ಕಾರವಾರ, ಸೆ.೨೮: ದೇಶದ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿನ CF ಹಂತದ ಅಧಿಕಾರಿಯಾಗಿ ಭಾರತ ಸರ್ಕಾರದಿಂದ ನೇಮಕಗೊಂಡಿರುವ IFS ಅಧಿಕಾರಿಯಾಗಿ ನಮ್ಮ ಉತ್ತರಕನ್ನಡದ ಎ.ಟಿ ದಾಮೋದರ ನಾಯ್ಕ ಕಾರ್ಯನಿರ್ವಹಿಸಲಿದ್ದಾರೆ. ಅವರು ಕೇರಳದ ಕೊಚ್ಚಿನ್ ಮತ್ತು ಕವರತ್ತಿಯ ಆಡಳಿತ ಕಛೇರಿಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.

ಎ.ಟಿ ದಾಮೋದರ ನಾಯ್ಕರವರು ಗೋವ ರಾಜ್ಯದಲ್ಲಿ 3 ವರ್ಷಗಳ ನಿಗದಿತ ಸೇವೆಯನ್ನು ಮುಗಿಸಿದ ಸಂದರ್ಭದಲ್ಲಿ ಮುಂಬಡ್ತಿಯೊಂದಿಗೆ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಾಗಿ (CF & Chief Wildlife Warden) ಹಾಗೂ ಪ್ರಧಾನ ಕಾರ್ಯದರ್ಶಿ (ಅರಣ್ಯ & ಪರಿಸರ, ಕೃಷಿ, ಪ್ರವಾಸೋದ್ಯಮ ಮತ್ತು ಮೀನುಗಾರಿಕೆ) ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿಯಾಗಿ ಭಾರತ ಸರ್ಕಾರ ಆದೇಶಿಸಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ