ಕಾರವಾರ: ಮುಂಡಗೋಡ ತಾಲ್ಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯ ಮೂಕನಕಟ್ಟೆ ಕೆರೆಯಲ್ಲಿ ಸುಮಾರು ಮೂರುವರೆ ವರ್ಷದ ಆನೆ ಮರಿಯೊಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.
ಕಳೆದ ಎರಡಮೂರು ದಿನದ ಹಿಂದೆಯೇ ಮೃತಪಟ್ಟಿರಬಹುದೆಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆಯೇ ತಾಲ್ಲೂಕಿನ ಅರಣ್ಯ ಗಡಿಭಾಗದ ಗುಂಜಾವತಿ ಅರಣ್ಯ ವನ್ನು ಪ್ರವೇಶಿಸಿರುವ ಕಾಡಾನೆಗಳ ಹಿಂಡು, ಅರಣ್ಯದಂಚಿನ ಭತ್ತದ ಗದ್ದೆಗಳಲ್ಲಿ ಸಂಚರಿಸಿವೆ. ಅರಣ್ಯದ ಮಧ್ಯಭಾಗದಲ್ಲಿರುವ ಮೂಕನಕಟ್ಟೆ ಕೆರೆಗೆ ನೀರು ಕುಡಿಯಲು ಬಂದಿರುವಾಗ ಕೆರೆಯಲ್ಲಿ ಬಿದ್ದಿರಬಹುದು ಇಲ್ಲವೇ ಕಾಡಾನೆಗಳ ಜಗಳದಲ್ಲಿ ಗಾಯಗೊಂಡು ನೀರಿನಿಂದ ಮೇಲಕ್ಕೇಳದೆ ಮೃತಪಟ್ಟಿರಬಹುದೆಂದು ಅರಣ್ಯ ಅಧಿಕಾರಿ ಶಂಕಿಸಿದ್ದಾರೆ. ಮೃತ ಆನೆಮರಿಯಿಂದ ಕೊಳೆತ ವಾಸನೆ ಬರುತ್ತಿದೆ. ಗುಂಜಾವತಿ ಗ್ರಾಮದಿಂದ ಸುಮಾರು ೩_೪ಕಿಮೀ ಅಂತರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕೆರೆ ಇದೆ.
ಸ್ಥಳಕ್ಕೆ ಎಸಿಎಫ್ ಶಶಿಧರ, ಆರ್ ಎಫ್ ಒ ಸುರೇಶ ಕಲ್ಲೊಳ್ಳಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.
ನೀರಿನಿಂದ ಮೃತ ಆನೆ ಮರಿಯನ್ನು ಮೇಲಕ್ಕೆತ್ತಲು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯಾಧಿಕಾರಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೆರೆಯ ಪಕ್ಕದ ಅರಣ್ಯದಲ್ಲಿಯೇ ಮೃತ ಆನೆಯ ಅಂತ್ಯಸಂಸ್ಕಾರ ಮಾಡಲು ತಯಾರಿ ನಡೆಸಲಾಗುತ್ತಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ