ ರಕ್ಷಿತಾ ಪಟಗಾರ ಯಲ್ಲಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಕ್ರೀಡಾಕೂಟದ ಬಾಲಕಿಯರ ಎತ್ತರ ಜಿಗಿತ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸುವುದರ ಮೂಲಕ ಸತತ 3ನೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆಯ ಮೂಲಕ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಶಿಕ್ಷಕ...

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಇಸಳೂರು ಶಾಲಾ ಮಕ್ಕಳು

ಶಿರಸಿ, ಸೆ. 28: ಯಲ್ಲಾಪುರದಲ್ಲಿ ಜರುಗಿದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಇಸಳೂರಿನ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಯಕ್ತಿಕ ಆಟಗಳಲ್ಲಿ ರಾಜ್ಯ ಮಟ್ಟದ ಕ್ರೀಡೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕುಮಾರ ಆಕಾಶ ಕಮರೂರು ಪೋಲ್ ವಾಲ್ಟ, ಕುಮಾರಿ ಲೀಲಾವತಿ 3000 ಮೀ ಓಟದಲ್ಲಿ, ಕುಮಾರಿ ಮಮತಾ...

ಸಂಧ್ಯಾ ಹೆಗಡೆಗೆ ಎಸ್ವಿ ಪ್ರಶಸ್ತಿ

ಶಿರಸಿ, 28: ಜನಶಕ್ತಿ ವಿಶ್ವಸ್ಥ ಮಂಡಳಿ (ಶಿರಸಿ) ಮತ್ತು `ಲೋಕಧ್ವನಿ’ ದಿನಪತ್ರಿಕೆ ನೀಡಲು ನಿರ್ಧರಿಸಿದ್ದ ಎಸ್.ವಿ.ಹೆಗಡೆ-ಹಾಸ್ಪುರ ಸ್ಮರಣಾರ್ಥದ `ಎಸ್ವಿ ಪ್ರಶಸ್ತಿ’ಯನ್ನು ಪ್ರಸಕ್ತ ವರ್ಷದಿಂದ ನೀಡಲು ಅಡಿಯಿಡಲಾಗಿದ್ದು ಪ್ರಪ್ರಥಮ ಪ್ರಶಸ್ತಿಗಾಗಿ`ಪ್ರಜಾವಾಣಿ’ಯ ಶಿರಸಿ ವರದಿಗಾರ್ತಿ ಸಂಧ್ಯಾ ಹೆಗಡೆ ಆಲ್ಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದೆ....

ಜನಾಕರ್ಷಣೆಯಲ್ಲಿ ಬನವಾಸಿಯ ಬೃಹತ್ ರಂಗೋಲಿ

ಬನವಾಸಿ,ಸೆ.28:ಐತಿಹಾಸಿಕ ಪ್ರಸಿದ್ಧ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ವಾರ್ಷಿಕ ಶರನ್-ನವರಾತ್ರಿ ಉತ್ಸವದ ಪ್ರಯುಕ್ತ ದೇವಸ್ಥಾನದ ನೃತ್ಯ ಮಂಟಪದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬೃಹತ್ ರಂಗೋಲಿಯನ್ನು ಸ್ಥಳಿಯರಾದ ಪೂರ್ಣಿಮಾ ಅರವಿಂದ ಶೆಟ್ಟಿಯವರು ತಮ್ಮ ಪುತ್ರಿಯಾದ ಕು. ಗೌರಿಯವರೊಂದಿಗೆ ಸೆ.25ರಂದು ರಚಿಸಿದ 'ಅರ್ಧನಾರೀಶ್ವರ' ರಂಗೋಲಿಯು ಶ್ರೀ ದೇವಸ್ಥಾನಕ್ಕೆ ಆಗಮಿಸುತ್ತಿರುವ ಎಲ್ಲ ಭಕ್ತರ-ಪ್ರವಾಸಿಗರ ಮನಗೆದ್ದು ಪ್ರಶಂಸೆಗೆ...

ಜಿಲ್ಲೆಯ ಪುತ್ರನೀಗ ಭಾರತದ ಅತಿ ಕಿರಿಯ ಅಧಿಕಾರಿ

ಕಾರವಾರ, ಸೆ.೨೮: ದೇಶದ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿನ CF ಹಂತದ ಅಧಿಕಾರಿಯಾಗಿ ಭಾರತ ಸರ್ಕಾರದಿಂದ ನೇಮಕಗೊಂಡಿರುವ IFS ಅಧಿಕಾರಿಯಾಗಿ ನಮ್ಮ ಉತ್ತರಕನ್ನಡದ ಎ.ಟಿ ದಾಮೋದರ ನಾಯ್ಕ ಕಾರ್ಯನಿರ್ವಹಿಸಲಿದ್ದಾರೆ. ಅವರು ಕೇರಳದ ಕೊಚ್ಚಿನ್ ಮತ್ತು ಕವರತ್ತಿಯ ಆಡಳಿತ ಕಛೇರಿಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ಎ.ಟಿ ದಾಮೋದರ ನಾಯ್ಕರವರು ಗೋವ ರಾಜ್ಯದಲ್ಲಿ 3 ವರ್ಷಗಳ...

ಆರ್ ಎಸ್ ಎಸ್ ಕುಮಟಾದಿಂದ  ವಿಜಯದಶಮಿ ಉತ್ಸವ

ಕುಮಟಾ, ಸೆ.೨೮: ದಿನಾಂಕ 30-09-2017 ಶನಿವಾರ ಮುಂಜಾನೆ 7-00 ಘಂಟೆಗೆ ನಗರದ ಗಿಬ್ ಪ್ರೌಢ ಶಾಲಾ ಮೈದಾನದಲ್ಲಿ ಕುಮಟಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಸಸ್ಯ ಶಾಸ್ತ್ರಜ್ಞರಾದ ಡಾ. ಜಿ. ರಾಮಚಂದ್ರರಾವ್ ಹಾಗೂ ಶ್ರೀಪಾದ ಅವರು ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ನಂತರ 8-30 ಘಂಟೆಗೆ ಗಿಬ್ ಪ್ರೌಢಶಾಲಾ ಮೈದಾನದಿಂದ ನಗರದ...

ಇ-ಸ್ಟಾಂಪಿಂಗ್ ಸೇವಾ ಕೇಂದ್ರ ಉದ್ಘಾಟನೆ

ಶಿರಸಿ: ಸೆ. 28: ದಿನಾಂಕ 30-09-2017 ರಂದು ಶಿರಸಿಯ ಕದಂಬ ಸೌಹಾರ್ದ ಸಹಕಾರಿ ನಿಯಮಿತ ಅಡಿಯಲ್ಲಿ ಇ-ಸ್ಟಾಂಪಿಂಗ್ ಸೇವಾ ಕೇಂದ್ರವನ್ನು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯದಶಮಿಯ ಶುಭ ದಿನದಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡ, ತಾಲೂಕಾ ಪಂಚಾಯತದ ಎದುರು ಬೆಳಿಗ್ಗೆ 11 ಘಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು, ಸಾರ್ವಜನಿಕರನ್ನು ಈ ಮೂಲಕ ಆಮಂತ್ರಿಸಲಾಗುತ್ತಿದೆ.

ಬ್ರೇಕಿಂಗ್ ನ್ಯೂಸ್ ಬೈಕ್ ಬೊಲೆರೋ ಡಿಕ್ಕಿ – ಒಂದು ಸಾವು

ಭಟ್ಕಳ, ಸೆ.೨೭: ನಗರದ ಬಂದರ ರೋಡನ ಡೊಂಗರ ಪಳ್ಳಿ ಇಳಿಜಾರು ಬಳಿ ಇದೀಗ ಎರಡು ಬೈಕ್ ಮತ್ತು ಶ್ಯಾಮಿಯಾನಾ ಸಾಗಿಸುತ್ತಿದ್ದ ಬೋಲೇರೋ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಫಘಾತದಲ್ಲಿ ಬೈಕ್ ಸವಾರ, ತಲಗೋಡು ನಿವಾಸಿ ನಾಗಪ್ಪ ಈರಪ್ಪ ನಾಯ್ಕ (೫೫) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೊಂದು ಬೈಕ್ ನಲ್ಲಿದ್ದ ಸವುದ್ (೨೧) ಹಾಗೂ ಮರವಾನ್(೨೧) ಬದಿ...

ಬಾರದ ಅಧಿಕಾರಿಗಳು, ರದ್ದಾದ ಇಂದಿನ ಸಭೆ  

ಮುಂಡಗೋಡ, ಸೆ.೨೭: ಸಾರ್ವಜನಿಕರ ಅಹವಾಲು ಆಲಿಸಿ ಕುಂದುಕೊರತೆಗಳ ನಿವಾರಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ ತೋರುವುದು ಸರಿಯೆ? ನಿಗದಿಯಾದ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿ, ಸಕಾರಣವನ್ನೂ ನೀಡದೆ ಇದ್ದಂತಹ ಘಟನೆ ಇಂದಿಲ್ಲಿ ನಡೆದಿದೆ. ಗ್ರಾಮಸಭೆ ಪ್ರಯುಕ್ತ ನೋಡಲ್ ಅಧಿಕಾರಿ,ಪಿಡಿಒ, ಗ್ರಾ.ಪಂ ಅಧ್ಯಕ್ಷೆ,ಸೇರಿದಂತೆ ಪಂಚಾಯತ್ ಸದಸ್ಯರು ಗ್ರಾಮಸ್ಥರು ಸೇರಿದ್ದರು. ಅಧಿಕಾರಿಗಳಿಗಾಗಿ 10.30 ರಿಂದ 12 ಗಂಟೆಯವರಿಗೆ ಕಾದರೂ ಅಧಿಕಾರಗಳು...

ಮುಂಬಡ್ತಿ ಮೀಸಲಾತಿಗಾಗಿ ಮೌನ ಪ್ರತಿಭಟನೆ

ದಾಂಡೇಲಿ, ಸೆ.೨೭ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿಯನ್ನು ಕೂಡಲೇ ಆದೇಶಿಬೇಕೆಂದು ಆಗ್ರಹಿಸಿ ಆದಿ ಜಾಂಬವಂತ ಸಂಘ, ನವಚೈತನ್ಯ ಜನಸೇವಾ ಸಂಘಟನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ದಾಂಡೇಲಿ ಘಟಕದ ಆಶ್ರಯದಲ್ಲಿ ನಗರದ ಸೋಮಾನಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿ ನಂತರ ವಿಶೇಷ ತಹಶೀಲ್ದಾರ್ ಕಚೇರಿಯ ಗೌಡಪ್ಪ...

ಬಿಪಿಎಲ್ ನವರಿಗೆ ಎಲ್ ಇಡಿ

ಕುಮಟಾ, ಸೆ.೨೭: ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಅನಿವಾರ್ಯ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಎಲ್.ಇ.ಡಿ ಬಲ್ಪ್ ವಿತರಣೆ ಇವತ್ತಿನಿಂದ ಪುನರಾರಂಭಗೊಂಡಿದೆ. ಈ ಯೋಜನೆ ಬಿ.ಪಿ.ಎಲ್ ಕಾರ್ಡುದಾರರಿಗೆ ಮಾತ್ರವೇ ಇದ್ದು ಇದರ ಅವಶ್ಯಕತೆ ಇರುವವರು B.P.L ಕಾರ್ಡ ಜೆರೊಕ್ಸ ಮತ್ತು ಕರೆಂಟ್ ಬಿಲ್ ಲಗತ್ತಿಸಿ ಇದರ ಪ್ರಯೋಜನ ಪಡೆಯಬೇಕಾಗಿ K.E.B ಪ್ರಕಟಣೆಯಲ್ಲಿ ತಿಳಿಸಿದೆ. ಬಲ್ಬಿನ ಬೆಲೆ ಎಪ್ಪತ್ತು...

ರಾಣೆಬೆನ್ನೂರು ಗ್ರಾಮ ಪಂಚಾಯತಿ ಚುನಾವಣೆ ಬಿಜೆಪಿ ಮೇಲುಗೈ

ರಾಣೇಬೆನ್ನೂರ ತಾಲೂಕಿನ ಬಿಲ್ಲಹಳ್ಳಿ ಗ್ರಾಮಪಂಚಾಯತ ಚುನಾವಣೆಯಲ್ಲಿ ೧೩ ಜನ ಸದಸ್ಯರು ಜಯಗಳಿಸಿದ್ದಾರೆ. ೧೬ ಸಂಖ್ಯೆಯಲ್ಲಿ ೧೩ ಬಿಜೆಪಿ ಗೆದ್ದಿರುವುದು‌, ಮುಖಂಡರ ಮಂದಹಾಸಕ್ಕೆ ಕಾರಣವಾಗಿದೆ. ಇದು ಯಡಿಯೂರಪ್ಪ ನೇತ್ರತ್ವಕ್ಕೆ ಸಂದ‌ ಜಯ ಎಂದು ಸ್ಥಳೀಯ ಬಿಜೆಪಿ ಸದಸ್ಯರು ಬಣ್ಣಿಸಿದ್ದಾರೆ.

ಸೆ. ೨೯ರಂದು ಯಡಳ್ಳಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ

ಶಿರಸಿ, ಸೆ.೨೭: ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಕೌಶಲ್ಯಾಭಿವೃದ್ಧಿ ಸಚಿವರಾದ ತಿಂಗಳ ಒಳಗೆ ಶಿರಸಿ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಯಡಳ್ಳಿ ಗ್ರಾಮದಲ್ಲಿ ಕೌಶಲ್ಯ ಮತ್ತು ಉದ್ಯೋಗ ತರಬೇತಿಯ ಉಚಿತ ಕೇಂದ್ರ ಸ್ಥಾಪಿಸಿರುವುದು ಜನರಲ್ಲಿ ಹರ್ಷದ ಭಾವನೆ ಮೂಡಿಸಿದೆ. ಇದೇ ಬರುವ ಸೆಪ್ಟೆಂಬರ್ ೨೯, ಶುಕ್ರವಾರ ೧೨.೩೦ಕ್ಕೆ ಯಡಳ್ಳಿಯಲ್ಲಿ ಕೌಶಲ್ಯ ಕೇಂದ್ರದ ಉದ್ಘಾಟನೆ...

ನೆನ್ನೆ ಮಳೆಗೆ ಫೇಸ್ ಬುಕ್ಕಲ್ಲೂ ಕಾಮೆಂಟ್ ಪ್ರವಾಹ

ಶಿರಸಿ, ಸೆ.೨೭: ಶಿರಸಿಯಲ್ಲಿ ನೆನ್ನೆ ಸಾಯಂಕಾಲ ಸುರಿದ ಭಾರೆ ಮಳೆಗೆ ಊರೆಲ್ಲಾ ಜಲಾವೃತಗೊಂಡ ವರದಿ ನೆನ್ನೆಯೇ ಪ್ರಕಟಿಸಿದ್ದೆವು. ಮಳೆನೀರು ಮಳೆ ನಿಂತ ಕೆಲವೇ ಸಮಯದಲ್ಲಿ ಹರಿದುಹೋಗಿ ಮೊದಲಿನ ಪರಿಸ್ಥಿತಿಯೇನೋ ಮೊದಲಿನ ಸ್ಥಿತಿಗೆ ಬಂದಿತ್ತು. ಆದರೆ ಫೇಸ್ ಬುಕ್ ನಲ್ಲಿ ಇದೇ ವಿಷಯವಾಗಿ ಶುರುವಾದ ಕಾಮೆಂಟ್ ಸಮರ ಇನ್ನೂ ನಿಂತಿಲ್ಲ. ನೆನ್ನೆ ಮಳೆಗೆ ಶಿರಸಿ ತುಂಬೆಲ್ಲಾ...

ಮೊಬೈಲ್ ಅಂಗಡಿಯಲ್ಲಿ ಕಳುವು

ಶಿರಸಿ, ಸೆ.೨೭: ಶಿರಸಿಯ ಟಿಎಸ್ಎಸ್ ಕ್ರಾಸಿನಲ್ಲಿರುವ ಮೋಬಿ ಎಕ್ಸಪ್ರೆಸ್ ಮೊಬೈಲ್ ಅಂಗಡಿ ಕಳ್ಳತನವಾದ ಘಟನೆ ಸೆ. ೨೬ ಮಂಗಳವಾರ ರಾತ್ರಿ ನಡೆದಿದೆ. ಸಂದೇಶ ಪಾಠಣಕರ ಅಂಗಡಿಯ ಮಾಲಿಕರಾಗಿದ್ದು, ಅಂಗಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿ ಸುಮಾರು ಎರಡು ಲಕ್ಷ ಮೌಲ್ಯದ ಮೊಬೈಲ್ ಸೆಟ್ ಹಾಗೂ ಕಂಪ್ಯೂಟರ್ ನ ದೋಚಿದ್ದಾರೆ. ಡಿ.ವೈ.ಎಸ್ಪಿ ನಾಗೇಶ ಶೆಟ್ಟಿ ಭೇಟಿ...

 ಸೆ.30 ರಂದು ದಾಂಡೇಲಪ್ಪಾ ಜಾತ್ರೆ

ದಾಂಡೇಲಿ, ಸೆ.೨೭ : ಇದೇ ಬರುವ ಸೆಪ್ಟೆಂಬರ್ 30 ಶನಿವಾರದಂದು ವಿಜಯ ದಶಮಿಯ ದಿನ ದಾಂಡೇಲಿಯ ಜಾಗೃತ ದೇವರಾದ ದಾಂಡೇಲಪ್ಪಾ ದೇವರ ಜಾತ್ರೆ ನಗರದ ಸಮೀಪದ ಕೆರವಾಡ ಗ್ರಾಮದಲ್ಲಿ ಜರುಗಲಿದೆ. ಭಕ್ತಾದಿಗಳು ಜಾತ್ರೆಗೆ ಆಗಮಿಸಿ ದೇವರ ಅನುಗ್ರಹಕ್ಕೆ ಪಾತ್ರರಾಬೇಕೆಂದು ದೇವಸ್ಥಾನದ ಕಮಿಟಿಯ ಪರವಾಗಿ ಅರ್ಚಕರಾದ, ಗೋಪಾಲ ಅರ್ಜುನ ಮಿರಾಶಿ, ಮಾಜಿ ಜಿಲ್ಲಾ ಪಂಚಾಯತ್...

ಹಲ್ಲೆ ಖಂಡಿಸಿ ಮನವಿ ಅರ್ಪಣೆ

ದಾಂಡೇಲಿ, ಸೆ.೨೭: ನಗರದ ಮಾರುತಿನಗರದಲ್ಲಿ ಸೆ.22 ರಂದು ವಿನಾಕಾರಣ ಒಬ್ಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಗುಂಪಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.ವೈ.ಎಪ್.ಐ, ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಾರುತಿನಗರ 6 ನೇ ವಾರ್ಡಿನ ನಾಗರಿಕರು ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಲಿಖಿತ ಮನವಿಯ ಮೂಲಕ...

ಮುಖ್ಯ ಶಿಕ್ಷಕರ ಅಮಾನತ್ ಖಂಡಿಸಿ ಪ್ರತಿಭಟನೆ 

ಅಂಕೋಲಾ, ಸೆ.೨೭ :ತಾಲೂಕಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಗಾಂವಕರ ಬರ್ಗಿ ಇವರನ್ನು ಅಮಾತನ್ ಆದೇಶ ಖಂಡಿಸಿ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪಾಲಕರು ತರಗತಿ ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಸೆಪ್ಟೆಂಬರ್ ೨೬ರಂದು ನಡೆದಿತ್ತು.ಪ್ರಭಾರ ಕ್ಷೇತ್ರಾಶಿಕ್ಷಣಾಧಿಕಾರಿ ಭಾಸ್ಕರ ಗಾಂವಕರ ಘಟನಾ ಸ್ಥಳಕ್ಕೆ ಆಗಮಿಸಿ ಶಾಲಾ ಅಭಿವೃದ್ಧಿ...

ವಾಟ್ಸಪ ಬ್ಯಾನ್ ಮಾಡಿದ ಚೈನಾ

ಗೌಪ್ಯತೆ ಕಾಪಾಡುವ ಕಾರಣ ಒಡ್ಡಿ, ಚೈನಾ ವಾಟ್ಸಪ್ ನ್ನು ತನ್ನ ದೇಶದಲ್ಲಿ ಬ್ಯಾನ್ ಮಾಡಿದೆ. ವಾಟ್ಸಪ್ ತನ್ನ ಸಂದೇಶ ವಾಹಕ ಸೇವೆಗೆ ಎನ್ಸ್ಕ್ರಿಪ್ಷನ್ ಅಳವಡಿಸಿದ್ದು, ಇದರ ಕ್ಷಮತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ಕ್ರಮ ಕೈಗೊಂಡಿದೆ. ಚೈನಾ ದೇಶದ್ದೇ ಆದ ವಿಚ್ಯಾಟ್ ನ್ನು ಬಳಸಲು ಯಾವುದೇ ಆಡ್ಡಿ ಇಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. - ಅಜಯ ಭಟ್ಟ

ಈ ಬಾರಿ ಅದ್ದೂರಿ ರಾಮಲೀಲೋತ್ಸವ ಆಚರಣೆ

ದಾಂಡೇಲಿ, ಸೆ.೨೬ : ಜಿಲ್ಲೆಯಲ್ಲಿಯೆ ಅತ್ಯಂತ ಎತ್ತರವಾದ ರಾವಣ, ಕುಂಭಕರ್ಣ ಮತ್ತು ಮೇಘನಾಥ ಮೂರ್ತಿಗಳನ್ನು ಒಳಗೊಂಡ ದಸರಾ ಹಬ್ಬವನ್ನು ಎಂದಿನಂತೆ ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಈ ವರ್ಷವು ಅದ್ದೂರಿಯಿಂದ ನಡೆಸಲಿದೆ. ಸೆಪ್ಟೆಂಬರ್ 30 ರಂದು ಬೆಳಿಗ್ಗೆ 9 ಘಂಟೆಯಿಂದಲೆ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ರಾಮಲೀಲೋತ್ಸವದ ಜೊತೆ ಜೊತೆಯಲ್ಲಿಯೆ ಡಿಲಕ್ಸ್ ಮೈದಾನದಲ್ಲಿ...

ಬೈಕ್ ಅಪಘಾತ, ಓರ್ವ ಸಾವು

ಸಾಗರ, ಸೆ.೨೬ : ಇಲ್ಲಿನ ತಾಳಗುಪ್ಪದ ಗೌರಿಕೆರೆ ಬಳಿ ಇದೀಗ ಬೈಕ್ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಢಿಕ್ಕಿ ಸಂಭಂವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆದಿತ್ಯ ಬಿನ್ ಕಿಶನ್(17)ಮೃತ ದುರ್ದೈವಿ. ಪಟ್ರೋಲ್ ತರಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ಮತ್ತೊರ್ವ ಬೈಕ್ ಸವಾರ ಇಡುವಾಣಿಯವನು ಸಣ್ಣ ಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು...

ಯಲ್ಲಾಪುರ ಸಮಸ್ಯೆಗೆ ಪ್ರತಿಭಟನೆ

ಯಲ್ಲಾಪುರ, ಸೆ.೨೫: ಯಲ್ಲಾಪುರ ಪಟ್ಟಣ ಪಂಚಾಯತಿಯ ಸಮಸ್ಯೆಗಳ ಕುರಿತು ಕೆಲದಿನಗಳ ಹಿಂಗೆ ಈ ನಿಮ್ಮ Sirsi.Info ದಲ್ಲಿ ಮಾಹಿತಿ ನೀಡಲಾಗಿದ್ದನ್ನು ನೀವು ಓದಿದ್ದೀರಿ. ಈ ಯಲ್ಲಾಪುರ ಪಟ್ಟಣ ಪಂಚಾಯತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇಂದು ಯಲ್ಲಾಪುರದಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭ್ಯಾವ್ಯ ಜೆಡಿಎಸ್ ಅಭ್ಯರ್ಥಿ ರವೀಂದ್ರ ನಾಯ್ಕ ತಮ್ಮ...

ದೇಶದಲ್ಲಿ  ೨೦ ಸಾವಿರ ಐಟಿಐ ಸ್ಥಾಪನೆ ಗುರಿ, ಅನಂತಕುಮಾರ ಹೆಗಡೆ

ಸಚಿವರಾದ ಮೇಲೆ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಕೌಶಾಲ್ಯಭಿವೃದ್ದಿ ಹಾಗೂ ಉದ್ಯಮಶೀಲ ಸಚಿವಾಲಯದ ರಾಜ್ಯ ಖಾತೆ ಹೊಂದಿರುವ ಅನಂತಕುಮಾರ ಹೆಗಡೆಯವರು ಮಾಧ್ಯಮದೊಂದಿಗೆ ಈ ಮಾತನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ೪೬೦೦ ಕೈಗಾರಿಕಾ ತರಬೇತಿ ಕೇಂದ್ರ ಇದ್ದು, ಇದನ್ನು ೨೦ ಸಾವಿರಕ್ಕೆ ಏರಿಸಲಾಗುವುದು ಎಂದರು.

ಸಂಸ್ಕೃತ ವಿರೋಧಿ ಪ್ರಾಚಾರ್ಯರ ವಿರುದ್ದ ಕ್ರಮಕ್ಕೆ ಮನವಿ

ಶಿರಸಿ, ಸೆ. ೨೫: ಶಿರಸಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಂಸ್ಕೃತ ಭಾಷೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ಮತ್ತು ಸಂಸ್ಕೃತ ಭಾಷೆ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಾ. ಶಶಿಭೂಷಣ ಹೆಗಡೆ ಅವರ ನೇತೃತ್ವದಲ್ಲಿ ಇಂದು ಸಹಾಯಕ ಆಯುಕ್ತರಿಗೆ ಮನವಿ ನೀಡಲಾಯಿತು. ತಕ್ಷಣ ಕ್ರಮಕೈಗೊಳ್ಳದೇ ಹೋದಲ್ಲಿ ತೀವ್ರ...

ಧನಲಕ್ಷ್ಮೀ ರೀಟೇಲ್ಸ್ ಶುಭಾರಂಭ

ಶಿರಸಿ, ಸೆ.೨೫: ಶಿರಸಿಯ ಕುಮಟಾ ರಸ್ತೆಯಲ್ಲಿ ಇಂದು ಧನಲಕ್ಷ್ಮಿ ರೀಟೇಲ್ಸ್ ಪ್ರೈವೇಟ್ ಲಿಮಿಟೆಡ್ ಮಳಿಗೆಯು ವಿದ್ಯುಕ್ತವಾಗಿ ಆರಂಭವಾಯಿತು. ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಗೃಹಬಳಕೆಯ ಎಲ್ಲಾ ವಸ್ತುಗಳೂ ಇಲ್ಲಿ ಲಭ್ಯವೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಪಂಡಿತ ದೀನದಯಾಳ ಜಯಂತಿ ಆಚರಣೆ

ಶಿರಸಿ, ಸೆ.೨೫: ಪಂಡಿತ ದೀನದಯಾಳ ಉಪಾಧ್ಯಾಯರ 101 ನೇ ಜಯಂತಿಯು ಶಿರಸಿಯ ಜಿಲ್ಲಾ ಬಿ.ಜೆ.ಪಿ. ಕಛೇರಿಯಲ್ಲಿ ಇಂದು ಬೆಳಿಗ್ಗೆ ನೆರವೇರಿತು. ಸ್ಥಳಿಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಹಳೇ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ

ಕುಮಟಾ, ಸೆ.೨೫: ಕುಮಟಾ ತಾಲೂಕಿನ ಹೆಗಡೆಯ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಯ ಹಳೆಯ ವಿದ್ಯಾರ್ಥಿಗಳ ಸಂಘ ರವಿವಾರ ಅಸ್ತಿತ್ವಕ್ಕೆ ಬಂದಿತು. ಕಲಿತ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಅಭಿಮಾನದಿಂದ ದೊಡ್ಡ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸಭೆಗೆ ಪಾಲ್ಗೊಂಡಿದ್ದರು. ಧೀರೂ ಶಾನಭಾಗರವರನ್ನು ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ದಸರಾ ಪಥಸಂಚಲನ

ದಾಂಡೇಲಿ, ಸೆ.೨೪: ದಸರಾ ನಿಮಿತ್ತ ರಾಷ್ಟ್ರೀಯ ಸೇವಾ ಸಂಘ ದಾಂಡೇಲಿ ಘಟಕದ ನೇತೃತ್ವದಲ್ಲಿ ರವಿವಾರ ಪಥ ಸಂಚಲನವು ನಗರದಲ್ಲಿ ನಡೆಯಿತು. ನಗರ ಸಂಘ ಸಂಚಾಲಕ ಜೆ.ಎಲ್. ಬ್ಯಾಹೆತಿ, ಜಿಲ್ಲಾ ವ್ಯವಸ್ಥಾ ಪ್ರಮುಖ ಶ್ರೀನಿವಾಸ ಪ್ರಭು, ದಾಂಡೇಲಿ ಕಾರ್ಯ ನಿರ್ವಾಹಕ ದಯಾನಂದ ಮರಾಠಿ, ಜಿಲ್ಲಾ ಸೇವಾ ಪ್ರಮುಖ ಅರ್ಜುನ್ ನಾಯ್ಕ, ನಗರ...

ಕೇಂದ್ರ ಸಚಿವರಿಗೆ ಸಾರ್ವಜನಿಕ ಸನ್ಮಾನ

ಕಾರವಾರ, ಸೆ.೨೪ : ಭಾರತೀಯ ಜನತಾಪಾರ್ಟಿಯಿಂದ ಕೇಂದ್ರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಕೇಂದ್ರ ಸರಕಾರದ ರಾಜ್ಯ ಸಚಿವರಾದ ಉತ್ತರಕನ್ನಡ ಲೋಕಸಭಾ ಕೇತ್ರದಿಂದ ಕಾರವಾರದ ಜಿಲ್ಲಾರಂಗಮಂದಿರದಲ್ಲಿ ಅನಂತಕುಮಾರ ಹೆಗಡೆ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಇಂದು ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜೆ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್, ಮಾಜಿ ಸಚಿವ...

ಹಿಟಾಚಿ ಪಲ್ಟಿ

ಕುಮಟಾ ಸೆ.೨೪: ಕುಮಟಾದ ದಿವಗಿ ಸಮೀಪ ಹಿಟಾಚಿ ವಾಹನ ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಪಲ್ಟಿಯಾದ ನಂತರ ಸುತ್ತಲೂ ಹೊಗೆಯಿಂದ ಆವೃತವಾಗಿತ್ತು.

ಚೀನಾ ವಸ್ತು ಬಹಿಷ್ಕಾರ

ಕುಮಟಾ, ಸೆ.೨೪: ವಿಶ್ವಹಿಂದೂ ಪರಿಷತ್ ಕಾರವಾರ ಜಿಲ್ಲಾ ಕುಮಟಾ ಘಟಕದಿಂದ ಚೀನಾ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮವು ಕುಮಟಾದ ಮಾಸ್ತಿಕಟ್ಟೆಯ ಶ್ರೀ ಮಹಾಸತಿ ದೇವಸ್ಥಾನ ಸಭಾಭವನದಲ್ಲಿ ನಡೆಯಿತು. ಬಹಳಷ್ಟು ಧರ್ಮಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜನಾಭಿಪ್ರಾಯ -ವಿದ್ಯುತ್ ಬಿಲ್ ಪಾವತಿಗೆ ಪರದಾಟ

ಗೋಕರ್ಣ, ಸೆ.೨೪: ಸುಮಾರು 8000ದಷ್ಟು ವಿದ್ಯುತ್ ಮೀಟರ ಇರುವ ಈ ಭಾಗದಲ್ಲಿ ವಿದ್ಯತ್ ಬಳಕೆದಾರರಿಗೆ ತಿಂಗಳ ಹಣ ಪಾವತಿಸಲು ಪರದಾಡುವಂತಾಗಿದೆ. ಇಲ್ಲಿನ ಮೇಲಿನಕೇರಿಯಲ್ಲಿ ಗೊಡಂಗಡಿಕ್ಕಿಂತಲೂ ಚಿಕ್ಕದಾದ ಜಾಗದಲ್ಲಿ ವಿದ್ಯುತ್ ಬಿಲ್ಲ ತುಂಬಿಸಿಕೊಳ್ಳುತ್ತಿದ್ದು ಜನರ ರಸ್ತೆಯಲ್ಲಿ ಕಿ. ಮೀಟರ ಉದ್ದ ಸಾಲಲ್ಲಿ ನಿಲ್ಲುವಂತಾಗಿದೆ. ಬಿಸಿಲು ಅಥವಾ ಮಳೆ ಬಂದರೆ ಪಕ್ಕದ ಅಂಗಡಿ ಬಾಗಿಲಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಬಂದಿದೆ. ಹಿರಿಯನಾಗರಿಕರು,...

ಅಂಕೋಲಾ ಆಗಮಿಸಿದ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ

ಅಂಕೋಲಾ, ಸೆ.೨೪ : ಕೇಂದ್ರ ಸಚಿವರಾದ ಅನಂತ ಕುಮಾರ್ ಹೆಗಡೆಯವರಿಗೆ ಇಂದು ಅಂಕೋಲಾದ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ ಬರಮಾಡಿಕೂಂಡು ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.

ಗಂಗಾವಳಿ ಬಾರ್ಜನ ನೂತನ ವೇಳಾಪಟ್ಟಿ

ಗಂಗಾವಳಿ ನದಿ ದಾಟುವ ಬಾರ್ಜ್ ನ ನೂತನ ವೇಳಾಪಟ್ಟಿ ಈ ಕೆಳಗಿನಂತಿದೆ. ಸಾರ್ವಜನಿಕರ ಅವಾಗಾಹನೆಗಾಗಿ ಈ ಮಾಹಿತಿ

ರಾಜ್ಯ ಮಟ್ಟದ ಯೋಗ- ನಾಗಶ್ರೀ ದ್ವಿತಿಯ

ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದ ನಾಗಶ್ರೀ ಮುರಳಿ ನಾಯಕ ಅವರಿಗೆ ಯೋಗದಲ್ಲಿ ರಾಜ್ಯಮಟ್ಟದಲ್ಲಿ ದ್ವಿತಿಯ ಸ್ಥಾನ ಪ್ರಾಪ್ಥವಾಗಿದೆ. ನಾಗಶ್ರೀಯ ಈ ಸಾಧನೆಗೆ ಪಾಲಕರು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಗ್ಯಾಸ್ ಟ್ಯಾಂಕರ್ ಪಲ್ಟಿ

ಹೊನ್ನಾವರ, ಸೆ.೨೪: ಇಂದು ಬೆಳಿಗ್ಗೆ ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ಮಂಗಳೂರು ಕಡೆಯಿಂದ ಗೋವಾ ಕಡೆ ಹೊರಟಿದ್ದ ಗ್ಯಾಸ್ ತುಂಬಿದ ಅನಿಲ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಮಧ್ಯದಲ್ಲಿ ಬಿದ್ದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಧಾವಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಸಧ್ಯಕ್ಕೆ...

ಮನೆ‌ಮನೆಗೆ ಕಾಂಗ್ರೆಸ್ – ಅಭಿಯಾನದಲ್ಲಿ ಭೀಮಣ್ಣ ನಾಯ್ಕ

ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜೀಬಳದಲ್ಲಿ "ಮನೆ ಮನೆಗೆ ಕಾಂಗ್ರೆಸ್" ಅಭಿಯಾನ ಕಾರ್ಯಕ್ರಮಕ್ಕೆ ಡಿಸಿಸಿ ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕರವರು ಚಾಲನೆ ನೀಡಿದರು‌. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಕರ್ನಾಟಕ ಮಹಾ ಜನತೆಗೆ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಕರ್ನಾಟಕವನ್ನು ಭಾರತದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವನ್ನಾಗಿಸಿ ಶೋಷಿತರು,ಅವಕಾಶ ವಂಚಿತರು,ನೊಂದವರಿಗೆ ಧನಿಯಾಗಿ ಸಾಮಾಜಿಕ ನ್ಯಾಯದ...

ಜನಪ್ರತಿನಿಧಿಗಳೇ ಎಲ್ಲಿರುವಿರಿ? ಕುಮಟಿಗರ ಪ್ರಶ್ನೆ

ಕುಮಟಾ, ಸೆ. ೨೩: ಚಿತ್ರದಲ್ಲಿರುವುದು ಕುಮಟಾ ತಾಲೂಕು ಹನೇಹಳ್ಳಿ ಪಂಚಾಯತಿ ವ್ಯಾಪ್ತಿಯ ಹೊಸ್ಕೇರಿ ಹಳ್ಳಿಯ ಡಾಂಬರು ರಸ್ತೆ. ಈ ನತದೃಷ್ಟ ರಸ್ತೆ ಡಾಂಬರು ಕಂಡು ವರ್ಷಗಳೇ ಕಳೆದಿವೆ. ಇಲ್ಲಿನ ದುರದೃಷ್ಟ ಗ್ರಾಮಸ್ಥರು ಕಷ್ಟಪಡುತ್ತಾ ಸಂಚರಿಸುವುದನ್ನು ನೋಡುತ್ತಾ ರೋದಿಸುತ್ತಾ ಮಲಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲಿದ್ದಾರೊ ಏನೊ?

ಮಾರುತಿ ದೇವಾಲಯದಲ್ಲಿ ಇಂದು ರಾತ್ರಿ ಹತ್ತು ಗಂಟೆಗೆ ಸಂಗೀತಗಾರರಾದ ಮೆಹಬೂಬ ಭಜನೆ

ಶಿರಸಿ, ಸೆ. ೨೩: ಶಿರಸಿಯ ನಾಡಿಗಗಲ್ಲಿಯ ಶ್ರೀ ಮಾರುತಿ ದೇವಸ್ಥಾನದಲ್ಲಿ ೮೮ನೇ ವರ್ಷದ ಅಖಂಡ ಭಜನೆ ಕಾರ್ಯಕ್ರಮವು ಇಂದು ಮುಂಜಾನೆ ೬ ಗಂಟೆಯಿಂದ ಆರಂಭವಾಗಿದ್ದು ನಾಳೆ ಬೆಳಿಗ್ಗೆ ೬ ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ. ಈ ವರ್ಷದ ಭಜನಾ ಕಾರ್ಯಕ್ರಮದಲ್ಲಿ ಸ್ಥಳಿಯ ಭಕ್ತಿಗೀತೆ ಹಾಡುಗಾರರು, ಭಜನಾ ಮಂಡಳಿಯವರೊಂದಿಗೆ ವಿಶೇಷವಾಗಿ ಖಾಸಗಿ ಟಿವಿ ವಾಹಿನಿಯ ಸರಿಗಮಪ ಕಾರ್ಯಕ್ರಮ ಖ್ಯಾತಿಯ...

ತೂಗು ಸೇತುವೆ ಲೋಕಾರ್ಪಣೆ 

ಅಂಕೋಲಾ, ಸೆ.೨೩ : ಸುಂಕಸಾಳ ಡೋಂಗ್ರಿ ಗ್ರಾಮವನ್ನು ಸಂಪರ್ಕಿಸುವ ಸಾರ್ವಜನಿಕರ ಬಹುದಿನದ ಕನಸಾದ ಸುಮಾರು 1ಕೋಟಿ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ 125 ಮೀ. ಉದ್ದದ ತೂಗು ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಇಂದು ಉದ್ಘಾಟಿಸಿ ಸಾರ್ವಜನಿಕರ ಸಂಚಾರಕ್ಕೆ ಅರ್ಪಣೆ ಮಾಡಿದರು. ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಕರಾವಳಿ ಅಭಿವೃದ್ಧಿ ಪ್ರಧಿಕಾರದ...

ಪೌರಕಾರ್ಮಿಕರ ದಿನಾಚರಣೆ  

ಮುಂಡಗೋಡ, ಸೆ.೨೩: ಇಂದು ಪಟ್ಟಣ ಪಂಚಾಯತ ಮುಂಡಗೋಡದ ಪೌರಕಾರ್ಮಿಕರಿಗೆ ಸನ್ಮಾನಿಸಿ, ಶಾಲು ಹೋದಿಸಿ, ಫಲಪುಷ್ಪ ನೀಡಿ ಗೌರವಿಸುವ ಮೂಲಕ ಪೌರಕಾರ್ಮಿಕ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಿಂಗಾಪುರ ಕ್ಕೆ ಹೋಗಲು ಆಯ್ಕೆಯಾದ ಪೌರ ಕಾರ್ಮಿಕರಿಗೂ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಉಪಾಧ್ಯಕ್ಷ ಫಕ್ಕಿರಪ್ಪಾ ಅಂಟಾಳ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿ...

ಮಾರಕಾಸ್ತ್ರಗಳಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

ದಾಂಡೇಲಿ, ಸೆ.೨೩: ತನ್ನ ಅಪ್ತಾಪ್ತ ಮಗಳನ್ನು ಚುಡಾಯಿಸಿದ ಹುಡುಗನಿಗೆ ಬೈದು ಬುದ್ದಿ ಮಾತು ಹೇಳಿದ ತಂದೆಯ ಮೇಲೆಯೇ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಾಯಿಸಲೆತ್ನಿಸಿದ ಘಟನೆ ದಾಂಡೇಲಿಯ ಮಾರುತಿನಗರದಲ್ಲಿ ನಡೆದಿದೆ. ಟೌನ್‍ಶಿಪ್‍ನ ವಾಸಿಂ ಸಲಿಂ ಶೇಖ ಎಂಬವರೇ ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದು, ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಎಸ್.ಡಿ.ಎಮ್. ಆಸ್ಪತ್ರೆಗೆ ಸಾಗಿಸಲಾಗಿದೆ. ವಾಸಿಂ ಸಲಿಂ ಶೇಖ್...

IAS Topper 3rd  Rank    

Miss.Revathi, from Karnataka got selected for I.A.S. She is being congratulated by her parents who are daily wagers. Her house is in the picture. She is a role model and an inspiration to all youngsters who are really interested...

ಗ್ರಾಮ ಲೆಕ್ಕಾಧಿಕಾರಿಗಳ ಸಾಂಕೇತಿಕ ಮುಷ್ಕರ

ಕಾರವಾರ ಸೆ.೨೩ : ಸೇವಾ ನಿಯಮದಲ್ಲಾಗುವ ಅನ್ಯಾಯಗಳು , ಕ್ಷೇತ್ರ ಕಾರ್ಯದಲ್ಲಾಗುವ ತೊಂದರೆಗಳು, ತಂತ್ರಾಂಶ ಹೇರಿಕೆಯಿಂದಾಗುವ ಮಾನಸಿಕ ಮತ್ತು ದೈಹಿಕ ಒಟ್ಟಡ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ಮುಂದಿಟ್ಟು ಇಂದು ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟ ನೀಡುವದು...

ನೂತನ ಕಟ್ಟಡ ಉದ್ಘಾಟನೆ

ಹೊನ್ನಾವರ ಸೆ. ೨೩: ಹೊನ್ನಾವರದ ದಿ. ಶ್ರೀ ಮೋಹನ ಕೆ.ಶೆಟ್ಟಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ೨೪-೦೯-೨೦೧೭ ರವಿವಾರ ಸಂಜೆ ನಾಲ್ಕು ಗಂಟೆಗೆ ಕಾಲೇಜು ಆವಾರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ಬೃಹತ್ ಕೈಗಾರಿಕಾ ಸಚಿವರೂ ಆಗಿರುವ ಆರ್. ವಿ. ದೇಶಪಾಂಡೆ ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ...

ಅನಂತಕುಮಾರ ಹೆಗಡೆರವರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ

ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರು ಇಂದು ತುಮಕುರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರು ಹಾಗೂ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶಿರ್ವಾದ ಪಡೆದರು. ನೂತನ ಸಚಿವರಾಗಿ ಅಧಿಕಾರವಹಿಸಿಕೊಂಡ...

ಅನಂತಕುಮಾರಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ

ಶಿರಸಿಯ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ಜಿ.ಎಂ.ಬೊಮ್ನಳ್ಳಿ ಅವರಿಂದ ಬಿ.ಜೆ.ಪಿ. ಸಂಸದರೂ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರೂ ಆದ ಅನಂತಕುಮಾರ ಅವರಿಗೆ ವ್ಯಂಗ್ಯ ಚಿತ್ರ ಬಿಡಿಸಿ ಶುಭ ಹಾರೈಸಿದ್ದಾರೆ.

ಹೊಸ ಮಾರ್ಗದಲ್ಲಿ ಬಸ್ ಸಂಚಾರ

ಯಲ್ಲಾಪುರ ಸೆ.೨೩: ಪ್ರಯಾಣಿಕರ ಅನುಕೂಲಕ್ಕಾಗಿ ಉಳವಿ, ದಾಂಡೇಲಿ, ಶಿರಸಿಗೆ ಹೊಸ ಮಾರ್ಗವಾಗಿ ಬಸ್ ಸಂಚಾರ ಆರಂಭವಾಗಿದೆ. ಯಲ್ಲಾಪುರ ಡಿಪೊದ ವಾಹನವನ್ನು ಯಲ್ಲಾಪುರ ವಯಾ ಮಾರ್ಗದಲ್ಲಿ ಬಿಡಲಾಗಿದೆ. ಬಸ್ ಪ್ರತಿದಿನ ಬೆಳಿಗ್ಗೆ ಈ ಮಾರ್ಗದಲ್ಲಿ ಸಂಚರಿಸಲಿದೆ. ಉಳವಿ ಮತ್ತು ಮಾರಿಕಾಂಬಾ ದೇವಾಲಯಕ್ಕೆ ಹೋಗುವ ಭಕ್ತರಿಗೆ ಈ ಸಂಚಾರ ಅನುಕೂಲಕರವಾಗಿ ಪರಿಣಮಿಸಿದೆ.

ಭಟ್ಕಳದಲ್ಲಿ ಮೌನ ಮೆರವಣಿಗೆ

ಭಟ್ಕಳ ಸೆ.೨೩: ಭಟ್ಕಳದ ರಾಮಚಂದ್ರ ನಾಯ್ಕ ಸಾವಿನ ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧನ ಹಿನ್ನೆಲೆ ಇಂದು ಬಿಜೆಪಿ ಪಕ್ಷದಿಂದ ಶಿರಾಲಿಯಿಂದ ಭಟ್ಕಳದ ವರೆಗೆ ಮೌನ ಪ್ರತಿಭಟನೆ ಮಾಡಿ ಬಂದಿತರನ್ನು ಬಿಡುಗಡೆ ಮಾಡಬೇಕು ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಉತ್ತರಕನ್ನಡದ ಹಿಂದು ಕಾರ್ಯಕರ್ತರು ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಬೋರಿಂಗ್ WhatsApp ಬಿಡಿ Kaizala ಬಳಸಿ ನೋಡಿ

ಹೌದು ಇದೊಂದು ಸೂಪರ್ ಆ್ಯಪ್ ಅನ್ನೋದ್ರಲ್ಲಿ ಡೌಟೇ ಬೇಡ. ಒಂದು ಮೆಸೆಜಿಂಗ್ ಆ್ಯಪ್ ನಲ್ಲಿ ಏನೇನ ಮಾಡ್ಬಹುದು? ನೀವು ಥಿಂಕ್ ಮಾಡೋಕು ಸಾದ್ಯ ಇಲ್ಲ ಬಿಡಿ. ಅಂಥದ್ದೇನಿದೆ ಕಾಯ್ಜಾಲಾದಲ್ಲಿ? Kaizala ವನ್ನು Microsoft ಕಂಪನಿ ಸಿದ್ದಪಡಿಸಿದೆ. ಇದು ಒಂದು ಅದ್ಬುತ ಮೆಸೇಜಿಂಗ್ ಆ್ಯಪ್. ಕೇವಲ ಚ್ಯಾಟ್ ಅಷ್ಟೇ ಮಾಡೋದಲ್ದೆ, ವೋಟ, ಸರ್ವೇ, ಟಾಸ್ಕ ಮ್ಯಾನೆಜಮೆಂಟ ಹಾಗೂ...

ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ

ಮಾರಿಕಾಂಬಾ ದೇವಸ್ಥಾನದಲ್ಲಿ ಮತ್ತು ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ವಿಶೇಷ ಪುಷ್ಪಾಲಂಕಾರ ಮಾರಿಕಾಂಬಾ ದೇವಸ್ಥಾನದಲ್ಲಿ ವಿಜೃಂಣೆಯಿಂದ ಆರಂಭಗೊಂಡ ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ. ಶಿರಸಿ : ಇಂದಿನಿಂದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಸಪ್ತಶತಿ ಪಾರಾಯಣ...

ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ

ಮಾರಿಕಾಂಬಾ ದೇವಸ್ಥಾನದಲ್ಲಿ ಮತ್ತು ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ವಿಶೇಷ ಪುಷ್ಪಾಲಂಕಾರ ಮಾರಿಕಾಂಬಾ ದೇವಸ್ಥಾನದಲ್ಲಿ ವಿಜೃಂಣೆಯಿಂದ ಆರಂಭಗೊಂಡ ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ. ಶಿರಸಿ : ಇಂದಿನಿಂದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಸಪ್ತಶತಿ ಪಾರಾಯಣ...

ಸ್ವರ್ಣವಲ್ಲೀ ಶರನ್ನವರಾತ್ರಿ ಉತ್ಸವ ಪ್ರಾರಂಭ

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನವರಾತ್ರಿ ಉತ್ಸವವು ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ, ದೇವತಾ ಪ್ರಾರ್ಥನೆಗಳು ಶ್ರೀ ಶ್ರೀಗಳವರ ಸಮ್ಮುಖದಲ್ಲಿ ಹಾಗೂ ಪುರೋಹಿತರಾದ ಕೃಷ್ಣ ಜೋಶಿ, ಚಿನ್ಮಯ ಜೋಶಿ, ಆಸ್ಥಾನ ವಿದ್ವಾಂಸರಾದ ಭಾಲಚಂದ್ರ ಶಾಸ್ತ್ರೀಗಳು ಇವರ ಉಪಸ್ಥಿತಿಯೊಂದಿಗೆ ಆರಂಭವಾಯಿತು. ಯಜಮಾನರಾಗಿ ಮಂಜುನಾಥ ಮಣಿಗಾರ ದಂಪತಿಗಳು ಪಾಲ್ಗೊಂಡರು. ಬೆಳಗ್ಗೆ ಶ್ರೀಚಕ್ರಾರ್ಚನೆ,...

ಶಂಕರ ನಾಯ್ಕರ ಬಂಧನ: ಬಂಧಿತರ ಸಂಖ್ಯೆ ೧೫ಕ್ಕೆ ಏರಿಕೆ

ಭಟ್ಕಳ: ಇಲ್ಲಿನ ಪುರಸಭೆಗೆ ಕಲ್ಲು ತೂರಾಟ ಮಾಡಿರುವ ಹಾಗೂ ಅಂದಿನ ಗಲಭೆಗೆ ಕಾರಣ ಎಂಬ ಆರೋಪದ ಮೇರೆಗೆ ರಾಮಸೇನೆಯ ಉತ್ತರ ಪ್ರಾಂತದ ವಕ್ತಾರ, ಚೌಥನಿಯ ಶಂಕರ ನಾಯ್ಕ ಹಾಗೂ ಮುಂಡಳ್ಳಿಯ ದೇವೇಂದ್ರ ನಾಯ್ಕ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ ೧೫ಕ್ಕೆ ಏರಿದೆ. ಬುಧವಾರವಷ್ಟೇ ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಬಿಜೆಪಿಯ ಕುಮಟಾ,...

ಬಿಜೆಪಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಇಂದು ಶಿರಸಿಯ ಬಸ್ ಸ್ಯಾಂಡ್ ಸರ್ಕಲ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರದ ಬಿಜೆಪಿ ಸರಕಾರದ ಜನ ವಿರೋಧಿ ನೀತಿ ಖಂಡಿಸಿ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್, ಮತ್ತು ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಭೀಮಣ್ಣ ನಾಯ್ಕ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ...

ಸ್ವಚ್ಛತೆಯ ಕೊರತೆಯಲ್ಲಿ ಯಲ್ಲಾಪುರ 

ಯಲ್ಲಾಪುರ ಸೆ.೨೦: ಯಲ್ಲಾಪುರದ ತರಕಾರಿ ಮಾರುಕಟ್ಟೆ ಅನೈರ್ಮಲ್ಯದ ಗೂಡಾಗಿದೆ.ದನಗಳ ಹಾಗೂ ಹಂದಿಗಳ ಬೀಡಾಗಿದೆ. ಇಲ್ಲಿ ಶೌಚಾಲಯ ಇದ್ದೂ ಗಬ್ಬೆದ್ದು ನಾರುತ್ತಿದೆ. ಇದರ ಸ್ವಚ್ಚತೆ ಕಾಪಾಡುವ ಹೊಣೆ ಹೊತ್ತಿರುವ "‍‍ಪಟ್ಟಣ ಪಂಚಾಯತ ಕಾರ್ಯಾಲಯ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯವರಿಗೆ ಇದರ ಚಿಂತೆಯೇ ಇಲ್ಲ; ಯಾಕೆಂದರೆ ಅವರು ಇರುವ ಸ್ಥಳಕ್ಕೆ ಇಲ್ಲಿ ಏಳುವ ಗಬ್ಬು...

ದಸರಾ ‌ಪ್ರಯುಕ್ತ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ದೀಪಾಲಂಕಾರ

ಶ್ರೀ ಮಾರಿಕಾಂಬೆಯ ಸನ್ನಿದಿಯೇ ಒಂದು ಮನಮೋಹಕ ಹಾಗೂ ಸಂತ್ರಪ್ತಿ ನೀಡುವ ಅನುಭವ. ಅಂತಹುದರಲ್ಲಿ ದೇವಸ್ಥಾನ ಹಾಗೂ ಶ್ರೀ ದೇವಿಗೆ ಸಲ್ಲಿಸುವ ಅಲಂಕಾರ‌ನೋಡಲು ಎರಡು ಕಣ್ಣುಗಳೇ ಸಾಕಾಗುವದಿಲ್ಲ. ಮನಮೋಹಕ ಸಂತ್ರಪ್ತ ಅನುಭವಗಳನ್ನು ಈ ಚಿತ್ರಗಳ ಮೂಲಕ ಪಡೆಯಿರಿ. ಸೆಪ್ಟೆಂಬರ ೨೧ ರಿಂದ ಅಕ್ಟೋಬರ ೮ ರ ವರೆಗೆ ದಸರಾ ಪ್ರಯುಕ್ತ ಶ್ರೀ ದೇವರ ಸನ್ನಿದಿಯನ್ನು ದೀಪಾಲಂಕಾರಗಳಿಂದ ಶ್ರಂಗರಿಸಲಾಗುವುದು.

ಭಾರತೀಯ ಸಂಜಾತ ಶ್ರೀರಾಮ ಕ್ರಿಷ್ಣನ್ ಟ್ವಿಟ್ಟರ್ ನ ಹಿರಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ

ವಿಶ್ವವಿಖ್ಯಾತ ಮೈಕ್ರೋಬ್ಲೋಗಿಂಗ್ ವೆಬ್ಸೈಟ್ ಟ್ವಿಟ್ಟರ್ ಸಾಮಾಜಿಕ ಜಾಲತಾಣದ ಹಿರಿಯ ನಿರ್ದೇಶಕರಾಗಿ ಶ್ರೀರಾಮ ಕ್ರಿಷ್ಣನ್ ಅವರು ಆಯ್ಕೆಯಾಗಿದ್ದಾರೆ. ಈ ಮೊದಲು ಫೇಸ್ಬುಕ್ ನ ಉನ್ನತ ಕಾರ್ಯನಿರ್ವಾಹಕಾರದ್ದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಅಕ್ಟೋಬರ್ 2 ರಡರಿಂದ ತಮ್ಮ ಖಾತೆಯನ್ನು ವಹಿಸಿಕೊಳ್ಳುವವರಿದ್ದು ಅಪ್ಲಿಕೇಶನ್ ನ ಒಳಗಿರುವ ಕೋರ್ ವೈಶಿಷ್ಟ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ...

ಬಿಟ್ ಕಾಯಿನ್ ಗೆ ಪರ್ಯಾಯವಾಗಿ ಲಕ್ಷ್ಮೀ ಕರೆನ್ಸಿ

ಜಗತ್ತಿನೆಲ್ಲೆಡೆ ಅತ್ಯಧಿಕ ಪ್ರಚಾರದಲ್ಲಿರುವ ಹಾಗೂ ಬಳಕೆಯಲ್ಲಿರುವ ಬಿಟ್ ಕಾಯಿನ್ ಎಂಬ ಡಿಜಿಟಲ ಕರೆನ್ಸಿಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಬಿಟ್ ಕಾಯಿನ್ ಮುದ್ರಿತ ಕರೆನ್ಸಿಯಾಗಿರದೇ ಡಿಜಿಟಲ್ ಸ್ವರೂಪದ ಕರೆನ್ಸಿಯಾಗಿದೆ. ಇದು ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕರೆನ್ಸಿಯಾಗಿದ್ದು, ಇದೇ ಮಾದರಿಯಲ್ಲಿ ಭಾರತದಲ್ಲಿ ತನ್ನದೇ ಆದ ಸ್ವಂತ ಡಿಜಿಟಲ್ ಕರೆನ್ಸಿಯನ್ನು ಹಂದಬಹುದೇ ಎಂಬ ಬಗ್ಗೆ ಸಾಕಷ್ಟು ವಿಚಾರ...

ಸೋಂದಾದ ಸ್ವಾದಿ ಜೈನಮಠದಲ್ಲಿ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ

ಇದೇ ಬರುವ ಅಕ್ಟೋಬರ್ ೭ ಮತ್ತು ೮ ರಂದು ಸೋಂದಾದ ಸ್ವಾದಿ ಜೈನಮಠದಲ್ಲಿ ನಡೆಯಲಿರುವ ನಾಲ್ಕನೇ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸ್ವರ್ಣವಲ್ಲೀ ಮಠ ,ಜೈನಮಠ, ವಾದಿರಾಜಮಠಗಳಲ್ಲಿ ಸೆಪ್ಟೆಂಬರ್ ೧೭ ಭಾನುವಾರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು,ಪೂಜ್ಯ ಜೈನಮಠದ...

ಹೆಚ್ಚು ಕಾಮೆಂಟಗಳು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗೆ ಖಂಡನೆ

ಶಿರಸಿ, ಅ.೩: ಜನತಾದಳ ಜಾತ್ಯಾತೀತ , ನಗರ ಮತ್ತು ಗ್ರಾಮೀಣ ಘಟಕ ಸಿರಸಿ ಅವರಿಂದ ಡಾ|| ಶಶಿಭೂಶಣ ಹೆಗಡೆಯವರ ನೇತ್ರತ್ವದಲ್ಲಿ ದಿನಾಂಕ 03-10-2017 ಮಂಗಳವಾರದಂದು ಬೆಳಿಗ್ಗೆ 10 ಘಂಟೆಗೆ ಸಿರಸಿ ಬಸ್ ಸ್ಟಾಂಡ್...

ಹಾಟ್ ನ್ಯೂಸ್