18.9 C
Sirsi, Karnataka
Wednesday, December 12, 2018

ಸ್ಥಳೀಯ

ಸಿದ್ದಾಪುರದಲ್ಲಿ ರಾಜ್ಯಮಟ್ಟದ ಸೆಮಿನಾರ್

ಸಿದ್ದಾಪುರ, ಸೆ.೨೮: ಪಟ್ಟಣದ ಎಂ.ಜಿ.ಸಿ. ಕಾಲೇಜಿನಲ್ಲಿ ಇಂದು ರಾಜ್ಯಮಟ್ಟದ ವಿಚಾರಸಂಕೀರಣ ಕಾರ್ಯಕ್ರಮವು ನಡೆಯಿತು. ಜಿ.ಎಸ್.ಟಿಯ ಅನುಕೂಲ ಮತ್ತು ಸವಾಲುಗಳ ಕುರಿತಾಗಿದ್ದ ಈ ಕಾರ್ಯಕ್ರಮದಲ್ಲಿ ಡಾ. ಶಶಿಭೂಷಣ ಹೆಗಡೆಯವರು ದೀಪಬೆಳಗಿಸಿ ಮಾತನಾಡಿದರು.

ಸ್ವರ್ಣವಲ್ಲಿಯಲ್ಲಿ ಸಡಗರದ ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರತಿನಿತ್ಯದಂತೆ ಸಂಜೆ ೬.೩೦ಘಂಟೆಯಿಂದ ಶ್ರೀ ಸೋಂದಾ ಸುಧರ್ಮಾ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಿದ್ದು, ಆಕಾಶವಾಣಿಯ ಬ್ರಿಗೇಡ್ ಕಲಾವಿದೆಯಾದ...

ರಾಘವೇಶ್ವರರ ಭೇಟಿ ಮಾಡಿದ ಶಾಸಕಿ ಶಾರದಾ ಶೆಟ್ಟಿ

ಹೊನ್ನಾವರ, ಸೆ.೨೮: ಹೊನ್ನಾವರ ತಾಲ್ಲೂಕಿನ ಕೆಕ್ಕಾರದ ರಘೋತ್ತಮ ಮಠಕ್ಕೆ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಇಂದು ಭೇಟಿನೀಡಿ, ಗೋ ರಕ್ಷಣಾ ದೀಪ ಬೆಳಗಿಸಿ ಶ್ರೀ ರಾಘವೇಶ್ವರ ಶ್ರೀಗಳ ಆಶೀರ್ವಚನ ಪಡೆದುಕೊಂಡರು.

ಮತ್ತೆ ಶುರುವಾದ ಕೊಂಕಣಿ ಮೊಬೈಲ್ ಬಝಾರ್

ದಾಂಡೇಲಿ, ಸೆ.೨೮: ಕರ್ನಾಟಕ ಕೊಂಕಣಿ ಅಕಾಡೆಮಿಯಿಂದ ಹಿಂದೆ ನಡೆಸಲ್ಪಡುತ್ತಿದ್ದು ನಂತರ ಸ್ಥಗಿತಗೊಂಡಿದ್ದ ಕೊಂಕಣಿ ಮೊಬೈಲ್ ಬಜಾರ್ ಇಂದಿನಿಂದ ಪುನರಾರಂಭಗೊಂಡಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಎಚ್.ಖಾದರ್‍ರವರು ಕೊಂಕಣಿ ಅಕಾಡೆಮಿಯ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಪುನರಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ. ನಾಯ್ಕ, ಕೊಂಕಣಿ ಮೊಬೈಲ್...

ದಾಂಡೇಲಿ ನಗರಸಭೆ ಸಾಮಾನ್ಯ ಸಭೆ

ದಾಂಡೇಲಿ, ಸೆ.೨೮: ದಾಂಡೇಲಿ ನಗರ ಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಇಂದು ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರಾದ ಅಡಿವೆಪ್ಪ ಭದ್ರಕಾಳಿ ನಗರದ ಗಾಂಧಿನಗರದಲ್ಲಿ ನಡೆದಿರುವ ಅತಿಕ್ರಮಣಗಳನ್ನು ಈವರೆಗೂ ಯಾಕೆ ತೆರವುಗೊಳಿಸಿಲ್ಲ? ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಇಲ್ಲದಿರುವುದರಿಂದ ನವರಾತ್ರಿ ನಂತರ ಅಲ್ಲಿಯ ಅತಿಕ್ರಮಣ ತೆರವುಗೊಳಿಸಲಾಗುವುದೆಂದು ಅಧ್ಯಕ್ಷರು ಉತ್ತರಿಸಿದರು. ನಂತರ...

ಹಿಂ.ಜಾ.ವೇ ಇಂದ ದುರ್ಗಾದೌಡ್

ಕುಮಟಾ, ಸೆ.೨೮: ತಾಲೂಕಿನಲ್ಲಿ ಇಂದು ಹಿಂದೂ ಜಾಗಣವೇದಿಕೆ ಘಟಕದಿಂದ ನವರಾತ್ರಿಯ ದುರ್ಗಾದೌಡ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಕುಮಟಾ ತಾಲೂಕಿನ ಪ್ರತಿಯೊಂದು ದೇವಾಲಯಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಲಾಯಿತು.

ದಸರಾ ಉತ್ಸವ; ಸನ್ಮಾನ, ಪ್ರತಿಭಾ ಪುರಸ್ಕಾರ

ಗೋಕರ್ಣ, ಸೆ.೨೮: ದಸರಾ ಉತ್ಸವದ ಪ್ರಯುಕ್ತ ಶ್ರೀ ಯುವಶಕ್ತಿ ಯುವಕಸಂಘ ಬಂಕಿಕೊಡ್ಲ ಮತ್ತು ಸಾರ್ವಜನಿಕ ದಸರಾ ಉತ್ಸವ ಸಮಿತಿ ಬಂಕಿಕೊಡ್ಲ ಇವರ ಆಶ್ರಯದಲ್ಲಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಂಕಿಕೊಡ್ಲದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಿನಕರ ಶೆಟ್ಟಿ ಹಾಗೂ...

ಮುಖ್ಯಮಂತ್ರಿ ಮೀಟರ್ ತಿಳಿದುಕೊಳ್ಳಲು ಆರ್.ಟಿ.ಐ. ಮೊರೆ

ಬೆಂಗಳೂರು, ಸೆ.೨೮: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ದೇಹದ ಯಾವ ಭಾಗದಲ್ಲಿ ಮೀಟರ್ ಅಳವಡಿಸಲಾಗಿದೆ ಎಂದು ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಮಾಹಿತಿ ಕೋರಿರುವ ವಿಶಿಷ್ಟ ಸಂಗತಿಯೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ ೨೫ರಂದು ಮಂಡ್ಯ ನಗರದ ನಿವಾಸಿ ಸಿ.ಟಿ. ಮಂಜುನಾಥ ಎಂಬುವವರು ಜಿಲ್ಲಾಧಿಕಾರಿಯ ಮುಖೇನ ವಿಧಾನಸೌದದ ಮುಖ್ಯಮಂತ್ರಿಗಳ ಕಛೇರಿಗೆ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದಾರೆ. ಮಾನವನ ದೇಹದಲ್ಲಿ...

ದೇವಿಮನೆ ಘಟ್ಟ ತಿರುವಿನಲ್ಲಿ ಅಪಘಾತ

ಕುಮಟಾ, ಸೆ.೨೮: ಇಂದು ಮಧ್ಯಾಹ್ನ 12 ಘಂಟೆಯ ಸುಮಾರಿಗೆ ಶಿರಸಿ-ಕುಮಟಾ ರಸ್ತೆಯಲ್ಲಿನ ದೇವಿಮನೆ ಘಟ್ಟದ ಕೊನೆಯ ತಿರುವಿನಲ್ಲಿ ಓಮಿನಿ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓಮಿನಿ ಚಾಲಕನಿಗೆ ಪೆಟ್ಟಾದ ಬಗ್ಗೆ ವರದಿಯಾಗಿದೆ.

ಮದ್ಯಪಾನದ ಕುರಿತಾಗಿ ಜನರಲ್ಲಿ ಜಾಗೃತಿ ಕಾರ್ಯಕ್ರಮ

ಶಿರಸಿ, ಸೆ.೨೮: ಅಕ್ಟೋಬರ್ ೧ರ ಮಧ್ಯರಾತ್ರಿಯಿಂದ ಅಕ್ಟೋಬರ್ ೨ರ ಮಧ್ಯಾಹ್ನ ೨ಗಂಟೆಯವರೆಗೆ ಗಾ‌ಂಧಿಜಯಂತಿ ಪ್ರಯುಕ್ತ ಉಪವಾಸ ಮೌನಧರಣಿ ತಹಶೀಲ್ದಾರ ಕಛೇರಿಯ ಎದುರು ಹಮ್ಮಿಕೊಳ್ಳಲಾಗಿದೆಯೆಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಪ್ರೆಸ್ ಮೀಟ್ ನಲ್ಲಿ ಮದ್ಯಪಾನ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. ಮಾದಕ ದ್ರವ್ಯ ಹಾಗೂ ಮದ್ಯಪಾನದ ಕುರಿತಾಗಿ ಜನರಲ್ಲಿ...

ಕಾರವಾರದ ಪಹರೆ ವೇದಿಕೆಗೆ ಮುರುಘಾ ಪ್ರಶಸ್ತಿ ಮತ್ತು ಸನ್ಮಾನ

ಕಾರವಾರ: ಸ್ವಚ್ಚತೆಯಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ ಕಾರವಾರ ನಗರದಲ್ಲಿ ಸತತವಾಗಿ ಸೇವೆ ಮಾಡುವ ಮೂಲಕ ಮನೆಮಾತಾಗಿರುವ ಪಹರೆ ವೇದಿಕೆಗೆ ಪ್ರತಿಷ್ಠಿತ ರಾಜ್ಯಮಟ್ಟದ ಮುರುಘಾ ದಸರಾ ಪ್ರಶಸ್ತಿ ಲಭಿಸಿದೆ. ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರತಿವರ್ಷ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಇಂತಹ ಸಂಸ್ಥೆ ಮತ್ತು ಜನರಿಗೆ ದಸರಾ ಸಂಧರ್ಭದಲ್ಲಿ ವಿಶೇಷ ಪ್ರಶಸ್ತಿ ಮತ್ತು ಸನ್ಮಾನವನ್ನ ಮಾಡುತ್ತಾ...

ಕುಮಟಾದಲ್ಲಿ ಹೆಚ್ಚಾದ ದಟ್ಟಣೆಯ ಕಿರಿಕಿರಿ

ಕುಮಟಾ, ಸೆ.೨೮: ದಿನ ಕಳೆದಂತೆ ಕುಮಟಾದಲ್ಲಿ ಟ್ರಾಪಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪೋಲೀಸ್ ಇಲಾಖೆ ಮತ್ತು ತಾಲೂಕ ಆಡಳಿತವು ಟ್ರಾಪೀಕ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲೇ ಬೇಕಾದ ಜರೂರತ್ತಿದೆ. ಪಟ್ಟಣದ ಸುಭಾಷ ರೋಡ್, ಕುಂಬೇಶ್ವರ ರೋಡ್, ಗುಡಿಗಾರಗಲ್ಲಿಗಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದು ಜನರಲ್ಲಿ ಬೇಸರ ಹುಟ್ಟಿಸಿದೆ. ಕುಮಟಾದ...

ಶಾರದಾ ಉತ್ಸವ

ಕುಮಟಾ, ಸೆ.೨೮: ಶ್ರೀ ಬೀರದೇವ ಯುವಕ ಸಂಘ ಮದ್ಗುಣಿ, ಹಳಕಾರ ರೋಡ್ ಕುಮಟಾ ಅವರ ಆಶ್ರಯದಲ್ಲಿ ನಡೆಯುತ್ತಿರುವ 5 ನೇ ವರ್ಷದ ಶ್ರೀ ಶಾರದಾ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.

ಸೋನಾರವಾಡ ದಾಂಡಿಯಾ ವೀಕ್ಷಿಸಿದ ರೂಪಾಲಿ ನಾಯ್ಕ್

ದಾಂಡೇಲಿ, ಸೆ.೨೮: ನಗರದ ಸೋನಾರವಾಡದಲ್ಲಿ ನವರಾತ್ರಿಯ ವಿಶೇಷವಾಗಿ ಆಯೋಜಿಸಿದ ದಾಂಡಿಯಾ ಕಾರ್ಯಕ್ರಮದ ಏಳನೇ ದಿನವಾದ ನಿನ್ನೆ ಬಿ.ಜೆ.ಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯೆ ಶ್ರೀಮತಿ ರೂಪಾಲಿ ನಾಯ್ಕ ಮುಖ್ಯ ಅತಿಥಿಯಾಗಿ ಆಗಮಿಸಿದರು. ಬಳಿಕ ಜಗನ್ಮಾತೆ ದುರ್ಗಾಪರಮೇಶ್ವರಿಯ ದರ್ಶನ ಪಡೆದು ಕೆಲಕಾಲ ದಾಂಡಿಯಾ ನೃತ್ಯ ವೀಕ್ಷಣೆ ಮಾಡಿದರು.

ರಾಜ್ಯ ಮಟ್ಟಕ್ಕೆ ಸಂಗಮೇಶ

ಶಿರಸಿ, ಸೆ.28: 2017-18 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದಲ್ಲಿ ಜೆ.ಎಂ.ಜೆ ಶಿಕ್ಷಣ ಸಂಸ್ಥೆಯ 7ನೇ ತರಗತಿಯ ವಿದ್ಯಾರ್ಥಿಯಾದ ಅನಿಮೇಶ ಹನುಮಂತ ನಾಯ್ಕ ಜಿಲ್ಲಾ ಮಟ್ಟದ ಉದ್ದಜಿಗಿತ (ಲಾಂಗ್‍ಜಂಪ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಚಿಪಗಿ ನಾರಾಯಣ ಗುರುನಗರದ ನಿವಾಸಿಯಾದ ಹನುಮಂತ ನಾಯ್ಕ ಹಾಗೂ ಶ್ರೀಮತಿ ನಾಗರತ್ನ ನಾಯ್ಕ...

ರೈತರಿಗೆ ಅರ್ಜಿ ನೋಂದಾಯಿಸಲು ಕೋರಿಕೆ

ಶಿರಸಿ, ಸೆ. 28: 2017-18 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕಾ ಇಲಾಖೆಯ ಅನುಮೋದಿತ ಕಂಪನಿ/ಡೀಲರ್ ಗಳಿಂದ ಹನಿ ನೀರಾವರಿ ಅಳವಡಿಸುವ ರೈತರಿಗೆ ಶೇ. 90 ರ ಸಹಾಯಧನವನ್ನು 5 ಎಕರೆ ಕ್ಷೇತ್ರದವರೆಗೆ ಹಾಗೂ ಶೇ. 50 ರ ಸಹಾಯಧನವನ್ನು 5 ಎಕರೆ ಮೇಲ್ಪಟ್ಟು ಗರಿಷ್ಠ 12.5...

ಸತತ ಮೂರನೇ ವರ್ಷ ರಾಜ್ಯಮಟ್ಟಕ್ಕೆ ತಲುಪಿದ ಸಾಧನೆ

ಶಿರಸಿ, ಸೆ. 28: ನಗರದ ಎಂ.ಇ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿಯಾದ ರಕ್ಷಿತಾ ಪಟಗಾರ ಯಲ್ಲಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಕ್ರೀಡಾಕೂಟದ ಬಾಲಕಿಯರ ಎತ್ತರ ಜಿಗಿತ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸುವುದರ ಮೂಲಕ ಸತತ 3ನೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆಯ ಮೂಲಕ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಶಿಕ್ಷಕ...

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಇಸಳೂರು ಶಾಲಾ ಮಕ್ಕಳು

ಶಿರಸಿ, ಸೆ. 28: ಯಲ್ಲಾಪುರದಲ್ಲಿ ಜರುಗಿದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಇಸಳೂರಿನ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಯಕ್ತಿಕ ಆಟಗಳಲ್ಲಿ ರಾಜ್ಯ ಮಟ್ಟದ ಕ್ರೀಡೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕುಮಾರ ಆಕಾಶ ಕಮರೂರು ಪೋಲ್ ವಾಲ್ಟ, ಕುಮಾರಿ ಲೀಲಾವತಿ 3000 ಮೀ ಓಟದಲ್ಲಿ, ಕುಮಾರಿ ಮಮತಾ...

ಸಂಧ್ಯಾ ಹೆಗಡೆಗೆ ಎಸ್ವಿ ಪ್ರಶಸ್ತಿ

ಶಿರಸಿ, 28: ಜನಶಕ್ತಿ ವಿಶ್ವಸ್ಥ ಮಂಡಳಿ (ಶಿರಸಿ) ಮತ್ತು `ಲೋಕಧ್ವನಿ’ ದಿನಪತ್ರಿಕೆ ನೀಡಲು ನಿರ್ಧರಿಸಿದ್ದ ಎಸ್.ವಿ.ಹೆಗಡೆ-ಹಾಸ್ಪುರ ಸ್ಮರಣಾರ್ಥದ `ಎಸ್ವಿ ಪ್ರಶಸ್ತಿ’ಯನ್ನು ಪ್ರಸಕ್ತ ವರ್ಷದಿಂದ ನೀಡಲು ಅಡಿಯಿಡಲಾಗಿದ್ದು ಪ್ರಪ್ರಥಮ ಪ್ರಶಸ್ತಿಗಾಗಿ`ಪ್ರಜಾವಾಣಿ’ಯ ಶಿರಸಿ ವರದಿಗಾರ್ತಿ ಸಂಧ್ಯಾ ಹೆಗಡೆ ಆಲ್ಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದೆ....

ಜನಾಕರ್ಷಣೆಯಲ್ಲಿ ಬನವಾಸಿಯ ಬೃಹತ್ ರಂಗೋಲಿ

ಬನವಾಸಿ,ಸೆ.28:ಐತಿಹಾಸಿಕ ಪ್ರಸಿದ್ಧ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ವಾರ್ಷಿಕ ಶರನ್-ನವರಾತ್ರಿ ಉತ್ಸವದ ಪ್ರಯುಕ್ತ ದೇವಸ್ಥಾನದ ನೃತ್ಯ ಮಂಟಪದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬೃಹತ್ ರಂಗೋಲಿಯನ್ನು ಸ್ಥಳಿಯರಾದ ಪೂರ್ಣಿಮಾ ಅರವಿಂದ ಶೆಟ್ಟಿಯವರು ತಮ್ಮ ಪುತ್ರಿಯಾದ ಕು. ಗೌರಿಯವರೊಂದಿಗೆ ಸೆ.25ರಂದು ರಚಿಸಿದ 'ಅರ್ಧನಾರೀಶ್ವರ' ರಂಗೋಲಿಯು ಶ್ರೀ ದೇವಸ್ಥಾನಕ್ಕೆ ಆಗಮಿಸುತ್ತಿರುವ ಎಲ್ಲ ಭಕ್ತರ-ಪ್ರವಾಸಿಗರ ಮನಗೆದ್ದು ಪ್ರಶಂಸೆಗೆ...

ಜಿಲ್ಲೆಯ ಪುತ್ರನೀಗ ಭಾರತದ ಅತಿ ಕಿರಿಯ ಅಧಿಕಾರಿ

ಕಾರವಾರ, ಸೆ.೨೮: ದೇಶದ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿನ CF ಹಂತದ ಅಧಿಕಾರಿಯಾಗಿ ಭಾರತ ಸರ್ಕಾರದಿಂದ ನೇಮಕಗೊಂಡಿರುವ IFS ಅಧಿಕಾರಿಯಾಗಿ ನಮ್ಮ ಉತ್ತರಕನ್ನಡದ ಎ.ಟಿ ದಾಮೋದರ ನಾಯ್ಕ ಕಾರ್ಯನಿರ್ವಹಿಸಲಿದ್ದಾರೆ. ಅವರು ಕೇರಳದ ಕೊಚ್ಚಿನ್ ಮತ್ತು ಕವರತ್ತಿಯ ಆಡಳಿತ ಕಛೇರಿಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ಎ.ಟಿ ದಾಮೋದರ ನಾಯ್ಕರವರು ಗೋವ ರಾಜ್ಯದಲ್ಲಿ 3 ವರ್ಷಗಳ...

ಆರ್ ಎಸ್ ಎಸ್ ಕುಮಟಾದಿಂದ  ವಿಜಯದಶಮಿ ಉತ್ಸವ

ಕುಮಟಾ, ಸೆ.೨೮: ದಿನಾಂಕ 30-09-2017 ಶನಿವಾರ ಮುಂಜಾನೆ 7-00 ಘಂಟೆಗೆ ನಗರದ ಗಿಬ್ ಪ್ರೌಢ ಶಾಲಾ ಮೈದಾನದಲ್ಲಿ ಕುಮಟಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಸಸ್ಯ ಶಾಸ್ತ್ರಜ್ಞರಾದ ಡಾ. ಜಿ. ರಾಮಚಂದ್ರರಾವ್ ಹಾಗೂ ಶ್ರೀಪಾದ ಅವರು ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ನಂತರ 8-30 ಘಂಟೆಗೆ ಗಿಬ್ ಪ್ರೌಢಶಾಲಾ ಮೈದಾನದಿಂದ ನಗರದ...

ಇ-ಸ್ಟಾಂಪಿಂಗ್ ಸೇವಾ ಕೇಂದ್ರ ಉದ್ಘಾಟನೆ

ಶಿರಸಿ: ಸೆ. 28: ದಿನಾಂಕ 30-09-2017 ರಂದು ಶಿರಸಿಯ ಕದಂಬ ಸೌಹಾರ್ದ ಸಹಕಾರಿ ನಿಯಮಿತ ಅಡಿಯಲ್ಲಿ ಇ-ಸ್ಟಾಂಪಿಂಗ್ ಸೇವಾ ಕೇಂದ್ರವನ್ನು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯದಶಮಿಯ ಶುಭ ದಿನದಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡ, ತಾಲೂಕಾ ಪಂಚಾಯತದ ಎದುರು ಬೆಳಿಗ್ಗೆ 11 ಘಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು, ಸಾರ್ವಜನಿಕರನ್ನು ಈ ಮೂಲಕ ಆಮಂತ್ರಿಸಲಾಗುತ್ತಿದೆ.

ಬ್ರೇಕಿಂಗ್ ನ್ಯೂಸ್ ಬೈಕ್ ಬೊಲೆರೋ ಡಿಕ್ಕಿ – ಒಂದು ಸಾವು

ಭಟ್ಕಳ, ಸೆ.೨೭: ನಗರದ ಬಂದರ ರೋಡನ ಡೊಂಗರ ಪಳ್ಳಿ ಇಳಿಜಾರು ಬಳಿ ಇದೀಗ ಎರಡು ಬೈಕ್ ಮತ್ತು ಶ್ಯಾಮಿಯಾನಾ ಸಾಗಿಸುತ್ತಿದ್ದ ಬೋಲೇರೋ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಫಘಾತದಲ್ಲಿ ಬೈಕ್ ಸವಾರ, ತಲಗೋಡು ನಿವಾಸಿ ನಾಗಪ್ಪ ಈರಪ್ಪ ನಾಯ್ಕ (೫೫) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೊಂದು ಬೈಕ್ ನಲ್ಲಿದ್ದ ಸವುದ್ (೨೧) ಹಾಗೂ ಮರವಾನ್(೨೧) ಬದಿ...

ಬಾರದ ಅಧಿಕಾರಿಗಳು, ರದ್ದಾದ ಇಂದಿನ ಸಭೆ  

ಮುಂಡಗೋಡ, ಸೆ.೨೭: ಸಾರ್ವಜನಿಕರ ಅಹವಾಲು ಆಲಿಸಿ ಕುಂದುಕೊರತೆಗಳ ನಿವಾರಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ ತೋರುವುದು ಸರಿಯೆ? ನಿಗದಿಯಾದ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿ, ಸಕಾರಣವನ್ನೂ ನೀಡದೆ ಇದ್ದಂತಹ ಘಟನೆ ಇಂದಿಲ್ಲಿ ನಡೆದಿದೆ. ಗ್ರಾಮಸಭೆ ಪ್ರಯುಕ್ತ ನೋಡಲ್ ಅಧಿಕಾರಿ,ಪಿಡಿಒ, ಗ್ರಾ.ಪಂ ಅಧ್ಯಕ್ಷೆ,ಸೇರಿದಂತೆ ಪಂಚಾಯತ್ ಸದಸ್ಯರು ಗ್ರಾಮಸ್ಥರು ಸೇರಿದ್ದರು. ಅಧಿಕಾರಿಗಳಿಗಾಗಿ 10.30 ರಿಂದ 12 ಗಂಟೆಯವರಿಗೆ ಕಾದರೂ ಅಧಿಕಾರಗಳು...

ಮುಂಬಡ್ತಿ ಮೀಸಲಾತಿಗಾಗಿ ಮೌನ ಪ್ರತಿಭಟನೆ

ದಾಂಡೇಲಿ, ಸೆ.೨೭ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿಯನ್ನು ಕೂಡಲೇ ಆದೇಶಿಬೇಕೆಂದು ಆಗ್ರಹಿಸಿ ಆದಿ ಜಾಂಬವಂತ ಸಂಘ, ನವಚೈತನ್ಯ ಜನಸೇವಾ ಸಂಘಟನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ದಾಂಡೇಲಿ ಘಟಕದ ಆಶ್ರಯದಲ್ಲಿ ನಗರದ ಸೋಮಾನಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿ ನಂತರ ವಿಶೇಷ ತಹಶೀಲ್ದಾರ್ ಕಚೇರಿಯ ಗೌಡಪ್ಪ...

ಬಿಪಿಎಲ್ ನವರಿಗೆ ಎಲ್ ಇಡಿ

ಕುಮಟಾ, ಸೆ.೨೭: ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಅನಿವಾರ್ಯ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಎಲ್.ಇ.ಡಿ ಬಲ್ಪ್ ವಿತರಣೆ ಇವತ್ತಿನಿಂದ ಪುನರಾರಂಭಗೊಂಡಿದೆ. ಈ ಯೋಜನೆ ಬಿ.ಪಿ.ಎಲ್ ಕಾರ್ಡುದಾರರಿಗೆ ಮಾತ್ರವೇ ಇದ್ದು ಇದರ ಅವಶ್ಯಕತೆ ಇರುವವರು B.P.L ಕಾರ್ಡ ಜೆರೊಕ್ಸ ಮತ್ತು ಕರೆಂಟ್ ಬಿಲ್ ಲಗತ್ತಿಸಿ ಇದರ ಪ್ರಯೋಜನ ಪಡೆಯಬೇಕಾಗಿ K.E.B ಪ್ರಕಟಣೆಯಲ್ಲಿ ತಿಳಿಸಿದೆ. ಬಲ್ಬಿನ ಬೆಲೆ ಎಪ್ಪತ್ತು...

ಸೆ. ೨೯ರಂದು ಯಡಳ್ಳಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ

ಶಿರಸಿ, ಸೆ.೨೭: ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಕೌಶಲ್ಯಾಭಿವೃದ್ಧಿ ಸಚಿವರಾದ ತಿಂಗಳ ಒಳಗೆ ಶಿರಸಿ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಯಡಳ್ಳಿ ಗ್ರಾಮದಲ್ಲಿ ಕೌಶಲ್ಯ ಮತ್ತು ಉದ್ಯೋಗ ತರಬೇತಿಯ ಉಚಿತ ಕೇಂದ್ರ ಸ್ಥಾಪಿಸಿರುವುದು ಜನರಲ್ಲಿ ಹರ್ಷದ ಭಾವನೆ ಮೂಡಿಸಿದೆ. ಇದೇ ಬರುವ ಸೆಪ್ಟೆಂಬರ್ ೨೯, ಶುಕ್ರವಾರ ೧೨.೩೦ಕ್ಕೆ ಯಡಳ್ಳಿಯಲ್ಲಿ ಕೌಶಲ್ಯ ಕೇಂದ್ರದ ಉದ್ಘಾಟನೆ...

ನೆನ್ನೆ ಮಳೆಗೆ ಫೇಸ್ ಬುಕ್ಕಲ್ಲೂ ಕಾಮೆಂಟ್ ಪ್ರವಾಹ

ಶಿರಸಿ, ಸೆ.೨೭: ಶಿರಸಿಯಲ್ಲಿ ನೆನ್ನೆ ಸಾಯಂಕಾಲ ಸುರಿದ ಭಾರೆ ಮಳೆಗೆ ಊರೆಲ್ಲಾ ಜಲಾವೃತಗೊಂಡ ವರದಿ ನೆನ್ನೆಯೇ ಪ್ರಕಟಿಸಿದ್ದೆವು. ಮಳೆನೀರು ಮಳೆ ನಿಂತ ಕೆಲವೇ ಸಮಯದಲ್ಲಿ ಹರಿದುಹೋಗಿ ಮೊದಲಿನ ಪರಿಸ್ಥಿತಿಯೇನೋ ಮೊದಲಿನ ಸ್ಥಿತಿಗೆ ಬಂದಿತ್ತು. ಆದರೆ ಫೇಸ್ ಬುಕ್ ನಲ್ಲಿ ಇದೇ ವಿಷಯವಾಗಿ ಶುರುವಾದ ಕಾಮೆಂಟ್ ಸಮರ ಇನ್ನೂ ನಿಂತಿಲ್ಲ. ನೆನ್ನೆ ಮಳೆಗೆ ಶಿರಸಿ ತುಂಬೆಲ್ಲಾ...

ಮೊಬೈಲ್ ಅಂಗಡಿಯಲ್ಲಿ ಕಳುವು

ಶಿರಸಿ, ಸೆ.೨೭: ಶಿರಸಿಯ ಟಿಎಸ್ಎಸ್ ಕ್ರಾಸಿನಲ್ಲಿರುವ ಮೋಬಿ ಎಕ್ಸಪ್ರೆಸ್ ಮೊಬೈಲ್ ಅಂಗಡಿ ಕಳ್ಳತನವಾದ ಘಟನೆ ಸೆ. ೨೬ ಮಂಗಳವಾರ ರಾತ್ರಿ ನಡೆದಿದೆ. ಸಂದೇಶ ಪಾಠಣಕರ ಅಂಗಡಿಯ ಮಾಲಿಕರಾಗಿದ್ದು, ಅಂಗಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿ ಸುಮಾರು ಎರಡು ಲಕ್ಷ ಮೌಲ್ಯದ ಮೊಬೈಲ್ ಸೆಟ್ ಹಾಗೂ ಕಂಪ್ಯೂಟರ್ ನ ದೋಚಿದ್ದಾರೆ. ಡಿ.ವೈ.ಎಸ್ಪಿ ನಾಗೇಶ ಶೆಟ್ಟಿ ಭೇಟಿ...

 ಸೆ.30 ರಂದು ದಾಂಡೇಲಪ್ಪಾ ಜಾತ್ರೆ

ದಾಂಡೇಲಿ, ಸೆ.೨೭ : ಇದೇ ಬರುವ ಸೆಪ್ಟೆಂಬರ್ 30 ಶನಿವಾರದಂದು ವಿಜಯ ದಶಮಿಯ ದಿನ ದಾಂಡೇಲಿಯ ಜಾಗೃತ ದೇವರಾದ ದಾಂಡೇಲಪ್ಪಾ ದೇವರ ಜಾತ್ರೆ ನಗರದ ಸಮೀಪದ ಕೆರವಾಡ ಗ್ರಾಮದಲ್ಲಿ ಜರುಗಲಿದೆ. ಭಕ್ತಾದಿಗಳು ಜಾತ್ರೆಗೆ ಆಗಮಿಸಿ ದೇವರ ಅನುಗ್ರಹಕ್ಕೆ ಪಾತ್ರರಾಬೇಕೆಂದು ದೇವಸ್ಥಾನದ ಕಮಿಟಿಯ ಪರವಾಗಿ ಅರ್ಚಕರಾದ, ಗೋಪಾಲ ಅರ್ಜುನ ಮಿರಾಶಿ, ಮಾಜಿ ಜಿಲ್ಲಾ ಪಂಚಾಯತ್...

ಹಲ್ಲೆ ಖಂಡಿಸಿ ಮನವಿ ಅರ್ಪಣೆ

ದಾಂಡೇಲಿ, ಸೆ.೨೭: ನಗರದ ಮಾರುತಿನಗರದಲ್ಲಿ ಸೆ.22 ರಂದು ವಿನಾಕಾರಣ ಒಬ್ಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಗುಂಪಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.ವೈ.ಎಪ್.ಐ, ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಾರುತಿನಗರ 6 ನೇ ವಾರ್ಡಿನ ನಾಗರಿಕರು ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಲಿಖಿತ ಮನವಿಯ ಮೂಲಕ...

ಮುಖ್ಯ ಶಿಕ್ಷಕರ ಅಮಾನತ್ ಖಂಡಿಸಿ ಪ್ರತಿಭಟನೆ 

ಅಂಕೋಲಾ, ಸೆ.೨೭ :ತಾಲೂಕಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಗಾಂವಕರ ಬರ್ಗಿ ಇವರನ್ನು ಅಮಾತನ್ ಆದೇಶ ಖಂಡಿಸಿ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪಾಲಕರು ತರಗತಿ ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಸೆಪ್ಟೆಂಬರ್ ೨೬ರಂದು ನಡೆದಿತ್ತು.ಪ್ರಭಾರ ಕ್ಷೇತ್ರಾಶಿಕ್ಷಣಾಧಿಕಾರಿ ಭಾಸ್ಕರ ಗಾಂವಕರ ಘಟನಾ ಸ್ಥಳಕ್ಕೆ ಆಗಮಿಸಿ ಶಾಲಾ ಅಭಿವೃದ್ಧಿ...

ಈ ಬಾರಿ ಅದ್ದೂರಿ ರಾಮಲೀಲೋತ್ಸವ ಆಚರಣೆ

ದಾಂಡೇಲಿ, ಸೆ.೨೬ : ಜಿಲ್ಲೆಯಲ್ಲಿಯೆ ಅತ್ಯಂತ ಎತ್ತರವಾದ ರಾವಣ, ಕುಂಭಕರ್ಣ ಮತ್ತು ಮೇಘನಾಥ ಮೂರ್ತಿಗಳನ್ನು ಒಳಗೊಂಡ ದಸರಾ ಹಬ್ಬವನ್ನು ಎಂದಿನಂತೆ ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಈ ವರ್ಷವು ಅದ್ದೂರಿಯಿಂದ ನಡೆಸಲಿದೆ. ಸೆಪ್ಟೆಂಬರ್ 30 ರಂದು ಬೆಳಿಗ್ಗೆ 9 ಘಂಟೆಯಿಂದಲೆ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ರಾಮಲೀಲೋತ್ಸವದ ಜೊತೆ ಜೊತೆಯಲ್ಲಿಯೆ ಡಿಲಕ್ಸ್ ಮೈದಾನದಲ್ಲಿ...

ಯಲ್ಲಾಪುರ ಸಮಸ್ಯೆಗೆ ಪ್ರತಿಭಟನೆ

ಯಲ್ಲಾಪುರ, ಸೆ.೨೫: ಯಲ್ಲಾಪುರ ಪಟ್ಟಣ ಪಂಚಾಯತಿಯ ಸಮಸ್ಯೆಗಳ ಕುರಿತು ಕೆಲದಿನಗಳ ಹಿಂಗೆ ಈ ನಿಮ್ಮ Sirsi.Info ದಲ್ಲಿ ಮಾಹಿತಿ ನೀಡಲಾಗಿದ್ದನ್ನು ನೀವು ಓದಿದ್ದೀರಿ. ಈ ಯಲ್ಲಾಪುರ ಪಟ್ಟಣ ಪಂಚಾಯತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇಂದು ಯಲ್ಲಾಪುರದಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭ್ಯಾವ್ಯ ಜೆಡಿಎಸ್ ಅಭ್ಯರ್ಥಿ ರವೀಂದ್ರ ನಾಯ್ಕ ತಮ್ಮ...

ದೇಶದಲ್ಲಿ  ೨೦ ಸಾವಿರ ಐಟಿಐ ಸ್ಥಾಪನೆ ಗುರಿ, ಅನಂತಕುಮಾರ ಹೆಗಡೆ

ಸಚಿವರಾದ ಮೇಲೆ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಕೌಶಾಲ್ಯಭಿವೃದ್ದಿ ಹಾಗೂ ಉದ್ಯಮಶೀಲ ಸಚಿವಾಲಯದ ರಾಜ್ಯ ಖಾತೆ ಹೊಂದಿರುವ ಅನಂತಕುಮಾರ ಹೆಗಡೆಯವರು ಮಾಧ್ಯಮದೊಂದಿಗೆ ಈ ಮಾತನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ೪೬೦೦ ಕೈಗಾರಿಕಾ ತರಬೇತಿ ಕೇಂದ್ರ ಇದ್ದು, ಇದನ್ನು ೨೦ ಸಾವಿರಕ್ಕೆ ಏರಿಸಲಾಗುವುದು ಎಂದರು.

ಸಂಸ್ಕೃತ ವಿರೋಧಿ ಪ್ರಾಚಾರ್ಯರ ವಿರುದ್ದ ಕ್ರಮಕ್ಕೆ ಮನವಿ

ಶಿರಸಿ, ಸೆ. ೨೫: ಶಿರಸಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಂಸ್ಕೃತ ಭಾಷೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ಮತ್ತು ಸಂಸ್ಕೃತ ಭಾಷೆ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಾ. ಶಶಿಭೂಷಣ ಹೆಗಡೆ ಅವರ ನೇತೃತ್ವದಲ್ಲಿ ಇಂದು ಸಹಾಯಕ ಆಯುಕ್ತರಿಗೆ ಮನವಿ ನೀಡಲಾಯಿತು. ತಕ್ಷಣ ಕ್ರಮಕೈಗೊಳ್ಳದೇ ಹೋದಲ್ಲಿ ತೀವ್ರ...

ಧನಲಕ್ಷ್ಮೀ ರೀಟೇಲ್ಸ್ ಶುಭಾರಂಭ

ಶಿರಸಿ, ಸೆ.೨೫: ಶಿರಸಿಯ ಕುಮಟಾ ರಸ್ತೆಯಲ್ಲಿ ಇಂದು ಧನಲಕ್ಷ್ಮಿ ರೀಟೇಲ್ಸ್ ಪ್ರೈವೇಟ್ ಲಿಮಿಟೆಡ್ ಮಳಿಗೆಯು ವಿದ್ಯುಕ್ತವಾಗಿ ಆರಂಭವಾಯಿತು. ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಗೃಹಬಳಕೆಯ ಎಲ್ಲಾ ವಸ್ತುಗಳೂ ಇಲ್ಲಿ ಲಭ್ಯವೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಪಂಡಿತ ದೀನದಯಾಳ ಜಯಂತಿ ಆಚರಣೆ

ಶಿರಸಿ, ಸೆ.೨೫: ಪಂಡಿತ ದೀನದಯಾಳ ಉಪಾಧ್ಯಾಯರ 101 ನೇ ಜಯಂತಿಯು ಶಿರಸಿಯ ಜಿಲ್ಲಾ ಬಿ.ಜೆ.ಪಿ. ಕಛೇರಿಯಲ್ಲಿ ಇಂದು ಬೆಳಿಗ್ಗೆ ನೆರವೇರಿತು. ಸ್ಥಳಿಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಹಳೇ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ

ಕುಮಟಾ, ಸೆ.೨೫: ಕುಮಟಾ ತಾಲೂಕಿನ ಹೆಗಡೆಯ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಯ ಹಳೆಯ ವಿದ್ಯಾರ್ಥಿಗಳ ಸಂಘ ರವಿವಾರ ಅಸ್ತಿತ್ವಕ್ಕೆ ಬಂದಿತು. ಕಲಿತ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಅಭಿಮಾನದಿಂದ ದೊಡ್ಡ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸಭೆಗೆ ಪಾಲ್ಗೊಂಡಿದ್ದರು. ಧೀರೂ ಶಾನಭಾಗರವರನ್ನು ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ದಸರಾ ಪಥಸಂಚಲನ

ದಾಂಡೇಲಿ, ಸೆ.೨೪: ದಸರಾ ನಿಮಿತ್ತ ರಾಷ್ಟ್ರೀಯ ಸೇವಾ ಸಂಘ ದಾಂಡೇಲಿ ಘಟಕದ ನೇತೃತ್ವದಲ್ಲಿ ರವಿವಾರ ಪಥ ಸಂಚಲನವು ನಗರದಲ್ಲಿ ನಡೆಯಿತು. ನಗರ ಸಂಘ ಸಂಚಾಲಕ ಜೆ.ಎಲ್. ಬ್ಯಾಹೆತಿ, ಜಿಲ್ಲಾ ವ್ಯವಸ್ಥಾ ಪ್ರಮುಖ ಶ್ರೀನಿವಾಸ ಪ್ರಭು, ದಾಂಡೇಲಿ ಕಾರ್ಯ ನಿರ್ವಾಹಕ ದಯಾನಂದ ಮರಾಠಿ, ಜಿಲ್ಲಾ ಸೇವಾ ಪ್ರಮುಖ ಅರ್ಜುನ್ ನಾಯ್ಕ, ನಗರ...

ಕೇಂದ್ರ ಸಚಿವರಿಗೆ ಸಾರ್ವಜನಿಕ ಸನ್ಮಾನ

ಕಾರವಾರ, ಸೆ.೨೪ : ಭಾರತೀಯ ಜನತಾಪಾರ್ಟಿಯಿಂದ ಕೇಂದ್ರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಕೇಂದ್ರ ಸರಕಾರದ ರಾಜ್ಯ ಸಚಿವರಾದ ಉತ್ತರಕನ್ನಡ ಲೋಕಸಭಾ ಕೇತ್ರದಿಂದ ಕಾರವಾರದ ಜಿಲ್ಲಾರಂಗಮಂದಿರದಲ್ಲಿ ಅನಂತಕುಮಾರ ಹೆಗಡೆ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಇಂದು ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜೆ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್, ಮಾಜಿ ಸಚಿವ...

ಹಿಟಾಚಿ ಪಲ್ಟಿ

ಕುಮಟಾ ಸೆ.೨೪: ಕುಮಟಾದ ದಿವಗಿ ಸಮೀಪ ಹಿಟಾಚಿ ವಾಹನ ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಪಲ್ಟಿಯಾದ ನಂತರ ಸುತ್ತಲೂ ಹೊಗೆಯಿಂದ ಆವೃತವಾಗಿತ್ತು.

ಚೀನಾ ವಸ್ತು ಬಹಿಷ್ಕಾರ

ಕುಮಟಾ, ಸೆ.೨೪: ವಿಶ್ವಹಿಂದೂ ಪರಿಷತ್ ಕಾರವಾರ ಜಿಲ್ಲಾ ಕುಮಟಾ ಘಟಕದಿಂದ ಚೀನಾ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮವು ಕುಮಟಾದ ಮಾಸ್ತಿಕಟ್ಟೆಯ ಶ್ರೀ ಮಹಾಸತಿ ದೇವಸ್ಥಾನ ಸಭಾಭವನದಲ್ಲಿ ನಡೆಯಿತು. ಬಹಳಷ್ಟು ಧರ್ಮಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜನಾಭಿಪ್ರಾಯ -ವಿದ್ಯುತ್ ಬಿಲ್ ಪಾವತಿಗೆ ಪರದಾಟ

ಗೋಕರ್ಣ, ಸೆ.೨೪: ಸುಮಾರು 8000ದಷ್ಟು ವಿದ್ಯುತ್ ಮೀಟರ ಇರುವ ಈ ಭಾಗದಲ್ಲಿ ವಿದ್ಯತ್ ಬಳಕೆದಾರರಿಗೆ ತಿಂಗಳ ಹಣ ಪಾವತಿಸಲು ಪರದಾಡುವಂತಾಗಿದೆ. ಇಲ್ಲಿನ ಮೇಲಿನಕೇರಿಯಲ್ಲಿ ಗೊಡಂಗಡಿಕ್ಕಿಂತಲೂ ಚಿಕ್ಕದಾದ ಜಾಗದಲ್ಲಿ ವಿದ್ಯುತ್ ಬಿಲ್ಲ ತುಂಬಿಸಿಕೊಳ್ಳುತ್ತಿದ್ದು ಜನರ ರಸ್ತೆಯಲ್ಲಿ ಕಿ. ಮೀಟರ ಉದ್ದ ಸಾಲಲ್ಲಿ ನಿಲ್ಲುವಂತಾಗಿದೆ. ಬಿಸಿಲು ಅಥವಾ ಮಳೆ ಬಂದರೆ ಪಕ್ಕದ ಅಂಗಡಿ ಬಾಗಿಲಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಬಂದಿದೆ. ಹಿರಿಯನಾಗರಿಕರು,...

ಅಂಕೋಲಾ ಆಗಮಿಸಿದ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ

ಅಂಕೋಲಾ, ಸೆ.೨೪ : ಕೇಂದ್ರ ಸಚಿವರಾದ ಅನಂತ ಕುಮಾರ್ ಹೆಗಡೆಯವರಿಗೆ ಇಂದು ಅಂಕೋಲಾದ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ ಬರಮಾಡಿಕೂಂಡು ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.

ಗಂಗಾವಳಿ ಬಾರ್ಜನ ನೂತನ ವೇಳಾಪಟ್ಟಿ

ಗಂಗಾವಳಿ ನದಿ ದಾಟುವ ಬಾರ್ಜ್ ನ ನೂತನ ವೇಳಾಪಟ್ಟಿ ಈ ಕೆಳಗಿನಂತಿದೆ. ಸಾರ್ವಜನಿಕರ ಅವಾಗಾಹನೆಗಾಗಿ ಈ ಮಾಹಿತಿ

ರಾಜ್ಯ ಮಟ್ಟದ ಯೋಗ- ನಾಗಶ್ರೀ ದ್ವಿತಿಯ

ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದ ನಾಗಶ್ರೀ ಮುರಳಿ ನಾಯಕ ಅವರಿಗೆ ಯೋಗದಲ್ಲಿ ರಾಜ್ಯಮಟ್ಟದಲ್ಲಿ ದ್ವಿತಿಯ ಸ್ಥಾನ ಪ್ರಾಪ್ಥವಾಗಿದೆ. ನಾಗಶ್ರೀಯ ಈ ಸಾಧನೆಗೆ ಪಾಲಕರು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಗ್ಯಾಸ್ ಟ್ಯಾಂಕರ್ ಪಲ್ಟಿ

ಹೊನ್ನಾವರ, ಸೆ.೨೪: ಇಂದು ಬೆಳಿಗ್ಗೆ ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ಮಂಗಳೂರು ಕಡೆಯಿಂದ ಗೋವಾ ಕಡೆ ಹೊರಟಿದ್ದ ಗ್ಯಾಸ್ ತುಂಬಿದ ಅನಿಲ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಮಧ್ಯದಲ್ಲಿ ಬಿದ್ದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಧಾವಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಸಧ್ಯಕ್ಕೆ...

ಮನೆ‌ಮನೆಗೆ ಕಾಂಗ್ರೆಸ್ – ಅಭಿಯಾನದಲ್ಲಿ ಭೀಮಣ್ಣ ನಾಯ್ಕ

ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜೀಬಳದಲ್ಲಿ "ಮನೆ ಮನೆಗೆ ಕಾಂಗ್ರೆಸ್" ಅಭಿಯಾನ ಕಾರ್ಯಕ್ರಮಕ್ಕೆ ಡಿಸಿಸಿ ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕರವರು ಚಾಲನೆ ನೀಡಿದರು‌. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಕರ್ನಾಟಕ ಮಹಾ ಜನತೆಗೆ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಕರ್ನಾಟಕವನ್ನು ಭಾರತದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವನ್ನಾಗಿಸಿ ಶೋಷಿತರು,ಅವಕಾಶ ವಂಚಿತರು,ನೊಂದವರಿಗೆ ಧನಿಯಾಗಿ ಸಾಮಾಜಿಕ ನ್ಯಾಯದ...

ಜನಪ್ರತಿನಿಧಿಗಳೇ ಎಲ್ಲಿರುವಿರಿ? ಕುಮಟಿಗರ ಪ್ರಶ್ನೆ

ಕುಮಟಾ, ಸೆ. ೨೩: ಚಿತ್ರದಲ್ಲಿರುವುದು ಕುಮಟಾ ತಾಲೂಕು ಹನೇಹಳ್ಳಿ ಪಂಚಾಯತಿ ವ್ಯಾಪ್ತಿಯ ಹೊಸ್ಕೇರಿ ಹಳ್ಳಿಯ ಡಾಂಬರು ರಸ್ತೆ. ಈ ನತದೃಷ್ಟ ರಸ್ತೆ ಡಾಂಬರು ಕಂಡು ವರ್ಷಗಳೇ ಕಳೆದಿವೆ. ಇಲ್ಲಿನ ದುರದೃಷ್ಟ ಗ್ರಾಮಸ್ಥರು ಕಷ್ಟಪಡುತ್ತಾ ಸಂಚರಿಸುವುದನ್ನು ನೋಡುತ್ತಾ ರೋದಿಸುತ್ತಾ ಮಲಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲಿದ್ದಾರೊ ಏನೊ?

ಮಾರುತಿ ದೇವಾಲಯದಲ್ಲಿ ಇಂದು ರಾತ್ರಿ ಹತ್ತು ಗಂಟೆಗೆ ಸಂಗೀತಗಾರರಾದ ಮೆಹಬೂಬ ಭಜನೆ

ಶಿರಸಿ, ಸೆ. ೨೩: ಶಿರಸಿಯ ನಾಡಿಗಗಲ್ಲಿಯ ಶ್ರೀ ಮಾರುತಿ ದೇವಸ್ಥಾನದಲ್ಲಿ ೮೮ನೇ ವರ್ಷದ ಅಖಂಡ ಭಜನೆ ಕಾರ್ಯಕ್ರಮವು ಇಂದು ಮುಂಜಾನೆ ೬ ಗಂಟೆಯಿಂದ ಆರಂಭವಾಗಿದ್ದು ನಾಳೆ ಬೆಳಿಗ್ಗೆ ೬ ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ. ಈ ವರ್ಷದ ಭಜನಾ ಕಾರ್ಯಕ್ರಮದಲ್ಲಿ ಸ್ಥಳಿಯ ಭಕ್ತಿಗೀತೆ ಹಾಡುಗಾರರು, ಭಜನಾ ಮಂಡಳಿಯವರೊಂದಿಗೆ ವಿಶೇಷವಾಗಿ ಖಾಸಗಿ ಟಿವಿ ವಾಹಿನಿಯ ಸರಿಗಮಪ ಕಾರ್ಯಕ್ರಮ ಖ್ಯಾತಿಯ...

ತೂಗು ಸೇತುವೆ ಲೋಕಾರ್ಪಣೆ 

ಅಂಕೋಲಾ, ಸೆ.೨೩ : ಸುಂಕಸಾಳ ಡೋಂಗ್ರಿ ಗ್ರಾಮವನ್ನು ಸಂಪರ್ಕಿಸುವ ಸಾರ್ವಜನಿಕರ ಬಹುದಿನದ ಕನಸಾದ ಸುಮಾರು 1ಕೋಟಿ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ 125 ಮೀ. ಉದ್ದದ ತೂಗು ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಇಂದು ಉದ್ಘಾಟಿಸಿ ಸಾರ್ವಜನಿಕರ ಸಂಚಾರಕ್ಕೆ ಅರ್ಪಣೆ ಮಾಡಿದರು. ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಕರಾವಳಿ ಅಭಿವೃದ್ಧಿ ಪ್ರಧಿಕಾರದ...

ಪೌರಕಾರ್ಮಿಕರ ದಿನಾಚರಣೆ  

ಮುಂಡಗೋಡ, ಸೆ.೨೩: ಇಂದು ಪಟ್ಟಣ ಪಂಚಾಯತ ಮುಂಡಗೋಡದ ಪೌರಕಾರ್ಮಿಕರಿಗೆ ಸನ್ಮಾನಿಸಿ, ಶಾಲು ಹೋದಿಸಿ, ಫಲಪುಷ್ಪ ನೀಡಿ ಗೌರವಿಸುವ ಮೂಲಕ ಪೌರಕಾರ್ಮಿಕ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಿಂಗಾಪುರ ಕ್ಕೆ ಹೋಗಲು ಆಯ್ಕೆಯಾದ ಪೌರ ಕಾರ್ಮಿಕರಿಗೂ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಉಪಾಧ್ಯಕ್ಷ ಫಕ್ಕಿರಪ್ಪಾ ಅಂಟಾಳ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿ...

ಮಾರಕಾಸ್ತ್ರಗಳಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

ದಾಂಡೇಲಿ, ಸೆ.೨೩: ತನ್ನ ಅಪ್ತಾಪ್ತ ಮಗಳನ್ನು ಚುಡಾಯಿಸಿದ ಹುಡುಗನಿಗೆ ಬೈದು ಬುದ್ದಿ ಮಾತು ಹೇಳಿದ ತಂದೆಯ ಮೇಲೆಯೇ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಾಯಿಸಲೆತ್ನಿಸಿದ ಘಟನೆ ದಾಂಡೇಲಿಯ ಮಾರುತಿನಗರದಲ್ಲಿ ನಡೆದಿದೆ. ಟೌನ್‍ಶಿಪ್‍ನ ವಾಸಿಂ ಸಲಿಂ ಶೇಖ ಎಂಬವರೇ ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದು, ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಎಸ್.ಡಿ.ಎಮ್. ಆಸ್ಪತ್ರೆಗೆ ಸಾಗಿಸಲಾಗಿದೆ. ವಾಸಿಂ ಸಲಿಂ ಶೇಖ್...

ಗ್ರಾಮ ಲೆಕ್ಕಾಧಿಕಾರಿಗಳ ಸಾಂಕೇತಿಕ ಮುಷ್ಕರ

ಕಾರವಾರ ಸೆ.೨೩ : ಸೇವಾ ನಿಯಮದಲ್ಲಾಗುವ ಅನ್ಯಾಯಗಳು , ಕ್ಷೇತ್ರ ಕಾರ್ಯದಲ್ಲಾಗುವ ತೊಂದರೆಗಳು, ತಂತ್ರಾಂಶ ಹೇರಿಕೆಯಿಂದಾಗುವ ಮಾನಸಿಕ ಮತ್ತು ದೈಹಿಕ ಒಟ್ಟಡ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ಮುಂದಿಟ್ಟು ಇಂದು ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟ ನೀಡುವದು...

ನೂತನ ಕಟ್ಟಡ ಉದ್ಘಾಟನೆ

ಹೊನ್ನಾವರ ಸೆ. ೨೩: ಹೊನ್ನಾವರದ ದಿ. ಶ್ರೀ ಮೋಹನ ಕೆ.ಶೆಟ್ಟಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ೨೪-೦೯-೨೦೧೭ ರವಿವಾರ ಸಂಜೆ ನಾಲ್ಕು ಗಂಟೆಗೆ ಕಾಲೇಜು ಆವಾರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ಬೃಹತ್ ಕೈಗಾರಿಕಾ ಸಚಿವರೂ ಆಗಿರುವ ಆರ್. ವಿ. ದೇಶಪಾಂಡೆ ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ...

ಹೊಸ ಮಾರ್ಗದಲ್ಲಿ ಬಸ್ ಸಂಚಾರ

ಯಲ್ಲಾಪುರ ಸೆ.೨೩: ಪ್ರಯಾಣಿಕರ ಅನುಕೂಲಕ್ಕಾಗಿ ಉಳವಿ, ದಾಂಡೇಲಿ, ಶಿರಸಿಗೆ ಹೊಸ ಮಾರ್ಗವಾಗಿ ಬಸ್ ಸಂಚಾರ ಆರಂಭವಾಗಿದೆ. ಯಲ್ಲಾಪುರ ಡಿಪೊದ ವಾಹನವನ್ನು ಯಲ್ಲಾಪುರ ವಯಾ ಮಾರ್ಗದಲ್ಲಿ ಬಿಡಲಾಗಿದೆ. ಬಸ್ ಪ್ರತಿದಿನ ಬೆಳಿಗ್ಗೆ ಈ ಮಾರ್ಗದಲ್ಲಿ ಸಂಚರಿಸಲಿದೆ. ಉಳವಿ ಮತ್ತು ಮಾರಿಕಾಂಬಾ ದೇವಾಲಯಕ್ಕೆ ಹೋಗುವ ಭಕ್ತರಿಗೆ ಈ ಸಂಚಾರ ಅನುಕೂಲಕರವಾಗಿ ಪರಿಣಮಿಸಿದೆ.

ಭಟ್ಕಳದಲ್ಲಿ ಮೌನ ಮೆರವಣಿಗೆ

ಭಟ್ಕಳ ಸೆ.೨೩: ಭಟ್ಕಳದ ರಾಮಚಂದ್ರ ನಾಯ್ಕ ಸಾವಿನ ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧನ ಹಿನ್ನೆಲೆ ಇಂದು ಬಿಜೆಪಿ ಪಕ್ಷದಿಂದ ಶಿರಾಲಿಯಿಂದ ಭಟ್ಕಳದ ವರೆಗೆ ಮೌನ ಪ್ರತಿಭಟನೆ ಮಾಡಿ ಬಂದಿತರನ್ನು ಬಿಡುಗಡೆ ಮಾಡಬೇಕು ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಉತ್ತರಕನ್ನಡದ ಹಿಂದು ಕಾರ್ಯಕರ್ತರು ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ

ಮಾರಿಕಾಂಬಾ ದೇವಸ್ಥಾನದಲ್ಲಿ ಮತ್ತು ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ವಿಶೇಷ ಪುಷ್ಪಾಲಂಕಾರ ಮಾರಿಕಾಂಬಾ ದೇವಸ್ಥಾನದಲ್ಲಿ ವಿಜೃಂಣೆಯಿಂದ ಆರಂಭಗೊಂಡ ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ. ಶಿರಸಿ : ಇಂದಿನಿಂದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಸಪ್ತಶತಿ ಪಾರಾಯಣ...

ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ

ಮಾರಿಕಾಂಬಾ ದೇವಸ್ಥಾನದಲ್ಲಿ ಮತ್ತು ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ವಿಶೇಷ ಪುಷ್ಪಾಲಂಕಾರ ಮಾರಿಕಾಂಬಾ ದೇವಸ್ಥಾನದಲ್ಲಿ ವಿಜೃಂಣೆಯಿಂದ ಆರಂಭಗೊಂಡ ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ. ಶಿರಸಿ : ಇಂದಿನಿಂದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಸಪ್ತಶತಿ ಪಾರಾಯಣ...

ಸ್ವರ್ಣವಲ್ಲೀ ಶರನ್ನವರಾತ್ರಿ ಉತ್ಸವ ಪ್ರಾರಂಭ

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನವರಾತ್ರಿ ಉತ್ಸವವು ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ, ದೇವತಾ ಪ್ರಾರ್ಥನೆಗಳು ಶ್ರೀ ಶ್ರೀಗಳವರ ಸಮ್ಮುಖದಲ್ಲಿ ಹಾಗೂ ಪುರೋಹಿತರಾದ ಕೃಷ್ಣ ಜೋಶಿ, ಚಿನ್ಮಯ ಜೋಶಿ, ಆಸ್ಥಾನ ವಿದ್ವಾಂಸರಾದ ಭಾಲಚಂದ್ರ ಶಾಸ್ತ್ರೀಗಳು ಇವರ ಉಪಸ್ಥಿತಿಯೊಂದಿಗೆ ಆರಂಭವಾಯಿತು. ಯಜಮಾನರಾಗಿ ಮಂಜುನಾಥ ಮಣಿಗಾರ ದಂಪತಿಗಳು ಪಾಲ್ಗೊಂಡರು. ಬೆಳಗ್ಗೆ ಶ್ರೀಚಕ್ರಾರ್ಚನೆ,...

ಶಂಕರ ನಾಯ್ಕರ ಬಂಧನ: ಬಂಧಿತರ ಸಂಖ್ಯೆ ೧೫ಕ್ಕೆ ಏರಿಕೆ

ಭಟ್ಕಳ: ಇಲ್ಲಿನ ಪುರಸಭೆಗೆ ಕಲ್ಲು ತೂರಾಟ ಮಾಡಿರುವ ಹಾಗೂ ಅಂದಿನ ಗಲಭೆಗೆ ಕಾರಣ ಎಂಬ ಆರೋಪದ ಮೇರೆಗೆ ರಾಮಸೇನೆಯ ಉತ್ತರ ಪ್ರಾಂತದ ವಕ್ತಾರ, ಚೌಥನಿಯ ಶಂಕರ ನಾಯ್ಕ ಹಾಗೂ ಮುಂಡಳ್ಳಿಯ ದೇವೇಂದ್ರ ನಾಯ್ಕ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ ೧೫ಕ್ಕೆ ಏರಿದೆ. ಬುಧವಾರವಷ್ಟೇ ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಬಿಜೆಪಿಯ ಕುಮಟಾ,...

ಬಿಜೆಪಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಇಂದು ಶಿರಸಿಯ ಬಸ್ ಸ್ಯಾಂಡ್ ಸರ್ಕಲ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರದ ಬಿಜೆಪಿ ಸರಕಾರದ ಜನ ವಿರೋಧಿ ನೀತಿ ಖಂಡಿಸಿ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್, ಮತ್ತು ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಭೀಮಣ್ಣ ನಾಯ್ಕ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ...

ಸ್ವಚ್ಛತೆಯ ಕೊರತೆಯಲ್ಲಿ ಯಲ್ಲಾಪುರ 

ಯಲ್ಲಾಪುರ ಸೆ.೨೦: ಯಲ್ಲಾಪುರದ ತರಕಾರಿ ಮಾರುಕಟ್ಟೆ ಅನೈರ್ಮಲ್ಯದ ಗೂಡಾಗಿದೆ.ದನಗಳ ಹಾಗೂ ಹಂದಿಗಳ ಬೀಡಾಗಿದೆ. ಇಲ್ಲಿ ಶೌಚಾಲಯ ಇದ್ದೂ ಗಬ್ಬೆದ್ದು ನಾರುತ್ತಿದೆ. ಇದರ ಸ್ವಚ್ಚತೆ ಕಾಪಾಡುವ ಹೊಣೆ ಹೊತ್ತಿರುವ "‍‍ಪಟ್ಟಣ ಪಂಚಾಯತ ಕಾರ್ಯಾಲಯ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯವರಿಗೆ ಇದರ ಚಿಂತೆಯೇ ಇಲ್ಲ; ಯಾಕೆಂದರೆ ಅವರು ಇರುವ ಸ್ಥಳಕ್ಕೆ ಇಲ್ಲಿ ಏಳುವ ಗಬ್ಬು...

ದಸರಾ ‌ಪ್ರಯುಕ್ತ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ದೀಪಾಲಂಕಾರ

ಶ್ರೀ ಮಾರಿಕಾಂಬೆಯ ಸನ್ನಿದಿಯೇ ಒಂದು ಮನಮೋಹಕ ಹಾಗೂ ಸಂತ್ರಪ್ತಿ ನೀಡುವ ಅನುಭವ. ಅಂತಹುದರಲ್ಲಿ ದೇವಸ್ಥಾನ ಹಾಗೂ ಶ್ರೀ ದೇವಿಗೆ ಸಲ್ಲಿಸುವ ಅಲಂಕಾರ‌ನೋಡಲು ಎರಡು ಕಣ್ಣುಗಳೇ ಸಾಕಾಗುವದಿಲ್ಲ. ಮನಮೋಹಕ ಸಂತ್ರಪ್ತ ಅನುಭವಗಳನ್ನು ಈ ಚಿತ್ರಗಳ ಮೂಲಕ ಪಡೆಯಿರಿ. ಸೆಪ್ಟೆಂಬರ ೨೧ ರಿಂದ ಅಕ್ಟೋಬರ ೮ ರ ವರೆಗೆ ದಸರಾ ಪ್ರಯುಕ್ತ ಶ್ರೀ ದೇವರ ಸನ್ನಿದಿಯನ್ನು ದೀಪಾಲಂಕಾರಗಳಿಂದ ಶ್ರಂಗರಿಸಲಾಗುವುದು.

ಕಾಗೇರಿ ಕೈ ತಪ್ಪಿತಾ ಬಿಜೆಪಿ ಟಿಕೇಟ್?!

ಶಿರಸಿ ಸೆ.೧೬: ಶಿರಸಿಯ ಜನವಲಯದಲ್ಲಿ ಒಂದು ಅಚ್ಚರಿಯ ಮಾತು ಎಲ್ಲೆಡೆಯೂ ಕೇಳಿಬರುತ್ತಿದೆ. ಜಾಲತಾಣಗಳಲ್ಲಿಯೂ ಈ ಬಗ್ಗೆ ತುರುಸಿನ ಚರ್ಚೆಗಳು ನಡೆಯುತ್ತಿವೆ. ಆ ಅಚ್ಚರಿ ಏನಂದ್ರೆ ಶಿರಸಿ ಸಿದ್ದಾಪುರ ಕ್ಷೇತ್ರದ ಹಾಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬದಲಿಗೆ ಬೇರೆಯವರಿಗೆ ಟಿಕೆಟ್ ಸಿಗಬಹುದು ಎನ್ನುವ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಮಾತಿಗೆ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ...

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಶಿರಸಿ ವಿದ್ಯಾರ್ಥಿಗಳು

ಶಿರಸಿಯಲ್ಲಿ ನಡೆದ ಶಿರಸಿ ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾ ಕೂಟ ಮತ್ತು ಪ್ರತಿಭಾ ಕಾರಂಜಿಯಲ್ಲಿ ಚಂದನ ಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕ್ರೀಡಾ ಕೂಟ ಪ್ರಾಥಮಿಕ ವಿಭಾಗ: ಬೃಹತಿ ಉಂಚಳ್ಳಿ ತರಗತಿ 7 (ಚದುರಂಗ ಸ್ಫರ್ದೆ ಪ್ರಥಮ) ಅಖಿಲ್ ವಿ ಹೆಗಡೆ ತರಗತಿ 6 (ಬ್ಯಾಡ್‍ಮಿಂಟನ್ ಪ್ರಥಮ) ಅಭಿರಾಮ್ ವಿ ಹೆಗಡೆ ತರಗತಿ...

ರವೀಂದ್ರ ನಾಯ್ಕ ಫೇಸ್ ಬುಕ್ ಪೋಸ್ಟ್ ಗೆ ಜಾಲತಾಣಿಗರ ತರಾಟೆ

ಸೆ.೧೫- ಈ ಬಾರಿಯ ಯಲ್ಲಾಪುರ ಮುಂಡಗೋಡ ವಿಧಾನಸಭೆಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿತವಾಗಿರುವ ವಕೀಲ ರವೀಂದ್ರ ನಾಯ್ಕ ಅವರು ನೆನ್ನೆ (ಸೆ.೧೪) ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ಮೋದಿ ಯೋಜನೆಗಳ ಕುರಿತಾದ ಪೋಸ್ಟ್ ಹಾಕಿದ್ದರು. ಇದಕ್ಕೆ ಜಾಲತಾಣಿಗಳು ಸರಿಯಾಗಿ ವಿರೋಧಿಸಿ ಕಾಮೆಂಟ್ ಹಾಕಿದ್ದಾರೆ. ಇಂತಹ ಪೋಸ್ಟುಗಳು ತಮ್ಮಂತವರಿಗೆ ಶೋಭೆ ತರುವಂಥದ್ದಲ್ಲ ಎಂದು ಬಹುತೇಕರು...

ಕೈ-ಕೈ ಮಿಲಾಯಿಸುವ ಹಂತದಲ್ಲಿ ಕೈಕಾರ್ಯಕರ್ತರು

ಕಾರವಾರ ಸೆ.೧೨: ನಗರದ ಉಜ್ವಲ ಲಕ್ಷ್ಮಿ ಸಭಾಭವನದಲ್ಲಿ ನಡೆದ ಕಾರವಾರ ಹಾಗು ಅಂಕೋಲಾ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಸೈಲ್ ಹಾಗೂ ಕೆ.ಪಿ.ಸಿ.ಸಿ ಕಾರ್ಯದರ್ಶಿ ಗೋಪಾಲ ನಾಯಕ ಅವರ ಅಭಿಮಾನಿಗಳ ಮಧ್ಯೆ ಭುಗಿಲೆದ್ದಿತು ಬಣ ರಾಜಕೀಯ. ಈ ವಿದ್ಯಮಾನ ಕಾಂಗ್ರೇಸ್ ನಾಯಕರಿಗೆ ಮುಜುಗರ ಉಂಟುಮಾಡಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುವ...

ಕಾರವಾರ ಶಾಸಕ ಸೈಲ್ ಬಿಜೆಪಿಗೆ ಇಲ್ಲ

ಕಾರವಾರ ಸೆ. ೧೨ : ಕಳೆದ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆ ಆಗಿದ್ದ ಕಾರವಾರ, ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್‌ ಇಂದು ಕಾರವಾರದ ಉಜ್ವಲ‌‌ಲಕ್ಷ್ಮೀ ಸಭಾಭವನದಲ್ಲಿ‌ ನಡೆದ ಬೂತ್ ಮಟ್ಟದ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೇಸ್ ಸೇರಿದ್ದಾರೆ ಈ ಮೂಲಕ ಸೈಲ್ ಬಿಜೆಪಿ ಸೇರುತ್ತಾರೆ ಎನ್ನುವ ಎಲ್ಲಾ ಉಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ದಿನಾಂಕ ೨೧/೦೯/೨೦೧೭ ರಿಂದ ೩೦/೦೯/೨೦೧೭ ಗುರುವಾರದಿಂದ ಆರಂಭಗೊಳ್ಳಲಿರುವ ನವರಾತ್ರಿ ಉತ್ಸವಕ್ಕೆ ತಮಗೆಲ್ಲ ಆದರದ ಸ್ವಾಗತ. ಶ್ರೀ ಮಾರಿಕಾಂಬೆಯ ಆಶೀರ್ವಾದ ಪಡೆದುಕೊಳ್ಳಲು ಇದೊಂದು ಸುಸಂದರ್ಭವಾಗಿದೆ.

ಕದಂಬ ಮಾರ್ಕೆಟಿಂಗ್ ತೆಂಗಿನಕಾಯಿ ಖರೀದಿ ದರ

ಕದಂಬ ಮಾರ್ಕೆಟಿಂಗ್ ನ ಇಂದಿನ (12.09.17) ತೆಂಗಿನಕಾಯಿ ಖರೀದಿ ದರ : ತೆಂಗಿನಕಾಯಿ : ₹ 32/ಕೆ.ಜಿ ಬರಡುಕಾಯಿ : ₹ 25/ಕೆ.ಜಿ

TSS ಸರ್ವ ಸಾಧಾರಣ ಸಭೆ

ಟಿ.ಎಸ್.ಎಸ್.‌ಸರ್ವ ಸಾಧಾರಣ ಸಭೆ ನೋಟಿಸು

ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಯಲ್ಲಾಪುರ: ತಾಲೂಕಿನ ಬಾಸಲದಲ್ಲಿ ಕಳೆದ ಒಂದು ತಿಂಗಳಿಂದ ರಿಲಯನ್ಸ್ ಟವರ್ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ಸುಮಾರು ಎರಡು ಗಂಟೆಗಳ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಿಲಯನ್ಸ್ ಕಂಪನಿಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ತಹಶೀಲ್ದಾರರಿಗೆ ಮನವಿ ನೀಡಿ ಟವರ್ ಪುನರಾರಂಭಿಸುವ ಬಗ್ಗೆ ಒತ್ತಾಯಿಸಿದರು. ಸ್ಥಳೀಯ ಮುಖಂಡ...

ಕದಂಬ ಮಾರ್ಕೆಟಿಂಗ್ – ವಾರ್ಷಿಕ ಸರ್ವ ಸಾಧಾರಣ ಸಭೆ

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು 2016-17 ನೇ ಆರ್ಥಿಕ ವರ್ಷದಲ್ಲಿ ₹1783309/- ರಷ್ಟು ನಿವ್ವಳ ಲಾಭ ಗಳಿಸಿದ್ದು ಸುಮಾರು 15 ಕೋಟಿ ರೂಪಾಯಿಗಳ ವಹಿವಾಟು ನಡೆಸಲಾಗಿದೆ.ಸದಸ್ಯರ ಪಾಲುಧನದ ಮೇಲೆ ಶೇಕಡಾ 10 ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಲಾಭದ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇಕಡಾ 36 ರಷ್ಟು ಹೆಚ್ಚಾಗಿದ್ದು ಒಟ್ಟೂ ಶೇರು...

ಮಧು ಬಂಗಾರಪ್ಪ ಶಿರಸಿಗೆ

ದಿನಾಂಕ 12-09-2017 ರಂದು ಮಧ್ಯಾನ್ಹ 4 ಗಂಟೆಗೆ ಸಿರಸಿ ರಾಘವೇಂದ್ರ ಮಠದಲ್ಲಿ ಯುವ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ಯುವ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ . ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ೧೫೦ ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ, ...

ಸಿದ್ದಾಪುರದ ಬಳಿ ಕಾರು ಅಪಘಾತ

ಇಂದು ಬೆಳಿಗ್ಗಿನ ಜಾವ ೬.೩೦ ರ ಸುಮಾರಿಗೆ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಚಾಲಕನ ಕೈ ಮುರಿದ ಬಗ್ಗೆ ಪ್ರಾಥಮಿಕ ವರದಿ ದೊರೆತಿದೆ. ಹೆಚ್ಚಿನ ‌ಮಾಹಿತಿ ಇನ್ನಷ್ಟೇ ಒದಗಬೇಕಿದೆ. ಕೃಪೆ: ಸತೀಶ ನಾಯ್ಕ

ಶ್ರೀ ಮಾರಿಕಾಂಬಾ ದೇವಿಗೆ ಪುಷ್ಪಾಲಂಕಾರ

ಅಂಕೋಲಾ ತಾಲೂಕಿನ ಪೂಜಗೆರೆ ಗ್ರಾಮಸ್ಥರಿಂದ ಶ್ರೀ ಮಾರಿಕಾಂಬಾ ದೇವಿಗೆ ಇಂದು ಪುಷ್ಪಾಲಂಕಾರ ಮಾಡಲಾಯಿತು. ವರ್ಷಕ್ಕೋಮ್ಮೆ ಪೂಜಗೆರೆ ಗ್ರಾಮಸ್ಥರು ಪುಷ್ಪಾಲಂಕಾರ ಸೇವೆ ಸಲ್ಲಿಸುವುದು ವಾಡಿಕೆ. ಪುಷ್ಪಾಲಂಕಾರದಲ್ಲಿ ಆರಾಧ್ಯ ದೇವರನ್ನು ನೋಡಿ ಮನತಣಿಸಿಕೊಳ್ಳಿ. ಶ್ರೀ ಮಾರಿಕಾಂಬಾ ದೇವಿ ಸರ್ವರಿಗೂ ಸುಖ ಸಂತೋಶ ನೆಮ್ಮದಿ ನೀಡಲಿ.

ಶಿರಸಿ ಕಾಲೇಜು ರಸ್ಥೆಯಲ್ಲಿ ಅತಿರೇಕದ ವಾಹನ ಚಲಾವಣೆ – ಸಾರ್ವಜನಿಕರಿಂದ ಧರ್ಮದೇಟು

ಶಿರಸಿ: ಪಾದಚಾರಿ ದಂಪತಿಗಳು ಶಿರಸಿ ಕಾಲೇಜು ರಸ್ಥೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ, ವೇಗವಾಗಿ ಬಂದ ಬೈಕ್ ಸವಾರರು ದಂಪತಿಗಳಿಗೆ ಗುದ್ದಿದರು. ಈ ಅಪಘಾತದಲ್ಲಿ ಮಹಿಳೆಯೋರ್ವಳಿಗೆ ಪೆಟ್ಟಾಗಿದ್ದು ಸಾರ್ವಜನಿಕರು ತಕ್ಷಣ ಆಸ್ಪತ್ರೆ ದಾಖಲಿಸಿದರು. ಬೈಕ್ ಸವಾರರು ವೇಗವಾಗಿ ವಾಹನ ಚಲಾಯಿಸಿ, ಪಾದಚಾರಿ ಹಾಗೂ ಇತರ ಸವಾರರಿಗೆ ತೊಂದರೆಯಾಗುವಂತಹ ಘಟನೆಗಳು ಶಿರಸಿ ಕಾಲೇಜು ರಸ್ಥೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆನ್ನಲ್ಲೆ, ಈ...

​ಕಾರವಾರದ ದೇವಾಲಯಗಳ ಆವರಣದಲ್ಲಿ ಪಹರೆಯ ಸ್ವಚ್ಚತೆ

ಕಾರವಾರ: ಕಳೆದ ಸುಮಾರು ಮೂರು ವರ್ಷಕ್ಕೆ ಸಮೀಪ ಸ್ವಚ್ಚತೆಯನ್ನ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಪಹರೆ ವೇದಿಕೆ ಈ ವರ್ಷದ ಮಳೆಗಾಲದಲ್ಲಿ ದೇವಾಲಯಗಳ ಆವರಣವನ್ನ ಸ್ವಚ್ಚಗೊಳಿಸಿ ಭಕ್ತಾದಿಗಳ ಪ್ರಶಂಸೆಗೆ ಕಾರಣವಾಗುತ್ತಿದೆ.. ಪ್ರತಿ ಶನಿವಾರ ಮುಂಜಾನೆಯಲ್ಲಿ ಕಾರವಾರದ ನೂರಾರು ಕಾರ್ಯಕರ್ತರ ಸಹಯೋಗದೊಂದಿಗೆ ಪಹರೆಯ ಈ ಅಭಿಯಾನ ನಿರಂತರವಾಗಿ ಮುನ್ನಡೆಯುತ್ತಿದೆ. ಕಳೆದ ವಾರ ನಗರದ ಬಾಡದಲ್ಲಿರುವ ಪ್ರಸಿದ್ದ ಮಹಾದೇವಸ್ಥಾನದಲ್ಲಿ ಸ್ವಚ್ಚತೆಯನ್ನ ಪಹರೆ...

​ಕಾರವಾರದಲ್ಲಿ ಹೋಂ ಸ್ಟೇ ಸಾಧ್ಯತೆ

ಕಾರವಾರ: ಪಹರೆ ವೇದಿಕೆಯ ಚಿಂತನ ಮಂಥನ ವಿಭಾಗದಿಂದ ಎರಡನೇ ಕಾರ್ಯಕ್ರಮ ಇಂದು ಕಾರವಾರದ ಕನ್ನಡ ಭವನದಲ್ಲಿ ಜರುಗಿತು. ಈ ತಿಂಗಳ ವಿಷಯ ಕಾರವಾರದಲ್ಲಿ ಹೋಂಸ್ಟೇ ಸಾಧ್ಯತೆ ಎಂದು ಇದ್ದು ಈ ವಿಷಯದ ಮೇಲೆ ಕುಮಟಾದ ಪ್ರಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿರಾಜ್ ಕಡ್ಲೇ, ಹೋಂ ಸ್ಟೇ ಉದ್ಯಮಿ ಶ್ರೀ ರಾಜೀವ್ ಗಾಂವಕರ್ ಮತ್ತು ಚಿಂತಾಮಣಿ...

ಕಾರವಾರದ ಮುದಗಾ ಬಳಿ ಅಪಘಾತ

ಕಾರವಾರ:​ ಎರಡು ಬೈಕಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಕಾರವಾರದ ಮುದಗಾ ಬಳಿ ರಾಷ್ಟ್ರೀಯ ಹೆದ್ದಾರಿ ೬ ರಲ್ಲಿ ಈ ದುರ್ಘಟೆನೆ ಸಂಭವಿಸಿದ್ದು ಸಂದೀಪ ದುರ್ಗೇಕರ (೩೦) ಎಂಬುವವರು ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ಮೂವರ ಸ್ಥಿತಿ ಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಧಕರಿಗೆ ಪುರಸ್ಕಾರ

ಉದ್ಯಮಿ ಉಪೇಂದ್ರ ಪೈ ಅಧ್ಯಕ್ಷತೆಯ ‘ಉಪೇಂದ್ರ ಪೈ ಸೇವಾ ಟ್ರಸ್ಟ್’ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಶಿರಸಿ ಸಿದ್ದಾಪುರ ತಾಲೂಕಿನ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90ಕ್ಕಿಂತ ಗರಿಷ್ಠ ಅಂಕ ಪಡೆದ ಅವಶ್ಯಕ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಹಾಗೂ ಪ್ರಸಕ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು 24-06-2017 ಶನಿವಾರ...

ಲಿಂಗದಕೋಣ ಕಲ್ಯಾಣಮಂಟಪದಲ್ಲಿ  ಮಲೆನಾಡು ಮೇಳ

ಜ್ಯೂನ್ ೨೧ರಂದು  ಶಿರಸಿಯ ಲಿಂಗದಕೊಣ ಕಲ್ಯಾಣಮಂಟಪದಲ್ಲಿ ಒಂದು ದಿನದ ಮಲೆನಡು ಮೇಳ ಹೊಮ್ಮಿಕೊಳ್ಳಲಾಗಿದೆ. ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಗಳಿದ್ದು ಅಭಿರುಚಿಕರು ಭಾಗವಹಿಸಬಹುದಾಗಿದೆ.

​ಕಾರವಾರ ಕಡಲ ತೀರದಲ್ಲಿ ಅನ್ಯಗ್ರಹ ಜೀವಿಗಳು

ಕಳೆದ ಶನಿವಾರ ಕಾರವಾರ ಸಮುದ್ರ ತೀರದಲ್ಲಿ ಚಾಪೆಲ್ ವಾರ್ ಶಿಪ್ ಮ್ಯೂಸಿಯಂ ಬಳಿ ನಸುಕಿನಲ್ಲಿ ಅನ್ಯಗ್ರಹ ಜೀವಿಗಳು ಸುತ್ತಾಡುತ್ತಿದ್ದವು. ಬೆಳಿಗ್ಗೆ ೬.೩೦ ರ ಸುಮಾರಿಗೆ ಜೋರಾಗಿ ಮಳೆ ಬೀಳುತ್ತಿತ್ತು. ಅದರ ಜೊತೆಗೆ ಮೋಡ ಕವಿದು ಇನ್ನೂ ಕತ್ತಲೆಯ ವಾತಾವರಣವೇ ಇತ್ತು. ಅಂತಹ ಸಂಧರ್ಭದಲ್ಲಿ ವಾಯು ವಿಹಾರಕ್ಕೆ ಬಂದ ಕೆಲ ಜನ ಕುತೂಹಲದಿಂದ ಸಮೀಪ ಹೋಗಿ...

ಶಿರಸಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು

ಮೂಲ ನೆಲ ಜಲ ಸಂಸ್ಕ್ರತಿ ವೇದಿಕೆ, ಹುಳಗೋಳದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡ ಅವರೊಂದಿಗೆ ‘ಮನೆಯಂಗಳದಲ್ಲಿ ಮಾತುಕತೆ’ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶ್ರೀಮತಿ ರಾಜೇಶ್ವರಿ ಹೆಗಡೆಯವರ ಮನೆಯಲ್ಲಿ 19-06-2017ರ ಸೋಮವಾರದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿರಸಿ ತಾಲೂಕಿನ ಅರಸಾಪುರ ಅಂಚೆ, ಹುಳಗೋಳದ ಶ್ರೀ ದತ್ತಕೃಪಾ ನಿಲಯಕ್ಕೆ ಗೌಡರು ಬೆಳಿಗ್ಗೆ 11ಕ್ಕೆ ಆಗಮಿಸಲಿದ್ದು ಸಾಯಂಕಾಲದವರೆಗೂ...

ನಮ್ಮನ್ನಗಲಿದ ಮಾರಿಗುಡಿ ಮಾಜಿ ಅಧ್ಯಕ್ಷರು

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾಜಿ ಅಧ್ಯಕ್ಷರು ಹಾಗೂ ಈಗಿನ ಧಮ೯ದಶಿ೯ಗಳಾದ ಶ್ರೀ ವಿ ಯು ಪಟಗಾರ ಅವರು ವಿಧಿವಶರಾಗಿದ್ದಾರೆ

ಕುಮಟಾ ಬಳಿ ಕಾರು ಅಪಘಾತ

ಕುಮಟಾ ತಾಲೂಕಿನ ಮಿರ್ಜಾನ ಬಳಿ ಹೈವೇಯಲ್ಲಿ ಸಾಗುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡ ಪರಿಣಾಮವಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪ್ರಾಣಾಪಯವಾಗಿಲ್ಲ. ಸಣ್ಣಪುಟ್ಟಗಾಯಗಳಾಗಿದ್ದು ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಇತ್ತೀಚೆಗೆ ಕರಾವಳಿ ಭಾಗದಲ್ಲಿ ಅಧಿಕ ಮಳೆ ಹಾಗೂ ರಸ್ತೆ ವಿಸ್ತರಣೆಯಿಂದಾಗಿ ಹೆಚ್ಚಿದ ಅಪಘಾತ ಜನರಲ್ಲಿ ಭಯದ ವಾತಾವರಣ ಎರ್ಪಟ್ಟಿದೆ. ಇದನ್ನು ತಡೆಯಲು ಆಡಳಿತ ಸಜ್ಜಾಗಬೇಕು ಹಾಗೂ ಜನರೂ ಎಚ್ಚರಿಕೆಯಿಂದ ವಾಹನ...

ಯಲ್ಲಾಪುರದಲ್ಲಿ ಅಫಘಾತ – ಸಾವು

ಬೈಕ್ ಸ್ಕಿಡ್ ಆಗಿ  ಬಸ್ಸಿನಡಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ತಾಲ್ಲೂಕು ಪಂಚಾಯ್ತಿಗಳು ಎದುರು ಗುರುವಾರ ಮಧ್ಯಾಹ್ನ ನಡೆದಿದೆ.      ಪಟ್ಟಣದ ಅಡಿಕೆ ವ್ಯಾಪಾರಿ ವಿಶ್ವನಾಥ ಶ್ರೀಪಾದ ಶಾನಭಾಗ ( ದಯಾನಂದ ಶಾನಭಾಗ)(60) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಬಸ್ ಬೆಲ್ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಸಾರಿಗೆ...

ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ – ಸಾವು ನೋವು

ಕುಮಟಾ: ಕುಮಟಾ ದಿವಗಿ ಬಳಿ ಗುಡ್ಟ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವಮಪ್ಪಿದ್ದಾರೆ.  ರಾ.ಹೆ 66 ರ ಪಕ್ಕದಲ್ಲಿ ಕುಸಿದ ಗುಡ್ಡದಿಂದಾಗಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿದೆ. ಅದರ ಪಕ್ಕದಲ್ಲಿರುವ ಹಲವು ಮನೆಗಳು ಕುಸಿತದಲ್ಲಿ ಸಿಲುಕಿದ್ದು ಮನೆಯೊಳಗಿದ್ದ ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ. ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ದಿವಗಿಯ ಗುಡ್ಡಕುಸಿತದಿಂದ ಗುಡ್ಡವನ್ನು ಬೀಳುವಾಗ ಬೈಕ ಸವಾರರು ಸಿಲುಕಿಕೊಂಡಿದ್ದು ಅವರಿಗಾಗಿ ಹುಡುಕಾಟ...

ಹೆಚ್ಚು ಕಾಮೆಂಟಗಳು

ಸೋಂದಾದ ಸ್ವಾದಿ ಜೈನಮಠದಲ್ಲಿ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ...

ಇದೇ ಬರುವ ಅಕ್ಟೋಬರ್ ೭ ಮತ್ತು ೮ ರಂದು ಸೋಂದಾದ ಸ್ವಾದಿ ಜೈನಮಠದಲ್ಲಿ ನಡೆಯಲಿರುವ ನಾಲ್ಕನೇ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ...

ಹಾಟ್ ನ್ಯೂಸ್