ಶಿರಸಿ, ಅ.೪: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸುಧರ್ಮ ಸಭಾಭವನದಲ್ಲಿ ಅಕ್ಟೋಬರ 6 ಶುಕ್ರವಾರದಂದು ಮಾತೆಯರ ಸಮಾವೇಶ ನಡೆಯಲಿದೆ. ಬೆಳಗ್ಗೆ 9.30 ಘಂಟೆಯಿಂದ ಮಾತೆಯರಿಂದ ಭಗವದ್ಗೀತೆ ಪಠಣ ಹಾಗೂ ಸೌಂದರ್ಯಲಹರೀ ಪಾರಾಯಣ ನಡೆಯಲಿದೆ. 10.30 ಘಂಟೆಗೆ ಉದ್ಘಾಟನೆಗೊಳ್ಳಲಿದ್ದು, ಡಾ|| ಶ್ರೀಮತಿ ಆರತಿ ವಿಬಿ, ಅಧ್ಯಕ್ಷರಾಗಿ ಶ್ರೀ ವಿ.ಎನ್ ಹೆಗಡೆ ಬೊಮ್ನಳ್ಳಿ, ಅತಿಥಿಗಳಾಗಿ ಡಾ|| ಶ್ರೀಮತಿ ರೂಪಾ ಭಟ್ಟ ಹಾಗೂ ಶಿವಮೊಗ್ಗದವರಾದ ಶ್ರೀಮತಿ ಕೆ.ಎಂ.ಫಲ್ಫು ಪಾಲ್ಗೊಳ್ಳಲಿದ್ದಾರೆ. ತದನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ.

ಮಧ್ಯಾಹ್ನ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ನೀಡಿ ಆಶೀರ್ವಚನ ನೀಡಲಿದ್ದಾರೆ. ಹಾಗೂ ಮಾತೆಯರ ಸಮಾವೇಶದಲ್ಲಿ ಸೋಂದಾ ಸೀಮೆಯ ಕಾಂತಿದೇವರಕೊಪ್ಪದ ಶ್ರೀಮತಿ ಅನ್ನಪೂರ್ಣ ರಾಮಚಂದ್ರ ಹೆಗಡೆ ಹಾಗೂ ಯಲ್ಲಾಪುರ ಸೀಮೆಯ ಶ್ರೀಮತಿ ಗಂಗಾ ತಿಮ್ಮಣ್ಣ ಭಟ್ಟ ಸೂಳಗಾರ ಇವರನ್ನು ಸನ್ಮಾನಿಸಲಾಗುವುದು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ