ಶಿರಸಿ, ಅ.೪: ಇದೇ ಬರುವ ಅಕ್ಟೋಬರ್ ೭ ಮತ್ತು ೮ ರಂದು ಸೋಂದಾದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಇತಿಹಾಸೋತ್ಸವ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಜಾಗೃತಿ ಮತ್ತು ಸ್ಮರಣೀಯತೆಗಾಗಿ ಸೋಂದಾ ದ ಮೂರು ಮಠಗಳಿಂದ ಇತಿಹಾಸ ಜ್ಯೋತಿ ಹೊರಡಲಿದ್ದು ಜಾತಿ ಧರ್ಮ ಭೇದವಿಲ್ಲದೆ ಸೋಂದಾದ ಪ್ರತಿಮನೆಗೂ ತೆರಳಿ ಸೋಂದಾದ ೩೦೦ ಮನೆಯಲ್ಲೂ ಇತಿಹಾಸೋತ್ಸವ ಜ್ಯೋತಿ ಬೆಳಗಲಿದೆ.

೯ ಘಂಟೆಗೆ ಸ್ವರ್ಣವಲ್ಲೀ ಮಠ, ೯.೧೫ ವಾದಿರಾಜಮಠ, ೯.೩೦ ಕ್ಕೆ ಜ್ಯೋತಿ ಸ್ವಾದಿ ಜೈನಮಠ ತಲುಪಿ ಅಲ್ಲಿಂದ ೮ ವಿಭಾಗಗಳಾಗಿ ಪ್ರತಿ ಮನೆಯನ್ನೂ ತಲುಪಿ ಮನೆಮನೆಯಲ್ಲೂ ಇತಿಹಾಸೋತ್ಸವ ಜ್ಯೋತಿ ಬೆಳಗಲಿದೆ. ನಂತರ ಅದೇ ಜ್ಯೋತಿಯಿಂದ ದಿನಾಂಕ ೭ ರಂದು ಸೋದೆ ಅರಸ ವಂಶಸ್ಥರಾದ ಮಧುಲಿಂಗ ರಾಜೇಂದ್ರ ಒಡೆಯರು ಮತ್ತು ಪರಮಪೂಜ್ಯ ಗುರುದ್ವಯರ ಅಮೃತ ಹಸ್ತದಿಂದ ಇತಿಹಾಸೋತ್ಸವ ಉದ್ಘಾಟನೆಗೊಳ್ಳಲಿದೆ ಎಂದು ಈ ಕಾರ್ಯಕ್ರಮದ ರೂವಾರಿ ಲಕ್ಷ್ಮೀಶ ಹೆಗಡೆ ಸೋಂದಾ ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ