ಶಿರಸಿ, ಸೆ.೨೭: ಶಿರಸಿಯಲ್ಲಿ ನೆನ್ನೆ ಸಾಯಂಕಾಲ ಸುರಿದ ಭಾರೆ ಮಳೆಗೆ ಊರೆಲ್ಲಾ ಜಲಾವೃತಗೊಂಡ ವರದಿ ನೆನ್ನೆಯೇ ಪ್ರಕಟಿಸಿದ್ದೆವು. ಮಳೆನೀರು ಮಳೆ ನಿಂತ ಕೆಲವೇ ಸಮಯದಲ್ಲಿ ಹರಿದುಹೋಗಿ ಮೊದಲಿನ ಪರಿಸ್ಥಿತಿಯೇನೋ ಮೊದಲಿನ ಸ್ಥಿತಿಗೆ ಬಂದಿತ್ತು. ಆದರೆ ಫೇಸ್ ಬುಕ್ ನಲ್ಲಿ ಇದೇ ವಿಷಯವಾಗಿ ಶುರುವಾದ ಕಾಮೆಂಟ್ ಸಮರ ಇನ್ನೂ ನಿಂತಿಲ್ಲ. ನೆನ್ನೆ ಮಳೆಗೆ ಶಿರಸಿ ತುಂಬೆಲ್ಲಾ ನೀರು ನಿಂತಿದ್ದ ವಿಷಯವಾಗಿ ಜಾಲತಾಣಿಗರು ಚಿತ್ರ ಹಾಕಿ ಸ್ಥಳಿಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಾಲೆಳೆದಿದ್ದಾರೆ. ಶಾಸಕರ ಬೆಂಬಲಿಗರು ನಗರಸಭೆಯ ಕರ್ತವ್ಯವೆಂದು ಪ್ರತಿಪಾದಿಸಿದರೆ,ಕೆಲವರು ಶಾಸಕರೆ ಈ ವೈಫಲ್ಯದ ಹೊಣೆ ಹೊರಬೇಕೆಂದು ಕಿಡಿಕಾರಿದ್ದಾರೆ. ಕಾಮೆಂಟ್ ಸಮರ ವಿಷಯಾಂತರವಾಗಿ ಶಾಸಕರ ಕೆಲಸ, ಕರ್ತವ್ಯ, ವೈಫಲ್ಯ ಹೀಗೆ ಇನ್ನೂ ಮುಂದುವರೆಯುತ್ತಲೇ ಇದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ