ಶಿರಸಿ, ಅ.೬: ಸನಾತನ ಧರ್ಮದ ವೇದ ಸಂಸ್ಕøತಿಯ ಹಿರಿಮೆಗರಿಮೆಗಳನ್ನು ಉಳಿಸಿ ಬೆಳೆಸುವ ದೃಷ್ಠಿಯಿಂದ ಸಾಲ್ಕಣಿಭಾಗದಲ್ಲಿ ತಮ್ಮ ವೈದಿಕ ವೃತ್ತಿಯಿಂದ ಮತ್ತುಸನ್ನಡತೆಯಿಂದ ಆದರ್ಶಪ್ರಾಯರಾದ ಶ್ರೀ. ವೆಂಕಟ್ರಮಣಉಪಾಧ್ಯಾಯರ ಸತ್‍ಸಂಕಲ್ಪದಿಂದ 1966 ರಲ್ಲಿ ಶ್ರೀ. ಲಕ್ಷ್ಮೀನರಸಿಂಹ ಶಿಕ್ಷಣ ಸಮಿತಿ ಎಂಬ ಶಿರೋನಾಮದ ಅಡಿಯಲ್ಲಿ ಶ್ರೀ.ಲಕ್ಷ್ಮೀ ನರಸಿಂಹ ಸಂಸ್ಕøತ ಪಾಠಶಾಲೆಯುಪ್ರಪ್ರಥಮವಾಗಿ ಅವರ ಸ್ವಗೃಹದಲ್ಲಿಯೇಪ್ರಾರಂಭಗೊಂಡಿತು. ಆ ಸಮಯದಲ್ಲಿ ವಿದ್ಯಾಪಾರಂಗತರಿಗೆ ಆಶ್ರಯ ನೀಡುವದರೊಂದಿಗೆ ವಿದ್ಯಾಕಾಂಕ್ಷಿಗಳಿಗೆ ಊರಿನಹಲವರ ಮನೆಯಲ್ಲಿ ಸೌಕರ್ಯ ಕಲ್ಪಿಸಿ ವೇದ ಮತ್ತುಸಂಸ್ಕøತ ಪಾಠಮಾಡಿಸಿದರು.

ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆಅನುಕೂಲವಾಗಲು ಮಹದೇವ ರಾಮಚಂದ್ರ ಹೆಗಡೆಹಾಣಜಿಮನೆ ಇವರ ಮನೆಯ ಮಹಡಿ ಮತ್ತು ಶ್ರೀ. ಗಣಪತಿಹಗಡೆ ವಾರಣಾಸಿ ಇವರ ಮನೆ ಹಾಗೂ ಶ್ರೀ. ನಾರಾಯಣ ಹೆಗಡೆಜೋಗಿನಮನೆ ಇವರ ಮನೆಯ ಮಹಡಿಯ ಮೇಲೆಸ್ಥಳಾವಕಾಶವನ್ನು ಒದಗಿಸಲಾಯಿತು. ತಮ್ಮ ಮನೆಯಲ್ಲಿಪಾಠ ಪ್ರವಚನಕ್ಕೆ ಅವಕಾಶ ಮಾಡಿಕೊಟ್ಟ ಈ ಮಹನೀಯರಿಗೆಹಾಗೂ ಸಂಸ್ಥೆ ನೀಡಿದ ಅತ್ಯಲ್ಪ ವೇತನದಲ್ಲಿ ಮಕ್ಕಳಿಗೆವಿದ್ಯಾದಾನ ಮಾಡಿದ ಅಧ್ಯಾಪಕರುಗಳಿಗೆ ಈ ಸಂದರ್ಭದಲ್ಲಿಹೃತ್ಪೂರ್ವಕ ಕೃತಜ್ಞತೆಯನ್ನು ಸಮರ್ಪಿಸುತ್ತಿದ್ದೇವೆ. ಈ ಶಿಕ್ಷಣ ಸಂಸ್ಥೆಯು 1971 ರಲ್ಲಿ ಈ ಭಾಗದ ಮಕ್ಕಳಿಗೆಆಧುನಿಕ ಶಿಕ್ಷಣವನ್ನು ಒದಗಿಸುವದಕ್ಕಾಗಿ ಶ್ರೀ.ಲಕ್ಷ್ಮೀನರಸಿಂಹ ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿತು. ಪ್ರತಿ ವರ್ಷವುಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 85% ಕ್ಕಿಂತ ಮೇಲ್ಪಟ್ಟುಉತ್ತೀರ್ಣರಾಗುತ್ತಿದ್ದು ಪ್ರಗತಿ ಪಥದಲ್ಲಿ ನಡೆಯುತ್ತಿದೆ.ಉನ್ನತ ಅಂಕಗಳಿಸುವ ಮೂಲಕ ಮತ್ತು ಆಟೋಟ,ಸಾಂಸ್ಕøತಿಕ ಚಟುವಟಿಕೆಗಳಲ್ಲಿಯೂ ಇಲ್ಲಿಯ ವಿದ್ಯಾರ್ಥಿಗಳುರಾಜ್ಯ ಮಟ್ಟದಲ್ಲಿ ಯಶಸ್ಸುಗಳಿಸಿದ್ದಾರೆ. ಸಂಸ್ಕøತ ಪಾಠಶಾಲೆಗೆ 1973-74 ರಲ್ಲಿ ಖಾಯಂಮಾನ್ಯತೆ ದೊರಕಿ ಈ ಭಾಗದ ಜನರ ತನು ಮನ ಧನಗಳಸಹಾಯದಿಂದ ಮತ್ತು ಸರ್ಕಾರದ ಧನ ಸಹಾಯದಸಹಯೋಗದಿಂದ ಸ್ವಂತ ಕಟ್ಟಡವನ್ನುನಿರ್ಮಾಣಮಾಡಲಾಯಿತು. 1979 ರಲ್ಲಿ ಅನುದಾನ ಸಂಹಿತೆಜಾರಿಗೊಂಡು ಇದರನ್ವಯ ಪಾಠಶಾಲೆಗೆ ವೇತನಾನುದಾನದೊರಕಿ ವೇದಾಧ್ಯಯನದೊಂದಿಗೆ ಸಂಸ್ಕøತ ಪ್ರಥಮಹಾಗೂ ಕಾವ್ಯ, ಸಾಹಿತ್ಯ ತರಗತಿಗಳನ್ನು ನಡೆಸಲು ಮತ್ತುಅವಶ್ಯವಿರುವ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ
ಮಂಜೂರಾತಿಯನ್ನು ನೀಡಿತು. 2010-11 ನೇ ಸಾಲಿನಿಂದ ಈಸಂಸ್ಥೆಯು ಕರ್ನಾಟಕ ಸಂಸ್ಕøತ ವಿಶ್ವ ವಿದ್ಯಾಲಯದ ಅಧೀನದಸಂಸ್ಕøತ ನಿರ್ದೇಶನಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಸಂಸ್ಕøತ ವೇದ ಪಾಠಶಾಲೆಯಲ್ಲಿ135 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪ್ರದೇಶದ ಶಿಕ್ಷಣಾಸಕ್ತರ ಅವಿರತ ಪರಿಶ್ರಮದಿಂದ ಸ್ಥಾಪನೆಗೊಂಡ ಈ ಶಿಕ್ಷಣ ಸಂಸ್ಥೆ ವೈದಿಕ ಹಾಗೂ ಸಂಸ್ಕøತವಿದ್ಯೆಯನ್ನು ಧಾರೆ ಎರೆಯುತ್ತಾ 1993 ರಲ್ಲಿ ರಜತಮಹೋತ್ಸವನ್ನು ಸಂಭ್ರಮದಿಂದ ಆಚರಿಸಿ ಪ್ರಸ್ತುತ 50 ನೇವರ್ಷದ ಸುವರ್ಣಮಹೋತ್ಸವದ ವಿಜೃಂಭಾಚರಣೆಗೆಸನ್ನದ್ಧವಾಗಿದೆ. ಈ 50 ವರ್ಷಗಳ ಕಾಲ ಸಂಸ್ಕøತ ವೇದ ಪಾಠಶಾಲೆಯು ಉಳಿದು ಬೆಳೆದು ಸುವರ್ಣ ಸಂಭ್ರವನ್ನು ಕಾಣಲುಮುಖ್ಯ ಕಾರಣಿಕರ್ತರು ಈ ಭಾಗದ ಸಾರ್ವಜನಿಕರಾಗಿರುತ್ತಾರೆ.ಏಕೆಂದರೆ ಸಂಸ್ಕøತ ವೇದಗಳ ಜ್ಞಾನಾರ್ಜನೆಗೋಸ್ಕರ ಪರಊರಿನಿಂದ ಬರುವ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿಯೇಉಳಿಸಿಕೊಂಡು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸಿದ್ದಾರೆ.ಈಗಲೂ ಇದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.ಸಂಸ್ಥೆಯು ಈ ಸಂದರ್ಭದಲ್ಲಿ ಎಲ್ಲಾ ಅನ್ನದಾನಿಗಳಿಗೆ ತುಂಬುಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸುತ್ತದೆ. 1993 ರ ರಜತ ಮಹೋತ್ಸವ ಸಂದರ್ಭದಲ್ಲಿ ಕೇವಲ2 ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಠ ಶಾಲೆಗೆ ಶ್ರೀ.ಗಣಪತಿ ಹೆಗಡೆ ವಾರಣಾಸಿ ಮನೆ ಇವರ ಅಧ್ಯಕ್ಷತೆಯ ಅವಧಿಯಲ್ಲಿ ಇನ್ನೊಂದು ಕೊಠಡಿಯನ್ನು ನಿರ್ಮಿಸಿ ಸೋಂದಾಸ್ವರ್ಣವಲ್ಲಿಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿಮಹಾಸ್ವಾಮಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. 1993 ರಿಂದ 2013 ರ ಅವಧಿಯವರೆಗೆ ಸಂಸ್ಥೆಯಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ. ಗಜಾನನ ನಾರಾಯಣ ಹೆಗಡೆಮುರೇಗಾರ ಇವರ ಅವಧಿಯಲ್ಲಿ ವಿದ್ಯಾರ್ಥಿ ನಿಲಯ, ವೇದವಿಭಾಗದ ಕೊಠಡಿಗಳು ನಿರ್ಮಾಣಗೊಂಡವು. ಶ್ರೀ. ಶ್ರೀ.ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಜಯೇಂದ್ರ ಸರಸ್ವತಿಸ್ವಾಮೀಗಳು ಕಾಂಚಿಕಾಮಕೋಟಿ ಇವರು ನೀಡಿದ ಧನಸಹಾಯದಲ್ಲಿ 2007 ರಲ್ಲಿ ವೇದಾಧ್ಯಯನ ಆಸಕ್ತರಿಗೆ ಹೆಚ್ಚಿನಅಧ್ಯಯನವನ್ನು ಕಲ್ಪಸುವದಕ್ಕಾಗಿ ಕೃಷ್ಣ ಯಜುರ್ವೇದಪಾಠ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ನೂತನಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರಸ್ತುತ ಈ ವೇದ ವಿಭಾಗದಲ್ಲಿಬ್ರಾಹ್ಮಣ, ಆರಣ್ಯಕ ಮತ್ತು ಸಂಹಿತಾ ಪಾಠಗಳಲ್ಲದೇಕ್ರಮಾಂತದವರೆಗೂ ಅಧ್ಯನಮಾಡಲು ಅವಕಾಶ
ಕಲ್ಪಿಸಲಾಗಿದೆ. ಕಾಂಚಿ ಶ್ರೀ ಗಳ ನಿರ್ದೇಶನದಂತೆ ತಿರುಪತಿತಿರುಮಲ ದೇವಸ್ಥಾನದಿಂದ ಈ ವೇದ ವಿಭಾಗಕ್ಕೆ ಧನ ಸಹಾಯದೊರೆಯುತ್ತಿದೆ. ಈ ಅವಕಾಶವನ್ನು ನೀಡಿದ ಕಂಚೀಶ್ರೀಗಳವರಿಗೂ ಮತ್ತು ತಿರುಪತಿ ತಿರುಮಲ ದೇವಸ್ಥಾನದಆಡಳಿತ ಮಂಡಳಿಯವರಿಗೂ ಈ ಸಂದರ್ಭದಲ್ಲಿಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ಶ್ರೀ. ಲಕ್ಷ್ಮೀ ನರಸಿಂಹ ಶಿಕ್ಷಣ ಸಂಸ್ಥೆಯ ಮತ್ತುಸಂಸ್ಕøತ ಪಾಠ ಶಾಲೆಯ ಸುವರ್ಣ ಮಹೋತ್ಸವದಸಂಭ್ರಮಾಚರಣೆಯನ್ನು ಗೌರವಾಧ್ಯಕ್ಷರಾದ ಶ್ರೀ.ಜಿ.ಟಿ.ಹೆಗಡೆ ತಟ್ಟೀಸರ ಮತ್ತು ಅಧ್ಯಕ್ಷರಾದ ಶ್ರೀ. ಶ್ರೀಧರಹೆಗಡೆ ತೋಳಗಾರಗದ್ದೆ ಹಾಗೂ ಆಡಳಿತ ಕಮೀಟಿಯಸದಸ್ಯರ ಮುಂದಾಳತ್ವದಲ್ಲಿ ದಿನಾಂಕ: 09.10.2017 ಹಾಗೂ10.10.2017 ರಂದು ಶಿಕ್ಷಣ ಸಮಿತಿಯ ವ್ಯಾಪ್ತಿಗೆ ಒಳಪಡುವಗ್ರಾಮದವರ ತನು ಮನ ಧನ ಸಹಾಯಗಳೊಂದಿಗೆಮತ್ತು ಹಳೆಯ ವಿದ್ಯಾರ್ಥಿಗಳ ಹಾಗೂ ದಾನಿಗಳಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ವೃಂದಮತ್ತು ವಿದ್ಯಾರ್ಥಿಗಳು ಈ ಸಂಭ್ರಮಾಚರಣೆಗಾಗಿಕೈಜೋಡಿಸಿದ್ದಾರೆ. ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿನಿರ್ಮಿಸಲಾಗುತ್ತಿರುವ ಸಭಾಭವನದ ಕಟ್ಟಡ ಕಾಮಗಾರಿಪ್ರಗತಿಯಲ್ಲಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ