ಭಟ್ಕಳ, ಅ.೧: 2016-17ನೇ ಸಾಲಿನ ಸರ್ವಾಂಗೀಣ ಸಾಧನೆಗಾಗಿ ಶಿರಾಲಿ ಗ್ರಾಮ ಪಂಚಾಯತವನ್ನು “ಗಾಂಧಿ ಗ್ರಾಮ” ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಅಕ್ಟೋಬರ ೨ರ ಗಾಂಧಿಜಯಂತಿಯಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಗ್ರಾಮೀಣ ಹಾಗೂ ಪಂಚಾಯತರಾಜ್ ಸಚಿವರ ಸಮ್ಮುಖದಲ್ಲಿ ಗೌರವಿಸಲಾಗುವುದು. ಶಿರಾಲಿ ಗ್ರಾಮ ಪಂಚಾಯತ್ ಪರವಾಗಿ ಅಧ್ಯಕ್ಷ ವೆಂಕಟೇಶ ನಾಯ್ಕ ಪುರಸ್ಕಾರ ಸ್ವೀಕರಿಸಲಿದ್ದಾರೆ.

2012ರ ಬೇಸ್‍ಲೈನ್ ಸರ್ವೆ ಪ್ರಕಾರ “ಬಯಲು ಬಹಿರ್ದೆಸೆ ಮುಕ್ತ” ಗ್ರಾಮ ಪಂಚಾಯತ ಎಂದು ತಾಲೂಕಿನ ಹಾಡವಳ್ಳಿ, ಮಾರುಕೇರಿ, ಯಲ್ವಡಿಕವೂರ ಗ್ರಾಮ ಪಂಚಾಯತಗಳನ್ನು ಆಯ್ಕೆ ಮಾಡಲಾಗಿತ್ತು. ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತ ಪರವಾಗಿ ಹಾಡವಳ್ಳಿ ಗ್ರಾ.ಪಂ.ಅಧ್ಯಕ್ಷ ಶ್ರೀಧರ ಶೆಟ್ಟಿ, ಪಂ.ಅ.ಅಧಿಕಾರಿ ಕರಿಯಪ್ಪ ನಾಯ್ಕ. ಮಾರುಕೇರಿ ಅಧ್ಯಕ್ಷ ನಾರಾಯಣ ಹೆಬ್ಬಾರ, ಪಂ.ಅ.ಅಧಿಕಾರಿ ಮಹೇಶ ಎಸ್.ನಾಯ್ಕ. ಯಲ್ವಡಿಕವೂರ ಅಧ್ಯಕ್ಷೆ ಸುಶೀಲಾ ನಾಯ್ಕ, ಪಂ.ಅ.ಅಧಿಕಾರಿ ನಾಗರಾಜ ಅಂಬಿಗ ಭಾಗವಹಿಸಲಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ