ಶಿರಸಿ, ಸೆ.೨೭: ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಕೌಶಲ್ಯಾಭಿವೃದ್ಧಿ ಸಚಿವರಾದ ತಿಂಗಳ ಒಳಗೆ ಶಿರಸಿ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಯಡಳ್ಳಿ ಗ್ರಾಮದಲ್ಲಿ ಕೌಶಲ್ಯ ಮತ್ತು ಉದ್ಯೋಗ ತರಬೇತಿಯ ಉಚಿತ ಕೇಂದ್ರ ಸ್ಥಾಪಿಸಿರುವುದು ಜನರಲ್ಲಿ ಹರ್ಷದ ಭಾವನೆ ಮೂಡಿಸಿದೆ. ಇದೇ ಬರುವ ಸೆಪ್ಟೆಂಬರ್ ೨೯, ಶುಕ್ರವಾರ ೧೨.೩೦ಕ್ಕೆ ಯಡಳ್ಳಿಯಲ್ಲಿ ಕೌಶಲ್ಯ ಕೇಂದ್ರದ ಉದ್ಘಾಟನೆ ಸಂಸದರಿಂದ ನಡೆಯಲಿದೆ.

ಈ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಮೂಲಕ ಕಂಪ್ಯೂಟರ್ ತರಬೇತಿ, ಎಲೆಕ್ಟ್ರಿಕ್, ವಾಹನ ಚಾಲನೆ, ಗೃಹೋಪಯೋಗಿ ವಸ್ತುಗಳ ರಿಪೇರಿ, ಮೊಬೈಲ್ ರಿಪೇರಿ ತರಬೇತಿಗಳನ್ನು ಪಡೆಯಬಹುದಾಗಿದೆ. ಈ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು, ಉದ್ಯೋಗಾಂಕ್ಷಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿರಿ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ