ಶಿರಸಿ, ಅ.೬: ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ತುರ್ತು ಪಾಟ್‍ಹೆಡ್ (Poಣ ಊeಚಿಜ) ಬದಲಾಯಿಸುವ ಕೆಲಸವನ್ನು ಹಮ್ಮಿಕೊಂಡಿರುವ ಕಾರಣ 110/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಟ್ಟಣ ಮಾರ್ಗವಾದ ಶಿರಸಿ-2 11ಕೆ.ವಿ ಮಾರ್ಗದಲ್ಲಿ ದಿನಾಂಕ: 07.10.2017 ಶನಿವಾರ ದಂದು ಈ ದಿನ ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆ ವರೆಗೆ ಶಿರಸಿ-2 11ಕೆ.ವಿ ಮಾರ್ಗದ ಹೊಸಪೆಟೆ ರೋಡ್, ವಿಕಾಸ ಆಶ್ರಮ, ಅಶ್ವಿನಿ ವೃತ್ತ, ಟಿ.ಎಸ್.ಎಸ್.ರೋಡ್, ಎ.ಪಿ.ಎಂ.ಸಿ, ಹುಬ್ಬಳ್ಳಿ ರೋಡ್, ಬನವಾಸಿ ರಸ್ತೆ, ಮಾರಿಕಾಂಬಾ ನಗರ, ರಾಮನಬೈಲ್, ಶ್ರೀರಾಮ್ ಕಾಲೋನಿ, ಬನವಾಸಿ ರೋಡ್-ಕೈಗಾರಿಕಾ ಪ್ರದೇಶ, ಲಯನ್ಸ್ ನಗರ, ಪಟೇಲ್ ಸಾ ಮಿಲ್, ನೆಹರು ನಗರ, ಡಾನ್ ಬಾಸ್ಕೋ ಸ್ಕೂಲ್ ಸುತ್ತಮುತ್ತಲಿನ ಪ್ರದೇಶ, ಅಯ್ಯಪ್ಪ ನಗರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು. ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕಾರ್ಯ ಮತ್ತು ಪಾಲನಾ ಉಪ ವಿಭಾಗ ಹೆಸ್ಕಾಂ ಶಿರಸಿ ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ