ಶಿರಸಿ, ಅ.೬: ಶಿರಸಿ ಸಿದ್ಧಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಯಾರಿಗೆ ಟಿಕೆಟ್ ಎಂಬುದು ಇನ್ನೂ ಖಚಿತವಾಗಿಲ್ಲ. ಹಾಲಿ ಶಾಸಕರಾದ ವಿಶ್ವೇಶ್ವರ ಹೆಗಡೆಯವ ಕ್ಷೇತ್ರ ಬದಲಾಗುತ್ತದೆ ಎನ್ನುವ ಗಾಳಿಸುದ್ದಿ ಕ್ಷೇತ್ರದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದ್ದು ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವವರಿಗೆ ಆದ್ಯತೆ ಎಂಬ ಪಕ್ಷದ ಮುಖಂಡರ ಹೇಳಿಕೆಯು ಸೊಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಅಲೆ ಎಬ್ಬಿಸಿದೆ. ಅದಕ್ಕಾಗಿ ಫೇಸ್ ಬುಕ್ ನಲ್ಲಿ ಅನಾಮಧೇಯರು ಮಾಡಿರುವ ಸಮೀಕ್ಷೆಯಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಮಾಡಿದ್ದು ಹಾಲಿ ಶಾಸಕ ಕಾಗೇರಿ, ಬಿಜೆಪಿಯ ಕೃಷ್ಣ ಎಸಳೆ, ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಯುವ ಮೋರ್ಚಾದ ಗುರುಪ್ರಸಾದ ಹೆಗಡೆ ಮತ್ತು ಇತರೆ ಎನ್ನುವ ಹೆಸರುಗಳಿದ್ದು ವೋಟ್ ಮಾಡಲು ಆಯ್ಕೆಗಳಿವೆ. ಅದರಲ್ಲಿ ಪ್ರಸ್ತುತ ಗುರುಪ್ರಸಾದ ಹೆಗಡೆ ಮುಂಚೂಣಿಯಲ್ಲಿದ್ದು ಕಾಗೇರಿ ಎರಡನೇ ಹಾಗೂ ಕೃಷ್ಣ ಎಸಳೆ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಇಲ್ಲಿ ಸೋಜಿಗದ ವಿಚಾರವೇನೆಂದರೆ ಗುರುಪ್ರಸಾದ ಹೆಗಡೆ ಯಾರು ಎಂಬುದು ಸ್ಥಳಿಯ ಬಹುತೇಕರಿಗೆ ತಿಳಿದೇ ಇಲ್ಲ‌.

ಇದು ವರಿಷ್ಠರ ಗಮನ ಸೆಳೆಯುವ ಸ್ಟಂಟ್ ಎಂಬುದು ಹಲವರ ಅಂಬೋಣ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ ಶಾ ಸಾಮಾಜಿಕ ತಾಣಗಳಲ್ಲಿ ಅತ್ಯಂತ ಸಕ್ರೀಯರಾಗಿರುವವರಿಗೆ ಟಿಕೆಟ ನೀಡುತ್ತಾರೆ, ಎಂಬ ಸುದ್ದಿಯ ಬೆನ್ನಲ್ಲಿ ಇಂತಹ ಸ್ಟಂಟ್ ಗೆ ಕೆಲ ಆಕಾಂಕ್ಷಿಗಳು ಮುಂದಾಗಿದ್ದಾರೆ ಎಂಬ ಗುಸುಗುಸು ಸುದ್ದಿ ಮಾಡುತ್ತಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ