ಗೋಕರ್ಣ, ಸೆ.೨೮: ದಸರಾ ಉತ್ಸವದ ಪ್ರಯುಕ್ತ ಶ್ರೀ ಯುವಶಕ್ತಿ ಯುವಕಸಂಘ ಬಂಕಿಕೊಡ್ಲ ಮತ್ತು ಸಾರ್ವಜನಿಕ ದಸರಾ ಉತ್ಸವ ಸಮಿತಿ ಬಂಕಿಕೊಡ್ಲ ಇವರ ಆಶ್ರಯದಲ್ಲಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಂಕಿಕೊಡ್ಲದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಿನಕರ ಶೆಟ್ಟಿ ಹಾಗೂ ಸೂರಜ ಸೋನಿ ಆಗಮಿಸಿದ್ದರು. ವೇದಿಕೆಯಲ್ಲಿ ಕೃಷಿಕರಾದ ಹೊನ್ನಪ್ಪ ಗೌಡ, ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟು ಸಂತೋಷ ಗೌಡ, ಎಸ್.ಎಸ್‍ಎಲ್.ಸಿ.ಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿದ ಅಶ್ವಿನಿ ಗೌಡ, ಯಶೋದಾ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀರಣ್ಣ ಮಾಸ್ತರ ಅಡಿಗೋಣ ಅವರು ವಹಿಸಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ