ಶಿರಸಿ, ಅ.5: ಫೇಸ್ ಬುಕ್ ಸಾಮಾಜಿಕ ಜಾಲತಾಣದ ಚಿಗುರು ಗುಂಪಿನ ಸದಸ್ಯರಿಂದ ಇದೇ ಮೊದಲ ಬಾರಿಗೆ ‘ಚಿಗುರು ಸ್ನೇಹ ಸಮ್ಮೇಳನ’ವನ್ನು ಅಕ್ಟೋಬರ್ 8ರಂದು ಶಿರಸಿಯ ಯಲ್ಲಾಪುರ ರಸ್ತೆಯಲ್ಲಿರುವ ಅರಣ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9.30ರಿಂದ ಕಾರ್ಯಕ್ರಮ ಆರಂಭವಾಗಲಿದ್ದು ಸಮ್ಮೇಳನದ ಅತಿಥಿಗಳಾಗಿ ಸಾಮಾಜಿಕ ಮುಖಂಡರಾದ ಶಶಿಭೂಷಣ ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಶೋಖ ಭಟ್, ಸಿದ್ಧಾಪುರದ ಶೃಂಗೇರಿ ಮಠದ ಧರ್ಮದರ್ಶಿಗಳಾದ ವಿಜಯ ಹೆಗಡೆಯವರೊಂದಿಗೆ ದೀಪಕ ಹೆಗಡೆ ದೊಡ್ಡೂರು ಹಾಗೂ ಸೂರ್ಯನಾರಾಯಣ ಹೆಗಡೆಯವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಮತಿ ಕುಸುಮಾಕ್ಷಿ ವೆಂಕಟ್ರಮಣ ಭಟ್ಟ, ಕಲ್ಗಾರವಡ್ಡು ಅವರಿಗೆ ಚಿಗುರು ಬಳಗದಿಂದ ಸನ್ಮಾನವಿದೆ.

ನಂತರ ಭಾಷೆ, ಸಂಸ್ಕೃತಿ ಹೊಂದಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದ ಖುಷಿ ಹೆಚ್ಚಿಸಲಿದ್ದು, ಪೂಜಾ ಲೋಕೇಶ ಅವರ ಭರತನಾಟ್ಯ, ಹಿಲ್ಲೂರ್ ಸುಮಧುರ ಕಂಠಕ್ಕೆ ಕಾಸರಕೋಡ ಅಜ್ಜಿಯ ಹೆಜ್ಜೆಯ ಯಕ್ಷಹಾಡಿನ ಹಾಸ್ಯ ಮತ್ತಷ್ಟು ಮನರಂಜನೆ ಒದಗಿಸಲಿದೆ. ಸ್ಪೀಡ ಪೇಂಟ್, ಲೋಹತರಂಗ, ಯಕ್ಷನೃತ್ಯ, ರಿಂಗ್ ಡ್ಯಾನ್ಸ್, ಬಾಚಣಿಕೆ ವಾದನ, ಮಿಮಿಕ್ರಿ ಮುಂತಾದವುಗಳು ಚಿಗುರಉ ಸಂಭ್ರಮದಲ್ಲಿ ಅನಾವರಣಗೊಳ್ಳಲಿವೆ. ಈ ಕಾರ್ಯಕ್ರಮಕ್ಕೆ ಸೀಮಾ-ನರಸಿಂಹ ದಂಪತಿಗಳು, ಅಬ್ರಿಮನೆ ಹಾಗೂ ಅಡ್ಮಿನ್ ಬಳಗದವರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ