ದಾಂಡೇಲಿ, ಸೆ.೨೭: ನಗರದ ಮಾರುತಿನಗರದಲ್ಲಿ ಸೆ.22 ರಂದು ವಿನಾಕಾರಣ ಒಬ್ಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಗುಂಪಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.ವೈ.ಎಪ್.ಐ, ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಾರುತಿನಗರ 6 ನೇ ವಾರ್ಡಿನ ನಾಗರಿಕರು ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಲಿಖಿತ ಮನವಿಯ ಮೂಲಕ ಒತ್ತಾಯಿಸಿದ್ದಾರೆ.

ದಾಂಡೇಲಿ ಹಾಗೂ ಮಾರುತಿನಗರ ಪರಸ್ಪರ ಶಾಂತಿ ಸೌಹಾರ್ದತೆಯಿಂದ ಇರುವ ಪ್ರದೇಶವಾಗಿದೆ. ಹೀಗಿರುವಾಗ ಪೈಜಾನ್ ವಹಾಬ್ ಶೇಖ ಹಾಗೂ ಅವನ ಜೊತೆ ಕೆಲವರು ಸೇರಿ ವಾಸಿಂ ಎಂಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಏಕಾ ಏಕಿ ಹಲ್ಲೆ ನಡೆಸಿದ್ದಾರೆ. ಇದನ್ನು ತಪ್ಪಿಸಲು ಹೋದ ನಾಗರಿಕರಾದ ನಮ್ಮ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದು ಶಾಂತಿ ಕದಲುವ ಪ್ರಯತ್ನವಾಗಿದೆ. ಹಿಂದೆಯೂ ಸಹ ಇಂತಹದ್ದೇ ಅಶಾಂತಿಯ ವಾತಾವರಣ ಆಗಿತ್ತು. ಇದೀಗ ನಮ್ಮಲ್ಲಿ ಭಯದ ವಾತಾವರಣ ಉಂಟಾಗಿದ್ದು, ಪೋಲಿಸರು ತಕ್ಷಣ ಶಾಂತಿ ಸಭೆ ನಡೆಸಬೇಕು. ಹಾಗೂ ಸಂಬಂದಪಟ್ಟ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ