ಶಿರಸಿ, ಏ.18: ತಾಲೂಕಿನ ಹುಳಗೋಳದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ದೇವತಾ ಕಾರ್ಯದ ನಿಮಿತ್ತ ಏ.19ರಂದು ಸಂಜೆ 6.30 ರಿಂದ ದೇವಸ್ಥಾನದ ಆವಾರದಲ್ಲಿ ಶಂಭು ಶಿಷ್ಯ ಯಕ್ಷಕಲಾ ಪ್ರತಿಷ್ಠಾನ (ಕಲಗದ್ದೆ) ಹಾಗೂ ಅತಿಥಿ ಕಲಾವಿದರ ಸಂಯೋಜನೆಯಲ್ಲಿ ‘ಕಾರ್ತವೀರ್ಯಾರ್ಜುನ’ ಸಮಯಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಹೆಗಡೆ ದಂಟಕಲ್, ಮದ್ದಳೆ ವಾದಕರಾಗಿ ನರಸಿಂಹ ಭಟ್, ಹಂಡ್ರಮನೆ ಹಾಗೂ ಚಂಡೆ ವಾದಕರಾಗಿ ಮಹಾಬಲೇಶ್ವರ ನಾಯಕನಕೆರೆ ಪಾಲ್ಗೊಳ್ಳಲಿದ್ದಾರೆ.
ಮುಮ್ಮೇಳದಲ್ಲಿ ಕಾರ್ತ ವೀರ್ಯನಾಗಿ ವಿನಾಯಕ ಹೆಗಡೆ, ಕಲಗದ್ದೆ, ರಾವಣನಾಗಿ ಸಂಜಯ ಬೆಳಿಯೂರು, ಹಾಸ್ಯಪಾತ್ರದಲ್ಲಿ ಶ್ರೀಧರ ಹೆಗಡೆ, ಚಪ್ಪರಮನೆ ಸಹಕಲಾವಿದರಾಗಿ ಸದಾನಂದ ಕೋಳಿಗಾರ, ವಿವೇಕ್, ವಿಕ್ರಮ್ ಭೂಷಣ ಹೆಗಡೆ, ಓಣಿಕೇರಿ ಪಾಲ್ಗೊಳ್ಳುವರು.
ಇದೇ ವೇಳೆ ಚುನಾವಣಾ ಆಯೋಗದ ಸೆಕ್ಟರ್ ಅಧಿಕಾರಿಗಳಿಂದ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಲಿದೆಯೆಂದು ದೇವ ಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ