ಬೆಂಗಳೂರು, ಸೆ.೨೮: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ದೇಹದ ಯಾವ ಭಾಗದಲ್ಲಿ ಮೀಟರ್ ಅಳವಡಿಸಲಾಗಿದೆ ಎಂದು ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಮಾಹಿತಿ ಕೋರಿರುವ ವಿಶಿಷ್ಟ ಸಂಗತಿಯೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ ೨೫ರಂದು ಮಂಡ್ಯ ನಗರದ ನಿವಾಸಿ ಸಿ.ಟಿ. ಮಂಜುನಾಥ ಎಂಬುವವರು ಜಿಲ್ಲಾಧಿಕಾರಿಯ ಮುಖೇನ ವಿಧಾನಸೌದದ ಮುಖ್ಯಮಂತ್ರಿಗಳ ಕಛೇರಿಗೆ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದಾರೆ. ಮಾನವನ ದೇಹದಲ್ಲಿ ಹೃದಯ, ಮೆದುಳು, ಶ್ವಾಸಕೋಶ, ಮೂತ್ರಪಿಂಡ ಮುಂತಾದವುಗಳ ಕಾರ್ಯಗಳ ಬಗ್ಗೆ ತಿಳಿದುಕೊಂಡಿದ್ದು, ಮೀಟರ್ ಬಗ್ಗೆ ತಿಳಿದುಕೊಳ್ಳಲು ನಾನು ಸೇರಿದಂತೆ ಜೀವಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೂ ಕಾತುರರಾಗಿದ್ದಾರೆ. ಆದ್ದರಿಂದ ಸಿದ್ದರಾಮಯ್ಯನವರ ಸುಂದರವಾದ ಚಿತ್ರಬರೆದು ದೇಹದ ಯಾವ ಭಾಗದಲ್ಲಿ ಮೀಟರ್ ಇದೆಯೆಂದು ಗುರುತಿಸಿಕೊಡಬೇಕೆಂದು ಅರ್ಜಿದಾರ ವಿವರಗಳನ್ನು ಕೋರಿದ್ದಾರೆ.

ಉತ್ತರದ ನಿರೀಕ್ಷೆಯಲ್ಲಿ ಈಗ ಅರ್ಜಿದಾರರ ಜೊತೆಗೆ ಕೋಟ್ಯಾಂತರ ಜನ ಆಸಕ್ತರು ಸಹಾ ಸೇರಿಕೊಂಡಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ