ಬನವಾಸಿ, ಸೆ ೨೮: ಶರನ್ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಏಳನೇ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ದೇವುಳದ ಅಧ್ಯಕ್ಷ ರಾಜಶೇಖರ ಒಡೆಯರ ಅಧ್ಯಕ್ಷತೆಯಲ್ಲಿ ದಯಾನಂದ ಮಂಗಳೂರು ಉದ್ಘಾಟಿಸಿದರು. ಕಮಿಟಿಯ ಪ್ರಧಾನ ಕಾರ್ಯದರ್ಶಿ, ಧರ್ಮದರ್ಶಿ ಡಾ. ಜಿ.ಎ. ಹೆಗಡೆ, ಸೋಂದಾ, ಕಮಿಟಿಯ ರಾಜಶೇಖರ ಒಡೆಯರ್, ಶಿವಾನಂದ ದೀಕ್ಷಿತ್, ಡಾ. ಜಿ.ಎ ಹೆಗಡೆ ಸೊಂದಾ, ಮಂಗಲಾ ದಾವಣಗೇರಿ ಬಿಲ್ವಪತ್ರೆ ಸಸಿಗಳನ್ನು ವಿತರಿಸಿದರು.

ನಂತರ ಸಾಗರದ ವಿದ್ವಾನ್ ಜನಾರ್ಧನ ಭಟ್ಟ ನೇತೃತ್ವದ ರಾಜ್ಯ ಮಟ್ಟದ ಖ್ಯಾತ ಕಲಾತಂಡದಿಂದ ಮಯೂರಶರ್ಮನು ಪಲ್ಲವರ ದಬ್ಬಾಳಿಕೆಯನ್ನು ವಿರೋಧಿಸಿ ಗುರುವಿನ ಮಾರ್ಗದರ್ಶನದಲ್ಲಿ ಕೆಚ್ಚದೆಯ ಸೇನಾನಿಯಾಗಿ ಮಯೂರವರ್ಮನಾಗಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆಯನ್ನು ರಾಜಾಮಯೂರವರ್ಮ ನೃತ್ಯ ರೂಪಕದ ಮೂಲಕ ಪ್ರದರ್ಶಿಸಲಾಯಿತು. ಕನ್ನಡ ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ