ಮಂಗಳೂರು, ಸೆ.೨೮: ರಾಷ್ಟ್ರೀಯ ಮಾನ್ಯತೆಯ ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತವಾಗಿ ಕೊಂಕಣಿ ಅಕಾಡೆಮಿಯು ಒಂದು ಮಹತ್ವದ ಕಾರ್ಯಕ್ರಮವಾಗಿ ಅಂತರಾಷ್ಟ್ರೀಯ ಮಟ್ಟದ ಕೊಂಕಣಿ ಭಾಷಾ ಸಮ್ಮೇಳನವನ್ನು ಮುಂದಿನ ಜನವರಿ 2018ರಲ್ಲಿ ಆಯೋಜಿಸಲು ನಿರ್ಧರಿಸಿದೆ.
ಈ ಬಗ್ಗೆ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಆರ್.ಪಿ.ನಾಯ್ಕರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ವರ್ಷಾಚರಣೆಯ ಪೂರ್ವ ಭಾವಿ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವು ಎಂ.ಎ. ಕೊಂಕಣಿಯನ್ನು ಆರಂಭಿಸಿ ಪ್ರೋತ್ಸಾಹಿಸಿರುವ ಬಗ್ಗೆ ಕುಲಸಚಿವರಿಗೆ ಅಭಿನಂದಿಸಲಾಯಿತು. ಕೊಂಕಣಿ ಅಕಾಡೆಮಿಯ ಸ್ಥಾಪನೆಗೆ ಕಾರಣೀಕರ್ತರಾದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದರಾಗಿರುವ ವೀರಪ್ಪ ಮೊಯಿಲಿಯವರು 150ನೇ ವರ್ಷಾಚರಣೆಯ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ಅಕಾಡೆಮಿಯ ಅಧ್ಯಕ್ಷ ಆರ್.ಪಿ. ನಾಯ್ಕ ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ