ಶಿರಸಿ, ಸೆ. 28: 2017-18 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕಾ ಇಲಾಖೆಯ ಅನುಮೋದಿತ ಕಂಪನಿ/ಡೀಲರ್ ಗಳಿಂದ ಹನಿ ನೀರಾವರಿ ಅಳವಡಿಸುವ ರೈತರಿಗೆ ಶೇ. 90 ರ ಸಹಾಯಧನವನ್ನು 5 ಎಕರೆ ಕ್ಷೇತ್ರದವರೆಗೆ ಹಾಗೂ ಶೇ. 50 ರ ಸಹಾಯಧನವನ್ನು 5 ಎಕರೆ ಮೇಲ್ಪಟ್ಟು ಗರಿಷ್ಠ 12.5 ಎಕರೆ ವರೆಗೆ ಇಲಾಖಾ ಮಾರ್ಗಸೂಚಿಯ ಪ್ರಕಾರ ನೀಡಲಾಗುವುದು. ಆಸಕ್ತ ರೈತರು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ಜಿ.ಪಂ.) ಶಿರಸಿ, ಕಛೇರಿಯನ್ನು (08384-225829/9611087813) ಸಂಪರ್ಕಿಸಿ 15/10/2017ರ ಒಳಗಾಗಿ ಅರ್ಜಿ ನೋಂದಾಯಿಸಲು ಕೋರಲಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ