ಶಿರಸಿ ಅಡಿಕೆಗೆ ಹಿರಿಮೆ, ಶಿರಸಿ ಸುಪಾರಿ ಎಂದು ಭೌಗೋಳಿಕ ಸನ್ನದು ನೊಂದಣಿಯಿಂದಾಗಿ ಹೊಸ ಇತಿಹಾಸಕ್ಕೆ ಮುನ್ನುಡಿಯಾಗಿದೆ.

ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರಗಳಲ್ಲಿ ಅಡಿಕೆಯನ್ನು ಸಾಂಪ್ರದಾಯಿಕವಾಗಿ ಬೆಳೆಯುತ್ತಾರೆ. ಮೂಲ ಉಗಮಸ್ಥಾನದ ಉಣಮಟ್ಟವನ್ನು ಆಧರಿಸಿ ಭೌಗೋಳಿಕ ಸನ್ನದು ನೊಂದಣಿ ಮಾಡಲಾಗುತ್ತದೆ. ಇದೊಂದು ರಾಷ್ಟ್ರಮಟ್ಟದ ನೊಂದಣಿಯಾಗಿದ್ದು, ಅಡಿಕೆಗೆ ರಾಷ್ಟ್ರಮಟ್ಟದಲ್ಲಿ ಹಿರಿಮೆ ದೊರಕಿದಂತಾಗಿದೆ.

ಈ ವ್ಯವಸ್ಥೆ 2003 ರಿಂದ ಜಾರಿಗೆ ಬಂದಿದ್ದು, ಜಾಗತಿಕ ಉತ್ಪನ್ನಗಳ ಪೈಪೋಟಿಯಿಂದಾಗಿ, ಜಗತ್ತಿನ ಎಲ್ಲ ದೇಶಗಳು ವಿವಿಧ ಉತ್ಪನ್ನಗಳನ್ನು ಮಾತುಕಟ್ಟೆಗೆ ಪರಿಚಯಿಸುತ್ತವೆ. ಇದರ ಮೂಲ‌ಸ್ಥಾನ ಹಾಗೂ ಉತ್ಕೃಷ್ಟ ಗುಣಮಟ್ಟವನ್ನು ಗುರುತಿಸಿ ಅದಕ್ಕೊಂದು ಉತ್ತಮ ಸ್ಥಾನ ನೀಡಲಾಗುತ್ತದೆ. ಈ ನೊಂದಣಿಯನ್ವಯ ದೇಶದಲ್ಲಿ 325 ಉತ್ಪನ್ನಗಳು ಹಾಗೂ ಕರ್ನಾಟಕದ 39 ಉತ್ಪನ್ನಗಳು ನೊಂದಣಿಯಾಗಿವೆ.

ಇದರ ನೊಂದಣಿಯನ್ನು ಶಿರಸಿಯ ಪ್ರತಿಷ್ಟಿತ ಸಂಸ್ಥೆಯಾದ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ನೊಂದಣಿಮಾಡಿಸಿದ್ದು ಇದರಿಂದ ಶಿರಸಿ ಹಾಗೂ ಸುತ್ತಲಿನ ಅಡಿಕೆ ಬೆಳೆಗೆ ಉತ್ತಮ ಬೇಡಿಕೆ ಬರಲಿದೆ. ಕಳಪೆ ಅಡಿಕೆಗೆ ಸೆಡ್ಡು ಹೊಡೆದು ಉತ್ತಮ ಗುಣಮಟ್ಟದ ಅಡಿಕೆಗಳು ದೊರಕಲಿವೆ.

ಇದು ಶಿರಸಿಗರಿಗೆ ಹೆಮ್ಮೆಯ ವಿಷಯವಾಗಿದ್ದು, ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ