ದಾಂಡೇಲಿ, ಸೆ.೨೭ : ಇದೇ ಬರುವ ಸೆಪ್ಟೆಂಬರ್ 30 ಶನಿವಾರದಂದು ವಿಜಯ ದಶಮಿಯ ದಿನ ದಾಂಡೇಲಿಯ ಜಾಗೃತ ದೇವರಾದ ದಾಂಡೇಲಪ್ಪಾ ದೇವರ ಜಾತ್ರೆ ನಗರದ ಸಮೀಪದ ಕೆರವಾಡ ಗ್ರಾಮದಲ್ಲಿ ಜರುಗಲಿದೆ. ಭಕ್ತಾದಿಗಳು ಜಾತ್ರೆಗೆ ಆಗಮಿಸಿ ದೇವರ ಅನುಗ್ರಹಕ್ಕೆ ಪಾತ್ರರಾಬೇಕೆಂದು ದೇವಸ್ಥಾನದ ಕಮಿಟಿಯ ಪರವಾಗಿ ಅರ್ಚಕರಾದ, ಗೋಪಾಲ ಅರ್ಜುನ ಮಿರಾಶಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿ.ಎನ್. ಮಿರಾಶಿ, ಕೋರಿದ್ದಾರೆ.

ಗಜಾನನ ಯುವಕ ಮಂಡಳದವರಿಂದ ಅನ್ನದಾಸೋಹವಿದೆ. ಶ್ರೀ ಮಹೇಶ್ವರಿ ಪ್ರಗತಿ ಮಂಡಳದವರು ಭಕ್ತಾಭಿಮನಿಗಳಿಗೆ ನೀರು ಮತ್ತು ಬೆಲ್ಲ ವಿತರಿಸುವ ಕಾರ್ಯ ಹಾಗೂ ನಗರದ ಗೆಳೆಯರ ಬಳಗದವರು ಮಜ್ಜಿಗೆಯನ್ನು ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಿದ್ದಾರೆ. ನಗರದ ರಾಜಸ್ಥಾನಿ ಸೇವಾ ಸಂಘಟನೆಯಿಂದ ಕಾಗದ ಕಾರ್ಖಾನೆಯ 2ನೇ ಮುಖ್ಯದ್ವಾರದ ಬಳಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗಾಗಿ ಉಚಿತ ತಿಂಡಿಯ ವ್ಯವಸ್ಥೆಯನ್ನು ಏರ್ಪಡಿಸುತ್ತಿದ್ದಾರೆ. ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

* ಸಾಂದರ್ಭಿಕ ಚಿತ್ರ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ