18.9 C
Sirsi, Karnataka
Wednesday, December 12, 2018

ಸ್ಥಳೀಯ

ಬಿಲ್ಲವ ಸಂಘದಿಂದ ಪುರಸ್ಕಾರ, ಸನ್ಮಾನ

ಸಿದ್ದಾಪುರ, ಅ.೮: ಇಂದು ಸಿದ್ದಾಪುರದ ತಾಲೂಕಾ ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಡಿಸಿಸಿ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಉದ್ಘಾಟಿಸಿ, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಸಮಾಜದ ಮುಖಂಡರು ಹಾಗೂ ಸ್ನೇಹಿತರುಗಳಾದ...

ಸತತ ಮೂರನೇ ವರ್ಷ ರಾಜ್ಯಮಟ್ಟಕ್ಕೆ ತಲುಪಿದ ಸಾಧನೆ

ಶಿರಸಿ, ಸೆ. 28: ನಗರದ ಎಂ.ಇ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿಯಾದ ರಕ್ಷಿತಾ ಪಟಗಾರ ಯಲ್ಲಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಕ್ರೀಡಾಕೂಟದ ಬಾಲಕಿಯರ ಎತ್ತರ ಜಿಗಿತ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸುವುದರ ಮೂಲಕ ಸತತ 3ನೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆಯ ಮೂಲಕ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಶಿಕ್ಷಕ...

ರಾಮಾಪುರ ಶಾಲೆಯಲ್ಲಿ ಶಿಕ್ಷಕರ ಕೊರತೆ

ಶಿರಸಿ, ಅ. 5: ಶಿರಸಿ ತಾಲೂಕಿನ ಅಂಡಗಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿನ ರಾಮಾಪುರ ಗ್ರಾಮದ ಸರಕಾರಿ ಶಾಲೆಯಲ್ಲಿ 3 ವರ್ಷಗಳಿಂದ ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಗಳಲ್ಲಿ ಭಾಗವಹಿಸಲು ಆಗದೆ ಶಿಕ್ಷಣವು ಕುಂಠಿತವಾಗಿದೆ. ಇದರಿಂದ ಬೇಸತ್ತ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಯತ್ತ ಕಳಿಸುತ್ತಿದ್ದಾರೆ. 2015-16ರಲ್ಲಿ 85ರಷ್ಟಿದ್ದ ಮಕ್ಕಳ ಸಂಖ್ಯೆ ಇಂದಿಗೆ...

ಕಾರವಾರದ ಪಹರೆ ವೇದಿಕೆಗೆ ಮುರುಘಾ ಪ್ರಶಸ್ತಿ ಮತ್ತು ಸನ್ಮಾನ

ಕಾರವಾರ: ಸ್ವಚ್ಚತೆಯಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ ಕಾರವಾರ ನಗರದಲ್ಲಿ ಸತತವಾಗಿ ಸೇವೆ ಮಾಡುವ ಮೂಲಕ ಮನೆಮಾತಾಗಿರುವ ಪಹರೆ ವೇದಿಕೆಗೆ ಪ್ರತಿಷ್ಠಿತ ರಾಜ್ಯಮಟ್ಟದ ಮುರುಘಾ ದಸರಾ ಪ್ರಶಸ್ತಿ ಲಭಿಸಿದೆ. ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರತಿವರ್ಷ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಇಂತಹ ಸಂಸ್ಥೆ ಮತ್ತು ಜನರಿಗೆ ದಸರಾ ಸಂಧರ್ಭದಲ್ಲಿ ವಿಶೇಷ ಪ್ರಶಸ್ತಿ ಮತ್ತು ಸನ್ಮಾನವನ್ನ ಮಾಡುತ್ತಾ...

ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ

ಕುಮಟಾ, ಸೆ. ೨೯: ಅಕ್ಟೊಬರ್‌ ೨ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಉತ್ತರಕನ್ನಡ ಜಿಲ್ಲಾ ಗೋಪರಿವಾರದ ಮಾರ್ಗದರ್ಶನದಲ್ಲಿ ಕುಮಟಾ ತಾಲೂಕಾ ಗೋಪರಿವಾರ ಮತ್ತು ಎಲ್ಲಾ ಗ್ರಾಮಗೋಪರಿವಾರಗಳ ನೇತ್ರತ್ವದಲ್ಲಿ ಬೃಹತ್ ಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಪ್ರಯುಕ್ತ ಅಂದು ಬೆಳಿಗ್ಗೆ 9:30ಕ್ಕೆ ಭೂದೇವಿ ಅಮ್ಮನವರ...

ಅಕ್ಟೋಬರ್ ೨ ರಿಂದ ಸ್ವಚ್ಛತಾ ಕಾರ್ಯಕ್ರಮ

ಭಟ್ಕಳ, ಸೆ.೨೯: ಭಟ್ಕಳ ಪುರಸಭಾ ಸಭೆಯಲ್ಲಿ ಅಕ್ಟೋಬರ್ ೨ ರಿಂದ ೮ರವರೆಗೆ ತಾಲೂಕಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಕ್ಟೋಬರ್ 2ರಂದು ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುವುದು

ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ

ಮಾರಿಕಾಂಬಾ ದೇವಸ್ಥಾನದಲ್ಲಿ ಮತ್ತು ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ವಿಶೇಷ ಪುಷ್ಪಾಲಂಕಾರ ಮಾರಿಕಾಂಬಾ ದೇವಸ್ಥಾನದಲ್ಲಿ ವಿಜೃಂಣೆಯಿಂದ ಆರಂಭಗೊಂಡ ನವರಾತ್ರಿ ಉತ್ಸವ ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ. ಶಿರಸಿ : ಇಂದಿನಿಂದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಸಪ್ತಶತಿ ಪಾರಾಯಣ...

ಶಿರಸಿಯಲ್ಲಿ 27 ಹಾಗೂ 28 ಎರಡು ದಿನ ವಿದ್ಯುತ್ ವ್ಯತ್ಯಯ

ಶಿರಸಿ. ಜ. ೨೫. ತುರ್ತು ಕಾಮಗಾರಿಯ ಕಾರಣದಿಂದ ಶಿರಸಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಉಪಕೇಂದ್ರದಲ್ಲಿ ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. ಜ. ೨೭ ಹಾಗೂ ೨೮ ರಂದು ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೫ ಘಂಟೆಗಳವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಜ ೨೭ ರಂದು ಶಿರಸಿ ಪಟ್ಟಣ ಭಾಗಗಳಾದ ಹೊಸಪೇಟೆ ರಸ್ಥೆ, ಕಸ್ತೂರಬಾ ನಗರ, ಅಶ್ವಿನಿ ವೃತ್ತ, ವಿಕಾಸ...

ಸಿದ್ದಾಪುರದಲ್ಲಿ ಸಚಿವರು

ಸಿದ್ದಾಪುರ, ಸೆ.೨೯: ನೂತನ ಸಚಿವರು, ನಮ್ಮ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆಯವರಿಗೆ ಅಭಿನಂದನಾ ಸಮಾರಂಭವನ್ನು ಸಿದ್ದಾಪುರದಲ್ಲಿ ಇಂದು ಬೆಳೆಗ್ಗೆ ಹಮ್ಮಿಕೊಳ್ಳಲಾಗಿತ್ತು.

ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ – ಸಾವು ನೋವು

ಕುಮಟಾ: ಕುಮಟಾ ದಿವಗಿ ಬಳಿ ಗುಡ್ಟ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವಮಪ್ಪಿದ್ದಾರೆ.  ರಾ.ಹೆ 66 ರ ಪಕ್ಕದಲ್ಲಿ ಕುಸಿದ ಗುಡ್ಡದಿಂದಾಗಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿದೆ. ಅದರ ಪಕ್ಕದಲ್ಲಿರುವ ಹಲವು ಮನೆಗಳು ಕುಸಿತದಲ್ಲಿ ಸಿಲುಕಿದ್ದು ಮನೆಯೊಳಗಿದ್ದ ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ. ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ದಿವಗಿಯ ಗುಡ್ಡಕುಸಿತದಿಂದ ಗುಡ್ಡವನ್ನು ಬೀಳುವಾಗ ಬೈಕ ಸವಾರರು ಸಿಲುಕಿಕೊಂಡಿದ್ದು ಅವರಿಗಾಗಿ ಹುಡುಕಾಟ...

ಕಾಗೇರಿ ಕೈ ತಪ್ಪಿತಾ ಬಿಜೆಪಿ ಟಿಕೇಟ್?!

ಶಿರಸಿ ಸೆ.೧೬: ಶಿರಸಿಯ ಜನವಲಯದಲ್ಲಿ ಒಂದು ಅಚ್ಚರಿಯ ಮಾತು ಎಲ್ಲೆಡೆಯೂ ಕೇಳಿಬರುತ್ತಿದೆ. ಜಾಲತಾಣಗಳಲ್ಲಿಯೂ ಈ ಬಗ್ಗೆ ತುರುಸಿನ ಚರ್ಚೆಗಳು ನಡೆಯುತ್ತಿವೆ. ಆ ಅಚ್ಚರಿ ಏನಂದ್ರೆ ಶಿರಸಿ ಸಿದ್ದಾಪುರ ಕ್ಷೇತ್ರದ ಹಾಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬದಲಿಗೆ ಬೇರೆಯವರಿಗೆ ಟಿಕೆಟ್ ಸಿಗಬಹುದು ಎನ್ನುವ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಮಾತಿಗೆ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ...

ಪ್ರಖ್ಯಾತ ಜೋತಿಷಿ ವಿಧಿವಶ, ಜನತೆಯ ಶೋಕ

ಶಿರಸಿ, ಅ.೮: ಶಿರಸಿಯ ನಾಡಿಗಗಲ್ಲಿಯ ಮಾರುತಿ ದೇವರ ಪರಮಭಕ್ತರಾಗಿದ್ದು ಖ್ಯಾತ ಜ್ಯೋತಿಷಿಗಳೂ, ಸೃಜನಶೀಲ ವ್ಯಕ್ತಿಗಳೂ ಆಗಿದ್ದ ಮಂಚಿಕೇರಿ ತೂಕರ ಬೈಲಿನ ವೆ.ಮೂ. ಗೋಪಾಲ ರಾಮಚಂದ್ರ ಭಟ್ ಅಕಾಲಿಕ ನಿಧನಕ್ಕೊಳಗಾಗಿದ್ದಾರೆ. ಶ್ರೀಯುತರ ಈ ನಿಧನಕ್ಕೆ ಶಿರಸಿಯ ಬಹಳಷ್ಟು ಜನರು ಶೋಕ ವ್ಯಕ್ತಪಡಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿನ ತಮ್ಮ ಅಪಾರ ಪಾಂಡಿತ್ಯದಿಂದ ಅನೇಕರ ಪ್ರೀತಿಗೆ ಇವರು ಪಾತ್ರರಾಗಿದ್ದರು.

ಕುಮಟಾ ರೈಲು ನಿಲ್ದಾಣದಲ್ಲಿ ದೂರವಾಣಿಗೂ ಗತಿ ಇಲ್ವೆ?

ಕುಮಟಾ, ಸೆ.೨೯: ಕೆಲವು ದಿನಗಳಿಂದ ಕುಮಟಾ ರೈಲು ನಿಲ್ದಾಣದಲ್ಲಿ ದೂರವಾಣಿ ಸೌಲಭ್ಯ ಇಲ್ಲದೆ ಮಾಹಿತಿ ಪಡೆಯಲು, ರೈಲು ಸಮಯ ವಿಚಾರಿಸಲು ಆಗದೆ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಈ ಕುರಿತಂತೆ ಎಷ್ಟೇ ವಿಚಾರಿಸಿದರೂ ಫಲಿತಾಂಶ ಮಾತ್ರ ಶೂನ್ಯ. ಸಂಬಂಧಪಟ್ಟವರು ಆದಷ್ಟು ಬೇಗ ಈ ಅನಾನುಕೂಲತೆಯನ್ನು ಸರಿಪಡಿಸಬೇಕೆಂಬುದು ನಮ್ಮದೂ ಆಗ್ರಹವಾಗಿದೆ.

ಹಿಂ.ಜಾ.ವೇ ಇಂದ ದುರ್ಗಾದೌಡ್

ಕುಮಟಾ, ಸೆ.೨೮: ತಾಲೂಕಿನಲ್ಲಿ ಇಂದು ಹಿಂದೂ ಜಾಗಣವೇದಿಕೆ ಘಟಕದಿಂದ ನವರಾತ್ರಿಯ ದುರ್ಗಾದೌಡ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಕುಮಟಾ ತಾಲೂಕಿನ ಪ್ರತಿಯೊಂದು ದೇವಾಲಯಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಲಾಯಿತು.

ಉಪ ಅಂಚೆ ಕಛೇರಿ ವಿಲೀನಕ್ಕೆ ವಿರೋಧ

ಕುಮಟಾ: ಸೆ. ೩೦. ಉಪ ಅಂಚೆ ಕಛೇರಿ ಕುಮಟಾ ಶಾಖೆಯನ್ನು ಕುಮಟಾದ ಪ್ರಧಾನ ಅಂಚೆ ಕಛೇರಿ ಗೆ ವಿಲೀನ ಮಾಡುವುದನ್ನು ವಿರೋಧಿಸಿ, ಕುಮಟಾ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಕುಮಟಾದ ಪ್ರಧಾನ ಅಂಚೆ ಕಛೇರಿ ಮುಖ್ಯ ಎಎಸ್ ಪಿ ಯವರಿಗೆ ಮನವಿ ಸಲ್ಲಿಸಲಾಯಿತು ಈ ಸಂಧರ್ಭದಲ್ಲಿ ಪುರಸಭಾ ಅಧಕ್ಷರಾದ ಶ್ರೀ ಸಂತೋಷ ನಾಯ್ಕ,ನಾರಾಯಣ ಉಡದಂಗಿ,ಭಾಸ್ಕರ್,ಸುಜಿತ್,ಗಣಪತಿ,...

ಕಾಡಾನೆ ದಾಳಿಗೆ ಬೆಳೆ ನಷ್ಟ

ಮುಂಡಗೋಡ, ಅ.೫ : ಐದಾರು ಆನೆಗಳು ಕಳೆದ ಒಂದುವಾರದಿಂದ ಪ್ರತಿದಿನ ಸಾಯಂಕಾನ ತಾಲೂಕಿನ ಉಗ್ಗಿನಕೇರಿ ಮಾರ್ಗವಾಗಿ ಬಂದು ಮೈನಳ್ಳಿ, ಗುಂಜಾವತಿ ಅರಣ್ಯದ ಅಂಚಿಗೆ ತಾಗಿಕೊಂಡಿರುವ ಹೊಲಗದ್ದೆಗಳಿಗೆ ದಾಳಿ ಇಡುತ್ತಿರುವ ಪರಿಣಾಮ ಬೆಳೆಗಳಿಗೆ ಅಪಾರ ಹಾನಿಯಾಗಿವೆ. ಅರಣ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆ.

ಮುಖ್ಯಮಂತ್ರಿ ಮೀಟರ್ ತಿಳಿದುಕೊಳ್ಳಲು ಆರ್.ಟಿ.ಐ. ಮೊರೆ

ಬೆಂಗಳೂರು, ಸೆ.೨೮: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ದೇಹದ ಯಾವ ಭಾಗದಲ್ಲಿ ಮೀಟರ್ ಅಳವಡಿಸಲಾಗಿದೆ ಎಂದು ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಮಾಹಿತಿ ಕೋರಿರುವ ವಿಶಿಷ್ಟ ಸಂಗತಿಯೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ ೨೫ರಂದು ಮಂಡ್ಯ ನಗರದ ನಿವಾಸಿ ಸಿ.ಟಿ. ಮಂಜುನಾಥ ಎಂಬುವವರು ಜಿಲ್ಲಾಧಿಕಾರಿಯ ಮುಖೇನ ವಿಧಾನಸೌದದ ಮುಖ್ಯಮಂತ್ರಿಗಳ ಕಛೇರಿಗೆ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದಾರೆ. ಮಾನವನ ದೇಹದಲ್ಲಿ...

ಸುಳ್ಳುಸುದ್ದಿಗಳಿಗೆ ಕಿವಿಗೊಡಬೇಡಿ – ಕಾಗೇರಿ

ಶಿರಸಿ. ಅ.7. ಇಂದು ನಗರದ ಎಪಿಎಂಸಿ ರೈತ ಭವನದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ನಡೆದ ಜಾಲತಾಣ ಮಾಹಿತಿ ಕಾರ್ಯಾಗಾರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಮಾತನಾಡಿದ ಕಾಗೇರಿಯವರು, ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಅತ್ಯಧಿಕವಾಗಿ ಹರಡುತ್ತಲಿರುತ್ತವೆ, ಅದರಲ್ಲಿ ಸತ್ಯಾಸತ್ಯತೆ ಪರಾಮರ್ಶಿಸದೇ ನಂಬಬೇಡಿ ಎಂದರು. ಉತ್ತಮ ವಿಷಯಗಳನ್ನು ಎಂದಿಗೂ ತೆಗೆದುಕೊಳ್ಳಿ ಆದರೆ ಸುಳ್ಳುಸುದ್ದಿಗಳನ್ನು ನಿರ್ಲಕ್ಷಿಸಿ ಎಂದರು.

ಕದಂಬ ಮಾರ್ಕೆಟಿಂಗ್ ತೆಂಗಿನಕಾಯಿ ಖರೀದಿ ದರ

ಕದಂಬ ಮಾರ್ಕೆಟಿಂಗ್ ನ ಇಂದಿನ (12.09.17) ತೆಂಗಿನಕಾಯಿ ಖರೀದಿ ದರ : ತೆಂಗಿನಕಾಯಿ : ₹ 32/ಕೆ.ಜಿ ಬರಡುಕಾಯಿ : ₹ 25/ಕೆ.ಜಿ

ಕಾರವಾರ ಕಡಲಲ್ಲಿ ದಾಖಲೆಯ ಮೀನು ಬೇಟೆ

ಕಾರವಾರ, ಸೆ.೨೯: ಕಳೆದ ಒಂದು ತಿಂಗಳಿಂದ ಮೀನುಗಾರಿಕೆ ಇಲ್ಲದೆ ಕಂಗಾಲಾಗಿದ್ದ ಕಾರವಾರದ ಮೀನುಗಾರರಿಗೆ ಇಂದು ವಿಜಯ ದಶಮಿ ಕೊಡುಗೆ ಎಂಬಂತೆ ಬಂಪರ್ ಮೀನಿನ ಭೇಟೆಯಾಗಿದೆ. ನಗರದ ರವೀಂದ್ರನಾಥ ಟಾಗೋರ್ ಕಡಲತಡಿಯ ಸುಮಾರು ೩೦ಮೀ ಉದ್ದಕ್ಕೂ ಎಲ್ಲಿನೋಡಿದ್ರು ಮೀನೆ ಮೀನು, ಮೀನುಗಾರರು ಉತ್ಸಾಹದಿಂದ ಬಲೆಯಲ್ಲಿ ಮೀನನ್ನ ತುಂಬಿ ತುಂಬಿ ಸುಸ್ತಾದ್ರೆ ಇನ್ನೊಂದೆಡೆ ಸ್ಥಳಿಯರು ಕೂಡಾ ಪುಕ್ಸಟ್ಟೆ...

ಕಾರವಾರ ಶಾಸಕ ಸೈಲ್ ಬಿಜೆಪಿಗೆ ಇಲ್ಲ

ಕಾರವಾರ ಸೆ. ೧೨ : ಕಳೆದ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆ ಆಗಿದ್ದ ಕಾರವಾರ, ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್‌ ಇಂದು ಕಾರವಾರದ ಉಜ್ವಲ‌‌ಲಕ್ಷ್ಮೀ ಸಭಾಭವನದಲ್ಲಿ‌ ನಡೆದ ಬೂತ್ ಮಟ್ಟದ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೇಸ್ ಸೇರಿದ್ದಾರೆ ಈ ಮೂಲಕ ಸೈಲ್ ಬಿಜೆಪಿ ಸೇರುತ್ತಾರೆ ಎನ್ನುವ ಎಲ್ಲಾ ಉಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ತೂಗು ಸೇತುವೆ ಲೋಕಾರ್ಪಣೆ 

ಅಂಕೋಲಾ, ಸೆ.೨೩ : ಸುಂಕಸಾಳ ಡೋಂಗ್ರಿ ಗ್ರಾಮವನ್ನು ಸಂಪರ್ಕಿಸುವ ಸಾರ್ವಜನಿಕರ ಬಹುದಿನದ ಕನಸಾದ ಸುಮಾರು 1ಕೋಟಿ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ 125 ಮೀ. ಉದ್ದದ ತೂಗು ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಇಂದು ಉದ್ಘಾಟಿಸಿ ಸಾರ್ವಜನಿಕರ ಸಂಚಾರಕ್ಕೆ ಅರ್ಪಣೆ ಮಾಡಿದರು. ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಕರಾವಳಿ ಅಭಿವೃದ್ಧಿ ಪ್ರಧಿಕಾರದ...

ಬ್ರೇಕಿಂಗ್ ಅಪಘಾತ – ಸಾವು

ದಾವಣಗೆರೆ ಬ್ರೇಕಿಂಗ್ ಬೈಕ್ ಗೆ ಅಟೋ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌ ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಘಟನೆ. ಪ್ರತೀಕ್ (೨೨) ಸಾವನ್ನಪ್ಪಿದ ದುರ್ದೈವಿ. ಡಿಪ್ಲೊಮಾ ಓದುತ್ತಿದ್ದ ಮೃತ ಪ್ರತೀಕ್ ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಮೃತ ಯುವಕ ಹರಿಹರ ನಗರ ಠಾಣಾ ಪೋಲೀಸರು ಭೇಟಿ, ಪರಿಶೀಲನೆ

ಸಿದ್ದಾಪುರದಲ್ಲಿ ರಾಜ್ಯಮಟ್ಟದ ಸೆಮಿನಾರ್

ಸಿದ್ದಾಪುರ, ಸೆ.೨೮: ಪಟ್ಟಣದ ಎಂ.ಜಿ.ಸಿ. ಕಾಲೇಜಿನಲ್ಲಿ ಇಂದು ರಾಜ್ಯಮಟ್ಟದ ವಿಚಾರಸಂಕೀರಣ ಕಾರ್ಯಕ್ರಮವು ನಡೆಯಿತು. ಜಿ.ಎಸ್.ಟಿಯ ಅನುಕೂಲ ಮತ್ತು ಸವಾಲುಗಳ ಕುರಿತಾಗಿದ್ದ ಈ ಕಾರ್ಯಕ್ರಮದಲ್ಲಿ ಡಾ. ಶಶಿಭೂಷಣ ಹೆಗಡೆಯವರು ದೀಪಬೆಳಗಿಸಿ ಮಾತನಾಡಿದರು.

ಲಲಿತಾ ಭದ್ರಕಾಳಿ ದೇವಸ್ಥಾನ ಸ್ವರ್ಣವಲ್ಲೀ ಶ್ರೀ

ಶಿರಸಿ, ಅ.೬: ತಾಲೂಕಿನ ಸಾಲ್ಕಣಿ ಗ್ರಾಮದ ದೇವತೆಮನೆಯ ಶ್ರೀ ಲಲಿತಾ ಭದ್ರಕಾಳಿ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ “ವಾರ್ಷಿಕೋತ್ಸವ ಕಾರ್ಯಕ್ರಮ” ನಡೆಯಿತು. ಆ ಪ್ರಯುಕ್ತ ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ “ಶ್ರೀ ಚಂಡಿಯಾಗ ಹಾಗೂ ಶತರುದ್ರಾಭಿಷೇಕ,...

ಶಿರಸಿಯಲ್ಲಿ ರೋಷನ್ ಬೇಗ ವಿರುದ್ದ ದೂರು

ಶಿರಸಿ, ಅ೧೪: ಕಾಂಗ್ರೇಸ್ ಸರ್ಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ ಅವಾಚ್ಯ ಶಬ್ದಗಳಿಂದ , ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಖಂಡಿಸಿ ಶಿರಸಿ ಪೋಸ್ಟ ಸರ್ಕಲನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು.

ರಾಘವೇಶ್ವರರ ಭೇಟಿ ಮಾಡಿದ ಶಾಸಕಿ ಶಾರದಾ ಶೆಟ್ಟಿ

ಹೊನ್ನಾವರ, ಸೆ.೨೮: ಹೊನ್ನಾವರ ತಾಲ್ಲೂಕಿನ ಕೆಕ್ಕಾರದ ರಘೋತ್ತಮ ಮಠಕ್ಕೆ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಇಂದು ಭೇಟಿನೀಡಿ, ಗೋ ರಕ್ಷಣಾ ದೀಪ ಬೆಳಗಿಸಿ ಶ್ರೀ ರಾಘವೇಶ್ವರ ಶ್ರೀಗಳ ಆಶೀರ್ವಚನ ಪಡೆದುಕೊಂಡರು.

ನವರಾತ್ರಿಯ ಅಂಗವಾಗಿ ಬನವಾಸಿಯಲ್ಲಿ ವೈವಿಧ್ಯಮಯ ಸಾಂಸ್ಕ್ರತಿಕ ಸೌರಭ

ಇತಿಹಾಸ ಪ್ರಸಿದ್ಧ ಬನವಾಸಿಯಲ್ಲಿ ಶರನ್ನವರಾತ್ರಿಯ ಅಂಗವಾಗಿ 8 ನೇ ದಿನ ಆಹ್ವಾನಿತ ಕಲಾವಿದರಿಂದ ಭಕ್ತಿ ಸಂಗೀತ ಮತ್ತು ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಸೌರಭ ಸಂಭ್ರಮದಿಂದ ಸಾಗಿತು. ಮಧುಕೇಶ್ವರ ದೇವಾಲಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಪ್ರೊ| ಡಾ|| ಜಿ.ಎ ಹೆಗಡೆ, ಸೋಂದಾ ಎಲ್ಲರನ್ನೂ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಮತ್ತು ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮಕ್ಕೆ ಮುನ್ನುಡಿ...

ಕವಿ ಕಾವ್ಯ ಬಳಗದಿಂದ ಕವಿಗೋಷ್ಠಿ

ಶಿರಸಿ, ಸೆ.೨೯: ಇದೇ ಬರುವ ಅಕ್ಟೋಬರ್ ೨ನೇ ತಾರೀಖು, ಸೋಮವಾರ, ಮದ್ಯಾಹ್ನ. 4 ಘಂಟೆಗೆ, ಶಿರಸಿಯ ನೆಮ್ಮದಿ ಕುಠೀರದಲ್ಲಿ, ಕವಿ ಕಾವ್ಯ ಬಳಗದಿಂದ ಕವಿಗೋಷ್ಠಿ ನಡೆಯಲಿದೆ. ಖ್ಯಾತ ವಿಮರ್ಷಕರಾದ ಆರ್ ಡಿ ಹೆಗಡೆ ಆಲ್ಮನೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಜಯರಾಮ ಹೆಗಡೆ ಉಪಸ್ಥಿತರಿರುವರು.

ಸುವರ್ಣ ಮಹೋತ್ಸವದ ಪಥದಲ್ಲಿ ಗ್ರಾಮೀಣ ಶಿಕ್ಷಣ ಸಂಸ್ಥೆ

ಶಿರಸಿ, ಅ.೬: ಸನಾತನ ಧರ್ಮದ ವೇದ ಸಂಸ್ಕøತಿಯ ಹಿರಿಮೆಗರಿಮೆಗಳನ್ನು ಉಳಿಸಿ ಬೆಳೆಸುವ ದೃಷ್ಠಿಯಿಂದ ಸಾಲ್ಕಣಿಭಾಗದಲ್ಲಿ ತಮ್ಮ ವೈದಿಕ ವೃತ್ತಿಯಿಂದ ಮತ್ತುಸನ್ನಡತೆಯಿಂದ ಆದರ್ಶಪ್ರಾಯರಾದ ಶ್ರೀ. ವೆಂಕಟ್ರಮಣಉಪಾಧ್ಯಾಯರ ಸತ್‍ಸಂಕಲ್ಪದಿಂದ 1966 ರಲ್ಲಿ ಶ್ರೀ. ಲಕ್ಷ್ಮೀನರಸಿಂಹ ಶಿಕ್ಷಣ ಸಮಿತಿ ಎಂಬ ಶಿರೋನಾಮದ ಅಡಿಯಲ್ಲಿ ಶ್ರೀ.ಲಕ್ಷ್ಮೀ ನರಸಿಂಹ ಸಂಸ್ಕøತ ಪಾಠಶಾಲೆಯುಪ್ರಪ್ರಥಮವಾಗಿ ಅವರ ಸ್ವಗೃಹದಲ್ಲಿಯೇಪ್ರಾರಂಭಗೊಂಡಿತು. ಆ ಸಮಯದಲ್ಲಿ ವಿದ್ಯಾಪಾರಂಗತರಿಗೆ ಆಶ್ರಯ ನೀಡುವದರೊಂದಿಗೆ...

ರೈತರಿಗೆ ಅರ್ಜಿ ನೋಂದಾಯಿಸಲು ಕೋರಿಕೆ

ಶಿರಸಿ, ಸೆ. 28: 2017-18 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕಾ ಇಲಾಖೆಯ ಅನುಮೋದಿತ ಕಂಪನಿ/ಡೀಲರ್ ಗಳಿಂದ ಹನಿ ನೀರಾವರಿ ಅಳವಡಿಸುವ ರೈತರಿಗೆ ಶೇ. 90 ರ ಸಹಾಯಧನವನ್ನು 5 ಎಕರೆ ಕ್ಷೇತ್ರದವರೆಗೆ ಹಾಗೂ ಶೇ. 50 ರ ಸಹಾಯಧನವನ್ನು 5 ಎಕರೆ ಮೇಲ್ಪಟ್ಟು ಗರಿಷ್ಠ 12.5...

ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಶಿರಸಿ, ಅ.೬: ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ತುರ್ತು ಪಾಟ್‍ಹೆಡ್ (Poಣ ಊeಚಿಜ) ಬದಲಾಯಿಸುವ ಕೆಲಸವನ್ನು ಹಮ್ಮಿಕೊಂಡಿರುವ ಕಾರಣ 110/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಟ್ಟಣ ಮಾರ್ಗವಾದ ಶಿರಸಿ-2 11ಕೆ.ವಿ ಮಾರ್ಗದಲ್ಲಿ ದಿನಾಂಕ: 07.10.2017 ಶನಿವಾರ ದಂದು ಈ ದಿನ ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆ ವರೆಗೆ ಶಿರಸಿ-2 11ಕೆ.ವಿ...

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗೆ ಖಂಡನೆ

ಶಿರಸಿ, ಅ.೩: ಜನತಾದಳ ಜಾತ್ಯಾತೀತ , ನಗರ ಮತ್ತು ಗ್ರಾಮೀಣ ಘಟಕ ಸಿರಸಿ ಅವರಿಂದ ಡಾ|| ಶಶಿಭೂಶಣ ಹೆಗಡೆಯವರ ನೇತ್ರತ್ವದಲ್ಲಿ ದಿನಾಂಕ 03-10-2017 ಮಂಗಳವಾರದಂದು ಬೆಳಿಗ್ಗೆ 10 ಘಂಟೆಗೆ ಸಿರಸಿ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಬಿ,ಆರ್, ನಾಯ್ಕ, ಜಾತ್ಯಾತೀತ ಜನತಾದಳದ ಮುಖಂಡರು...

ಜೈನ ಮಠಕ್ಕೆ ಅನಂತಕುಮಾರ ಹೆಗಡೆಯವರ ಭೇಟಿ

ಶಿರಸಿ: ಸೆ. ೨೯: ದಿನಾಂಕ 30-09-2017 ರಂದು ಬೆಳಿಗ್ಗೆ ಜೈನ ಮಠದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಂತ್ರಿಗಳಾದ ಶ್ರೀ ಅನಂತ ಕುಮಾರ ಹೆಗಡೆ ಯವರು ಭಾಗವಹಿಸುವ ಕಾರ್ಯಕ್ರಮ ಹಾಗೂ ದಸರಾ ಆನೆ ಅಂಬಾರಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದ್ದು ಸಾರ್ವಜನಿಕರಿಗೆ ಆಮಂತ್ರಿಸಿದ್ದಾರೆ.

ಮಾರುತಿ ದೇವಾಲಯದಲ್ಲಿ ಇಂದು ರಾತ್ರಿ ಹತ್ತು ಗಂಟೆಗೆ ಸಂಗೀತಗಾರರಾದ ಮೆಹಬೂಬ ಭಜನೆ

ಶಿರಸಿ, ಸೆ. ೨೩: ಶಿರಸಿಯ ನಾಡಿಗಗಲ್ಲಿಯ ಶ್ರೀ ಮಾರುತಿ ದೇವಸ್ಥಾನದಲ್ಲಿ ೮೮ನೇ ವರ್ಷದ ಅಖಂಡ ಭಜನೆ ಕಾರ್ಯಕ್ರಮವು ಇಂದು ಮುಂಜಾನೆ ೬ ಗಂಟೆಯಿಂದ ಆರಂಭವಾಗಿದ್ದು ನಾಳೆ ಬೆಳಿಗ್ಗೆ ೬ ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ. ಈ ವರ್ಷದ ಭಜನಾ ಕಾರ್ಯಕ್ರಮದಲ್ಲಿ ಸ್ಥಳಿಯ ಭಕ್ತಿಗೀತೆ ಹಾಡುಗಾರರು, ಭಜನಾ ಮಂಡಳಿಯವರೊಂದಿಗೆ ವಿಶೇಷವಾಗಿ ಖಾಸಗಿ ಟಿವಿ ವಾಹಿನಿಯ ಸರಿಗಮಪ ಕಾರ್ಯಕ್ರಮ ಖ್ಯಾತಿಯ...

ಜಿಲ್ಲೆಯ ಹಲವೆಡೆ ಭಾರೀ ಮಳೆ ಸಾಧ್ಯತೆ

ಅಕ್ಟೋಬರ್ ೫ ರ ವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಒಳನಾಡು ಭಾಗಗಳಲ್ಲಿ ಭಾರೀ‌ಮಳೆ ಬೀಳಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಸಾಧಾರಣಕ್ಕಿಂತ ಕೊಂಚ ಉತ್ತಮ‌ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಮಳೆಯ ಅಗತ್ಯ ಅತ್ಯಧಿಕವಾಗಿದ್ದು, ಕಳೆದ ಮೂರು ವರ್ಷಗಳಿಂದ ನೀರಿಗಾಗಿ ಪರಿತಪಿಸುವ ಸ್ಥಿತಿ ಏರ್ಪಟ್ಟಿತ್ತು. ಮಳೆಯ ಪ್ರಮಾಣ ಅಧಿಕವಾಗಿ ಅಂತರ್ಜಲ...

ನೂತನ ಕಟ್ಟಡ ಉದ್ಘಾಟನೆ

ಹೊನ್ನಾವರ ಸೆ. ೨೩: ಹೊನ್ನಾವರದ ದಿ. ಶ್ರೀ ಮೋಹನ ಕೆ.ಶೆಟ್ಟಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ೨೪-೦೯-೨೦೧೭ ರವಿವಾರ ಸಂಜೆ ನಾಲ್ಕು ಗಂಟೆಗೆ ಕಾಲೇಜು ಆವಾರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ಬೃಹತ್ ಕೈಗಾರಿಕಾ ಸಚಿವರೂ ಆಗಿರುವ ಆರ್. ವಿ. ದೇಶಪಾಂಡೆ ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ...

ಸಂಧ್ಯಾ ಹೆಗಡೆಗೆ ಎಸ್ವಿ ಪ್ರಶಸ್ತಿ

ಶಿರಸಿ, 28: ಜನಶಕ್ತಿ ವಿಶ್ವಸ್ಥ ಮಂಡಳಿ (ಶಿರಸಿ) ಮತ್ತು `ಲೋಕಧ್ವನಿ’ ದಿನಪತ್ರಿಕೆ ನೀಡಲು ನಿರ್ಧರಿಸಿದ್ದ ಎಸ್.ವಿ.ಹೆಗಡೆ-ಹಾಸ್ಪುರ ಸ್ಮರಣಾರ್ಥದ `ಎಸ್ವಿ ಪ್ರಶಸ್ತಿ’ಯನ್ನು ಪ್ರಸಕ್ತ ವರ್ಷದಿಂದ ನೀಡಲು ಅಡಿಯಿಡಲಾಗಿದ್ದು ಪ್ರಪ್ರಥಮ ಪ್ರಶಸ್ತಿಗಾಗಿ`ಪ್ರಜಾವಾಣಿ’ಯ ಶಿರಸಿ ವರದಿಗಾರ್ತಿ ಸಂಧ್ಯಾ ಹೆಗಡೆ ಆಲ್ಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದೆ....

ಸಾಮಾಜಿಕ ಜಾಲತಾಣ ಮಾಹಿತಿ ಕಾರ್ಯಾಗಾರ

ಶಿರಸಿ, ಅ. ೫: ಉತ್ತರ ಕನ್ನಡ ಜಿಲ್ಲಾ ಯುವಮೋರ್ಚಾ ವತಿಯಿಂದ ದಿನಾಂಕ:07-10-2017 ಶನಿವಾರ ಬೆಳಿಗ್ಗೆ 11-00 ಗಂಟೆಗೆ ಶಿರಸಿಯ ಎ.ಪಿ.ಎಂ.ಸಿ ರೈತ ಭವನದಲ್ಲಿ ಒಂದು ದಿನದ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ ಕಾರ್ಯಾಗಾರ ವನ್ನು ಆಯೋಜಿಸಲಾಗಿದೆ. ಜಿಲ್ಲಾ ಯುವಮೋರ್ಚಾದ ಎಲ್ಲಾ ಸದಸ್ಯರಿಗೆ ಮತ್ತು ಮಹಿಳಾ ಮೊರ್ಚಾದ ಪ್ರಮುಖರಿಗೆ ಹಾಗೂ...

9 ನೇ ದಿನದ ವಿಶೇಷ ಪುಷ್ಪಾಲಂಕಾರ ಶೋಭಿತೆ ಶ್ರೀ ಮಾರಿಕಾಂಬಾ ದೇವಿ

ಶಿರಸಿ : ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು 9 ನೇ ದಿನವೂ ಕೂಡಾ ವಿಶೇಷ ಪುಷ್ಪಾಲಂಕಾರ ಮಾಡಲಾಗಿದ್ದು, ದೇವಸ್ಥಾನದ ಸಭಾ ಮಂಟಪದ ಹಾಲ್‍ನಲ್ಲಿ ಕೂಡಾ ವಿಶೇಷವಾದ ಅಲಂಕಾರವನ್ನು ಮಾಡಿದ್ದು ಭಕ್ತರನ್ನು ಆಕರ್ಷಿಸುತ್ತಿದೆ. ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುತ್ತಿದ್ದು ...

ಜನಾಕರ್ಷಣೆಯಲ್ಲಿ ಬನವಾಸಿಯ ಬೃಹತ್ ರಂಗೋಲಿ

ಬನವಾಸಿ,ಸೆ.28:ಐತಿಹಾಸಿಕ ಪ್ರಸಿದ್ಧ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ವಾರ್ಷಿಕ ಶರನ್-ನವರಾತ್ರಿ ಉತ್ಸವದ ಪ್ರಯುಕ್ತ ದೇವಸ್ಥಾನದ ನೃತ್ಯ ಮಂಟಪದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬೃಹತ್ ರಂಗೋಲಿಯನ್ನು ಸ್ಥಳಿಯರಾದ ಪೂರ್ಣಿಮಾ ಅರವಿಂದ ಶೆಟ್ಟಿಯವರು ತಮ್ಮ ಪುತ್ರಿಯಾದ ಕು. ಗೌರಿಯವರೊಂದಿಗೆ ಸೆ.25ರಂದು ರಚಿಸಿದ 'ಅರ್ಧನಾರೀಶ್ವರ' ರಂಗೋಲಿಯು ಶ್ರೀ ದೇವಸ್ಥಾನಕ್ಕೆ ಆಗಮಿಸುತ್ತಿರುವ ಎಲ್ಲ ಭಕ್ತರ-ಪ್ರವಾಸಿಗರ ಮನಗೆದ್ದು ಪ್ರಶಂಸೆಗೆ...

​ಕಾರವಾರ ಕಡಲ ತೀರದಲ್ಲಿ ಅನ್ಯಗ್ರಹ ಜೀವಿಗಳು

ಕಳೆದ ಶನಿವಾರ ಕಾರವಾರ ಸಮುದ್ರ ತೀರದಲ್ಲಿ ಚಾಪೆಲ್ ವಾರ್ ಶಿಪ್ ಮ್ಯೂಸಿಯಂ ಬಳಿ ನಸುಕಿನಲ್ಲಿ ಅನ್ಯಗ್ರಹ ಜೀವಿಗಳು ಸುತ್ತಾಡುತ್ತಿದ್ದವು. ಬೆಳಿಗ್ಗೆ ೬.೩೦ ರ ಸುಮಾರಿಗೆ ಜೋರಾಗಿ ಮಳೆ ಬೀಳುತ್ತಿತ್ತು. ಅದರ ಜೊತೆಗೆ ಮೋಡ ಕವಿದು ಇನ್ನೂ ಕತ್ತಲೆಯ ವಾತಾವರಣವೇ ಇತ್ತು. ಅಂತಹ ಸಂಧರ್ಭದಲ್ಲಿ ವಾಯು ವಿಹಾರಕ್ಕೆ ಬಂದ ಕೆಲ ಜನ ಕುತೂಹಲದಿಂದ ಸಮೀಪ ಹೋಗಿ...

ಹಳೇ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ

ಕುಮಟಾ, ಸೆ.೨೫: ಕುಮಟಾ ತಾಲೂಕಿನ ಹೆಗಡೆಯ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಯ ಹಳೆಯ ವಿದ್ಯಾರ್ಥಿಗಳ ಸಂಘ ರವಿವಾರ ಅಸ್ತಿತ್ವಕ್ಕೆ ಬಂದಿತು. ಕಲಿತ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಅಭಿಮಾನದಿಂದ ದೊಡ್ಡ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸಭೆಗೆ ಪಾಲ್ಗೊಂಡಿದ್ದರು. ಧೀರೂ ಶಾನಭಾಗರವರನ್ನು ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸ್ವಚ್ಛತೆಯ ಕೊರತೆಯಲ್ಲಿ ಯಲ್ಲಾಪುರ 

ಯಲ್ಲಾಪುರ ಸೆ.೨೦: ಯಲ್ಲಾಪುರದ ತರಕಾರಿ ಮಾರುಕಟ್ಟೆ ಅನೈರ್ಮಲ್ಯದ ಗೂಡಾಗಿದೆ.ದನಗಳ ಹಾಗೂ ಹಂದಿಗಳ ಬೀಡಾಗಿದೆ. ಇಲ್ಲಿ ಶೌಚಾಲಯ ಇದ್ದೂ ಗಬ್ಬೆದ್ದು ನಾರುತ್ತಿದೆ. ಇದರ ಸ್ವಚ್ಚತೆ ಕಾಪಾಡುವ ಹೊಣೆ ಹೊತ್ತಿರುವ "‍‍ಪಟ್ಟಣ ಪಂಚಾಯತ ಕಾರ್ಯಾಲಯ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯವರಿಗೆ ಇದರ ಚಿಂತೆಯೇ ಇಲ್ಲ; ಯಾಕೆಂದರೆ ಅವರು ಇರುವ ಸ್ಥಳಕ್ಕೆ ಇಲ್ಲಿ ಏಳುವ ಗಬ್ಬು...

ಲಿಂಗದಕೋಣ ಕಲ್ಯಾಣಮಂಟಪದಲ್ಲಿ  ಮಲೆನಾಡು ಮೇಳ

ಜ್ಯೂನ್ ೨೧ರಂದು  ಶಿರಸಿಯ ಲಿಂಗದಕೊಣ ಕಲ್ಯಾಣಮಂಟಪದಲ್ಲಿ ಒಂದು ದಿನದ ಮಲೆನಡು ಮೇಳ ಹೊಮ್ಮಿಕೊಳ್ಳಲಾಗಿದೆ. ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಗಳಿದ್ದು ಅಭಿರುಚಿಕರು ಭಾಗವಹಿಸಬಹುದಾಗಿದೆ.

ನದಿಯಾದ ರಸ್ತೆ

ಸಿದ್ದಾಪುರ. ಅ. ೬. ಶಿರಳಗಿಯಲ್ಲಿ ಇಂದು ಬಂದ ಭಾರೀ ಮಳೆಗೆ ರಸ್ತೆ ನದಿಯಾಗಿ ಮಾರ್ಪಟ್ಟ ಸಂದರ್ಭ. ಚರಂಡಿಗಳು ಹೂಳು ತುಂಬಿ ರಸ್ತೆ ತುಂಬೆಲ್ಲ ಹರಿದ ನೀರಿನಿಂದಾಗಿ ವಾಹನ ಸವಾರರು ಕಷ್ಟಪಡಬೇಕಾಯಿತು.

ಕುದಿವ ಎಣ್ಣೆಯಿಂದ ವಡೆ ತೆಗೆವ ಹರಕೆ

ಕುಮಟಾ, ಅ.೬: ತಾಲೂಕಿನ ಮಾವಿನಕುರ್ವಾ ನವದುರ್ಗಾ ದೇವಾಲಯದಲ್ಲಿ ಪ್ರತಿವರ್ಷವೂ ನವರಾತ್ರಿಯ ನಂತರದ ಹುಣ್ಣಿಮೆಯಂದು ವಿಶಿಷ್ಟ ಸಂಪ್ರದಾಯವೊಂದು ಆಚರಣೆಯಲ್ಲಿದೆ. ಪ್ರತೀತಿಯಂತೆ ನೆನ್ನೆ ಹುಣ್ಣೆಮೆ ದಿನ ನಡೆದ ಕುದಿಯುವ ಎಣ್ಣೆಯಿಂದ ವಡೆ ತೆಗೆಯುವ ಸೇವೆ ಯಶಸ್ವಿಯಾಗಿ ನಡೆಯಿತು. ೩ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ರಾಜ್ಯ, ಪರರಾಜ್ಯಗಳಿಂದ ಭಾಗವಹಿಸಿದ್ದರು.

ಸೋಂದಾ ಇತಿಹಾಸ ಸಮ್ಮೇಳನಕ್ಕೆ ವಿಶ್ವವಲ್ಲಭರಿಂದ ಶುಭಾಶೀರ್ವಾದ

ಶಿರಸಿ, ಅ.೧: ಸ್ವಾದಿ ಜೈನಮಠದಲ್ಲಿ ಇದೇ ಬರುವ ಅಕ್ಟೋಬರ್ ೭ ಮತ್ತು ೮ ರಂದು ನಡೆಯಲಿರುವ ರಾಜ್ಯಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಂಘಟನೆಯ ಒಂದು ಭಾಗವಾಗಿರುವ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಶ್ರೀಪಾಗಳವರು ಶುಭಾಶೀರ್ವಾದದ ಹಾರೈಕೆಯೊಂದಿಗೆ ಕೊಡುಗೆ ನೀಡಿದರು.ಕಾರ್ಯಕ್ರಮವು ಸರ್ವಾಂಗ ಸುಂದರವಾಗಿ ಮೂಡಿಬಂದು ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

ಮನೆ‌ಮನೆಗೆ ಕಾಂಗ್ರೆಸ್ – ಅಭಿಯಾನದಲ್ಲಿ ಭೀಮಣ್ಣ ನಾಯ್ಕ

ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜೀಬಳದಲ್ಲಿ "ಮನೆ ಮನೆಗೆ ಕಾಂಗ್ರೆಸ್" ಅಭಿಯಾನ ಕಾರ್ಯಕ್ರಮಕ್ಕೆ ಡಿಸಿಸಿ ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕರವರು ಚಾಲನೆ ನೀಡಿದರು‌. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಕರ್ನಾಟಕ ಮಹಾ ಜನತೆಗೆ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಕರ್ನಾಟಕವನ್ನು ಭಾರತದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವನ್ನಾಗಿಸಿ ಶೋಷಿತರು,ಅವಕಾಶ ವಂಚಿತರು,ನೊಂದವರಿಗೆ ಧನಿಯಾಗಿ ಸಾಮಾಜಿಕ ನ್ಯಾಯದ...

1.21 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವಶ

ಕಾರವಾರ: ಇಲ್ಲಿನ ಅಬಕಾರಿ ಇಲಾಖೆ ಪೊಲೀಸರು ಕಾರ್ಯಾಚರಣೆ ಮೂಲಕ 21 ಚೀಲಗಳಲ್ಲಿ ತುಂಬಿಸಿಟ್ಟಿದ್ದ 1.21 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ, 30 ಸಾವಿರ ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ಸುವರ್ಣ ನಾಯ್ಕ ನೇತೃತ್ವದಲ್ಲಿ ತಾಲೂಕಿನ ಹೋಟೆಗಾಳಿ ಗ್ರಾಮದ ಬಳಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯ ವಶಕ್ಕೆ...

ದಸರಾ ಉತ್ಸವ; ಸನ್ಮಾನ, ಪ್ರತಿಭಾ ಪುರಸ್ಕಾರ

ಗೋಕರ್ಣ, ಸೆ.೨೮: ದಸರಾ ಉತ್ಸವದ ಪ್ರಯುಕ್ತ ಶ್ರೀ ಯುವಶಕ್ತಿ ಯುವಕಸಂಘ ಬಂಕಿಕೊಡ್ಲ ಮತ್ತು ಸಾರ್ವಜನಿಕ ದಸರಾ ಉತ್ಸವ ಸಮಿತಿ ಬಂಕಿಕೊಡ್ಲ ಇವರ ಆಶ್ರಯದಲ್ಲಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಂಕಿಕೊಡ್ಲದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಿನಕರ ಶೆಟ್ಟಿ ಹಾಗೂ...

ರಾಜ್ಯ ಮಟ್ಟದ ಯೋಗ- ನಾಗಶ್ರೀ ದ್ವಿತಿಯ

ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದ ನಾಗಶ್ರೀ ಮುರಳಿ ನಾಯಕ ಅವರಿಗೆ ಯೋಗದಲ್ಲಿ ರಾಜ್ಯಮಟ್ಟದಲ್ಲಿ ದ್ವಿತಿಯ ಸ್ಥಾನ ಪ್ರಾಪ್ಥವಾಗಿದೆ. ನಾಗಶ್ರೀಯ ಈ ಸಾಧನೆಗೆ ಪಾಲಕರು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕೈ-ಕೈ ಮಿಲಾಯಿಸುವ ಹಂತದಲ್ಲಿ ಕೈಕಾರ್ಯಕರ್ತರು

ಕಾರವಾರ ಸೆ.೧೨: ನಗರದ ಉಜ್ವಲ ಲಕ್ಷ್ಮಿ ಸಭಾಭವನದಲ್ಲಿ ನಡೆದ ಕಾರವಾರ ಹಾಗು ಅಂಕೋಲಾ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಸೈಲ್ ಹಾಗೂ ಕೆ.ಪಿ.ಸಿ.ಸಿ ಕಾರ್ಯದರ್ಶಿ ಗೋಪಾಲ ನಾಯಕ ಅವರ ಅಭಿಮಾನಿಗಳ ಮಧ್ಯೆ ಭುಗಿಲೆದ್ದಿತು ಬಣ ರಾಜಕೀಯ. ಈ ವಿದ್ಯಮಾನ ಕಾಂಗ್ರೇಸ್ ನಾಯಕರಿಗೆ ಮುಜುಗರ ಉಂಟುಮಾಡಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುವ...

ಸ್ವರ್ಣವಲ್ಲಿಯಲ್ಲಿ ಮಾತೆಯರ ಸಮಾವೇಶ

ಶಿರಸಿ, ಅ.೪: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸುಧರ್ಮ ಸಭಾಭವನದಲ್ಲಿ ಅಕ್ಟೋಬರ 6 ಶುಕ್ರವಾರದಂದು ಮಾತೆಯರ ಸಮಾವೇಶ ನಡೆಯಲಿದೆ. ಬೆಳಗ್ಗೆ 9.30 ಘಂಟೆಯಿಂದ ಮಾತೆಯರಿಂದ ಭಗವದ್ಗೀತೆ ಪಠಣ ಹಾಗೂ ಸೌಂದರ್ಯಲಹರೀ ಪಾರಾಯಣ ನಡೆಯಲಿದೆ. 10.30 ಘಂಟೆಗೆ ಉದ್ಘಾಟನೆಗೊಳ್ಳಲಿದ್ದು, ಡಾ|| ಶ್ರೀಮತಿ ಆರತಿ ವಿಬಿ, ಅಧ್ಯಕ್ಷರಾಗಿ ಶ್ರೀ ವಿ.ಎನ್ ಹೆಗಡೆ ಬೊಮ್ನಳ್ಳಿ, ಅತಿಥಿಗಳಾಗಿ ಡಾ|| ಶ್ರೀಮತಿ...

ನರ್ತಿಸುತ್ತಲೇ ಶಿರಸಿಗೆ ಬರಬೇಕೆನ್ನುವ ಹೊಸ ನಿಯಮ ಜಾರಿ

ಶಿರಸಿ, ಅ. 3: ಉತ್ತರಕೋರಿಯಾದ ಸರ್ವಾಧಿಕಾರಿ ಕಿಮ್ ಜುಂಗ್ ನ ಬಗ್ಗೆ ನೀವು ಕೇಳಿರಬಹುದು. ಆತನ ದೇಶದಲ್ಲಿ ಅವನ ಪ್ರತಿಮೆಯ ಮುಂದೆ ಸಾಗುವಾಗಲೆಲ್ಲಾ ವಾಹನ ಸವಾರರು ವಾಹನವನ್ನು ನಿಧಾನವಾಗಿ ಚಲಿಸಬೇಕೆಂಬ ನಿಯಮ ಜಾರಿಯಲ್ಲಿದೆಯಂತೆ. ಆ ಅಧಿಕೃತ ನಿಯಮದಂತೆ ನಮ್ಮ ಶಿರಸಿಯಲ್ಲಿಯೂ ಹೊಸತೊಂದು ಅನಧಿಕೃತ ನಿಯಮವು ಜಾರಿಯಾಗಿದೆ. ಬಯಲುಸೀಮೆಯಿಂದ ಶಿರಸಿಗೆ ಬರುವವರೆಲ್ಲರೂ ಕೆಲವಾರು ತಿಂಗಳುಗಳಿಂದ ತಪ್ಪದೇ...

ಕುಮಟಾದಲ್ಲಿ ಹೆಚ್ಚಾದ ದಟ್ಟಣೆಯ ಕಿರಿಕಿರಿ

ಕುಮಟಾ, ಸೆ.೨೮: ದಿನ ಕಳೆದಂತೆ ಕುಮಟಾದಲ್ಲಿ ಟ್ರಾಪಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪೋಲೀಸ್ ಇಲಾಖೆ ಮತ್ತು ತಾಲೂಕ ಆಡಳಿತವು ಟ್ರಾಪೀಕ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲೇ ಬೇಕಾದ ಜರೂರತ್ತಿದೆ. ಪಟ್ಟಣದ ಸುಭಾಷ ರೋಡ್, ಕುಂಬೇಶ್ವರ ರೋಡ್, ಗುಡಿಗಾರಗಲ್ಲಿಗಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದು ಜನರಲ್ಲಿ ಬೇಸರ ಹುಟ್ಟಿಸಿದೆ. ಕುಮಟಾದ...

ರೂಪಾಲಿ ನಾಯ್ಕ ಅವರಿಗೆ ಪಕ್ಷದಲ್ಲಿ ಪದೋನ್ನತಿ

ಕಾರವಾರ, ಅ.೮: ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯೆ ಆಗಿರುವ ಕಾರವಾರ ಅಂಕೋಲಾ ಕ್ಷೇತ್ರದ ನಿಷ್ಠಾವಂತೆ ಧುರೀಣೆ, ರೂಪಾಲಿ ನಾಯ್ಕ ಅವರಿಗೆ ರಾಜ್ಯ ಬಿಜೆಪಿ ನಾಯಕರು, ಉತ್ತರಕನ್ನಡ ಜಿಲ್ಲೆಯ ಮಹಿಳಾ ಮೋರ್ಚಾದ ಸಂಘಟನೆಯ ಹೊಣೆಗಾರಿಕೆ ನೀಡುವ ಮೂಲಕ ಪದೋನ್ನತಿ ನೀಡಿದ್ದಾರೆ. ಕಾರವಾರ, ಅಂಕೋಲಾ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಿಜೆಪಿ ದಿನವೂ ತನ್ನ...

ಜಿಲ್ಲೆಯ ಪುತ್ರನೀಗ ಭಾರತದ ಅತಿ ಕಿರಿಯ ಅಧಿಕಾರಿ

ಕಾರವಾರ, ಸೆ.೨೮: ದೇಶದ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿನ CF ಹಂತದ ಅಧಿಕಾರಿಯಾಗಿ ಭಾರತ ಸರ್ಕಾರದಿಂದ ನೇಮಕಗೊಂಡಿರುವ IFS ಅಧಿಕಾರಿಯಾಗಿ ನಮ್ಮ ಉತ್ತರಕನ್ನಡದ ಎ.ಟಿ ದಾಮೋದರ ನಾಯ್ಕ ಕಾರ್ಯನಿರ್ವಹಿಸಲಿದ್ದಾರೆ. ಅವರು ಕೇರಳದ ಕೊಚ್ಚಿನ್ ಮತ್ತು ಕವರತ್ತಿಯ ಆಡಳಿತ ಕಛೇರಿಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ಎ.ಟಿ ದಾಮೋದರ ನಾಯ್ಕರವರು ಗೋವ ರಾಜ್ಯದಲ್ಲಿ 3 ವರ್ಷಗಳ...

ನಮ್ಮನ್ನಗಲಿದ ಮಾರಿಗುಡಿ ಮಾಜಿ ಅಧ್ಯಕ್ಷರು

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾಜಿ ಅಧ್ಯಕ್ಷರು ಹಾಗೂ ಈಗಿನ ಧಮ೯ದಶಿ೯ಗಳಾದ ಶ್ರೀ ವಿ ಯು ಪಟಗಾರ ಅವರು ವಿಧಿವಶರಾಗಿದ್ದಾರೆ

ಮದ್ಯಪಾನದ ಕುರಿತಾಗಿ ಜನರಲ್ಲಿ ಜಾಗೃತಿ ಕಾರ್ಯಕ್ರಮ

ಶಿರಸಿ, ಸೆ.೨೮: ಅಕ್ಟೋಬರ್ ೧ರ ಮಧ್ಯರಾತ್ರಿಯಿಂದ ಅಕ್ಟೋಬರ್ ೨ರ ಮಧ್ಯಾಹ್ನ ೨ಗಂಟೆಯವರೆಗೆ ಗಾ‌ಂಧಿಜಯಂತಿ ಪ್ರಯುಕ್ತ ಉಪವಾಸ ಮೌನಧರಣಿ ತಹಶೀಲ್ದಾರ ಕಛೇರಿಯ ಎದುರು ಹಮ್ಮಿಕೊಳ್ಳಲಾಗಿದೆಯೆಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಪ್ರೆಸ್ ಮೀಟ್ ನಲ್ಲಿ ಮದ್ಯಪಾನ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. ಮಾದಕ ದ್ರವ್ಯ ಹಾಗೂ ಮದ್ಯಪಾನದ ಕುರಿತಾಗಿ ಜನರಲ್ಲಿ...

ಶರನ್ನವರಾತ್ರಿ ಪ್ರಯುಕ್ತ ಬಿಲ್ವಪತ್ರೆ ಸಸಿ ವಿತರಣೆ

ಬನವಾಸಿ, ಸೆ ೨೮: ಶರನ್ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಏಳನೇ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ದೇವುಳದ ಅಧ್ಯಕ್ಷ ರಾಜಶೇಖರ ಒಡೆಯರ ಅಧ್ಯಕ್ಷತೆಯಲ್ಲಿ ದಯಾನಂದ ಮಂಗಳೂರು ಉದ್ಘಾಟಿಸಿದರು. ಕಮಿಟಿಯ ಪ್ರಧಾನ ಕಾರ್ಯದರ್ಶಿ, ಧರ್ಮದರ್ಶಿ ಡಾ. ಜಿ.ಎ. ಹೆಗಡೆ, ಸೋಂದಾ, ಕಮಿಟಿಯ ರಾಜಶೇಖರ ಒಡೆಯರ್, ಶಿವಾನಂದ ದೀಕ್ಷಿತ್, ಡಾ. ಜಿ.ಎ ಹೆಗಡೆ ಸೊಂದಾ, ಮಂಗಲಾ ದಾವಣಗೇರಿ ಬಿಲ್ವಪತ್ರೆ...

ಅಂತರಾಷ್ಟ್ರೀಯ ಮಟ್ಟದ ಕೊಂಕಣಿ ಭಾಷಾ ಸಮ್ಮೇಳನ

ಮಂಗಳೂರು, ಸೆ.೨೮: ರಾಷ್ಟ್ರೀಯ ಮಾನ್ಯತೆಯ ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತವಾಗಿ ಕೊಂಕಣಿ ಅಕಾಡೆಮಿಯು ಒಂದು ಮಹತ್ವದ ಕಾರ್ಯಕ್ರಮವಾಗಿ ಅಂತರಾಷ್ಟ್ರೀಯ ಮಟ್ಟದ ಕೊಂಕಣಿ ಭಾಷಾ ಸಮ್ಮೇಳನವನ್ನು ಮುಂದಿನ ಜನವರಿ 2018ರಲ್ಲಿ ಆಯೋಜಿಸಲು ನಿರ್ಧರಿಸಿದೆ. ಈ ಬಗ್ಗೆ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಆರ್.ಪಿ.ನಾಯ್ಕರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ವರ್ಷಾಚರಣೆಯ ಪೂರ್ವ ಭಾವಿ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಿದರು. ಈ...

ಮಾರಕಾಸ್ತ್ರಗಳಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

ದಾಂಡೇಲಿ, ಸೆ.೨೩: ತನ್ನ ಅಪ್ತಾಪ್ತ ಮಗಳನ್ನು ಚುಡಾಯಿಸಿದ ಹುಡುಗನಿಗೆ ಬೈದು ಬುದ್ದಿ ಮಾತು ಹೇಳಿದ ತಂದೆಯ ಮೇಲೆಯೇ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಾಯಿಸಲೆತ್ನಿಸಿದ ಘಟನೆ ದಾಂಡೇಲಿಯ ಮಾರುತಿನಗರದಲ್ಲಿ ನಡೆದಿದೆ. ಟೌನ್‍ಶಿಪ್‍ನ ವಾಸಿಂ ಸಲಿಂ ಶೇಖ ಎಂಬವರೇ ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದು, ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಎಸ್.ಡಿ.ಎಮ್. ಆಸ್ಪತ್ರೆಗೆ ಸಾಗಿಸಲಾಗಿದೆ. ವಾಸಿಂ ಸಲಿಂ ಶೇಖ್...

ಸ್ವರ್ಣವಲ್ಲಿಯಲ್ಲಿ ಸಡಗರದ ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರತಿನಿತ್ಯದಂತೆ ಸಂಜೆ ೬.೩೦ಘಂಟೆಯಿಂದ ಶ್ರೀ ಸೋಂದಾ ಸುಧರ್ಮಾ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಿದ್ದು, ಆಕಾಶವಾಣಿಯ ಬ್ರಿಗೇಡ್ ಕಲಾವಿದೆಯಾದ...

M R ಬ್ರದರ್ಸ್ ವತಿಯಿಂದ ಸ್ವಚ್ಛತಾಕಾರ್ಯ

ಶಿರಸಿ, ಅ.೮: ಶಿರಸಿಯ ಎಂ.ಆರ್.ಬ್ರದರ್ಸ್ ಸಂಘಟನೆಯವರು ಪ್ರತಿ ರವಿವಾರ ಒಂದು ಏರಿಯಾವನ್ನು ಸ್ವಚ್ಛಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ವಾರ ಮುಂಜಾನೆ ೬ ರಿಂದ ೯ ರವರೆಗೆ ನಗರದ ಅಯ್ಯಪ್ಪನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದರು.ಇಷ್ಟ ಇದ್ದವರು ತಮ್ಮೊಂದಿಗೆ ಕೈ ಜೋಡಿಸಬಹುದು ಎಂದು M R ಬ್ರದರ್ಸ್ ಅಧ್ಯಕ್ಷರು ಪಯ್ಯೂ ಚೌಟಿ ಹಾಗೂ ಶಿರಸಿ...

ಮಾಹಿತಿ ತಂತ್ರಜ್ಞಾನ ಘಟಕ ಉದ್ಘಾಟನೆ

ಶಿರಸಿ, ಸೆ.೨೯: ಅಕ್ಟೋಬರ್- 01-2017 ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಆರಾಧನಾ ಸಭಾಂಗಣ, ಹೊಟೆಲ್ ಮಧುವನದಲ್ಲಿ ಮಾಹಿತಿ ತಂತ್ರಜ್ಞಾನ ಘಟಕದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷರಾದ ಬಿ.ಆರ್. ನಾಯ್ಕ, ಯುವ ಮುಖಂಡರಾದ ಡಾ|| ಶಶಿಭೂಶಣ ಹೆಗಡೆ, ಕುಮಟಾ ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯ್ಕ, ನ್ಯಾಯವಾದಿ ರವೀಂದ್ರ ನಾಯ್ಕ,...

ಉದಯೋನ್ಮುಖ ಉದ್ಯಮಿಯಾಗಿ ಗಣಪತಿ ಜೋಗಳೇಕರ

ಶಿರಸಿ.ಅ.೬: ಉದ್ಯಮದಲ್ಲಿ ಸಾಧಿಸಿದ ಯಶಸ್ಸಿಗೆ ಹಾಗೂ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಶಿರಸಿಯ ಗಣಪತಿ ಜೋಗಳೇಕರ ಅವರಿಗೆ “ಉದಯೋನ್ಮುಖ ಉದ್ಯಮಿ” ಗೌರವ ಪ್ರಶಸ್ತಿಯನ್ನು ವಾಲ್ಮೀಕಿ ಜಯಂತಿಯಂದು ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ, ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದೆಹಲಿಯ ಸುಮಾನಾಕ್ಷರ...

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಇಸಳೂರು ಶಾಲಾ ಮಕ್ಕಳು

ಶಿರಸಿ, ಸೆ. 28: ಯಲ್ಲಾಪುರದಲ್ಲಿ ಜರುಗಿದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಇಸಳೂರಿನ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಯಕ್ತಿಕ ಆಟಗಳಲ್ಲಿ ರಾಜ್ಯ ಮಟ್ಟದ ಕ್ರೀಡೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕುಮಾರ ಆಕಾಶ ಕಮರೂರು ಪೋಲ್ ವಾಲ್ಟ, ಕುಮಾರಿ ಲೀಲಾವತಿ 3000 ಮೀ ಓಟದಲ್ಲಿ, ಕುಮಾರಿ ಮಮತಾ...

ಹೊಸ ಪ್ರತಿಭೆಗಳ ರಂಗಪ್ರವೇಶ

ಶಿರಸಿ, ಸೆ.೨೯: ಶಿರಸಿಯ ತೋಟಗಾರರ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ ೧ರ ಸಂಜೆ ೫.೩೦ ಕ್ಕೆ ಕು. ನಿಧಿ ಸ್ವಾದಿ ಮತ್ತು ಕು. ನಿರೀಕ್ಷಾ ಸ್ವಾದಿಯವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವಿದೆ. ಇವರು ವಿದೂಷಿ ಸೀಮಾ ಭಾಗ್ವತರ ಶಿಷ್ಯೆಯರಾಗಿದ್ದಾರೆ.

 ಸೆ.30 ರಂದು ದಾಂಡೇಲಪ್ಪಾ ಜಾತ್ರೆ

ದಾಂಡೇಲಿ, ಸೆ.೨೭ : ಇದೇ ಬರುವ ಸೆಪ್ಟೆಂಬರ್ 30 ಶನಿವಾರದಂದು ವಿಜಯ ದಶಮಿಯ ದಿನ ದಾಂಡೇಲಿಯ ಜಾಗೃತ ದೇವರಾದ ದಾಂಡೇಲಪ್ಪಾ ದೇವರ ಜಾತ್ರೆ ನಗರದ ಸಮೀಪದ ಕೆರವಾಡ ಗ್ರಾಮದಲ್ಲಿ ಜರುಗಲಿದೆ. ಭಕ್ತಾದಿಗಳು ಜಾತ್ರೆಗೆ ಆಗಮಿಸಿ ದೇವರ ಅನುಗ್ರಹಕ್ಕೆ ಪಾತ್ರರಾಬೇಕೆಂದು ದೇವಸ್ಥಾನದ ಕಮಿಟಿಯ ಪರವಾಗಿ ಅರ್ಚಕರಾದ, ಗೋಪಾಲ ಅರ್ಜುನ ಮಿರಾಶಿ, ಮಾಜಿ ಜಿಲ್ಲಾ ಪಂಚಾಯತ್...

ರಾಜ್ಯಮಟ್ಟಕ್ಕೆ ಮೂರೂರಿನ ವಿದ್ಯಾರ್ಥಿಗಳು

ಕಾರವಾರ. ಅ. ೬. ಪ್ರಗತಿ ವಿದ್ಯಾಲಯ ಮೂರೂರಿನ ವಿದ್ಯಾರ್ಥಿಗಳು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನೃತ್ಯ ಸಂಯೋಜನೆ ಮಾಡಿದ್ದ ಮಾಯಾ ನಾಯ್ಕ ಅವರಿಗೆ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕವೃಂದ ಹಾಗೂ ಆಡಳಿತ ಮಂಡಳಿ ಶುಭಕೋರಿದರು.

ಕಾದಂಬರಿ ಸ್ಪರ್ಧೆಗೆ ಆಹ್ವಾನ

ಕುಮಟಾ, ಅ.೧: ಸ್ವಸ್ತಿ ಪ್ರಕಾಶನವು ಹೊಸ ಕಾದಂಬರಿಕಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ರಾಜ್ಯ ಮಟ್ಟದ ಕಾದಂಬರಿ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಇದುವರೆಗೆ ಒಂದೂ ಕಾದಂಬರಿ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಹೊರಬಂದಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನ್ನಿಸಿದ ಸುಮಾರು ೧೪೦ರಿಂದ ೧೮೦ ಪೇಜ್ (ಪಾಂಟ್ ಸೈಜ್ 12)...

ರಸ್ತೆ ಅವ್ಯವಸ್ಥೆ ಸರಿಪಡಿಸಲು ಜಯ ಕರ್ನಾಟಕ ಸಂಘಟನೆಯಿಂದ ಆಗ್ರಹ

ಅಂಕೋಲಾ, ಸೆ.೨೯ : ಪಟ್ಟಣದ ಜಿ.ಸಿ. ಕಾಲೇಜಿನ ಕಾಮತ ಪ್ಲಸ್ ಎದುರಿನ ತೀವ್ರ ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ನಿರ್ಮಿಸಿಕೊಡುವಂತೆ ಜಯ ಕರ್ನಾಟಕ ತಾಲೂಕಾ ಘಟಕದ ಪಧಾಧಿಕಾರಿಗಳು ಆಗ್ರಹಿಸಿ, ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ರಾಜು. ಡಿ. ನಾಯ್ಕ, ಉಪಾಧ್ಯಕ್ಷ ಅಮರ ಜೆ. ಬಂಟ, ಮೋಹನ ಎಸ್. ಜೋಷಿ, ಕಾರ್ಯದರ್ಶಿ...

ಇಟ್ಟಿಗೆ ಲಾರಿ ಪಲ್ಟಿ – ಕ್ಲೀನರ್ ಬಲಿ

ಅಂಕೋಲಾ, ಅ.೩ : ತಾಲೂಕಿನ ಸುಂಕಸಾಳ ಸಮೀಪ ಇಟ್ಟಿಗೆ ತುಂಬಿದ್ದ ಲಾರಿ ಪಲ್ಟಿಯಾದ ದುರ್ಘಟನೆ ಇಂದು ಮುಂಜಾನೆ ಸಂಭವಿಸಿದೆ. ಈ ಅಪಘಾತದಲ್ಲಿ ಲಾರಿ ಕ್ಲೀನರ್ ಶರೀಫ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ಕಲಘಟಗಿಯಿಂದ ಅಂಕೋಲಾಕ್ಕೆ ಬರುತ್ತಿತ್ತು. ಸ್ಥಳಕ್ಕೆ ಹೆದ್ದಾರಿ ಗಸ್ತು ವಾಹನ ಆಗಮಿಸಿದ್ದು ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ಮುಂಡಗೋಡ, ಅ.೫: ಮುಂಡಗೋಡ ತಾಲೂಕಿನ ಚವಡಳ್ಳಿ ಪಂಚಾಯತ್ ವ್ಯಾಪ್ತಿಯ ಲಕ್ಕೋಳಿ ಗ್ರಾಮದ ಮುಖ್ಯ ರಸ್ತೆಯ ಕಾಡಿನ ಪ್ರದೇಶದಲ್ಲಿ ಸೆ.೨೪ರಂದು ನಡೆದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ೨೦ರ ಹರೆಯದ ಸಂದೀಪ ವಡ್ಡರನನ್ನು ಶಿಗ್ಗಾಂವ ತಾಲೂಕಿನ ಅಂದಲಗಿ ಗ್ರಾಮದ ಮೌನೇಶ್ವರ ವಡ್ಡರ (೨೬)ಕೊಲೆ ಮಾಡಿದ್ದನು. ಡಿ.ಎಸ್.ಪಿ ನಾಗೇಶ ಶೆಟ್ಟಿ ಮಾರ್ಗದರ್ಶದಲ್ಲಿ ಪಿ.ಆಯ್ ಕಿರಣಕುಮಾರ ನಾಯಕ...

ಸೋನಾರವಾಡ ದಾಂಡಿಯಾ ವೀಕ್ಷಿಸಿದ ರೂಪಾಲಿ ನಾಯ್ಕ್

ದಾಂಡೇಲಿ, ಸೆ.೨೮: ನಗರದ ಸೋನಾರವಾಡದಲ್ಲಿ ನವರಾತ್ರಿಯ ವಿಶೇಷವಾಗಿ ಆಯೋಜಿಸಿದ ದಾಂಡಿಯಾ ಕಾರ್ಯಕ್ರಮದ ಏಳನೇ ದಿನವಾದ ನಿನ್ನೆ ಬಿ.ಜೆ.ಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯೆ ಶ್ರೀಮತಿ ರೂಪಾಲಿ ನಾಯ್ಕ ಮುಖ್ಯ ಅತಿಥಿಯಾಗಿ ಆಗಮಿಸಿದರು. ಬಳಿಕ ಜಗನ್ಮಾತೆ ದುರ್ಗಾಪರಮೇಶ್ವರಿಯ ದರ್ಶನ ಪಡೆದು ಕೆಲಕಾಲ ದಾಂಡಿಯಾ ನೃತ್ಯ ವೀಕ್ಷಣೆ ಮಾಡಿದರು.

ಪುಷ್ಪಾಲಂಕ್ರತ ಭೂದೇವಿ

ಕಾರವಾರ: ಸೆ. ೩೦. ಕಾರವಾರದ ಅಮದಳ್ಳಿಯ ಭೂದೇವಿ ದೇವಸ್ಥಾನದಲ್ಲಿ ವೈವಿದ್ಯಮಯ ಅಲಂಕಾರದಿಂದ ಶೋಭಿಸುತ್ತಿರುವ ಭೂದೇವಿ

ಹಲ್ಲೆ ಖಂಡಿಸಿ ಮನವಿ ಅರ್ಪಣೆ

ದಾಂಡೇಲಿ, ಸೆ.೨೭: ನಗರದ ಮಾರುತಿನಗರದಲ್ಲಿ ಸೆ.22 ರಂದು ವಿನಾಕಾರಣ ಒಬ್ಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಗುಂಪಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.ವೈ.ಎಪ್.ಐ, ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಾರುತಿನಗರ 6 ನೇ ವಾರ್ಡಿನ ನಾಗರಿಕರು ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಲಿಖಿತ ಮನವಿಯ ಮೂಲಕ...

ಕುಮಟಾ ಪೊಲೀಸ್ ಠಾಣೆಯಲ್ಲಿ ವೈಭವದ ಆಯುಧಪೂಜೆ

ಕುಮಟಾ, ಸೆ.೨೯: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನವರಾತ್ರಿಯ ಪ್ರಯುಕ್ತ ಈ ದಿನದಂದು ಆಯುಧ ಪುಜೆ ನೆರವೇರಿಸಲಾಯಿತು.

ಈ ಬಾರಿ ಅದ್ದೂರಿ ರಾಮಲೀಲೋತ್ಸವ ಆಚರಣೆ

ದಾಂಡೇಲಿ, ಸೆ.೨೬ : ಜಿಲ್ಲೆಯಲ್ಲಿಯೆ ಅತ್ಯಂತ ಎತ್ತರವಾದ ರಾವಣ, ಕುಂಭಕರ್ಣ ಮತ್ತು ಮೇಘನಾಥ ಮೂರ್ತಿಗಳನ್ನು ಒಳಗೊಂಡ ದಸರಾ ಹಬ್ಬವನ್ನು ಎಂದಿನಂತೆ ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಈ ವರ್ಷವು ಅದ್ದೂರಿಯಿಂದ ನಡೆಸಲಿದೆ. ಸೆಪ್ಟೆಂಬರ್ 30 ರಂದು ಬೆಳಿಗ್ಗೆ 9 ಘಂಟೆಯಿಂದಲೆ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ರಾಮಲೀಲೋತ್ಸವದ ಜೊತೆ ಜೊತೆಯಲ್ಲಿಯೆ ಡಿಲಕ್ಸ್ ಮೈದಾನದಲ್ಲಿ...

ಮುಂಬಡ್ತಿ ಮೀಸಲಾತಿಗಾಗಿ ಮೌನ ಪ್ರತಿಭಟನೆ

ದಾಂಡೇಲಿ, ಸೆ.೨೭ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿಯನ್ನು ಕೂಡಲೇ ಆದೇಶಿಬೇಕೆಂದು ಆಗ್ರಹಿಸಿ ಆದಿ ಜಾಂಬವಂತ ಸಂಘ, ನವಚೈತನ್ಯ ಜನಸೇವಾ ಸಂಘಟನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ದಾಂಡೇಲಿ ಘಟಕದ ಆಶ್ರಯದಲ್ಲಿ ನಗರದ ಸೋಮಾನಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿ ನಂತರ ವಿಶೇಷ ತಹಶೀಲ್ದಾರ್ ಕಚೇರಿಯ ಗೌಡಪ್ಪ...

ರಾಜ್ಯ ಮಟ್ಟದ ಸಮ್ಮೇಳನಕ್ಕೆ ಜಿಲ್ಲೆಯವರ ನಿರಾಸಕ್ತಿ

ಶಿರಸಿ, ಅ೮: ತಾಲೂಕಿನ ಸೋಂದಾ ಜೈನ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಇತಿಹಾಸ ಸಮ್ಮೇಳನ ಅಭೂತಪೂರ್ವವಾಗಿ ನಡೆಯಿತು. ಆದರೆ ಶಿರಸಿ ತಾಲೂಕಿನ ಮತ್ತು ಉತ್ತರಕನ್ನಡ ಜಿಲ್ಲೆಯ ಜನರ ನಿರಾಸಕ್ತಿಗೆ ಕಾರ್ಯಕ್ರಮ ಸಾಕ್ಷಿಯಾಯಿತು. ನಮ್ಮ ತಾಲೂಕಿನ ಮತ್ತು ಜಿಲ್ಲೆಯ ಜನರಿಗಿಂತ ರಾಜ್ಯದ ವಿವಿಧೆಡೆಯಿಂದ ಜನರು ಹುಡುಕಿಕೊಂಡು ಬಂದಿದ್ದರು. ಅವರಿಗಿದ್ದ ಇತಿಹಾಸ ಕಾಳಜಿ ಇಲ್ಲಿಯವರಲ್ಲಿ ಕಂಡುಬರಲಿಲ್ಲ. ಸತತ ನಾಲ್ಕನೇ...

ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ‘ಆಘನಾಶಿನಿ’

ಅಶ್ವಿನಿ ಕುಮಾರ ಭಟ್ ನಿರ್ದೇಶನದಲ್ಲಿ ರೂಪುಗೊಂಡಿರುವ 40 ನಿಮಿಷದ ಸಾಕ್ಷ್ಯ ಚಿತ್ರ ‘ಅಘನಾಶಿನಿ’ ಅಮೇರಿಕಾದ ಕೊಲೊರಾಡೋ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್ ನ "ಎಕ್ಸಲೆನ್ಸ್ ಪ್ರಶಸ್ತಿ" ಆದಿಯಾಗಿ ಈ ವರೆಗೆ ಒಟ್ಟೂ ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ಎರಡೂವರೆ ವರ್ಷಗಳ ಅವಧಿಯಲ್ಲಿ ಸಿದ್ಧಗೊಂಡಿರುವ ಈ ಸಾಕ್ಷ್ಯ...

ಸೆ. ೨೯ರಂದು ಯಡಳ್ಳಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ

ಶಿರಸಿ, ಸೆ.೨೭: ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಕೌಶಲ್ಯಾಭಿವೃದ್ಧಿ ಸಚಿವರಾದ ತಿಂಗಳ ಒಳಗೆ ಶಿರಸಿ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಯಡಳ್ಳಿ ಗ್ರಾಮದಲ್ಲಿ ಕೌಶಲ್ಯ ಮತ್ತು ಉದ್ಯೋಗ ತರಬೇತಿಯ ಉಚಿತ ಕೇಂದ್ರ ಸ್ಥಾಪಿಸಿರುವುದು ಜನರಲ್ಲಿ ಹರ್ಷದ ಭಾವನೆ ಮೂಡಿಸಿದೆ. ಇದೇ ಬರುವ ಸೆಪ್ಟೆಂಬರ್ ೨೯, ಶುಕ್ರವಾರ ೧೨.೩೦ಕ್ಕೆ ಯಡಳ್ಳಿಯಲ್ಲಿ ಕೌಶಲ್ಯ ಕೇಂದ್ರದ ಉದ್ಘಾಟನೆ...

ಬಾರದ ಅಧಿಕಾರಿಗಳು, ರದ್ದಾದ ಇಂದಿನ ಸಭೆ  

ಮುಂಡಗೋಡ, ಸೆ.೨೭: ಸಾರ್ವಜನಿಕರ ಅಹವಾಲು ಆಲಿಸಿ ಕುಂದುಕೊರತೆಗಳ ನಿವಾರಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ ತೋರುವುದು ಸರಿಯೆ? ನಿಗದಿಯಾದ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿ, ಸಕಾರಣವನ್ನೂ ನೀಡದೆ ಇದ್ದಂತಹ ಘಟನೆ ಇಂದಿಲ್ಲಿ ನಡೆದಿದೆ. ಗ್ರಾಮಸಭೆ ಪ್ರಯುಕ್ತ ನೋಡಲ್ ಅಧಿಕಾರಿ,ಪಿಡಿಒ, ಗ್ರಾ.ಪಂ ಅಧ್ಯಕ್ಷೆ,ಸೇರಿದಂತೆ ಪಂಚಾಯತ್ ಸದಸ್ಯರು ಗ್ರಾಮಸ್ಥರು ಸೇರಿದ್ದರು. ಅಧಿಕಾರಿಗಳಿಗಾಗಿ 10.30 ರಿಂದ 12 ಗಂಟೆಯವರಿಗೆ ಕಾದರೂ ಅಧಿಕಾರಗಳು...

ಯುನಿವರ್ಸಿಟಿ ಬ್ಲೂ ಆಗಿ ಚೇತನ ಭಂಡಾರಿ

ಶಿರಸಿ, ಸೆ.29: ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ಗಣಪತಿ ಹೆಗಡೆ, ಗಣೇಶ ಹೆಗಡೆ, ಶಶಿಕಾಂತ ಮೊಗೇರ, ಸಂತೋಷ ಮರಾಠ, ಚೇತನ ಭಂಡಾರಿ ಭಾಗವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಚೇತನ ಭಂಡಾರಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾರೆ. ವಿದ್ಯಾರ್ಥಿಗಳ...

ದೇವಿಮನೆ ಘಟ್ಟ ತಿರುವಿನಲ್ಲಿ ಅಪಘಾತ

ಕುಮಟಾ, ಸೆ.೨೮: ಇಂದು ಮಧ್ಯಾಹ್ನ 12 ಘಂಟೆಯ ಸುಮಾರಿಗೆ ಶಿರಸಿ-ಕುಮಟಾ ರಸ್ತೆಯಲ್ಲಿನ ದೇವಿಮನೆ ಘಟ್ಟದ ಕೊನೆಯ ತಿರುವಿನಲ್ಲಿ ಓಮಿನಿ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓಮಿನಿ ಚಾಲಕನಿಗೆ ಪೆಟ್ಟಾದ ಬಗ್ಗೆ ವರದಿಯಾಗಿದೆ.

ಧನಲಕ್ಷ್ಮೀ ರೀಟೇಲ್ಸ್ ಶುಭಾರಂಭ

ಶಿರಸಿ, ಸೆ.೨೫: ಶಿರಸಿಯ ಕುಮಟಾ ರಸ್ತೆಯಲ್ಲಿ ಇಂದು ಧನಲಕ್ಷ್ಮಿ ರೀಟೇಲ್ಸ್ ಪ್ರೈವೇಟ್ ಲಿಮಿಟೆಡ್ ಮಳಿಗೆಯು ವಿದ್ಯುಕ್ತವಾಗಿ ಆರಂಭವಾಯಿತು. ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಗೃಹಬಳಕೆಯ ಎಲ್ಲಾ ವಸ್ತುಗಳೂ ಇಲ್ಲಿ ಲಭ್ಯವೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಶವ ಪತ್ತೆ

ದಿನಾಂಕ 08-10-2017 ರಂದು ಯಲ್ಲಾಪುರ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನೂರು ಫಾಲ್ಸ್ ಗೆ ಹೋಗಿದ್ದ 1) ಕಿಗನ್ ವಿನೋದ ಪರ್ನಾಂಡಿಸ್ 21 ವರ್ಷ ಕಾಳಮ್ಮನಗರ ಯಲ್ಲಾಪುರ ಹಾಗೂ 2) ಸಿಲ್ವನ್ ಲಾರೆನ್ಸ್ ಪರ್ನಾಂಡಿಸ್ 17 ವರ್ಷ ಗಣಪತಿಗಲ್ಲಿ ಯಲ್ಲಾಪುರ ಇವರು ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿದ್ದು ಇಂದು ಇಬ್ಬರ ಶವ ಪತ್ತೆಯಾಗಿದ್ದು...

ನೂತನ ಅಧ್ಯಕ್ಷರ ಆಯ್ಕೆ

ಕಾರವಾರ, ಅ.೫: ಶಿರಸಿ ಮೂಲದ ವಕೀಲರಾದ ಶ್ರೀಮತಿ ರಾಜೇಶ್ವರಿ ಕೆ.ಬಿ ಇವರನ್ನು ಮಕ್ಕಳ ಕಲ್ಯಾಣ ಸಮಿತಿ ಕಾರವಾರದ ಅಧ್ಯಕ್ಷರಾಗಿ ನೇಮಿಸಲಾಗಿದೆ.

​ಕಾರವಾರದ ದೇವಾಲಯಗಳ ಆವರಣದಲ್ಲಿ ಪಹರೆಯ ಸ್ವಚ್ಚತೆ

ಕಾರವಾರ: ಕಳೆದ ಸುಮಾರು ಮೂರು ವರ್ಷಕ್ಕೆ ಸಮೀಪ ಸ್ವಚ್ಚತೆಯನ್ನ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಪಹರೆ ವೇದಿಕೆ ಈ ವರ್ಷದ ಮಳೆಗಾಲದಲ್ಲಿ ದೇವಾಲಯಗಳ ಆವರಣವನ್ನ ಸ್ವಚ್ಚಗೊಳಿಸಿ ಭಕ್ತಾದಿಗಳ ಪ್ರಶಂಸೆಗೆ ಕಾರಣವಾಗುತ್ತಿದೆ.. ಪ್ರತಿ ಶನಿವಾರ ಮುಂಜಾನೆಯಲ್ಲಿ ಕಾರವಾರದ ನೂರಾರು ಕಾರ್ಯಕರ್ತರ ಸಹಯೋಗದೊಂದಿಗೆ ಪಹರೆಯ ಈ ಅಭಿಯಾನ ನಿರಂತರವಾಗಿ ಮುನ್ನಡೆಯುತ್ತಿದೆ. ಕಳೆದ ವಾರ ನಗರದ ಬಾಡದಲ್ಲಿರುವ ಪ್ರಸಿದ್ದ ಮಹಾದೇವಸ್ಥಾನದಲ್ಲಿ ಸ್ವಚ್ಚತೆಯನ್ನ ಪಹರೆ...

ಅಲೆಗೆ ಕೊಚ್ಚಿಹೋದ ಬಾಲಕರ ಶವ ಪತ್ತೆ

ಭಟ್ಕಳ: ಅ. ೩. ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳಿಗೆ ಕೊಚ್ಚಿ ಹೋಗಿದ್ದ ಬಾಲಕರಿಬ್ಬರು ಶವವಾಗಿ ಪತ್ತೆಯಾದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗಣೇಶ ನಾಯ್ಕ(೧೦), ವಿನಾಯಕ ನಾಯ್ಕ(೧೪) ಮೃತ ದುರ್ದೈವಿಗಳು. ಸೋಮವಾರ ಸಮುದ್ರದಲ್ಲಿ ವೇಳೆ ಅಲೆಗಳಿಗೆ ಸಿಕ್ಕು ಕೊಚ್ಚಿ ಹೋಗಿದ್ದರು. ತಡರಾತ್ರಿ ಹುಡುಕಾಟ ನಡೆಸಿದರೂ ಇಬ್ಬರ ಸುಳಿವು ಸಿಕ್ಕಿರಲಿಲ್ಲ.ಮಂಗಳವಾರ ಬೆಳಿಗ್ಗೆ...

ಸೇವಾ ಸಹಕಾರ ಸಂಘದ ಕ್ರಾಂತಿಕಾರಿ ಹೆಜ್ಜೆ

ಶಿರಸಿ, ಅ 5: ಭೈರುಂಬೆ ಸಹಕಾರ ಸಂಘವು ತನ್ನ ಸದಸ್ಯರಿಗೆ ಆಕಸ್ಮಿಕವಾಗಿ ಉಂಟಾಗುವ ಪ್ರಾಕೃತಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಸಂಗ್ರಹಿಸುತ್ತಿರುವ ಸಂಕಷ್ಟ ಪರಿಹಾರ ನಿಧಿ ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಎಂ.ಇ.ಎಸ್‍ ಕಾಲೇಜ್ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಪಿ ಶೆಟ್ಟಿ...

ದೈವಾಧೀನವಾದ ಶ್ರೀ ಮಾರಿಕಾಂಬಾ ದೇವಸ್ಥಾನದ ಹಳೆಯ ಪಟ್ಟದ ಕೋಣ

ಶಿರಸಿ.೧೯ : ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 1996 ನೇ ಇಸ್ವಿಯಿಂದ 22 ವರ್ಷಗಳ ಕಾಲ ಸಾಂಪ್ರದಾಯಿಕವಾಗಿ ಭಕ್ತಾದಿಗಳಿಗೆ ದರ್ಶನ ನೀಡಿ ಕಳೆದ 3 ವರ್ಷಗಳ ಹಿಂದೆ ಪಟ್ಟವಿಳಿಸಿಕೊಂಡಿದ್ದ 25 ವರ್ಷ ವಯಸ್ಸಿನ ಕೋಣ ಇಂದು ಬೆಳಗಿನ ಜಾವ ದೈವಾಧೀನವಾಯಿತು. 1930 ರಲ್ಲಿ ಕೋಣನ ವಧೆ ಪಧ್ದತಿಯು ರದ್ದುಗೊಂಡ ನಂತರದಲ್ಲಿ ಪಟ್ಟವೇರಿದ 5 ನೇ ಕೋಣ ಇದಾಗಿದ್ದು...

ಅಪಘಾತದಲ್ಲಿ ಹೆಬ್ಬಾವು ಸಾವು

ಸಿದ್ಧಾಪುರ, ಅ.೧೩: ನಿನ್ನೆ ಸಾಯಂಕಾಲ ೫ -೩೦ ರ ಸಮಯದಲ್ಲಿ ಸಿದ್ದಾಪುರದ ನಿಡಗೊಡು ಬಳಿ ರಸ್ತೆ ಯಲ್ಲಿ ವಾಹನದ ಚಕ್ರಕ್ಕೆ ಸಿಲುಕಿ ಹೆಬ್ಬಾವು ಸತ್ತ ಬಗ್ಗೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಾಹನಕ್ಕೆ ಸಿಕ್ಕಿ ಹೆಬ್ಬಾವು ಸತ್ತ ಪ್ರಕರಣ ಇದೇ ಮೊದಲು.

ಸ್ವರ್ಣವಲ್ಲೀ ಶರನ್ನವರಾತ್ರಿ ಉತ್ಸವ ಪ್ರಾರಂಭ

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನವರಾತ್ರಿ ಉತ್ಸವವು ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ, ದೇವತಾ ಪ್ರಾರ್ಥನೆಗಳು ಶ್ರೀ ಶ್ರೀಗಳವರ ಸಮ್ಮುಖದಲ್ಲಿ ಹಾಗೂ ಪುರೋಹಿತರಾದ ಕೃಷ್ಣ ಜೋಶಿ, ಚಿನ್ಮಯ ಜೋಶಿ, ಆಸ್ಥಾನ ವಿದ್ವಾಂಸರಾದ ಭಾಲಚಂದ್ರ ಶಾಸ್ತ್ರೀಗಳು ಇವರ ಉಪಸ್ಥಿತಿಯೊಂದಿಗೆ ಆರಂಭವಾಯಿತು. ಯಜಮಾನರಾಗಿ ಮಂಜುನಾಥ ಮಣಿಗಾರ ದಂಪತಿಗಳು ಪಾಲ್ಗೊಂಡರು. ಬೆಳಗ್ಗೆ ಶ್ರೀಚಕ್ರಾರ್ಚನೆ,...

ಯಲ್ಲಾಪುರ ಸಮಸ್ಯೆಗೆ ಪ್ರತಿಭಟನೆ

ಯಲ್ಲಾಪುರ, ಸೆ.೨೫: ಯಲ್ಲಾಪುರ ಪಟ್ಟಣ ಪಂಚಾಯತಿಯ ಸಮಸ್ಯೆಗಳ ಕುರಿತು ಕೆಲದಿನಗಳ ಹಿಂಗೆ ಈ ನಿಮ್ಮ Sirsi.Info ದಲ್ಲಿ ಮಾಹಿತಿ ನೀಡಲಾಗಿದ್ದನ್ನು ನೀವು ಓದಿದ್ದೀರಿ. ಈ ಯಲ್ಲಾಪುರ ಪಟ್ಟಣ ಪಂಚಾಯತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇಂದು ಯಲ್ಲಾಪುರದಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭ್ಯಾವ್ಯ ಜೆಡಿಎಸ್ ಅಭ್ಯರ್ಥಿ ರವೀಂದ್ರ ನಾಯ್ಕ ತಮ್ಮ...

ರವೀಂದ್ರ ನಾಯ್ಕ ಫೇಸ್ ಬುಕ್ ಪೋಸ್ಟ್ ಗೆ ಜಾಲತಾಣಿಗರ ತರಾಟೆ

ಸೆ.೧೫- ಈ ಬಾರಿಯ ಯಲ್ಲಾಪುರ ಮುಂಡಗೋಡ ವಿಧಾನಸಭೆಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿತವಾಗಿರುವ ವಕೀಲ ರವೀಂದ್ರ ನಾಯ್ಕ ಅವರು ನೆನ್ನೆ (ಸೆ.೧೪) ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ಮೋದಿ ಯೋಜನೆಗಳ ಕುರಿತಾದ ಪೋಸ್ಟ್ ಹಾಕಿದ್ದರು. ಇದಕ್ಕೆ ಜಾಲತಾಣಿಗಳು ಸರಿಯಾಗಿ ವಿರೋಧಿಸಿ ಕಾಮೆಂಟ್ ಹಾಕಿದ್ದಾರೆ. ಇಂತಹ ಪೋಸ್ಟುಗಳು ತಮ್ಮಂತವರಿಗೆ ಶೋಭೆ ತರುವಂಥದ್ದಲ್ಲ ಎಂದು ಬಹುತೇಕರು...

ಕದಂಬ ಮಾರ್ಕೆಟಿಂಗ್ – ವಾರ್ಷಿಕ ಸರ್ವ ಸಾಧಾರಣ ಸಭೆ

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು 2016-17 ನೇ ಆರ್ಥಿಕ ವರ್ಷದಲ್ಲಿ ₹1783309/- ರಷ್ಟು ನಿವ್ವಳ ಲಾಭ ಗಳಿಸಿದ್ದು ಸುಮಾರು 15 ಕೋಟಿ ರೂಪಾಯಿಗಳ ವಹಿವಾಟು ನಡೆಸಲಾಗಿದೆ.ಸದಸ್ಯರ ಪಾಲುಧನದ ಮೇಲೆ ಶೇಕಡಾ 10 ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಲಾಭದ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇಕಡಾ 36 ರಷ್ಟು ಹೆಚ್ಚಾಗಿದ್ದು ಒಟ್ಟೂ ಶೇರು...

ಶೆಡ್ಡಿನಲ್ಲಿದ್ದ ಬೈಕುಗಳು ಭಸ್ಮ

ಕಾರವಾರ, ಅ.೩: ಕಿಡಿಗೇಡಿಗಳು ಬೆಂಕಿಹಚ್ಚಿರುವ ಘಟನೆಯಿಂದ ನಗರದ ಎಂಜಿ ರಸ್ತೆಯಲ್ಲಿರುವ ಭೂ ಮಾಪನ ಇಲಾಖೆಯ ಶೆಡ್ಡಿನಲ್ಲಿ ನಿಲ್ಲಿಸಿಟ್ಟಿದ್ದ ಸುಮಾರು ೯ ಬೈಕ್ ಗಳು ಬೆಂಕಿಗಾಹುತಿಯಾಗಿದೆ. ಸೀಬರ್ಡ್ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ತೆರಳುವ ಸ್ಥಳೀಯರು ಇದೇ ಶೆಡ್ ನಲ್ಲಿ ಪ್ರತಿದಿನ ಬೈಕ್ ಇಟ್ಟು ತೆರಳುತ್ತಿದ್ದರು. ಆಗ ಕೆಲವರು ಬಂದು ಅವರ ಬೈಕುಗಳಿಂದ ಪೆಟ್ರೋಲ್ ಅನ್ನು ಕದಿಯುತ್ತಿದ್ದರು. ಆದರೆ ತಡರಾತ್ರಿ...

ಹೆಚ್ಚು ಕಾಮೆಂಟಗಳು

ಮಾಳಿಗೆ ಕುಸಿತ – ಕಾರ್ಮಿಕ ಸಾವು

ಭಟ್ಕಳ: ಅ. ೫. ನಿರ್ಮಾಣ ಹಂತದಲ್ಲಿದ್ದ ಮನೆಯ ಮಾಳಿಗೆ ಕುಸಿದು ಕಾರ್ಮಿಕನ ಸಾವು ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಾರ್ಗದ್ದೆಯಲ್ಲಿ ಈ ಘಟನೆ ನಡೆದಿದೆ. ಭಟ್ಕಳದ ಮಾರುಕೇರಿಯ ಲೋಕೇಶ್ 24 ಮೃತ...

ಹಾಟ್ ನ್ಯೂಸ್