ಇತಿಹಾಸ ಪ್ರಸಿದ್ಧ ಬನವಾಸಿಯಲ್ಲಿ ಶರನ್ನವರಾತ್ರಿಯ ಅಂಗವಾಗಿ 8 ನೇ ದಿನ ಆಹ್ವಾನಿತ ಕಲಾವಿದರಿಂದ ಭಕ್ತಿ ಸಂಗೀತ ಮತ್ತು ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಸೌರಭ ಸಂಭ್ರಮದಿಂದ ಸಾಗಿತು. ಮಧುಕೇಶ್ವರ ದೇವಾಲಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಪ್ರೊ| ಡಾ|| ಜಿ.ಎ ಹೆಗಡೆ, ಸೋಂದಾ ಎಲ್ಲರನ್ನೂ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಮತ್ತು ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮಕ್ಕೆ ಮುನ್ನುಡಿ ನೀಡಿದರು. ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಸ್ಥಳೀಯರನ್ನು ಅಭಿನಂದಿಸಿದರು. ವೇದಮೂರ್ತಿ ಶ್ರೀನಿಧಿ ಭಟ್ಟ ಬನವಾಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಉಸ್ತುವಾರಿ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಮನಸಾ ಶ್ಲಾಘಿಸಿದರು. ವೇದಿಕೆಯಲ್ಲಿ ಧರ್ಮದರ್ಶಿಗಳಾದ ಶಿವಾನಂದ ದೀಕ್ಷಿತ, ಪ್ರೊ| ಜಿ.ಎ ಹೆಗಡೆ ಸೋಂದಾ, ಹನುಮಂತ ಮಡ್ಲೂರು, ಮಂಗಳ ದಾವಣಗೇರಿ ಉಪಸ್ಥಿತರಿದ್ದು, ಅತಿಥಿಗಳೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ವಿನಾಯಕ ಮುತ್ತಮುರ್ಡು ಡಾ|| ಭೀಮ್‍ಸೇನ್ ಜೋಶಿಯವರ ಜನಪ್ರಿಯ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಅಂತೆಯೇ ಸುಮಾ ರವೀಂದ್ರ ಅವರು ಭಕ್ತಿ ಸಂಗೀತ ಹಾಡಿ ಗಾನಸುಧೆಯನ್ನು ಉಣಬಡಿಸಿದರು. ಮಂಜುನಾಥ ಹೆಗಡೆ ಮೋಟಿನಸರ, ಸೀತಾ ಬಿಳಿಯೂರು ಮತ್ತು ರವೀಂದ್ರ ಸಾಥ್ ನೀಡಿದರು.

ನಂತರ ಸ್ಥಳೀಯರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದು ಜನಸಂದಣಿಯನ್ನು ಆಕರ್ಷಿಸುವ ಕಾರ್ಯಕ್ರಮವಾಯಿತು. ಮಹಿಳೆಯರಿಂದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಮಕ್ಕಳಿಂದ ನೃತ್ಯ ಸ್ಪರ್ಧೆ ನಡೆಯಿತು ಕೊನೆಯಲ್ಲಿ ಅಪರೂಪದ ಕಾರ್ಯಕ್ರಮವಾಗಿ ಅಂತ್ಯಾಕ್ಷರಿ ಸ್ಪರ್ಧೆ ನಡೆಯಿತು. ಗಂಗಾ, ಕಾವೇರಿ ವರದಾ ಮತ್ತು ತುಂಗಾ ಟೀಮ್‍ಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗಿನ ಬೆರಗು ತಂದರು. ಹಳೆಯ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಚಲನಚಿತ್ರ ಗೀತೆಗಳೆಲ್ಲಾ ಹಾಡಲ್ಪಟ್ಟು ಜನರ ನೆನಪನ್ನು ಕೆದಕಿದರು. ಶಿಕ್ಷಕ ಗೌರೀಶ ಅಡಿಗುಂಡಿ ಕಾರ್ಯಕ್ರಮ ನಿರ್ವಹಿಸಿದರು.

ದೇವಾಲಯದ ಕಮಿಟಿಯ ಸದಸ್ಯರು ಉಪಸ್ಥಿತರಿದ್ದು, ಕಲಾಗೌರವ ನೀಡಿ ಎಲ್ಲಾ ಕಲಾವಿದರನ್ನು ಗೌರವಿಸಿದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ