2018 ನೇ ಇಸ್ವಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 95 % ಹಾಗೂ 95 %ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿಧ್ಯಾರ್ಥಿ/ನಿ ಯರಿಗೆ ಹಾಗೂ ದ್ವಿತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 % ಹಾಗೂ
ಶೇ 90% ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ/ನಿಯರಿಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ (ಉ.ಕ.)ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು ಮಂಡಳಿಯು ನಿರ್ಧರಿಸಿದೆ. ಕಾರಣ ಈ ಬಗ್ಗೆ ಮೂಲತಹ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿದವರಿಗೆ ಈ ಪ್ರತಿಭಾ ಪುರಸ್ಕಾರ ಅನ್ವಯವಾಗಲಿದೆ. ಮತ್ತು
ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು
ಹಿಂದೂ ಧರ್ಮೀಯರಾಗಿರಬೇಕು.

ಕಾರಣ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿ
2018 ನೇ ಇಸ್ವಿಯ ಪರೀಕ್ಷೆಯಲ್ಲಿ ಮೇಲಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ/ ನಿ ಯರು ತಮ್ಮ ದೃಢೀಕೃತ ಅಂಕಪಟ್ಟಿ, ವಿದ್ಯಾರ್ಥಿ/ವಿದ್ಯಾರ್ಥಿನಿಯರ ಹೆಸರಿನಲ್ಲಿ ಪೂರ್ಣ ವಿಳಾಸ ಹಾಗೂ ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಅರ್ಜಿ ಹಾಗೂ ವಾಸ್ತವ್ಯ ಪ್ರಮಾಣ ಪತ್ರ ಅಥವಾ ರೇಶನ್ ಕಾರ್ಡು ಇವುಗಳ ದೃಢೀಕೃತ ಪ್ರತಿಯನ್ನು (Attested Copy) ಮತ್ತು ಪಾಸ್ ಪೋರ್ಟ ಸೈಜಿನ ಫೋಟೋ ಅರ್ಜಿಯ ಮೇಲೆ ಅ0ಟಿಸಿ ನೇರವಾಗಿ ದಿನಾಂಕ : 10-07-2018 ರ ಒಳಗೆ ಶ್ರೀ ದೇವಸ್ಥಾನದ ಆಫೀಸಿಗೆ ತಲುಪುವಂತೆ ಮಾಹಿತಿ ಕಳಿಸಲು ಈ ಮೂಲಕ ತಿಳಿಸಲಾಗಿದೆ.
ಅಧ್ಯಕ್ಷರು ,
ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ.(ಉ.ಕ.).
ಸೂಚನೆ : ದಿನಾಂಕ : 10-07-2018 ರ ನಂತರ ಬಂದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ