ಯಲ್ಲಾಪುರ, ಸೆ.೩೦: ಕೇಂದ್ರ ಸರ್ಕಾರದಿಂದ ದಿನಾಂಕ ಅಕ್ಟೋಬರ್ ೨೮ ರಿಂದ ನವೆಂಬರ್ ೧೮ ರವರೆಗೆ ಉತ್ತರಕನ್ನಡದ ಕುಮಟ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೊಬೈಲ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಬಂದು ನಿಲ್ಲಲಿದೆ. ಯಾವುದೇ ರೀತಿಯ ಅಪರೇಷನ್ ಗಳಿದ್ದರೆ, ಖಾಯಿಲೆಗಳಿದ್ದರು ಬಂದು ಉಚಿತವಾದ ಚಿಕಿತ್ಸೆ ಪಡೆಯಬಹುದು. ಇದರಲ್ಲಿ ಏಕಕಾಲದಲ್ಲಿ ಒಂದು ಸಾವಿರ ಜನರಿಗೆ ಚಿಕಿತ್ಸೆ ನೀಡಬಹುದಾಗಿದೆ. ದೇಶದ ಪ್ರಸಿದ್ದ ವೈದ್ಯರು ಇಲ್ಲಿ ಇರುತ್ತಾರೆ. ಸಾರ್ವಜನಿಕರು ಈ ಪ್ರಯೋಜನವನ್ನು ಪಡೆಯಬೇಕೆಂದು ಅನಂತಕುಮಾರ ಹೆಗಡೆಯವರು ಇಂದಿಲ್ಲಿ ತಿಳಿಸಿದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ