ಶಿರಸಿ, 28: ಜನಶಕ್ತಿ ವಿಶ್ವಸ್ಥ ಮಂಡಳಿ (ಶಿರಸಿ) ಮತ್ತು `ಲೋಕಧ್ವನಿ’ ದಿನಪತ್ರಿಕೆ ನೀಡಲು ನಿರ್ಧರಿಸಿದ್ದ ಎಸ್.ವಿ.ಹೆಗಡೆ-ಹಾಸ್ಪುರ ಸ್ಮರಣಾರ್ಥದ `ಎಸ್ವಿ ಪ್ರಶಸ್ತಿ’ಯನ್ನು ಪ್ರಸಕ್ತ ವರ್ಷದಿಂದ ನೀಡಲು ಅಡಿಯಿಡಲಾಗಿದ್ದು ಪ್ರಪ್ರಥಮ ಪ್ರಶಸ್ತಿಗಾಗಿ`ಪ್ರಜಾವಾಣಿ’ಯ ಶಿರಸಿ ವರದಿಗಾರ್ತಿ ಸಂಧ್ಯಾ ಹೆಗಡೆ ಆಲ್ಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಲೋಕಧ್ವನಿ ಕಾರ್ಯಾಲಯದಲ್ಲಿ ನಡೆಯುವ `ಆಯುಧಪೂಜೆ’ಸಂದರ್ಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಆಹ್ವಾನಿಸಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ