ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್‍ನ ಹಿರಿಯ ಸ್ವಾಮಿಗಳೂ, ವಿದ್ವಾಂಸರೂ ಪ್ರಪಂಚದಾದ್ಯಂತ ಸಂಸ್ಥೆಯ ವಿವಿಧ ಕಾರ್ಯಕ್ರಮಗಳನ್ನು ಹಾಗೂ ಉನ್ನತ ಧ್ಯಾನ ಶಿಬಿರಗಳನ್ನು ನಡೆಸಿಕೊಡುವ ಸ್ವಾಮಿ ಸೂರ್ಯಪಾದರಿಂದ ಶರನ್ನವರಾತ್ರಿ ಪ್ರಯುಕ್ತ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಅಕ್ಟೋಬರ್ 2 ಸೋಮವಾರದಂದು ಸಂಜೆ 5.30 ರಿಂದ 7.30ರವರೆಗೆ ಸತ್ಸಂಗ, ಭಜನಾ ಕಾರ್ಯಕ್ರಮ ಏರ್ಪಾಟಾಗಿದೆ. ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಪೂಜ್ಯರು ಅಪೂರ್ವ ಭಕ್ತಿ ಸಂಪನ್ನ ಭಜನೆಗಳಿಗೆ ಜನಪ್ರಿಯರು.

ಶಿರಸಿ ಹಾಗೂ ಸುತ್ತಮುತ್ತಲಿನ ಎಲ್ಲ ಸದ್ಭಕ್ತರು ಈ ಒಂದು ಅಪೂರ್ವ ಕಾರ್ಯಕ್ರಮದ ಪ್ರಯೋಜನವನ್ನು ತಾಯಿಯ ಸಾನ್ನಿಧ್ಯದಲ್ಲಿ ಪಡೆದುಕೊಳ್ಳಬೇಕೆಂದು ಸಂಘಟಕರ ಪರವಾಗಿ ಶ್ರೀಕಾಂತ ಹೆಗಡೆ ತಿಳಿಸಿz್ದÁರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ