ಮುಂಡಗೋಡ ,ಸೆ.೩೦: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಲಿಸುತ್ತಿರಬೇಕಾದರೇ ಮುಂದಿನ ಬಲಭಾಗದ ಚಕ್ರ ಮುರಿದು ಬಸ್ ಅವಘಡಕ್ಕೀಡಾದ ಆಘಾತಕಾರಿ ಘಟನೆ ಇಂದು ಸಂಜೆ ೪ ಗಂಟೆ ಸುಮಾರಿಗೆ ತಡಸ ಮುಂಡಗೋಡ ಹೆದ್ದಾರಿಯಲ್ಲಿ ಸಂಭವಿಸಿದೆ. ಅಥಣಿಯಿಂದ ಮುರ್ಡೇಶ್ವರಕ್ಕೆ ಸಾಗುತ್ತಿದ್ದ ಈ ಬಸ್ ದುರ್ಘಟನೆಗೆ ಈಡಾಗಿದೆ.

ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ. ಕೂಡಲೇ ಬಸ್ ನಲ್ಲಿದ್ದವರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಯಿತು. ಆ ಸಮಯದಲ್ಲಿ ರಸ್ತೆ ಖಾಲಿ ಇದ್ದದ್ದರಿಂದ ಸಂಭವಿಸಬಹುದಾಗಿದ್ದ ಭಾರೀ‌ ಅನಾಹುತ ತಪ್ಪಿದಂತಾಗಿದೆ. ಮುಂದೆ ಈ ರೀತಿಯ ಅನಾಹುತ ನಡೆಯದಂತೆ ಸಂಸ್ಥೆ ಜಾಗೃತೆ ವಹಿಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ