ಕರ್ನಾಟಕದ ವಿಶಿಷ್ಟ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ. ಪ್ರಾಕೃತಿಕ ಸೌಂದರ್ಯ ಹೊದ್ದು ಹಾಸಿರುವ ಈ ಸೊಬಗಿನ ನಾಡು, ಜನಾಕರ್ಷಣೆಯ ಕೇಂದ್ರಬಿಂದು. ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಯನ್ನು ಹೊಂದಿರುವ ಏಕೈಕ ಜಿಲ್ಲೆ ಉತ್ತರ ಕನ್ನಡ. ವಿಶಾಲವಾದ ಕರಾವಳಿ ಜಲಚರಗಳ ಬೀಡು. ಮಲೆನಾಡ ಸೊಬಗನ್ನು ಬಣ್ಣಿಸಲೋದರೆ ಜೀವನವೇ ಮುಗಿದೀತೆ ಹೊರತು ಪೂರ್ಣವಿರಾಮ ನೀಡಲಾಗದು. ಇನ್ನು ಬಯಲು ಸೀಮೆಯ ಹಾಗೂ ಅಲ್ಲಿನ ಜನರ ಹೃದಯ ವೈಶಾಲ್ಯತೆ ವಿವರಿಸಲಸಾಧ್ಯ.

ಇಂತಹ ವೈವಿಧ್ಯ ಬಹುಶಃ ರಾಜ್ಯದಲ್ಲಿ ಮತ್ತೆಲ್ಲೂ ಕಾಣಸಿಗದು. ಸುಂದರವಾದ ಕರಾವಳಿ ತಟಗಳು ಬೇಸಿಗೆ ಮಳೆಯೆನ್ನದೇ ತನ್ನತ್ತ ಕೈಬೀಸಿ ಕರೆಯುತ್ತದೆ. ಭಟ್ಕಳದಿಂದ ಕಾರವಾರದ ತನಕ ಅನೇಕಾನೇಕ ಬೀಚ್ ಗಳು ಜನಾಕರ್ಷಣೆಗೆ ಒತ್ತು ನೀಡುತ್ತವೆ. ಶ್ರೀ ಮಾರಿಕಾಂಬೆ, ಗೋಕರ್ಣ, ಮುರುಡೇಶ್ವರ, ಅಘನಾಶಿನಿ, ಧಾರೇಶ್ವರ, ಯಾಣ, ಸಹಸ್ರಲಿಂಗ, ಬನವಾಸಿ, ಸೋಂದಾ, ಸ್ವರ್ಣವಲ್ಲಿ  ಯಂತಹ ಪುಣ್ಯಭೂಮಿ ಆಧ್ಯಾತ್ಮದಕ್ಕೆ ಮೆರಗನ್ನು ನೀಡುವಂತಹುದು.

ಜಲಪಾತಗಳ ಬೀಡು ಮಲೆನಾಡ ಸೊಬಗನ್ನು ವಿಸ್ತರಿಸುತ್ತದೆ. ಉಂಚಳ್ಳಿ ಜಲಪಾತ, ಬೆಣ್ಣೆಹೊಳೆ ಜಲಪಾತ, ಮಾಗೋಡು, ಸಾತೋಡಿ ಜಲಪಾತ, ಶಿವಗಂಗಾ, ಬುರುಡೆ ಜಲಪಾತ ಹಾಗೂ ಇಂತಹ ಅನೇಕಾನೇಕ ಜಲಪಾತಗಳು ಮನಸೂರೆಗೊಳ್ಳುತ್ತವೆ.

ಹುಲಿ ಸಂರಕ್ಷಿತ ಪ್ರದೇಶವಾದ ದಾಂಡೇಲಿ ಜೋಯಿಡಾ ತಾಲೂಕುಗಳು ಅಸಂಖ್ಯಾತ ಪ್ರಾಣಿ ಪ್ರಭೇದಗಳನ್ನು ಹೊಂದಿವೆ. ದಟ್ಟ ಅರಣ್ಯವನ್ನು ಹೊಂದಿರುವ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ.

ಮುಂಡಗೋಡಿನಲ್ಲಿರುವ ಟಿಬೇಟಿಯನ್ ಕಾಲನಿ, ಗುಡವಿ ಪಕ್ಷಿಧಾಮ ಹಾಗೂ ಅಲ್ಲಿನ ಜನರ ಸಂಸ್ಕೃತಿಯ ಸೊಬಗ ನೊಡಲೇಬೇಕಾದುದು.

ಕೃಷಿ ಪ್ರಧಾನವಾದ ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಸೆಳೆಯುತ್ತದೆ. ಮಳೆಗಾಲವಿರಲಿ ಬೇಸಿಗೆಯಿರಲಿ ಪ್ರವಾಸಿಗರ ಕಣ್ಮನ ತಣಿಯುವದರಲ್ಲಿ ಸಂದೇಹವೇ ಇಲ್ಲ.

ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಜನರಿಗಾಗಿ ವಸತಿ ವ್ಯವಸ್ಥೆ ಹಾಗೂ ಆಹಾರ ವೈಶಿಷ್ಟ್ಯತೆ ತಮ್ಮ ಖುಷಿಗೆ ಇಂಬು ಕೊಟ್ಟಂತಿರುತ್ತದೆ.

ಜಿಲ್ಲೆಯ ಪ್ರವಾಸ ಮಾಡಿ ಇಲ್ಲಿರುವ ಪ್ರಾಕೃತಿಕ ಸೌಂದರ್ಯ ಸಂಪೂರ್ಣವಾಗಿ ಸವಿಯಲು ತಿಂಗಳುಗಳೇ ಬೇಕಾಗುವುದು. ಜಿಲ್ಲೆಯ ಸಜ್ಜನರ ಒಡನಾಟ ನಿಮಗೆ ಸವಿಜೇನು ಸವಿಂದಂತೆ.

ಬನ್ನಿ ಜಿಲ್ಲೆಯನ್ನು ಸುತ್ತಾಡಿ, ನಿಮ್ಮ ಅನುಭವವನ್ನು ಇತರಿಗೂ ನೀಡಿ.

#ಅಜಯ_ಭಟ್ಟ

#ಚಿ.ಕೃ: ಜಾಲಿ ಗೋಪಿ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ