ಅಂಕೋಲಾ, ಅ.೩ : ತಾಲೂಕಿನ ಸುಂಕಸಾಳ ಸಮೀಪ ಇಟ್ಟಿಗೆ ತುಂಬಿದ್ದ ಲಾರಿ ಪಲ್ಟಿಯಾದ ದುರ್ಘಟನೆ ಇಂದು ಮುಂಜಾನೆ ಸಂಭವಿಸಿದೆ. ಈ ಅಪಘಾತದಲ್ಲಿ ಲಾರಿ ಕ್ಲೀನರ್ ಶರೀಫ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ಕಲಘಟಗಿಯಿಂದ ಅಂಕೋಲಾಕ್ಕೆ ಬರುತ್ತಿತ್ತು. ಸ್ಥಳಕ್ಕೆ ಹೆದ್ದಾರಿ ಗಸ್ತು ವಾಹನ ಆಗಮಿಸಿದ್ದು ಪ್ರಕರಣ ದಾಖಲಾಗಿದೆ.