ಶಿರಸಿ, ಅ.೩: ನಗರದ ಪದವಿ ಕಾಲೇಜಿನಲ್ಲಿ ಸಮಾಜಶಾಸ್ತ್ರವನ್ನು ಬೋದಿಸುತ್ತಿರುವ ಶಿಕ್ಷಕಿಯೋರ್ವರು ಹಿಂದೂ ಧರ್ಮದ ಪವಿತ್ರ ಗ್ರಂಥ ವಾದ ಭಗವದ್ಗೀತೆಯ ಬಗ್ಗೆ ಅದರಲ್ಲೂ ಶ್ರೀ ಕೃಷ್ಣ ನ ಬಗ್ಗೆ ಅವಹೇಳನ ಮಾಡಿದ್ದಾರೆ‌ ಎನ್ನಲಾಗುತ್ತಿದೆ. ಶಿಕ್ಷಕಿ ಸೌಪರ್ಣಿಕ ಎನ್ನುವವರು ಶ್ರೀ ಕೃಷ್ಣ ನು ಭಗವದ್ಗೀತೆಯಲ್ಲಿ ನಾನು ದನದ ಮಾಂಸ ತಿನ್ನುತ್ತಿದ್ದೇನೆ ಎಂದು ಹೇಳಿದ್ದಾನೆ ಎಂಬುದಾಗಿ ಬಿ.ಎ. ಎರಡನೆ ಕ್ಲಾಸಿನ ತರಗತಿಯಲ್ಲಿ ಈ ರೀತಿ ಹೇಳಿದ್ದಾರಂತೆ. ಇದನ್ನು ಅಲ್ಲಿಯ ವಿದ್ಯಾರ್ಥಿಗಳು ವಿರೋಧಿಸಿದಾಗ ಸಮರ್ಥನೆ ಬೇರೆ ಕೊಟ್ಟಿದ್ದಾರಂತೆ. ಇದು ಈಗ ನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ದೊಡ್ಡ ವಿವಾದವಾಗುವ ಸಂಭವವಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ