ಶಿರಸಿ,ಅ 3:ತಾಲೂಕಿನ ಕಕ್ಕಳ್ಳಿಯಲ್ಲಿ ಮೆಣಸಿ ಸೊಸೈಟಿ, ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ವಿವಿಧ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾನಮುಸ್ಕಿ ಫೌಂಡೇಶನ್ ‘ಪಶು ಸಂಗೋಪನೆಯಲ್ಲಿ ಇತ್ತೀಚಿನ ಪ್ರಗತಿ’ ಎಂಬ ಉಪನ್ಯಾಸ ಕಾರ್ಯಾಗಾರವನ್ನು ಭಾನುವಾರ ಆಯೋಜಿಸಿದ್ದರು. ಸಮರ್ಪಣಾ ಪಶು ಚಿಕಿತ್ಸಾ ಕೇಂದ್ರದ ಮುಖ್ಯಸ್ಥರಾದ ಡಾ. ಪಿ.ಎಸ್.ಹೆಗಡೆ ಹೊನ್ನೆಗದ್ದೆ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡಿದರು.ಉಪನ್ಯಾಸ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕೃಷ್ಣ ಹೆಗಡೆ ವಹಿಸಿದ್ದರು.

ಅತಿಥಿಯಾಗಿ ವಾನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆಯಾದ ಅನಸೂಯಾ ಭಟ್ಟ, ಮುಸ್ಕಿ ಹಾಗೂ ಕಾನಮುಸ್ಕಿ ಫೌಂಡೇಶನ್ ಸದಸ್ಯರಾದ ಅನಂತ ಹೆಗಡೆ ಮುಲೇದೇವಿತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ