ವ್ಯಾಪಕ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ತನ್ನ ಬಳಕೆದಾರರ ಸುರಕ್ಷತೆಗಾಗಿ ನೂತನ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಫೇಸ್ ರಿಕಗ್ನಿಶನ್ ಮುಖಾಂತರ ಬಳಕೆದಾರರ ಮುಖವನ್ನು ಗುರುತಿಸಿ ಖಾತೆ ತೆರೆದುಕೊಳ್ಳಲಿದೆ. ಇತ್ತೀಚೆಗೆ ಫೆಸ್ಬುಕ್ ನಲ್ಲಿ ನಕಲಿ ಖಾತೆದಾರರ ಪ್ರಮಾಣ ಹೆಚ್ಚಾಗಿದ್ದು ಹಾಗೂ ಗುಪ್ತಾಂಕ (ಪಾಸ್ವರ್ಡ) ಮರೆಯುವವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಹೀಗೆ ಅನೇಕ ಕಾರಣಗಳಿಗಾಗಿ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಅಳವಡಿಸಲು ಫೇಸ್ಬುಕ್ ಕಾರ್ಯೋನ್ಮುಖವಾಗಲಿದೆ.

ಈ ವ್ಯವಸ್ಥೆ ಮೊಬೈಲ್, ಟ್ಯಾಬ್ಲೆಟ, ಲ್ಯಾಪ್‌ಟಾಪ್ ಹಾಗೂ ವೆಬಕ್ಯಾಂ ಹೊಂದಿರುವ ಡೆಸ್ಕ್‌ಟಾಪ್‌ ಗಳಲ್ಲಿ ಲಭ್ಯವಾಗಲಿದೆ. ಮುಖಗುರುತಿಸಿ ಯಾವುದೇ ಪಾಸ್ವರ್ಡ ಇಲ್ಲದೇ ಖಾತೆ ಬಳಸಲು ಅನುಕೂಲಕರವಾಗಲಿದೆ.

ಕೈಬೆರಳಚ್ಚು, ಮುಖ ಗುರುತಿಸುವಿಕೆ, ಕಣ್ಣು ಗುರುತಿಸುವಿಕೆ ಇತ್ಯಾದಿಗಳು ಸುರಕ್ಷಿತೆಗೆ ಅತ್ಯಧಿಕ ಪಾಲುದಾರಿಕೆ ನೀಡುತ್ತದೆ ಎಂಬ ಕಾರಣಕ್ಕೆ ಇಂತಹ ತಂತ್ರಜ್ಞಾನಗಳನ್ನು ಕಂಪನಿಗಳು ತಮ್ಮ ಉಪಕರಣ ಹಾಗೂ ವೆಬ್ಸೈಟ್ ಗಳಲ್ಲಿ ಬಳಸುತ್ತವೆ.

– ಅಜಯ ಭಟ್ಟ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ