ದಾವಣೆಗೆರೆಯಲ್ಲಿ ಭಾರಿ ಮಳೆ; ಪಾಲಿಕೆಯ ಅವ್ಯವಸ್ಥೆಗೆ ಜನಜೀವನ ಅಸ್ತವ್ಯಸ್ಥ

ದಾವಣಗೆರೆ, ಅ.3: ನೆನ್ನೆ ರಾತ್ರಿ ನಗರದಲ್ಲಿ ಭಾರೀ ಮಳೆಯಾಗಿದೆ. ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿ ಸಾವುರಾರು ಮನೆಗಳಿಗೆ ನೀರು ನುಗ್ಗಿದೆ. ಒಂದೆಡೆ ನೌಕಕರಿಗೆ ಮನೆಗೆ ಹೋಗಲೂ ಆಸ್ಪದಕೊಡದಂತೆ ಮಳೆಯು ಸುರಿದರೆ, ಇನ್ನೊಂದೆಡೆ ಆಲೂರು, ಬೇತೂರು ಕೆರೆ ಕೋಡಿ ಹೊಡೆದು ನೂರಾರು ಎಕರೆ ಬೆಳೆ ನಷ್ಟವಾಗಿದೆ.

ನಗರದಲ್ಲಿ ಪಾಲಿಕೆ ಹಾಗೂ ಜಿಲ್ಲಾಡಳಿತ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಹತ್ತಾರು ವಾಹನಗಳು ಈ ಮಳೆಯಿಂದ ಗುಂಡಿಗೆ ಬಿದ್ದಿವೆ. ಶಾಮನೂರು ಶಿವಶಂಕರಪ್ಪ ಮಲ್ಲಿಕಾರ್ಜುನ ನಗರ, ಪಾರ್ವತಮ್ಮ ನಗರ, ಬಸಾಪುರ, ನಗರದ 14ನೆ ವಾರ್ಡಿನ ಮನೆಗಳು ಬಹಳಷ್ಟು ಹಾನಿಗೊಳಗಾಗಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೌಜನ್ಯಕ್ಕೂ ಭೇಟಿನೀಡದ್ದರಿಂದ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ