ಶಿರಸಿ, ಅ.5: ಕಳೆದ 25 ವರ್ಷಗಳ ಹಿಂದೆ ಭೈರುಂಬೆ ಹಾಲು ಉತ್ಪಾದಕರ ಸಂಘಕ್ಕೆ ನಿರಂತರವಾಗಿ ಮತ್ತು ಗುಣಮಟ್ಟದಹಾಲು ಪೂರೈಸಿದ್ದಕ್ಕಾಗಿ ಎಂ.ಪಿ. ಜೋಶಿ ಹುಳಗೋಳ ದಂಪತಿಗಳನ್ನು ಹುಳಗೋಳ ಸೇವಾ ಸಹಕಾರಿ ಸಂಘದಲ್ಲಿ ಸನ್ಮಾನಿಸಲಾಯಿತು. ಭೈರುಂಬೆ ಹಾಲು ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಜಿ.ಎಂ.ಹೆಗಡೆ ಹುಳಗೋಳ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕೆ.ಎಂ.ಎಫ್ ಉಪವ್ಯವಸ್ಥಾಪಕ ಡಾ| ಸಂತೋಷ ಹಂಜಗಿ, ಸಂಘದ ಉಪಾಧ್ಯಕ್ಷ ಸತೀಶ ದೇವ್ ಬೆಳಲೆ, ವಿಸ್ತರಣಾಧಿಕಾರಿ ಪ್ರವೀಣ್ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ