ಶಿರಸಿ. ಜ. ೨೫.

ತುರ್ತು ಕಾಮಗಾರಿಯ ಕಾರಣದಿಂದ ಶಿರಸಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಉಪಕೇಂದ್ರದಲ್ಲಿ ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ಜ. ೨೭ ಹಾಗೂ ೨೮ ರಂದು ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೫ ಘಂಟೆಗಳವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.

ಜ ೨೭ ರಂದು ಶಿರಸಿ ಪಟ್ಟಣ ಭಾಗಗಳಾದ ಹೊಸಪೇಟೆ ರಸ್ಥೆ, ಕಸ್ತೂರಬಾ ನಗರ, ಅಶ್ವಿನಿ ವೃತ್ತ, ವಿಕಾಸ ಆಶ್ರಮ, ಟಿ.ಎಸ್.ಎಸ್ ರಸ್ಥೆ, ಎಪಿಎಂಸಿ, ಬನವಾಸಿ ರಸ್ತೆ, ಹುಬ್ಬಳ್ಳಿ ರಸ್ಥೆ, ರಾಮನ ಬೈಲ್, ಶ್ರೀರಾಮ ಕಾಲನಿ, ಬವಾಸಿ ರಸ್ಥೆ, ಕೈಗಾರಿಕಾ ಪ್ರದೇಶ, ಲಯನ್ಸ ನಗರ, ಪಟೇಲ್ ಸಾ ಮಿಲ್, ನೆಹರು ನಗರ, ಡಾನ್ ಬಾಸ್ಕೋ ಪ್ರದೇಶ, ಅಯ್ಯಪ್ಪನಗರ, ಪ್ರಗತಿನಗರ, ಮರಾಠಿಕೊಪ್ಪ, ಗುರುನಗರ, ಯಲ್ಲಾಪುರ ರಸ್ಥೆ, ಕೊಪ್ಪಳ ಕಾಲೋನಿ, ವಿದ್ಯಾನಗರ, ವಿವೇಕಾನಂದ ನಗರ, ಕೆ.ಎಚ್.ಬಿ. ಕಾಲನಿ ಹಾಗೂ ಆದರ್ಶನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ಜ. ೨೮ ರಂದು ಸಾಲ್ಕಣಿ, ಸಂಪಖಂಡ, ದೇವನಳ್ಳಿ, ಹುಲೇಕಲ್ ಕೆಂಗ್ರೆ ಹಾಗೂ ಪಟ್ಟಣ ವ್ಯಾಪ್ತಿಗೆ ಒಳಪಡುವ ರಾಘವೇಂದ್ರ ವೃತ್ತ, ಜ್ಯೂ ವೃತ್ತ, ಕೋರ್ಟ ರಸ್ಥೆ, ಸಿಪಿ ಬಝಾರ್, ಕುಮಟಾ ರಸ್ಥೆ, ಗಾಂಧೀನಗರ, ಬಿಡ್ಕಿ ಬೈಲ್, ವೀರಭದ್ರಗಲ್ಲಿ, ಸಿಂಪಿಗಲ್ಲಿ, ನಟರಾಜ ರಸ್ಥೆ, ದೇವಿಕೆರೆ, ರಾಜೀವನಗರ, ಪಡತಿಗಲ್ಲಿ ಪ್ರದೇಶಗಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಎರಡು ದಿನ ಶಿರಸಿ ನಗರ ಹಾಗೂ ವಿವಿಧ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೊರತೆ ಇದ್ದು, ಸಾರ್ವಜನಿಕರು ಇದನ್ನು ಗಮನಿಸಿ ತಮ್ಮ ಕಾರ್ಯ ನಿರ್ವಹಿಸಬೇಕಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ