ಉತ್ತರ ಕನ್ನಡಕ್ಕೂ ಬೇಕು ಸ್ಮಾರ್ಟ್ ಸಿಟಿ ಕಲ್ಪನೆಯ ನಗರ ಯೋಜನೆ

ನಮ್ಮ ದೇಶದಲ್ಲಿ ೨೦೧೪ ರಲ್ಲಿ ರಾಜಕೀಯ ಕ್ರಾಂತಿಯೆ ಆಯಿತು ಅದು ಎಷ್ಟರ ಮಟ್ಟಿಗೆ ಅಂದರೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಂದಿಯವರ ರಾಜಕೀಯ ನಾಗಾಲೋಟವನ್ನೆ ಮೀರಿಸುವಂತದ್ದಾಗಿತ್ತು. ಸನ್ಮಾನ್ಯ ಪ್ರಧಾನಿ ನರೇಂದ್ರ ಮೊದಿ ತಮ್ಮ ಚುನಾವಣಾ ಪ್ರಾಣಾಳೀಕೆಯ ಬತ್ತಳಿಕೆಯಲ್ಲಿ ಸ್ಮಾರ್ಟ್ ಸಿಟಿ ಅನ್ನೊ ಪ್ರಮುಖ ಅಸ್ತ್ರವೊಂದನ್ನು ಇಟ್ಟುಕೊಂಡಿದ್ದರು ಅದರಂತೆ ಚುನಾಯಿತರಾದ ನಂತರ ಆ ಒಂದು ಮಹತ್ವದ ಯೋಜನೆ ಕೈಗೊಂಡಿದ್ದಾರೆ ಅದು ತುಂಬಾ ಸಂತಸದ ವಿಷಯ. ನಮ್ಮ ರಾಜ್ಯವೂ ಕೂಡಾ ಅದರಲ್ಲಿ ಬಹುಮಟ್ಟಿನ ಫಲಾನುಭವಿ ಇನ್ನೂ ಇದೇ ಯೋಜನೆಯ ಅಡಿ ದ್ವೀತಿಯ ದರ್ಜೆಯ ನಗರಗಳಿಗೆ ಅಮೃತ ನಗರ ಯೋಜನೇಯು ಕೈಗೊಳ್ಳಲಾಯಿತು ಅದರಲ್ಲೂ ಕರ್ನಾಟಕ ಬಹುತೆಕ ಪಾಲುದಾರಿಕೆ ಹೊಂದಿದೆ. ಆದರೆ ನಮಗೆ ಇರೊ ಅತಿಯಾದ ಅಸಮಾಧಾನ ಎಂದರೆ ಇಡೀ ರಾಜ್ಯದಲ್ಲಿ ಆರು ಪ್ರಮುಖ ನಗರಗಳು ಸ್ಮಾರ್ಟ್ ಸಿಟಿ ಫಲಾನುಭವಿ ಆದರೆ ಎಲ್ಲಾ ಜಿಲ್ಲೆಗಳು ಅಮೃತ ಯೋಜನೆಯಲ್ಲಿ ಫಲಾನುಭವಿ ಆಗಿದ್ದಾವೆ ಆದರೆ ಉತ್ತರ ಕನ್ನಡ ಮಾತ್ರ ಈ ಯೋಜನೆಯಿಂದ ಹೊರಗಿದೆ

ಸ್ಮಾರ್ಟ್ ಸಿಟಿ ಮತ್ತು ಅಮೃತ ನಗರ ಯೋಜನೆಗಳಿಗೆ ಕೆಲ ಮಾನದಂಡಗಳು ಇವೆ ಅದರಲ್ಲಿ ಜನಸಂಖ್ಯೆಯು ಕೂಡಾ ಬಹು ಮುಖ್ಯ ಮಾನದಂಡ . ನಮ್ಮ ಜಿಲ್ಲೆ ಹೆಳಿ ಕೇಳಿ ರಾಜ್ಯದಲ್ಲೆ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಇಂತಹ ಜಿಲ್ಲೆಯಲ್ಲಿ ಜನಸಂಖ್ಯೆ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗೆ ಇರುತ್ತದೆ. ಹಾಗಂತ ಜಿಲ್ಲೆಯಲ್ಲಿ ಏನು ನಗರಗಳೆ ಇಲ್ಲ ಅಂತೇನಿಲ್ಲ, ನಮ್ಮ ಜಿಲ್ಲೆಯಲ್ಲೂ ಲಕ್ಷ ಜನಸಂಖ್ಯೆ ಸಮೀಪಿಸಿದ ಕಾರವಾರ ಶಿರಸಿ ದಾಂಡೆಲಿ ಎಂಬ ಮೂರು ನಗರಗಳಿವೆ. ಕಾರವಾರ ಜಿಲ್ಲೆಯಲ್ಲಿ ಆಡಳಿತಾತ್ಮಕ ಕೆಂದ್ರವಾದರೆ ಶಿರಸಿ ವಾಣಿಜ್ಯ ಕೆಂದ್ರ ಅನ್ನೂವುದರ ಜೊತೆಗೆ ಜಿಲ್ಲೆಯ ಎರಡನೆ ಆಡಳಿತ ಕೆಂದ್ರವೂ ಹೌದು. ಇನ್ನೂ ದಾಂಡೇಲಿ ಈ ವರ್ಷವಷ್ಟೆ ತಾಲೂಕು ಕೇಂದ್ರ ಎಂಬ ಹಣೆಪಟ್ಟಿ ಹೊಂದಿದ ನಗರ. ಈ ನಗರವೇನು ಕಮ್ಮಿ ಇಲ್ಲ ತನ್ನ ಸುತ್ತಲೂ ದಟ್ಟ ಅರಣ್ಯದ ಜೊತೆಗೆ ನಗರದಲ್ಲಿ ದೊಡ್ಡ ಮಟ್ಟಿನ ಪೇಪರ್ ಕಾರ್ಖಾನೆಗಳು ಇವೆ.

ಕಾರವಾರ ನಮ್ಮ ಜಿಲ್ಲಾ ಕೇಂದ್ರ ಇದು ಬ್ರಿಟಿಷ್‌ ಆಡಳಿತದಲ್ಲೇ ಜಿಲ್ಲಾ ಕೇಂದ್ರವಾಗಿತ್ತು ಜೊತೆಗೆ ಈ ನಗರ ದೇಶದ ನೌಕಾ ನೆಲೆಯ ಕೇಂದ್ರವು ಆಗಿದೆ. ತನ್ನ ಒಂದು ಕಡೆ ವಿಶಾಲ ಸಮುದ್ರ ತೀರ ಇನ್ನೊಂದು ಕಡೆ ಅರಣ್ಯ ಸಂಪತ್ತು ಹೊಂದಿರುವ ಈ ನಗರ ಪ್ರವಾಸೋದ್ಯಮದಲ್ಲಿ ತನ್ನದೆ ಆದ ಚಾಪು ಮೂಡಿಸಿದೆ ಇಲ್ಲಿ ದಿನ ನಿತ್ಯವೂ ಸಾವೀರಾರು ಪ್ರವಾಸಿಗರು ಬಂದು ಹೋಗುತ್ತಾರೆ ಇದರಲ್ಲಿ ವಿದೇಶಿಗರು ಹೊರತಾಗಿಲ್ಲ ರವೀಂದ್ರನಾಥ ಟ್ಯಾಗೂರ್ ಕಡಲತೀರ ಅತ್ಯಂತ ಆಕರ್ಷಣೆ ಇಲ್ಲಿ. ಇಲ್ಲಿನ ಜನಸಂಖ್ಯೆ ಸುಮಾರು ಲಕ್ಷ ಸಮೀಪಿಸಿದೆ.

ಶಿರಸಿ ಇದು ಜಿಲ್ಲೆಯ ಎರಡನೆ ಜಿಲ್ಲಾ ಕೆಂದ್ರ ಎಂದರೆ ಅತಿಶಯೊಕ್ತಿ ಆಗದು. ಬ್ರಿಟಿಷ್ ಕಾಲದಿಂದಲೂ ಈ ನಗರ ತನ್ನ ಅಸ್ತಿತ್ವದ ಮಹತ್ವವನ್ನು ಕೊಂಚವು ಕಡಿಮೆ ಮಾಡಿಕೊಂಡಿಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಶಿರಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋರಾಟದ ಚಟುವಟಿಕೆಗಳ ಕೇಂದ್ರ ಆಗಿತ್ತು. ಶಿರಸಿ ಸರಿ ಸುಮಾರು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ನಮ್ಮ ಜಿಲ್ಲೆಯಲ್ಲಿ ನಮಗೆ ಈ ನಗರ ಮಹಾನಗರವೆ ಆಗಿದೆ .ಶಿರಸಿ ಸುತ್ತಲೂ ಅರಣ್ಯ ಸಂಪತ್ತು ಹೊಂದಿದ್ದು ಅನೇಕ ಜಲಪಾತಗಳು ಇವೆ ಜೊತೆಗೆ ಈ ನಗರ ಪವಿತ್ರ ಯಾತ್ರಾ ಸ್ತಳವು ಆಗಿದೆ. ಇಲ್ಲಿನ ಮಾರಿಕಾಂಬಾ ದೇವಸ್ಥಾನ ಈಗ ದೇಶದಲ್ಲಿ ಪ್ರಸಿದ್ದಿ ಪಡೆಯುತ್ತಿದೆ ಈ ದೇವಸ್ಥಾನಕ್ಕೆ ದಿನವೊಂದಕ್ಕೆ ಮೂರು ಸಾವಿರಕ್ಕೂ ಅಧಿಕ ಜನ ಬೇಟಿ ನೀಡುತ್ತಾರೆ. ಅಡಿಕೆ ವ್ಯಾಪಾರದಲ್ಲಿ ಈ ನಗರ ಕೆವಲ ಉತ್ತರ ಕನ್ನಡ ಜಿಲ್ಲೆಗಷ್ಟೆ ಅಲ್ಲದೆ ಸುತ್ತಲಿನ ಜಿಲ್ಲೆಗಳಿಗು ಕೇಂದ್ರ ಸ್ಧಾನ ಆಗಿದೆ. ವೈದ್ಯಕೀಯ ಸೇವೆಯಲ್ಲಿ ಈ ನಗರ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಪ್ರತಿ ದಿನ ವ್ಯಾಪಾರ ವೈದ್ಯಕೀಯ ಸೇವೆ ಮತ್ತು ಪ್ರವಾಸಕ್ಕಾಗಿ ವಿವಿಧ ಜಿಲ್ಲೆ ಮತ್ತು ರಾಜ್ಯಗಳ ಜನರು ಈ ನಗರಕ್ಕೆ ಬರುತ್ತಾರೆ.

ಹನ್ನೆರಡು ತಾಲೂಕುಗಳನ್ನೂ ಒಳಗೊಂಡ ಈ ಉತ್ತರ ಕನ್ನಡ ಜಿಲ್ಲೆ ಜನಸಂಖ್ಯೆಯಲ್ಲಿ ಕಡಿಮೆ ಇದ್ದರು ತನ್ನದೆ ಆದ ರೆವಿನ್ಯೂ ಹೊಂದಿದೆ. ಅಪಾರ ಸಮುದ್ರ ಸಂಪತ್ತು , ಅರಣ್ಯ ಸಂಪತ್ತು , ಅಣು ವಿದ್ಯುತ್ ಶಕ್ತಿ ಎಲ್ಲವನ್ನೂ ಈ ಜಿಲ್ಲೆ ದೇಶಕ್ಕೆ ಸಮರ್ಪಿಸುತ್ತದೆ ಆದರೆ ಜನಸಂಖ್ಯೆ ಪ್ರಮಾಣ ಕಡಿಮೆ ಆಗಿದೆಯೆಂದು ಸೌಲಭ್ಯಗಳನ್ನು ಕೊಡದೆ ಇರುವುದು ಎಷ್ಟು ಸರಿ…!? ಇನ್ನೂ ನಮ್ಮ ಜಿಲ್ಲೆಯಲ್ಲಿ ಅನೇಕ ಹಳ್ಳಿಗಳಲ್ಲಿ ರಸ್ತೆ ವ್ಯವಸ್ಥೆ ಸರಿಇಲ್ಲ ವಿದ್ಯುತ್ ಇಲ್ಲದ ಹಳ್ಳಿಗಳು ನಮ್ಮ ಜಿಲ್ಲೆಯಲ್ಲಿ ಇನ್ನೂ ಜೀವಂತ ಇವೆ. ಕೆಲವು ಹಳ್ಳಿಗಳಿಗೆ ರಸ್ತೆ ಮಾರ್ಗವೇ ಇಲ್ಲ ಟೆಲಿಫೋನ್ ನೆಟ್ವರ್ಕ ಇಲ್ಲ ಇದಕ್ಕೆಲ್ಲ ಮೂಲ ಕಾರಣ ಕಡಿಮೆ ಜನಸಂಖ್ಯೆ ಈ ಜನಸಂಖ್ಯೆ ಶಾಪ ಈಗ ನಮ್ಮ ಜಿಲ್ಲೆಯ ಮಹಾನಗರಗಳಿಗು ತಟ್ಟಿತೆ..!!?
ಸರ್ಕಾರ ಜನಸಾಂದ್ರತೆ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಸೂಕ್ತ.

– ಮಂಜುನಾಥ ಶೆಟ್ಟಳ್ಳಿ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ