ಕುಮಟಾ, ಸೆ. ೨೯: ಅಕ್ಟೊಬರ್‌ ೨ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಉತ್ತರಕನ್ನಡ ಜಿಲ್ಲಾ ಗೋಪರಿವಾರದ ಮಾರ್ಗದರ್ಶನದಲ್ಲಿ ಕುಮಟಾ ತಾಲೂಕಾ ಗೋಪರಿವಾರ ಮತ್ತು ಎಲ್ಲಾ ಗ್ರಾಮಗೋಪರಿವಾರಗಳ ನೇತ್ರತ್ವದಲ್ಲಿ ಬೃಹತ್ ಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದ ಪ್ರಯುಕ್ತ ಅಂದು ಬೆಳಿಗ್ಗೆ 9:30ಕ್ಕೆ ಭೂದೇವಿ ಅಮ್ಮನವರ ದೇವಾಲಯದಿಂದ ಬ್ರಹತ್ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದ್ದು ಹಲವು ಸಂಘಟನೆಗಳ ಪ್ರಮುಖರು,ಗಣ್ಯರು,ಗೋಪ್ರೇಮಿಗಳು ಪಾಲ್ಗೊಳ್ಳಲಿದ್ದು ಕರ್ಕಿ ದೈವಜ್ಞ ಪೀಠದ ಸ್ವಾಮೀಜಿಯವರು ಮತ್ತು ಹಳದೀಪುರ ಕೆರೆಗದ್ದೆ ಸಂಸ್ಥಾನದ ಸ್ವಾಮೀಜಿಯವರನ್ನು ಆಮಂತ್ರಿಸಲು ತೀರ್ಮಾನಿಸಲಾಗಿದೆ.

ಎಲ್ಲಾ ಮಂಡಲಗಳ ಕಾರ್ಯಕರ್ತರು, ಶ್ರೀಮಠದ ಸದ್ಭಕ್ತರು, ಸಂಘಟನೆಗಳ ಪ್ರಮುಖರು,ಕಾರ್ಯಕರ್ತರು ಗೋಸಂಜೀವಿನಿಯಿಂದ ಗೋವಿನ ಪ್ರಾಣ ಉಳಿಸುವ ಶ್ರೀಗಳ ಸಂಕಲ್ಪದ ಈ ಮಹತ್ತರ ಉದ್ದೇಶವನ್ನು ಸಾಕಾರಗೊಳಿಸಲು ಕಿಂಚಿತ್ ಸೇವೆ ಸಲ್ಲಿಸಲು ನಡೆಯುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ವಿನಂತಿಸಿದ್ದಾರೆ. ಸಂಪರ್ಕ ಸಂಖ್ಯೆ 9448611217

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ