ಕಾರವಾರ, ಅ.೩: ಕಿಡಿಗೇಡಿಗಳು ಬೆಂಕಿಹಚ್ಚಿರುವ ಘಟನೆಯಿಂದ ನಗರದ ಎಂಜಿ ರಸ್ತೆಯಲ್ಲಿರುವ ಭೂ ಮಾಪನ ಇಲಾಖೆಯ ಶೆಡ್ಡಿನಲ್ಲಿ ನಿಲ್ಲಿಸಿಟ್ಟಿದ್ದ ಸುಮಾರು ೯ ಬೈಕ್ ಗಳು ಬೆಂಕಿಗಾಹುತಿಯಾಗಿದೆ.
ಸೀಬರ್ಡ್ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ತೆರಳುವ ಸ್ಥಳೀಯರು ಇದೇ ಶೆಡ್ ನಲ್ಲಿ ಪ್ರತಿದಿನ ಬೈಕ್ ಇಟ್ಟು ತೆರಳುತ್ತಿದ್ದರು. ಆಗ ಕೆಲವರು ಬಂದು ಅವರ ಬೈಕುಗಳಿಂದ ಪೆಟ್ರೋಲ್ ಅನ್ನು ಕದಿಯುತ್ತಿದ್ದರು.

ಆದರೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಷಯ ತನಿಖೆಯಿಂದ ಬಯಲಾಗಬೇಕಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ