ಶಿರಸಿ, ಸೆ. 28: ನಗರದ ಎಂ.ಇ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿಯಾದ ರಕ್ಷಿತಾ ಪಟಗಾರ ಯಲ್ಲಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಕ್ರೀಡಾಕೂಟದ ಬಾಲಕಿಯರ ಎತ್ತರ ಜಿಗಿತ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸುವುದರ ಮೂಲಕ ಸತತ 3ನೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆಯ ಮೂಲಕ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಇವಳು ಶಿಕ್ಷಕ ದಂಪತಿಗಳಾದ ರಾಮಕೃಷ್ಣ ಪಟಗಾರ ಮತ್ತು ಶ್ರೀಮತಿ ರೇಖಾ ಪಟಗಾರ ಪುತ್ರಿಯಾಗಿದ್ದು ಶಾಲೆಯ ದೈಹಿಕ ಶಿಕ್ಷಕರಾದ ಪ್ರಕಾಶ ಅಡಕೊಳ್ಳಿಯವರು ಮಾರ್ಗದರ್ಶನ ನೀಡಿರುತ್ತಾರೆ. ಹ್ಯಾಟ್ರಿಕ್ ಸಾಧನೆಗೈದ ಇವಳಿಗೆ ಶಾಲಾ ಶಿಕ್ಷಕವೃಂದ ಹಾಗೂ ಬಂಧುಗಳು ಅಭಿನಂದಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ