ಕುಮಟಾ, ಅ.೧: ಸ್ವಸ್ತಿ ಪ್ರಕಾಶನವು ಹೊಸ ಕಾದಂಬರಿಕಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ರಾಜ್ಯ ಮಟ್ಟದ ಕಾದಂಬರಿ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಇದುವರೆಗೆ ಒಂದೂ ಕಾದಂಬರಿ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು
ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಹೊರಬಂದಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನ್ನಿಸಿದ ಸುಮಾರು ೧೪೦ರಿಂದ ೧೮೦
ಪೇಜ್ (ಪಾಂಟ್ ಸೈಜ್ 12) ಅಪ್ರಕಟಿತ ಸ್ವಂತ ಕಾದಂಬರಿಯನ್ನು ಡಿಟಿಪಿ ಮಾಡಿಸಿ ಕಳುಹಿಸಬೇಕು. ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.

ಆಯ್ಕೆಯಾದ ಕಾದಂಬರಿಕಾರರಿಗೆ ಐದುಸಾವಿರ ರೂಪಾಯಿ ನಗದು ಬಹುಮಾನ ಮತ್ತೆ ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುವುದು. ಕಾದಂಬರಿಯನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆಗೆ 25 ಪುಸ್ತಕಗಳನ್ನು ಲೇಖಕರು ಪಡೆದುಕೊಳ್ಳಬಹುದು. ಈ ಪ್ರಶಸ್ತಿಯನ್ನು ನವೆಂಬರ್ ಕೊನೆಯಲ್ಲಿ ಕುಮಟಾ ದಲ್ಲಿ ಪ್ರಕಟಿಸಲಾಗುವುದು. ಕಾದಂಬರಿಯನ್ನು ಕಳಿಸಲು ಕೊನೆಯ ದಿನಾಂಕ: ಅಕ್ಟೋಬರ್ ೫,೨೦೧೭

ಕಳಿಸಬೇಕಾದ ವಿಳಾಸ
ಸ್ವಸ್ತಿ ಪ್ರಕಾಶನ,
“ಐಸಿರಿ”
ರಾಷ್ಟ್ರೀಯ ಹೆದ್ದಾರಿ 66. ಹೊಸ ಬಸ್ ನಿಲ್ದಾಣದ ಹತ್ತಿರ ಕುಮಟಾ. (ಉತ್ತರ ಕನ್ನಡ)
ಮೊಬೈಲ್ ನಂಬರ ೯೪೮೩೬೧೭೮೭೯ / ೯೯೪೫೫೪೬೬೧೫​
swastiprakashana@gmail.com

ಸ್ಪರ್ಧೆಯ ನಿಯಮಗಳು ಇಂತಿವೆ :

1) ಪ್ರತಿ ಸಾಹಿತಿಯು ತಮಗೆ ಉತ್ತಮವೆನಿಸಿದ ಒಂದು ಕಾದಂಬರಿ ಮಾತ್ರ ಕಳುಹಿಸಿ ಕೊಡಬೇಕು.

2) ಅಪ್ರಕಟಿತ ಸ್ವಂತ ಕಾದಂಬರಿ ಮಾತ್ರ ಡಿಟಿಪಿ ಯಲ್ಲಿ(ಪಾಂಟ್ ಸೈಜ್ 12) ಕಳಿಸಿಕೊಡಬೇಕು.

3) ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೆ ಹಿಂತಿರುಗಿಸಲಾಗುವುದಿಲ್ಲ.

4) ನುಡಿ ಅಥವಾ ಬರಹದಲ್ಲಿರಲಿ.

5) ಕಥೆಯ ತಂತ, ಭಾಷೆ , ವಸ್ತು ನಿರೂಪಣೆಯಷ್ಟೆ ವ್ಯಾಕರಣ ಶುದ್ಧವಾಗಿರಲಿ.

6) ಸ್ಪರ್ಧೆಗೆ ಕಳುಹಿಸುವ ಮೊದಲು ಪುಸ್ತಕರೂಪದಲ್ಲಿ ಪ್ರಕಟಣೆಯಾಗಿರಬಾರದು.

7) ಆಯ್ಕೆಯಾದ ಕಾದಂಬರಿಕಾರರು ಪುಸ್ತಕ ಪ್ರಕಟಿಸುವಾಗ ಸ್ವಂತ ರಚನೆಯ ಬಗ್ಗೆ ಮುಚ್ಚಳಿಕೆ ಬರೆದುಕೊಡಬೇಕು.

8). ಈ ಮೇಲ್ ಮಾಡಬಹುದು. (ಹಾರ್ಡ ಕಾಪಿ ಕಡ್ಡಾಯ) ಕೊನೆಯ ದಿನಾಂಕಕ್ಕೂ ಮೊದಲು

ಪ್ರಕಾಶನದ ವಿಳಾಸಕ್ಕೆ ಹಾರ್ಡ ಕಾಪಿ ತಲುಪಬೇಕು. ಅವಧಿಯ ನಂತರ ಬಂದ ಕಾದಂಬರಿಗಳನ್ನು ಪರಿಗಣಿಸಲಾಗುವುದಿಲ್ಲ.

9) ಪುಸ್ತಕ ಆಯ್ಕೆ ನಾಡಿನ ಪ್ರಸಿದ್ಧ ಸಾಹಿತಿಗಳಿಂದ ಮಾಡಿಸಲಾಗುವುದು. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ

ಪ್ರಕಾಶಕರದ್ದೇ ಅಂತಿಮ ನಿರ್ಧಾರ.

# ಬರಹ ಕಳಿಸುವವರ ಗಮನಕ್ಕೆ _ ೧೪೦ರಿಂದ೧೮೦ಪೇಜ್ 1/8 ಡೆಮ್ಮೀ ಸೈಜ್.

A4th ಶೀಟ್ ಲ್ಲಿ ಇವು ಸಮ ಅರ್ಧ ಆಗಬಹುದು.

ಮಾಹಿತಿಗಾಗಿ ಕೊಟ್ಟಿರುವ ದೂರವಾಣಿ ಸಂಖ್ಯೆ ಅಥವಾ ಈ ಮೇಲ್ ಲ್ಲಿ ಸಂಪರ್ಕಿಸಿ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ