ಶಿರಸಿ, ಅ೮: ತಾಲೂಕಿನ ಸೋಂದಾ ಜೈನ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಇತಿಹಾಸ ಸಮ್ಮೇಳನ ಅಭೂತಪೂರ್ವವಾಗಿ ನಡೆಯಿತು. ಆದರೆ ಶಿರಸಿ ತಾಲೂಕಿನ ಮತ್ತು ಉತ್ತರಕನ್ನಡ ಜಿಲ್ಲೆಯ ಜನರ ನಿರಾಸಕ್ತಿಗೆ ಕಾರ್ಯಕ್ರಮ ಸಾಕ್ಷಿಯಾಯಿತು. ನಮ್ಮ ತಾಲೂಕಿನ ಮತ್ತು ಜಿಲ್ಲೆಯ ಜನರಿಗಿಂತ ರಾಜ್ಯದ ವಿವಿಧೆಡೆಯಿಂದ ಜನರು ಹುಡುಕಿಕೊಂಡು ಬಂದಿದ್ದರು. ಅವರಿಗಿದ್ದ ಇತಿಹಾಸ ಕಾಳಜಿ ಇಲ್ಲಿಯವರಲ್ಲಿ ಕಂಡುಬರಲಿಲ್ಲ. ಸತತ ನಾಲ್ಕನೇ ವರ್ಷದಲ್ಲಿ ಶಿರಸಿ ತಾಲೂಕಿನಲ್ಲೇ ರಾಜ್ಯಮಟ್ಟದ ಕಾರ್ಯಕ್ರಮ ಆಗುತ್ತಿದ್ದರೂ ಶಿಕ್ಷಕರ, ವಿದ್ಯಾರ್ಥಿಗಳ, ಪ್ರಜ್ಞಾವಂತರ, ಮಾಧ್ಯಮದವರ ಕೊರತೆ ಇತ್ತು.‌ ಜನರಿಗೆ ಇದ್ಯಾವುದೂ ಬೇಡವಾಗಿದೆಯೇ ಎಂಬ ಆಲೋಚನೆಯೇ ಥಟ್ಟನೆ ಭಾಸವಾಗುತ್ತಿತ್ತು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ