ಕಾರವಾರ, ಅ.೮: ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯೆ ಆಗಿರುವ ಕಾರವಾರ ಅಂಕೋಲಾ ಕ್ಷೇತ್ರದ ನಿಷ್ಠಾವಂತೆ ಧುರೀಣೆ, ರೂಪಾಲಿ ನಾಯ್ಕ ಅವರಿಗೆ ರಾಜ್ಯ ಬಿಜೆಪಿ ನಾಯಕರು, ಉತ್ತರಕನ್ನಡ ಜಿಲ್ಲೆಯ ಮಹಿಳಾ ಮೋರ್ಚಾದ ಸಂಘಟನೆಯ ಹೊಣೆಗಾರಿಕೆ ನೀಡುವ ಮೂಲಕ ಪದೋನ್ನತಿ ನೀಡಿದ್ದಾರೆ.
ಕಾರವಾರ, ಅಂಕೋಲಾ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಿಜೆಪಿ ದಿನವೂ ತನ್ನ ಶಕ್ತಿ ವೃದ್ಧಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾಲಿ ಶಾಸಕ ಸೈಲ್ ಕಾಂಗ್ರೇಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದು, ಅಲ್ಲಿಯೇ ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿಮಾಡಿಕೊಳ್ಳುವಲ್ಲಿ ಹೆಣಗಾಡುತ್ತಿದ್ದಾರೆ.
ರಾಜಕೀಯವಾಗಿ ತನ್ನ ಭವಿಷ್ಯವನ್ನು ತಾನೆ ಕೊನೆಗೊಣಿಸಿಕೊಂಡ ಅಸ್ನೋಟಿಕರ್ ಉದ್ಯಮ ಮಾತ್ರ ಉಳಿಸಿಕೊಳ್ಳಲ್ಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ, ಗುತ್ತಿಗೆದಾರರಾದ ಅಂಕೋಲಾದ ಮಂಜುನಾಥ ನಾಯ್ಕ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿನಡೆಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ