ದಾಂಡೇಲಿ, ಸೆ.೨೮: ದಾಂಡೇಲಿ ನಗರ ಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಇಂದು ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರಾದ ಅಡಿವೆಪ್ಪ ಭದ್ರಕಾಳಿ ನಗರದ ಗಾಂಧಿನಗರದಲ್ಲಿ ನಡೆದಿರುವ ಅತಿಕ್ರಮಣಗಳನ್ನು ಈವರೆಗೂ ಯಾಕೆ ತೆರವುಗೊಳಿಸಿಲ್ಲ? ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಇಲ್ಲದಿರುವುದರಿಂದ ನವರಾತ್ರಿ ನಂತರ ಅಲ್ಲಿಯ ಅತಿಕ್ರಮಣ ತೆರವುಗೊಳಿಸಲಾಗುವುದೆಂದು ಅಧ್ಯಕ್ಷರು ಉತ್ತರಿಸಿದರು.

ನಂತರ ಸದಸ್ಯ ರಿಯಾಜ್ ಶೇಖ್ ಕೂಡಾ ಇದೇ ವಿಷಯವಾಗಿ ಆಕ್ಷೇಪ ವ್ಯಕ್ತಪಡಿಸಿದರು. ನಗರಸಭೆಯ ವಾಹನಗಳಿಗೆ ಹಾಕುತ್ತಿರುವ ಡಿಸೈಲ್‍ಗಳಲ್ಲಿ ಬಹಳಷ್ಟು ಅಪರಾತಪರಾ ಆಗುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು ಕೀರ್ತಿ ಗಾಂವಕರ. ಕಳೆದ ಆರೇಳು ತಿಂಗಳುಗಳಿಂದ ಇ.ಎಸ್.ಐ. ಪಿ.ಎಪ್. ನೀಡದೇ ಕೆಲಸ ಮಾಡುತ್ತಿರುವ ಗುತ್ತಗೆ ಕಾರ್ಮಿಕರ ಗುತ್ತಿಗೆದಾರನ ಬಗ್ಗೆ, ಹಾಗೂ ಕೆಲ ಸಿಬ್ಬಂದಿಗಳು ಕೆಲಸವನ್ನೆ ಮಾಡದೇ ವೇತನ ಪಡೆಯುತ್ತಿರುವ ಬಗ್ಗೆ ಆಕ್ಷೇಪಿಸಿದರು. ನಗರದಲ್ಲಿ ಸಚಿವ ಆರ್.ವಿ. ದೇಶಪಾಂಡೆಯವರ ಕಾಳಜಿಯಿಂದಾಗಿ 9 ಕೋಟಿ ರೂ.ಗಳ ಅಭಿವೃದ್ದಿ ಕೆಲಸ ನಡೆಯುತ್ತಿದೆ. ನಡೆಯುವ ಕಾಮಗಾರಿಗಳು ಗುಣಮಟ್ಟದ್ದಾಗಲಿ ಎಂಬುದು ನಮ್ಮ ಆಪೇಕ್ಷೆ. ಆದರೆ ಕೆಲವೆಡೆ ಎಸ್ಟಿಮೆಟ್ ಪ್ರಕಾರ ಕೆಲಸ ನಡೆಯದೇ ಕಳಪೆಯಾಗುತ್ತಿರುವ ಬಗ್ಗೆ ದೂರು ಬಂದಿದೆ. ಒಂದೊಮ್ಮೆ ಗುಣಮಟ್ಟದ ಕೆಲಸ ಆಗದಿದ್ದರೆ ಸಂಬಂದಪಟ್ಟ ಪ್ರಾಧಿಕಾರಕ್ಕೆ ದೂರು ನೀಡಲಾಗುವುದು ಎಂದು ಡಿ. ಸ್ಯಾಮಸನ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉದಯ ಛಬ್ಬಿ ತಮ್ಮ ಕಾರ್ಯಲಯ ಬಿಟ್ಟು ಹೊರಗೆ ಬರ್ತಿಲ್ಲ. ಸೈಟ್ ವಿಜಿಟ್ ಮಾಡ್ತಿಲ್ಲ. ಸಾರ್ವಜನಿಕರಿಗೂ ಸ್ಪಂದಿಸುತ್ತಿಲ್ಲ ಅವರು ತಮ್ಮ ಚೇಂಬರ್ ಒಳಗೆಯೇ ಕುಳಿತು ಯಾವಾಗಲೂ ಮೊಬೈಲ್ ಹಿಡಿದುಕೊಂಡು ವಾಟ್ಸೆಪ್ ನೋಡ್ತಾ ಕುಂತಿರ್ತಾರೆ ಎಂದು ಸದಸ್ಯ ರಿಯಾಜ್ ಶೇಖ ಹರಿಹಾಯ್ದರು. ಬಸವೇಶ್ವರ ನಗರದ ಗ್ರಂಥಾಲಯ ಕಟ್ಟಡದ ಕುರಿತಾಗಿ ಮಾತನಾಡಿದರು ಸದಸ್ಯ ಅನಿಲ್ ದಂಡಗಲ್‍. ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ ಮುಂಗರವಾಡಿಯವರು ಇದಕ್ಕೆ ಪೂರಕವಾಗಿ ಮಾತನಾಡಿದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ