ಪ್ರತಿನಿತ್ಯದಂತೆ ಸಂಜೆ ೬.೩೦ಘಂಟೆಯಿಂದ ಶ್ರೀ ಸೋಂದಾ ಸುಧರ್ಮಾ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಿದ್ದು, ಆಕಾಶವಾಣಿಯ ಬ್ರಿಗೇಡ್ ಕಲಾವಿದೆಯಾದ ಶ್ರೀಮತಿ ಶ್ರೀಲತಾ ರಾಜಾರಾಮ ಭಟ್ಟ, ಹೆಗ್ಗರ್ಸಿಮನೆ ಇವರು ಪ್ರಾರಂಭದಲ್ಲಿ ಸುಗಮ ಸಂಗೀತ ಕಾರ್ಯಕ್ರಮವನ್ನು ಸುಶ್ರಾವ್ಯವಾಗಿ ನಡೆಸಿಕೊಟ್ಟರು. ಯಡಳ್ಳಿಯ ಪಂ. ಪ್ರಕಾಶ ಹೆಗಡೆ ಇವರು ಹಾರ್ಮೋನಿಯಂ ಹಾಗೂ ಶ್ರೀ ತಿರುಮಲ ಭಟ್ಟ ಹುಳಗೋಳ ಇವರು ತಬಲಾ ಸಾಥ ನೀಡಿದರು.
ನಂತರ ಯಲ್ಲಾಪುರದ ಅಣಲಗಾರನವರಾದ ಶ್ರೀಮತಿ ಅನುರಾಧಾ ಭಾಗ್ವತ್ ಇವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಇವರು ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆ, ಇವರಿಗೆ ಪಂ. ಪ್ರಕಾಶ ಹೆಗಡೆ ಹಾರ್ಮೋನಿಯಂ, ನೆಬ್ಬೂರಿನ ಪಂ. ಮಂಜುನಾಥ ಭಟ್ಟ ತಬಲಾ ಸಾಥ ನೀಡಿದರು. ಕೊನೆಯಲ್ಲಿ ಯಲ್ಲಾಪುರದ ಅಣಲಗಾರನವರಾದ ಶ್ರೀ ಗೋಪಾಲಕೃಷ್ಣ ಭಾಗ್ವತ್ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ಆರ್.ಎನ್ ಭಟ್ಟ ಸುಗಾವಿ, ಶ್ರೀ ಗಣೇಶ ಸಂಪೇಸರ, ಶ್ರೀ ಲಕ್ಷ್ಮೀನಾರಾಯಣ ಹೆಗಡೆ, ಶ್ರೀ ದತ್ತಾತ್ರಯ ಭಟ್ ಮುಸ್ಕಿ ಕಾರ್ಯಕ್ರಮ ಸಂಯೋಜಿಸಿದರು. ಸೋಂದಾ ಗ್ರಾಮಸ್ಥರು, ಮಾತೆಯರು ಉಪಸ್ಥಿತರಿದ್ದರು. ಶ್ರೀ ಆರ್ ಎನ್ ಹೆಗಡೆ ಉಳ್ಳಿಕೊಪ್ಪ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ದಿನಾಂಕ ೨೯-೦೯-೨೦೧೭ ರಂದು ಶುಕ್ರವಾರ ಭಕ್ತಿ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ