ಶಿರಸಿ, ಸೆ.29: ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ಗಣಪತಿ ಹೆಗಡೆ, ಗಣೇಶ ಹೆಗಡೆ, ಶಶಿಕಾಂತ ಮೊಗೇರ, ಸಂತೋಷ ಮರಾಠ, ಚೇತನ ಭಂಡಾರಿ ಭಾಗವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಚೇತನ ಭಂಡಾರಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ಪ್ರೊ. ಜನಾರ್ಧನ ಭಟ್ಟ, ಕ್ರೀಡಾ ಸಂಚಾಲಕರಾದ ಡಿ.ಎಂ.ಹೆಗಡೆ ಮತ್ತು ಅಧ್ಯಾಪಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ