ನಮ್ಮ ದೇಶದಲ್ಲಿ ಹಬ್ಬಗಳಿಗೆ ಕೊರತೆ ಇಲ್ಲ, ಅದರಲ್ಲೂ ದಕ್ಷಿಣ ರಾಜ್ಯ ಕರ್ನಾಟಕದಲ್ಲಿ ಹಬ್ಬಗಳು ಜನರ ಜೀವನದ ದೊಡ್ಡ ಭಾಗವೆ ಆಗಿದೆ. ಕರ್ನಾಟಕದ ವಿವಿಧ ಭಾಗದಲ್ಲಿ ವಿವಿಧ ರೀತಿಯಲ್ಲಿ ಹಬ್ಬ ಆಚರಣೆಗಳು ಇವೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಎಂದು ವಿವಿಧ ಭಾಗದ ಜನರು ಬೇರೆಬೇರೆ ರೀತಿಯಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ ಅದರಲ್ಲೂ ಉತ್ತರ ಕರ್ನಾಟಕದ ಜನ ಹಬ್ಬ ಆಚರಣೆಯಲ್ಲಿ ತಮ್ಮದೇ ಆದ ಸಂಪ್ರದಾಯದ ಚಾಪು ಮೂಡಿಸಿದ್ದಾರೆ. ದಸರಾ ಮತ್ತು ದೀಪಾವಳಿ ನಮ್ಮ ಹಿಂದೂ ಧರ್ಮದಲ್ಲಿ ಆಚರಿಸುವ ಅತಿ ದೊಡ್ಡ ಹಬ್ಬಗಳು ಈ ಹಬ್ಬಗಳ ನಡುವೆ ಬಂದು ಹೊಗುವ ದೊಡ್ಡ ಹಬ್ಬವೇ ಭೂಮಿ ಹುಣ್ಣಿಮೆ ಅಥವಾ ಸೀಗೆ ಹುಣ್ಣುಮೆ.

ನಮ್ಮ ಸಂಸ್ಕೃತಿಯಲ್ಲಿ ತುಂಬು ಗರ್ಭಿಣಿಗೆ ಸೀಮಂತ ಮಾಡುವುದು ಒಂದು ಸಂಪ್ರದಾಯ. ಶ್ರಾವಣ ಮಾಸದ ಪೂರ್ವದಲ್ಲಿ ಸುರಿಯುವ ಮುಂಗಾರು ಮಳೆಯ ಸಂದರ್ಭದಲ್ಲಿ ಬಿತ್ತಿದ ಬೀಜ ಮೊಳಕೆ ಒಡೆದು ಆಶ್ವೀಜ ಕೊನೆಯಾರ್ದದಲ್ಲಿ ಬೆಳೆದ ಪೈರು ರೈತನ ಮೊಗದಲ್ಲಿ ಮಂದಹಾಸ ಬೀರಿಸುತ್ತದೆ‌. ಆಗ ಭೂಮಿತಾಯಿ ತುಂಬು ಗರ್ಭಿಣಿಯಂತೆ ಕಂಗೊಳಿಸುತ್ತಾಳೆ. ಆಶ್ವೀಜ ಮಾಸದಲ್ಲಿ ಬರುವ ಸೀಗೆ ಹುಣ್ಣುಮೆಯಲ್ಲಿ ಭೂಮಿತಾಯಿಗೆ ಸೀಮಂತ ಮಾಡುವ ವಿಶಿಷ್ಟ ಸಂಪ್ರದಾಯವೇ ಸೀಗೆ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಹಬ್ಬ. ಈ ಹಬ್ಬದಲ್ಲಿ ಭೂಮಿತಾಯಿಗೆ ಹೊಸ ಸೀರೆ ಕುಪ್ಪಸ ಉಡಿಸಿ ವಿವಿಧ ರೀತಿಯ ತಿನಿಸುಗಳನ್ನು ಮಾಡಿ ನೆಯವೆದ್ದೆ ಮಾಡುವುದು ರೂಡಿ ವಿಶೆಷವಾಗಿ ಈ ಹಬ್ಬದಲ್ಲಿ ಐದು ರೀತಿಯ ತರಕಾರಿ ಪಲ್ಯ ಅದರಲ್ಲೂ ಬದನೆಕಾಯಿ ಮತ್ತು ಪುಂಡಿಸೊಪ್ಪಿನ ಪಲ್ಯ ಕಡ್ಡಾಯವಾಗಿ ಮಾಡ್ತರೆ ಅಷ್ಟೆ ಅಲ್ಲ ಕುಚ್ಚಿದ ಕಾರ ಅಂದರೆ ಬೆಯಿಸಿದ ಹಸಿಮೆಣಸಿನಕಾಯಿ ಚಟ್ನಿ, ಕಾಳುಗಳ ಪಲ್ಯ , ತುಂಬಿದ ಮೆಣಸಿನಕಾಯಿ , ಶೆಂಡಿಗೆ , ಮಜ್ಜಿಗೆ ಮೆಣಸಿನಕಾಯಿ ,ಕೊಸಂಬರಿ , ಕೊಡಬೆಳೆ ,ಚಕ್ಕೂಲಿ , ಕರ್ಜಿಕಾಯಿ, ಅಕ್ಕಿ ಪಾಯಸ, ಮೊಸರು ಬುತ್ತಿ ,ಹುಳಿ ಬುತ್ತಿ, ಅಕ್ಕಿಕಡುಬು, ಗಟ್ಟಿ ಕಡಕಲ ರೊಟ್ಟಿ ಕೆನೆಮೊಸರು, ಶೆಂಗಾಚಟ್ನಿ, ಗುರೆಳ್ಳೂ ಚಟ್ನಿ ಹೀಗೆ ಹಲವಾರು ರೀತಿಯ ತಿನಿಸುಮಾಡಿಕೊಂಡು ಮನೆಯವರೆಲ್ಲರೂ ಎತ್ತಿನ ಗಾಡಿ ಅಥವ ಟ್ರ್ಯಾಕ್ಟರ್ನಲ್ಲಿ ತಮ್ಮ ಹೊಲಕ್ಕೆ ಹೋಗಿ, ಬೇಳೆದ ಹಸಿರು ಬೆಳೆಯಲ್ಲಿ ಚಪ್ಪರ ಮಾಡಿ ಅದರಲ್ಲಿ ಪಾಂಡವರು ಮತ್ತು ಕರ್ಣನ ಪ್ರತಿರೂಪದಂತೆ ಆರು ಕಲ್ಲುಗಳನ್ನು ಇಟ್ಟು ಅದಕ್ಕೆ ಸುಣ್ಣ ಮತ್ತು ಕೆಮ್ಮಣ್ಣು ಹಚ್ಚಿ ಜೊತೆಗೊಂದು ಕುಡಗೋಲು ಇಟ್ಟು ಮನೆಯವರೆಲ್ಲ ಸೆರಿ ಪೂಜಿಸುತ್ತಾರೆ . ತಾವು ತಂದ ಎಲ್ಲ ತಿನಿಸುಗಳನ್ನು ನೆಯವೆದ್ದೆ ಮಾಡಿ ಎಲ್ಲರೂ ಜೊತೆಗೂಡಿ ಊಟ ಮಾಡುತ್ತಾರೆ ಅವತ್ತು ಹೊಲದಲ್ಲಿ ಚಿಕ್ಕ ಮಕ್ಕಳಿಂದ ವೃದ್ದರು ಎಲ್ಲರೂ ಸೇರಿ ಊಟ ಮಾಡುವುದು ಆಟ ಆಡುವುದು ಎಲ್ಲವೂ ಸಂಬ್ರಮವೊ ಸಂಬ್ರಮ ಈ ಹಬ್ಬವನ್ನು ಕೆಲವು ಊರುಗಳಲ್ಲಿ ಹುಣ್ಣಿಮೆ ದಿನ ಆಚರಿಸಿದರೆ ಇನ್ನೂ ಕೆಲ ಊರುಗಳಲ್ಲಿ ಹುಣ್ಣಿಮೆಯ ಪೂರ್ವದ ಶುಕ್ರವಾರ ಅಥವಾ ಮಂಗಳವಾರ ಆಚರಿಸುತ್ತಾರೆ.

– ಮಂಜುನಾಥ ಶೆಟ್ಟಳ್ಳಿ, ಶಿರಸಿ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ